ಗೃಹ ಸಚಿವ ಅಮಿತ್‌ ಶಾ ಏಮ್ಸ್‌ನಲ್ಲಿ ದಾಖಲಾಗದೆ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು ಏಕೆ?; ಶಶಿ ತರೂರ್‌ ಪ್ರಶ್ನೆ

ಅಮಿತ್ ಶಾ ಕಳೆದ ಬುಧವಾರ ನಡೆದ ಸಂಪುಟ ಸಭೆಯಲ್ಲಿ ಭಾಗವಹಿಸಿದ್ದರು. ಇದರಲ್ಲಿ ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಸೇರಿದಂತೆ ಎಲ್ಲ ಉನ್ನತ ಸಚಿವರು ಭಾಗವಹಿಸಿದ್ದರು. ಹೀಗಾಗಿ ಇವರಿಗೆ ಸೋಂಕು ಹರಡಿರುವ ಕುರಿತು ಆತಂಕಿ ಇದೆ ಎನ್ನಲಾಗುತ್ತಿದೆ.

ಸಂಸದ ಶಶಿ ತರೂರ್​.

ಸಂಸದ ಶಶಿ ತರೂರ್​.

 • Share this:
  ನವ ದೆಹಲಿ (ಆಗಸ್ಟ್‌ 03); ಕೊರೋನಾ ಸೋಂಕಿಗೆ ತುತ್ತಾಗಿರುವ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸದೆ ಖಾಸಗಿ ಆಸ್ಪತ್ರೆಗೆ ದಾಖಲಿಸಿರುವುದು ಏಕೆ? ಎಂದು ಕೇರಳದ ಸಂಸದ ಶಶಿ ತರೂರ್‌ ಪ್ರಶ್ನಿಸಿದ್ದಾರೆ.

  ಗೃಹ ಸಚಿವ ಅಮಿತ್‌ ಶಾ ಅವರಿಗೆ ಭಾನುವಾರ ಕೊರೋನಾ ಸೋಂಕು ತಗುಲಿದ್ದು ದೃಢವಾಗಿತ್ತು. ಹೀಗಾಗಿ ಅವರನ್ನು ಗುರ್‌ಗಾಂವ್‌ನಲ್ಲಿರುವ ಮೆಡಂತಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಈ ಕುರಿತು ಸ್ವತಃ ಟ್ವೀಟ್ ಮಾಡಿದ್ದ ಗೃಹ ಸಚಿವ ಅಮಿತ್‌ ಶಾ, "ಕಳೆದ ಕೆಲವು ದಿನಗಳಲ್ಲಿ ನನ್ನೊಂದಿಗೆ ಸಂಪರ್ಕಕ್ಕೆ ಬಂದವರೆಲ್ಲರೂ, ದಯವಿಟ್ಟು ಪ್ರತ್ಯೇಕತೆಯಲ್ಲಿರಿ, ಪರೀಕ್ಷೆ ಮಾಡಿಸಿಕೊಳ್ಳಿ" ಎಂದು ವಿನಂತಿಸಿದ್ದರು.  ಆದರೆ, ಅಮಿತ್‌ ಶಾ ಹಾಗೂ ಕೇಂದ್ರ ಸರ್ಕಾರದ ನಡೆಯನ್ನು ಟ್ವೀಟ್‌ ಮೂಲಕ ಟೀಕೆಗೆ ಗುರಿಪಡಿಸಿರುವ ಸಂಸದ ಶಶಿ ತರೂರ್‌, "ಸಾರ್ವಜನಿಕ ಸಂಸ್ಥೆಗಳ ಬಗ್ಗೆ ಜನರಲ್ಲಿ ಆತ್ಮವಿಶ್ವಾಸ ತುಂಬ ಬೇಕಾದರೆ ಪ್ರಬಲರ ಪ್ರೋತ್ಸಾಹ ಬೇಕು. 1956 ರಲ್ಲಿ ಜವಾಹರಲ್ ಲಾಲ್ ನೆಹರು ಪ್ರಧಾನಿಯಾಗಿದ್ದಾಗ ಏಮ್ಸ್ ಸ್ಥಾಪಿಸಲಾಯಿತು. ನಮ್ಮ ಗೃಹ ಸಚಿವರು ಅನಾರೋಗ್ಯದಿಂದ ಬಳಲುತ್ತಿರುವಾಗ ಏಮ್ಸ್‌ಗೆ ಏಕೆ ಹೋಗಬಾರದು? ನೆರೆಯ ರಾಜ್ಯದ ಖಾಸಗಿ ಆಸ್ಪತ್ರೆಗೆ ಏಕೆ ದಾಖಲಾಗಬೇಕು?" ಎಂದು ಪ್ರಶ್ನಿಸಿದ್ದಾರೆ.

  ಅಮಿತ್ ಶಾ ಕಳೆದ ಬುಧವಾರ ನಡೆದ ಸಂಪುಟ ಸಭೆಯಲ್ಲಿ ಭಾಗವಹಿಸಿದ್ದರು. ಇದರಲ್ಲಿ ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಸೇರಿದಂತೆ ಎಲ್ಲ ಉನ್ನತ ಸಚಿವರು ಭಾಗವಹಿಸಿದ್ದರು. ಹೀಗಾಗಿ ಇವರಿಗೆ ಸೋಂಕು ಹರಡಿರುವ ಕುರಿತು ಆತಂಕಿ ಇದೆ ಎನ್ನಲಾಗುತ್ತಿದೆ.

  ಇದನ್ನೂ ಓದಿ : TIKTOK: ಅಮೆರಿಕದಲ್ಲಿ ಟಿಕ್‌ಟಾಕ್‌ ಖರೀದಿಗೆ ಮುಂದಾದ ಮೈಕ್ರೋಸಾಫ್ಟ್‌: ಟ್ರಂಪ್ ಅನುಮತಿ ಕೋರಿದ ಸತ್ಯ ನಾದೆಲ್ಲಾ

  ಈ ನಡುವೆ ಕರ್ನಾಟಕದ ಸಿಎಂ ಬಿ.ಎಸ್.ಯಡಿಯೂರಪ್ಪ ಮತ್ತು ಮಧ್ಯಪ್ರದೇಶದ ಸಿಎಂ ಶಿವರಾಜ್ ಸಿಂಗ್ ಚೌಹಾನ್ ಅವರಿಗೂ ಸೋಂಕು ದೃಢಪಟ್ಟಿದ್ದು,  ಕ್ರಮವಾಗಿ ಬೆಂಗಳೂರು ಮತ್ತು ಭೋಪಾಲ್‌ನ ಖಾಸಗಿ ಆಸ್ಪತ್ರೆಗಳಲ್ಲಿ ಇವರನ್ನು ದಾಖಲಿಸಲಾಗಿದೆ.
  Published by:MAshok Kumar
  First published: