Sanjay Raut| ನೆಹರೂರನ್ನು ನೀವೇಕೆ ಇಷ್ಟೊಂದು ದ್ವೇಷಿಸುತ್ತೀರಿ?: ಕೇಂದ್ರವನ್ನು ಪ್ರಶ್ನಿಸಿದ ಸಂಜಯ್‌ ರಾವತ್‌

ಇಷ್ಟೊಂದು ದ್ವೇಷಿಸಲು ನೆಹರೂ ಏನು ಮಾಡಿದ್ದಾರೆ? ಹೇಳಬೇಕೆಂದರೆ, ದೇಶದ ಆರ್ಥಿಕತೆಯ ಅಭಿವೃದ್ಧಿಗಾಗಿ ನೆಹರೂ ಅವರು ಕಟ್ಟಿದ ಸಾರ್ವಜನಿಕ ಸಂಸ್ಥೆಗಳನ್ನು ಮಾರಲಾಗುತ್ತಿದೆ ಎಂದು ಸಂಸದ ಸಂಜಯ್ ರಾವತ್ ಬೇಸರ ವ್ಯಕ್ತಪಡಿಸಿದ್ದಾರೆ.

ಸಂಜಯ್ ರಾವತ್.

ಸಂಜಯ್ ರಾವತ್.

 • Share this:
  ಮುಂಬೈ (ಸೆಪ್ಟೆಂಬರ್ 05); ಕೇಂದ್ರದಲ್ಲಿ ಬಿಜೆಪಿ ಅಧಿಕಾರ ಹಿಡಿದ ಕಳೆದ 7 ವರ್ಷಗಳಲ್ಲಿ ಮಾಜಿ ಪ್ರಧಾನಿ ಜವಹರ್​ಲಾಲ್ ನೆಹರೂ (Jawaharlal Nehru) ವಿರುದ್ಧ ಅನೇಕ ವಾಗ್ದಾಳಿಗಳು ನಡೆದಿವೆ. ಸ್ವತಃ ಪ್ರಧಾನಿ ನರೇಂದ್ರ ಮೋದಿ (Narendra Modi) ಸಹ ಸಂಸತ್​ನಲ್ಲಿ ಇಂದಿನ ಎಲ್ಲಾ ಸಮಸ್ಯೆಗಳಿಗೆ ಮಾಜಿ ಪ್ರಧಾನಿ ಜಹರ್​ಲಾಲ್ ನೆಹರೂ ಅವರೇ ಕಾರಣ ಎಂದು ಹೇಳಿಕೆ ನೀಡಿದ್ದು ಸಹ ಸಾಕಷ್ಟು ಟೀಕೆಗೆ ಗುರಿಯಾಗಿತ್ತು. ಈ ನಡುವೆ ಇಂದು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವನ್ನು ನೇರಾನೇರ ಪ್ರಶ್ನೆ ಮಾಡಿರುವ ಮಹಾರಾಷ್ಟ್ರ ಶಿವಸೇನೆ ಸಂಸದ ಸಚಿವ ಸಂಜಯ್ ರಾವತ್ (Sanjay Raut), "ಮಾಜಿ ಪ್ರಧಾನಿ ಜವಾಹರಲಾಲ್‌ ನೆಹರೂ ಅವರನ್ನು ನೀವೇಕೆ ಇಷ್ಟೊಂದು ದ್ವೇಷಿಸುತ್ತೀರಿ?" ಎಂದು ಪ್ರಶ್ನಿಸಿದ್ದಾರೆ. ಶಿಕ್ಷಣ ಸಚಿವಾಲಯದ ಮಂಡಳಿ ಹೊರತಂದಿರುವ ಸ್ವಾತಂತ್ರ್ಯ ಅಮೃತ ಮಹೋತ್ಸವದ ಪೋಸ್ಟರ್‌ನಲ್ಲಿ ಮಾಜಿ ಪ್ರಧಾನಿ ನೆಹರೂ ಅವರ ಭಾವಚಿತ್ರವನ್ನು ಕೈಬಿಟ್ಟಿರುವುದನ್ನು ಪ್ರಶ್ನಿಸಿರುವ ಸಂಜಯ್‌ ರಾವತ್‌, "ಇದು ಬಿಜೆಪಿಯ ಸಂಕುಚಿತ ಮನಸ್ಥಿತಿ" ಎಂದು ಟೀಕಿಸಿದ್ದಾರೆ.

  ಶಿವಸೇನೆಯ ಮುಖವಾಣಿ ಸಾಮ್ನಾದಲ್ಲಿ ಸಂಜಯ್ ಅವರು ಬರೆಯುವ ’ರಾಖ್ತಾಕ್‌’ ಅಂಕಣದಲ್ಲಿ ಈ ಕುರಿತು ಪ್ರಸ್ತಾಪಿಸಿದ್ದು, “ಭಾರತೀಯ ಐತಿಹಾಸಿಕ ಸಂಶೋಧನಾ ಮಂಡ ಳಿಯು ಕೇಂದ್ರ ಶಿಕ್ಷಣ ಸಚಿವಾಲಯದ ಭಾಗವಾಗಿದೆ. ಮಂಡಳಿಯು ಹೊರತಂ ದಿರುವ ಸ್ವಾತಂತ್ರ್ಯ ಅಮೃತಮಹೋತ್ಸವದ ಪೋಸ್ಟರ್‌ನಲ್ಲಿ ನೆಹರೂ ಹಾಗೂ ಒಕ್ಕೂಟ ಸರ್ಕಾರದ ಮೊದಲ ಶಿಕ್ಷಣ ಸಚಿವ, ಸ್ವಾತಂತ್ರ್ಯ ಹೋರಾಟಗಾರ ಮೌಲಾನಾ ಅಬ್ದುಲ್ ಕಲಾಂ ಆಜಾದ್ ಅವರ ಭಾವಚಿತ್ರವನ್ನು ಕೈಬಿಡಲಾಗಿದೆ. ಇದು ಬಿಜೆಪಿಯ ರಾಜಕೀಯ ಪ್ರತೀಕಾರ” ಎಂದು ಅಭಿಪ್ರಾಯಪಟ್ಟಿದ್ದಾರೆ.

  ಸ್ವಾತಂತ್ರ್ಯ ಹೋರಾಟ ಮಾಡದ ಒಬ್ಬರನ್ನು ಪೋಸ್ಟರ್‌ನಲ್ಲಿ ಸೇರಿಸಲಾಗಿದೆ. ನಿಜವಾದ ಹೋರಾಟಗಾರರನ್ನು ಹೊರಗೆ ಇಡಲಾಗಿದೆ. ಇದು ರಾಜಕೀಯ ಪ್ರತಿಕಾರವಾಗಿದೆ. ಇದು ಸ್ವಾತಂತ್ರ್ಯ ಹೋರಾಟಗಾರರಿಗೆ ಮಾಡಿದ ಅವಮಾನ ಎಂದು ತಮ್ಮ ಅಂಕಣದಲ್ಲಿ ಬರೆ ದಿದ್ದಾರೆ.

  ಸ್ವಾತಂತ್ರ್ಯ ನಂತರದಲ್ಲಿ ಮಾಜಿ ಪ್ರಧಾನಿ ಜವರ್​ಹರ್​ಲಾಲ್ ನೆಹರೂ ಅವರು ಕೈಗೊಂಡ ಕಾರ್ಯಕ್ರಮಗಳ ಕುರಿತು ಭಿನ್ನಾಪ್ರಾಯಗಳಿರಬಹುದು. ಆದರೆ ಸ್ವಾತಂತ್ರ್ಯ ಹೋರಾಟಕ್ಕೆ ಅವರು ನೀಡಿದ ಕೊಡುಗೆಗಳನ್ನು ಯಾರೂ ಅಲ್ಲಗೆಳೆಯಲಾರರು. ಇಷ್ಟೊಂದು ದ್ವೇಷಿ ಸಲು ನೆಹರೂ ಏನು ಮಾಡಿದ್ದಾರೆ? ಹೇಳಬೇಕೆಂದರೆ, ದೇಶದ ಆರ್ಥಿಕತೆಯ ಅಭಿವೃ ದ್ಧಿಗಾಗಿ ನೆಹರೂ ಅವರು ಕಟ್ಟಿದ ಸಾರ್ವಜನಿಕ ಸಂಸ್ಥೆಗಳನ್ನು ಮಾರಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

  ಇದನ್ನೂ ಓದಿ: ದೇಶಕ್ಕೆ Infosys ಕೊಡುಗೆ ಅಪಾರ: ಪಾಂಚಜನ್ಯ RSS ಮುಖವಾಣಿ ಅಲ್ಲ; ವಿವಾದಕ್ಕೆ ತೆರೆ ಎಳೆಯಲು ಮುಂದಾದ ಸಂಘ

  ಸರ್ಕಾರ ಇತ್ತೀಚೆಗೆ ಪ್ರಸ್ತಾಪಿಸಿರುವ ರಾಷ್ಟ್ರೀಯ ನಗದೀಕರಣ ಯೋಜನೆ ಕುರಿತು ಪ್ರಸ್ತಾಪಿ ಸುತ್ತಾ, "ನೆಹರೂ ಅವರ ದೂರದೃಷ್ಟಿಯಿಂದಾಗಿ ದೇಶ ಆರ್ಥಿಕ ದಿವಾಳಿತನದಿಂದ ಪಾರಾಗಿತ್ತು" ಎಂದಿದ್ದಾರೆ.

  ತಮಿಳುನಾಡು ಸರ್ಕಾರ ಶಾಲಾ ಮಕ್ಕಳಿಗೆ ವಿತರಿಸುವ ಬ್ಯಾಗ್‌ಗಳ ಮೇಲೆ ಈವರೆಗೆ ಮುದ್ರಿಸ ಲಾಗುತ್ತಿದ್ದ ಮಾಜಿ ಮುಖ್ಯಮಂತ್ರಿ ಜಯಲಲಿತಾ ಹಾಗೂ ಪಳನಿಸ್ವಾಮಿಯವರ ಭಾವ ಚಿತ್ರವನ್ನು ಯಥಾಸ್ಥಿತಿ ಮುಂದುವರಿಸುವಂತೆ ಆದೇಶಿಸಿರುವ ಹಾಲಿ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಅವರ ನಿರ್ಧಾರವನ್ನು ಸಂಜಯ್‌ ರಾವತ್ ಮೆಚ್ಚಿಕೊಂಡಿದ್ದಾರೆ.

  ಇದನ್ನೂ ಓದಿ: Bihar MLA Snatched Gold Ring| ಒಳಉಡುಪಿನಲ್ಲಿ ಓಡಾಡಿದ್ದನ್ನು ಆಕ್ಷೇಪಿಸಿದ ಸಹ ಪ್ರಯಾಣಿಕನ ಚಿನ್ನದ ಸರ ಕಸಿದ ಬಿಹಾರದ ಶಾಸಕ: ಕೇಸ್ ದಾಖಲು

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆ ಆದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊ ಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿ ಯುತವಾಗಿ ನಡೆದುಕೊಳ್ಳ ಬೇಕು.
  Published by:MAshok Kumar
  First published: