• Home
  • »
  • News
  • »
  • national-international
  • »
  • Guru Poornima: ಗುರು ಪೂರ್ಣಿಮೆಯನ್ನು ನಾವು ಏಕೆ ಆಚರಿಸುತ್ತೇವೆ? ಈ ಬಗ್ಗೆ ಸದ್ಗುರು ಏನು ಹೇಳ್ತಾರೆ ನೋಡಿ

Guru Poornima: ಗುರು ಪೂರ್ಣಿಮೆಯನ್ನು ನಾವು ಏಕೆ ಆಚರಿಸುತ್ತೇವೆ? ಈ ಬಗ್ಗೆ ಸದ್ಗುರು ಏನು ಹೇಳ್ತಾರೆ ನೋಡಿ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಈಶಾ ಫೌಂಡೇಶನ್ ಎಂಬ ಸಂಸ್ಥೆಯ ಸಂಸ್ಥಾಪಕರಾಗಿರುವ ಸದ್ಗುರು ವಾಸುದೇವ್ ಅವರ ಪ್ರಕಾರ, ಮೊದಲ ಗುರು ಜನ್ಮತಳೆದ ದಿನವೇ ಗುರು ಪೂರ್ಣಿಮೆಯಾಗಿದೆ. ಯೋಗ ಸಂಸ್ಕೃತಿಯಲ್ಲಿ ಶಿವನನ್ನು ಆದಿಯೋಗಿ ಎಂದು ಕರೆಯಲಾಗಿದೆ. ಅಂದರೆ, ಶಿವನೇ ಸ್ವತಃ ಮೊದಲ ಯೋಗಿ ಹಾಗೂ ಪೌರ್ಣಮಿಯ ದಿನದಂದು ಈ ಮೊದಲ ಯೋಗಿ ಮೊದಲ ಗುರುವಾಗಿ ಯಾವಾಗ ಪರಿವರ್ತಿತನಾದನೋ ಆ ದಿನವೇ ಗುರು ಪೂರ್ಣಿಮೆ ಎಂದು ಕರೆಯಲ್ಪಡುತ್ತಿದೆ.

ಮುಂದೆ ಓದಿ ...
  • Share this:

ನಮ್ಮ ಸನಾತನ ಧರ್ಮದಲ್ಲಿ ಗುರುವಿಗೆ (Guru) ನೀಡಲಾದ ಸ್ಥಾನ ದೇವರಿಗಿಂತ ದೊಡ್ಡದು ಎಂದರೆ ಅತಿಶಯೋಕ್ತಿಯಲ್ಲ. ಅಂಧಕಾರ ಎಂಬ ಅಜ್ಞಾನದಿಂದ ಬೆಳಕು ಎಂಬ ಜ್ಞಾನದ ಕಡೆಗೆ ಕರೆದೊಯ್ಯುವವನೇ ಗುರು ಎನ್ನಲಾಗಿದೆ. ಈಶಾ ಫೌಂಡೇಶನ್ (Isha Foundation) ಎಂಬ ಸಂಸ್ಥೆಯ ಸಂಸ್ಥಾಪಕರಾಗಿರುವ ಸದ್ಗುರು ವಾಸುದೇವ್ (Sadguru Vasudev) ಅವರ ಪ್ರಕಾರ, ಮೊದಲ ಗುರು ಜನ್ಮತಳೆದ ದಿನವೇ ಗುರು ಪೂರ್ಣಿಮೆಯಾಗಿದೆ. ಯೋಗ ಸಂಸ್ಕೃತಿಯಲ್ಲಿ ಶಿವನನ್ನು ಆದಿಯೋಗಿ (Adiyogi) ಎಂದು ಕರೆಯಲಾಗಿದೆ. ಅಂದರೆ, ಶಿವನೇ ಸ್ವತಃ ಮೊದಲ ಯೋಗಿ ಹಾಗೂ ಪೌರ್ಣಮಿಯ ದಿನದಂದು ಈ ಮೊದಲ ಯೋಗಿ ಮೊದಲ ಗುರುವಾಗಿ ಯಾವಾಗ ಪರಿವರ್ತಿತನಾದನೋ ಆ ದಿನವೇ ಗುರು ಪೂರ್ಣಿಮೆ (Guru Poornima) ಎಂದು ಕರೆಯಲ್ಪಡುತ್ತಿದೆ.


15,000 ಕ್ಕೂ ಹೆಚ್ಚು ವರ್ಷಗಳ ಹಿಂದೆ ಆದಿಯೋಗಿಯಾಗಿದ್ದ ಶಿವನ ಕಣ್ಣು ಸಪ್ತಋಷಿಗಳ ಮೇಲೆ ಬಿದ್ದಿತು. ಅಲ್ಲಿಯವರೆಗೂ ಆ ಋಷಿಗಳು ಸುಮಾರು 84 ವರ್ಷಗಳ ಕಾಲ ಕೆಲವು ಸಾಮಾನ್ಯ ಅಭ್ಯಾಸಗಳನ್ನು ಪರಿಣಾಮಕಾರಿಯಾಗಿ ಮಾಡುತ್ತ ತಮ್ಮನ್ನು ತಾವು ಸಿದ್ಧಗೊಳಿಸಿಕೊಳ್ಳುತ್ತಿದ್ದರು. ಇದೇ ಸಂದರ್ಭದಲ್ಲಿ ಸೂರ್ಯನ ಪಥವು ಉತ್ತರಾಯಣದಿಂದ ದಕ್ಷಿಣಾಯಣಕ್ಕೆ ಬದಲಾದಾಗ ಆದಿಯೋಗಿಯು ಈ ಸಪ್ತಋಷಿಗಳನ್ನು ಸೂಕ್ಷ್ಮವಾಗಿ ಗಮನಿಸಿದ.


ಪೌರ್ಣಮಿಯೇ ಗುರು ಪೂರ್ಣಿಮೆಯ ದಿನ
ಆ ಸಪ್ತಋಷಿಗಳು ಜ್ಞಾನಧಾರಣೆಗೆ ಸಿದ್ಧರಾಗಿರುವಂತೆ ಕಂಗೊಳಿಸುತ್ತಿದ್ದರು. ಆದಿಯೋಗಿಗೆ ಅವರನ್ನು ನಿರ್ಲಕ್ಷಿಸಲಾಗಲಿಲ್ಲ, ಕಾರಣ ಅವರನ್ನು ಮತ್ತಷ್ಟು ಸೂಕ್ಷ್ಮವಾಗಿ ಗಮನಿಸಲು ಆರಂಭಿಸಿದ ಹಾಗೂ ಮುಂದಿನ ಬಾರಿ ಪೂರ್ಣ ಚಂದ್ರ ಗೋಚರವಾದಾಗ ಅವರಿಗೆ ಆದಿಯೋಗಿ ಗುರು ಆಗಲು ನಿರ್ಧರಿಸಿದ. ಆ ಪೌರ್ಣಮಿಯೇ ಗುರು ಪೂರ್ಣಿಮೆಯ ದಿನವಾಗಿದೆ. ಈ ಸಂದರ್ಭದಲ್ಲಿ ಆದಿಯೋಗಿ ತನ್ನ ಆ ಸಪ್ತಋಷಿ ಶಿಷ್ಯರಿಗೆ ಯೋಗವಿಜ್ಞಾನದ ಕುರಿತು ತಿಳಿಸಲು ಪ್ರಾರಂಭಿಸಿದ.


ಇದನ್ನೂ ಓದಿ: Idgah Maidana: ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಗಣೇಶ ವಿಗ್ರಹ ಅಂಗಡಿ ತೆರೆಯಲು ಚಿಂತನೆ


ಏನಿದು ಯೋಗವಿಜ್ಞಾನ?
ಯೋಗ ವಿಜ್ಞಾನ ಎಂಬುದು ಶರೀರವನ್ನು ಹೇಗೆ ಬಗ್ಗಿಸಬೇಕು ಅಥವಾ ಉಸಿರನ್ನು ಯಾವ ರೀತಿ ತೆಗೆದುಕೊಳ್ಳಬೇಕು ಎಂಬುದನ್ನು ಹೇಳುವುದಿಲ್ಲ. ಬದಲಾಗಿ ಇದೊಂದು ಸುಧಾರಿತ ಜ್ಞಾನವಾಗಿದ್ದು ಇದು ಶರೀರದ ರಚನಾತ್ಮಕತೆ ಹೇಗಿದೆ, ಅದನ್ನು ಆಂತರಿಕವಾಗಿಯೇ ಹೇಗೆ ಬಿಡಿ ಬಿಡಿಯಾಗಿ ಪ್ರತ್ಯೇಕಿಸಬಹುದು ಅಥವಾ ಎಲ್ಲವನ್ನೂ ಸೇರಿಸಿ ಒಟ್ಟುಗೂಡಿಸಬಹುದು ಎಂಬುದರ ಜ್ಞಾನವಾಗಿದೆ. ಜನರು ಸೃಷ್ಟಿಕರ್ತನ ಬಗ್ಗೆ ಹೊಂದಿರುವ ದೃಷ್ಟಿಕೋನದಲ್ಲಿ ಕ್ರಾಂತಿಕಾರಿ ಬದಲಾವಣೆಯನ್ನೇ ಆದಿಯೋಗಿ ಮಾಡಿ ತೋರಿಸಿದ. ತನ್ನನ್ನು ತಾನು ಸೃಷ್ಟಿ ಹಾಗೂ ಸೃಷ್ಟಿಕರ್ತನ ಮಧ್ಯೆ ಒಂದು ಸೇತುವೆಯನ್ನಾಗಿ ಪರಿವರ್ತಿಸಿಕೊಂಡು ಯಾರು ಈ ಸೇತುವೆ ಮೂಲಕ ನಡೆಯುವರೋ ಅವರು ಮತ್ತು ಸೃಷ್ಟಿಕರ್ತನ ಮಧ್ಯೆ ಯಾವ ಅಂತರವೂ ಇಲ್ಲ, ಇದೊಂದು "ಸೃಷ್ಟಿಯಿಂದ ಸೃಷ್ಟಿಕರ್ತನವರೆಗಿನ ಪ್ರಯಾಣ" ಎಂದು ಹೇಳಿದ.


ಆದಿಯೋಗಿ ಬಗ್ಗೆ ಸದ್ಗುರು ಹೇಳಿದ್ದು ಹೀಗೆ 
ಆದಿಯೋಗಿ ಜಾತಿ, ಧರ್ಮ, ಕುಲ, ಪಂಗಡ ಇತ್ಯಾದಿಗಳಿಂದ ಮಿಗಿಲಾದವನು. ಆದಿಯೋಗಿ ನುಡಿಯುವ ಎಲ್ಲ ಮಾತುಗಳು ವಿಜ್ಞಾನಾಧಾರಿತ ತಿಳುವಳಿಕೆಯ ನುಡಿಗಳು. ನಾವು ಪ್ರತಿ ಬಾರಿ ಗಡಿಯೊಂದನ್ನು ನಿರ್ಮಿಸಿದಾಗ ಅದರ ಮುಖ್ಯ ಉದ್ದೇಶ ಸುರಕ್ಷತೆ ಒದಗಿಸುವುದಾಗಿರುತ್ತದೆ.


ನಮ್ಮ ಮನೆಯ ಸುತ್ತಲೂ ನಾವು ಮುಳ್ಳಿನ ಬೇಲಿ ಹಾಕುವ ಉದ್ದೇಶ ಮನೆಗೆ ಸುರಕ್ಷತೆ ನೀಡುವುದೇ ಆಗಿರುತ್ತದೆ. ಆದರೆ, ಒಂದೊಮ್ಮೆ ನೀವು ಬೇಲಿ ಹಾಕಿರುವ ಉದ್ದೇಶವನ್ನೇ ಮರೆತರೆಂದರೆ ನೀವೇ ಆ ಬೇಲಿಯಲ್ಲಿ ಸ್ವಯಂ ಆಗಿ ಬಂಧಿಸಲ್ಪಟ್ಟಂತಾಗುತ್ತದೆ. ಹಾಗೂ ಇಂತಹ ಬೇಲಿಗಳು ಕೇವಲ ಭೌತಿಕವಲ್ಲದೆ ವಿವಿಧ ಬಗೆಗಳಲ್ಲಿ ಮತ್ತು ವಿವಿಧ ಸಂಕೀರ್ಣತೆಗಳಲ್ಲಿರುತ್ತವೆ. ಇಲ್ಲಿ ಬೇಲಿಗಳೆಂದರೆ ಮನುಷ್ಯನು ತಾನು ಮಾನಸಿಕವಾಗಿ ನಿರ್ಬಂಧಿಸಲ್ಪಡುವ ಆಯಾಮಗಳೆಂದು ಪರಿಭಾವಿಸಬೇಕಾಗಿಲ್ಲ.


ಸೃಷ್ಟಿಕರ್ತನಲ್ಲಿ ಲೀನವಾಗುವ ಮಾರ್ಗ ಯಾವುದು
ಪ್ರಕೃತಿಯೂ ಸಹ ಮನುಷ್ಯನಿಗೆ ಇಂತಿಷ್ಟು ಎಂಬ ಮಿತಿ ನೀಡಿರುತ್ತದೆ. ಪ್ರಕೃತಿ ನಿಗದಿಪಡಿಸಿರುವ ಈ ಮಿತಿಯು ಮನುಷ್ಯನ ಸುರಕ್ಷತೆಗಾಗಿಯೇ ಇದೆ ಎಂಬುದರಲ್ಲಿ ಸಂಶಯವೇ ಇಲ್ಲ. ಆದರೆ ಮನುಷ್ಯನಾದವನಿಗೆ ಇದರ ಅರಿವಿಲ್ಲದೆ ಈ ಮಿತಿಯಾಚೆ ಹೋಗಲು ಬಯಸುತ್ತಾನೆ. ಇದರಿಂದಲೇ ಅವನು ಅಂತಿಮವಾಗಿ ಸಂಕಷ್ಟಕ್ಕೆ ಈಡಾಗುತ್ತಾನೆ.


ಇದನ್ನೂ ಓದಿ:  Explained: ಎಲ್ಲೆಡೆ ಭಾರತದ ರಾಷ್ಟ್ರ ಲಾಂಛನದ್ದೇ ಸುದ್ದಿ! ಇಲ್ಲಿದೆ ನೋಡಿ ಇದರ ವಿಶೇಷತೆ


ಮನುಷ್ಯನಿಗೆ ತನಗೆ ಅಪಾಯವಿದೆ ಎಂಬ ಅರಿವಾದ ತಕ್ಷಣ ತನ್ನನ್ನು ತಾನು ರಕ್ಷಿಸಿಕೊಳ್ಳಲು ಸುತ್ತಲೂ ಕೋಟೆ ನಿರ್ಮಿಸಿಕೊಳ್ಳುತ್ತಾನೆ. ಆದರೆ, ಯಾವ ಅಪಾಯವೂ ಇಲ್ಲ ಎಂದು ಭಾಸವಾದಾಗ ಎಲ್ಲದರಿಂದಲೂ ಮುಕ್ತನಾಗಬಯಸುತ್ತಾನೆ. ಆದರೆ, ಅವನ ಇಚ್ಛೆಯಂತೆ ನಡೆಯದಿದ್ದಾಗ ಅವನು ಬಂಧನಕ್ಕೊಳಗಾದ ಅನುಭವ ಪಡೆಯುತ್ತಾನೆ, ಅದರಿಂದ ಮಾನಸಿಕ ಯಾತನೆ ಪಡುತ್ತಾನೆ. ಹಾಗಾಗಿ, ಯೋಗ ವಿಜ್ಞಾನ ಎಂಬುದು ಈ ಎಲ್ಲ ಆಯಾಮಗಳಿಂದ ಮುಕ್ತಿ ನೀಡಿ ಸೃಷ್ಟಿಕರ್ತನಲ್ಲಿ ಲೀನವಾಗುವ ಮಾರ್ಗ ಎಂದು ಹೇಳಬಹುದಾಗಿದೆ.

Published by:Ashwini Prabhu
First published: