Diamond Necklace: ನಿಧನದವರೆಗೆ ಹೈದರಾಬಾದ್ ನಿಜಾಮರು ಕೊಟ್ಟಿದ್ದ ನೆಕ್ಲೇಸನ್ನೇ ಧರಿಸುತ್ತಿದ್ದ ರಾಣಿ ಎಲಿಜಬೆತ್, ಏನಿದರ ಸ್ಪೆಷಾಲಿಟಿ?

1947 ರಲ್ಲಿ ರಾಣಿ ಎಲಿಜಬೆತ್ II ರವರ ಮದುವೆಯ ಉಡುಗೊರೆಯಾಗಿ ಹೈದರಾಬಾದ್‌ನ ನಿಜಾಮರು ಉಡುಗೊರೆಯಾಗಿ ನೀಡಿದ್ದ ವಜ್ರ ಖಚಿತ ನೆಕ್ಲೇಸ್ ರಾಣಿಯ ಬಳಿಯಲ್ಲಿದ್ದ ಅತ್ಯಂತ ಸಾಂಪ್ರದಾಯಿಕ ನೆಕ್‌ಪೀಸ್‌ಗಳಲ್ಲಿ ಒಂದೆನಿಸಿದೆ. ಫೆಬ್ರವರಿ 1952 ರಲ್ಲಿ ರಾಣಿ ಸಿಂಹಾಸನವನ್ನೇರುವ ಕೆಲವೇ ದಿನಗಳಲ್ಲಿ ಹೊಸ ರಾಣಿಯ ಭಾವಚಿತ್ರಗಳನ್ನು ಛಾಯಾಗ್ರಾಹಕ ಡೊರೊಥಿ ವೈಲ್ಡಿಂಗ್ ತೆಗೆದಿದ್ದರು.

ರಾಣಿ ಎಲಿಜಬೆತ್ II

ರಾಣಿ ಎಲಿಜಬೆತ್ II

  • Share this:

ಬ್ರಿಟನ್‌ ನಲ್ಲಿ ಸುದೀರ್ಘ ಕಾಲ ಆಳ್ವಿಕೆ ನಡೆಸಿದ್ದ ರಾಣಿ ಎಲಿಜಬೆತ್ II (Queen Elizabeth II) ಸ್ಕಾಟ್ಲೆಂಡ್‌ನ ಬಾಲ್ಮೋರಲ್ ಶ್ರೀಮಂತ ಗೃಹದಲ್ಲಿ ನಿಧನರಾದರು. ನಿಧನರಾಗಿದ್ದಾಗ ಅವರಿಗೆ 96 ವರ್ಷ ವಯಸ್ಸಾಗಿತ್ತು. ದಿವಂಗತ ರಾಣಿ ಫ್ಯಾಷನ್ (Fashion) ಪ್ರಿಯರಾಗಿದ್ದರು ಅಂತೆಯೇ ವಿಶ್ವದ ಅತ್ಯಂತ ದುಬಾರಿ ಆಭರಣ (Expensive jewelry) ಸಂಗ್ರಹವನ್ನು ಹೊಂದಿದ್ದರು. 1947 ರಲ್ಲಿ ರಾಣಿಗೆ ಮದುವೆಯ ಉಡುಗೊರೆಯಾಗಿ ಹೈದರಾಬಾದ್‌ನ ನಿಜಾಮರು ಉಡುಗೊರೆಯಾಗಿ ನೀಡಿದ್ದ ವಜ್ರ ಖಚಿತ ನೆಕ್ಲೇಸ್ (Necklace) ರಾಣಿಯ ಬಳಿಯಲ್ಲಿದ್ದ ಅತ್ಯಂತ ಸಾಂಪ್ರದಾಯಿಕ ನೆಕ್‌ಪೀಸ್‌ಗಳಲ್ಲಿ ಒಂದೆನಿಸಿದೆ. ಫೆಬ್ರವರಿ 1952 ರಲ್ಲಿ ರಾಣಿ ಸಿಂಹಾಸನವನ್ನೇರುವ ಕೆಲವೇ ದಿನಗಳಲ್ಲಿ ಹೊಸ ರಾಣಿಯ ಭಾವಚಿತ್ರಗಳನ್ನು (Photos) ಛಾಯಾಗ್ರಾಹಕ ಡೊರೊಥಿ ವೈಲ್ಡಿಂಗ್ ತೆಗೆದಿದ್ದರು. ಈಗ ಇದೇ ಭಾವಚಿತ್ರಗಳನ್ನು ಅಂಚೆಚೀಟಿಗಳಲ್ಲಿ ರಾಣಿಯ ಸಾಂಪ್ರದಾಯಿಕ ಚಿತ್ರವಾಗಿ ಬಳಸಲಾಗಿದೆ. 


ಛಾಯಾಚಿತ್ರಗಳಲ್ಲಿ ನೆಕ್ಲೇಸ್ ಧರಿಸಿದ್ದ ರಾಣಿ
ಪ್ರಪಂಚದಾದ್ಯಂತದ ರಾಯಭಾರ ಕಚೇರಿಗಳು ಮತ್ತು ರೆಜಿಮೆಂಟ್‌ಗಳಿಗೆ ಕಳುಹಿಸಲಾದ ಇದೇ ಭಾವಚಿತ್ರವನ್ನು ರಾಜಮನೆತನವು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದೆ. ಈ ಸಮಯದಲ್ಲಿ ರಾಣಿಯು ವಜ್ರಖಚಿತ ನೆಕ್ಲೇಸ್ ಅನ್ನು ಧರಿಸಿದ್ದರು. ಈಗ ಛಾಯಾಚಿತ್ರ ಹಾಗೂ ನೆಕ್ಲೇಸ್ ಅನ್ನು ಸಾರ್ವಜನಿಕ ಪ್ರದರ್ಶನಕ್ಕಾಗಿ ಬಂಕಿಂಗ್‌ಹ್ಯಾಮ್ ಅರಮನೆಯಲ್ಲಿರಿಸಲಾಗಿದೆ.


ಹೈದ್ರಾಬಾದ್ ನಿಜಾಮನಿಂದ ವಿವಾಹದ ಉಡುಗೊರೆ
ಅಸಫ್ ಜಾ VII ಹೈದ್ರಾಬಾದ್‌ ಅನ್ನು ಆಳುತ್ತಿದ್ದರು ಆ ಸಮಯದಲ್ಲಿ ಬ್ರಿಟಿಷ್ ವಸಾಹತು ಆಳ್ವಿಕೆಯಲ್ಲಿತ್ತು. ಅಸಫ್ ಜಾ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದರು ಹಾಗಾಗಿಯೇ ಆತ ರಾಣಿಗೆ ವಿವಾಹದ ಉಡುಗೊರೆಯಾಗಿ ನೆಕ್ಲೇಸ್ ಅನ್ನು ನೀಡಿದ್ದರು. ಆಭರಣ ಪ್ರಿಯೆಯ ಅತ್ಯಂತ ದೊಡ್ಡ ಕನಸನ್ನು ಹೈದ್ರಾಬಾದ್‌ನ ಅರಸನು ನನಸಾಗಿಸಿದ್ದರು. ಆಕೆಯ ಸಂಗ್ರಹದಲ್ಲಿರುವ ಅತ್ಯಂತ ಅಮೂಲ್ಯವಾದ ನೆಕ್ಲೇಸ್ ಇದಾಗಿದೆ ಮತ್ತು ಇದನ್ನೇ ಆಕೆ ಹೆಚ್ಚಾಗಿ ಧರಿಸುತ್ತಿದ್ದರು.


ಇದನ್ನೂ ಓದಿ: Elizabeth II: ಬ್ರಿಟನ್ ರಾಣಿಗೆ ಬೆಂಗಳೂರು ನಂಟು! ಲಾಲ್‌ಬಾಗ್‌ನಲ್ಲಿ ಎಲಿಜಬೆತ್‌ ನೆಟ್ಟ ಮರ ಈಗ ಹೇಗಿದೆ ನೋಡಿ

ರಾಣಿ ಎಲಿಜಬೆತ್ ತಮ್ಮ ವಿವಾಹದ ಉಡುಗೊರೆಯನ್ನು ತಾವೇ ಆಯ್ಕೆಮಾಡಿಕೊಳ್ಳಬೇಕೆಂದು ನಿಜಾಮನು ಲಂಡನ್‌ನಲ್ಲಿರುವ ಕಾರ್ಟಿಯರ್ ಸಂಸ್ಥೆಗೆ ಸೂಚನೆಗಳನ್ನು ನೀಡಿದರು ಅದರಂತೆ ಸರಿಸುಮಾರು 300 ವಜ್ರಗಳನ್ನೊಳಗೊಂಡ ಪ್ಲಾಟಿನಂ ನೆಕ್ಲೇಸ್ ಅನ್ನು ಆಯ್ಕೆಮಾಡಲಾಯಿತು. ತಮ್ಮ ಆಳ್ವಿಕೆಯ ಉದ್ದಕ್ಕೂ ರಾಣಿ ಈ ನೆಕ್ಲೇಸ್ ಧರಿಸುವುದನ್ನು ಮರೆಯಲಿಲ್ಲ ಅಂತೆಯೇ ಡಚಸ್ ಆಫ್ ಕೇಂಬ್ರೀಡ್ಜ್‌ಗೆ ಈ ನೆಕ್ಲೇಸ್ ಅನ್ನು ಆಕೆ ಸಾಲವಾಗಿ ನೀಡಿದ್ದರು.


3 ಡಿಟ್ಯಾಚೇಬಲ್ ಹೂವಿನ ಪದಕಗಳೊಂದಿಗೆ ಇಂಗ್ಲಿಷ್ ಗುಲಾಬಿಗಳ ವಿನ್ಯಾಸವನ್ನು ಹೊಂದಿದ್ದ ಪ್ರಸಿದ್ಧ ಹೈದರಾಬಾದ್ ಕಿರೀಟವನ್ನು ನಿಜಾಮನು ರಾಣಿಗೆ ಉಡುಗೊರೆಯಾಗಿ ನೀಡಿದ್ದರು. ಎಲ್ಲವೂ ವಜ್ರಗಳಿಂದ ಮಾಡಲಾಗಿದೆ ಮತ್ತು ಪ್ಲಾಟಿನಂನಲ್ಲಿ ಅಳವಡಿಸಲಾಗಿದೆ. ಎರಡೂ ಆಭರಣಗಳ್ನು ಪ್ಲಾಟಿನಂನಲ್ಲಿ ಹೊಂದಿಸಲಾದ ವಜ್ರಗಳಿಂದ ಮಾಡಲಾಗಿತ್ತು. 1935 ರಲ್ಲಿ ಕಾರ್ಟಿಯರ್ ತಯಾರಿಸಿದ ನೆಕ್ಲೇಸ್ ಅಮೂರ್ತ ಹೂವಿನ ವಿನ್ಯಾಸದಲ್ಲಿ ಹೆಚ್ಚು ಜ್ಯಾಮಿತೀಯ ವಿಧಾನಗಳನ್ನು ಅನುಸರಿಸಿಕೊಂಡು ವಜ್ರಗಳನ್ನು ಸೇರಿಸಿಕೊಂಡು ನಿರ್ಮಿಸಿದ ಸಂಕೀರ್ಣವಾದ ಕೆಲಸವನ್ನು ಹೊಂದಿದೆ.


ವಿಶ್ವದ ಶ್ರೀಮಂತ ರಾಣಿ
ರಾಣಿ ಎಲಿಜಬೆತ್ II ಕೂಡ ವಿಶ್ವದ ಅತ್ಯಂತ ಶ್ರೀಮಂತ ರಾಣಿಯಾಗಿದ್ದರು. 2022 ರ ಸಂಡೇ ಟೈಮ್ಸ್ ಬಿಡುಗಡೆ ಮಾಡಿದ್ದ ಶ್ರೀಮಂತರ ಪಟ್ಟಿಯಲ್ಲಿ ಉಲ್ಲೇಖಿತವಾಗಿದ್ದ ಆಕೆಯ ನಿವ್ವಳ ಸಂಪತ್ತು 370 ಮಿಲಿಯನ್ ಪೌಂಡ್‌ಗಳು (USD 427 ಮಿಲಿಯನ್) ಎಂದು ಅಂದಾಜಿಸಲಾಗಿದೆ.


ಇತಿಹಾಸದಲ್ಲಿ ಅತ್ಯಂತ ಹಳೆಯ ಬ್ರಿಟಿಷ್ ಆಡಳಿತಗಾರನೆಂದೆನಿಸುವುದರ ಜೊತೆಗೆ, ಎಲಿಜಬೆತ್ II ಇದುವರೆಗೆ ದೀರ್ಘಕಾಲ ಆಳಿದ ರಾಣಿ ಎಂಬ ಖ್ಯಾತಿಗೆ ಒಳಗಾಗಿದ್ದಾರೆ. ಆಕೆಯ ಆಳ್ವಿಕೆಯು 70 ವರ್ಷಗಳು 214 ದಿನಗಳ ಕಾಲ ನಡೆಯಿತು (ಫೆಬ್ರವರಿ 6, 1952 - ಸೆಪ್ಟೆಂಬರ್ 8, 2022).


ಇದನ್ನೂ ಓದಿ: Queen Elizabeth II: ಅಬ್ಬಬ್ಬಾ, ರಾಣಿ ಎಲಿಜಬೆತ್ ಒಟ್ಟು ಆಸ್ತಿ ಇಷ್ಟು ಇದೆಯಂತೆ! ಆದಾಯದ ಮೂಲವೇನು ಗೊತ್ತಾ?

ರಾಣಿಯು ಕ್ರಮವಾಗಿ 1977, 2002 ಮತ್ತು 2012 ರಲ್ಲಿ ತಮ್ಮ ರಜತ, ಸುವರ್ಣ ಮತ್ತು ವಜ್ರ ಮಹೋತ್ಸವಗಳನ್ನು ಆಚರಿಸಿದರು. 2017 ರಲ್ಲಿ ಅವರು ಸಫಾಯರ್ ಜುಬಿಲಿಯನ್ನು (65 ನೇ ವಾರ್ಷಿಕೋತ್ಸವ) ಆಚರಿಸಿದ ಮೊದಲ ಬ್ರಿಟಿಷ್ ರಾಣಿ ಎಂದೆನಿಸಿದರು ಮತ್ತು 2022 ರಲ್ಲಿ ಅವರ ಪ್ಲಾಟಿನಂ ಜುಬಿಲಿಯು ಸಿಂಹಾಸನದ ಅವರ ಅಧಿಪತ್ಯದ 70 ವರ್ಷಗಳನ್ನು ಗುರುತಿಸಿತು.

Published by:Ashwini Prabhu
First published: