ಶರದ್ ಪವಾರ್ ಅನುಭವ ಅರಿಯಲು ಬಿಜೆಪಿ ಏಕೆ 5 ವರ್ಷ ಸಮಯ ತೆಗೆದುಕೊಂಡಿತು; ಕೇಸರಿ ಪಕ್ಷಕ್ಕೆ ಶಿವಸೇನೆ ಪ್ರಶ್ನೆ

ಮರಾಠಿ ಟಿ.ವಿ ಒಂದಕ್ಕೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿದ್ದ ಎನ್​ಸಿಪಿ ಮುಖ್ಯಸ್ಥ ಶರದ್ ಪವಾರ್, ಜೊತೆಯಾಗಿ ಕೆಲಸ ಮಾಡೋಣ ಎಂದು ಮೋದಿ ಅವರು ಅವಕಾಶ ನೀಡಿದ್ದರು. ಆಗ ಅವರಿಗೆ ಹೇಳಿದೆ, ನಮ್ಮ ಖಾಸಗಿ ಸಂಬಂಧ ತುಂಬಾ ಚೆನ್ನಾಗಿದೆ. ಮತ್ತು ಅದನ್ನು ಹಾಗೆಯೇ ಮುಂದುವರೆಸಿಕೊಂಡು ಹೋಗುತ್ತೇನೆ. ಆದರೆ, ಜೊತೆಯಾಗಿ ಕೆಲಸ ಮಾಡುವುದು ಮಾತ್ರ ಅಸಾಧ್ಯ ಎಂದು ಹೇಳಿದ್ದಾಗಿ ತಿಳಿಸಿದ್ದರು.

HR Ramesh | news18-kannada
Updated:December 4, 2019, 4:46 PM IST
ಶರದ್ ಪವಾರ್ ಅನುಭವ ಅರಿಯಲು ಬಿಜೆಪಿ ಏಕೆ 5 ವರ್ಷ ಸಮಯ ತೆಗೆದುಕೊಂಡಿತು; ಕೇಸರಿ ಪಕ್ಷಕ್ಕೆ ಶಿವಸೇನೆ ಪ್ರಶ್ನೆ
ಶರದ್ ಪವಾರ್, ಉದ್ಧವ್ ಠಾಕ್ರೆ.
  • Share this:
ಮುಂಬೈ: ಪ್ರಧಾನಿ ನರೇಂದ್ರ ಮೋದಿ ಅವರು ಜೊತೆಯಾಗಿ ಕೆಲಸ ಮಾಡೋಣ ಎಂದು ಅವಕಾಶ ನೀಡಿದ್ದ ವಿಷಯವನ್ನು ಎನ್​ಸಿಪಿ ಅಧ್ಯಕ್ಷ ಶರದ್ ಪವಾರ್ ಬಹಿರಂಗ ಪಡಿಸಿದ್ದರು. ಇದಾದ ಒಂದು ದಿನದ ಬಳಿಕ ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಶಿವಸೇನೆ, ಎನ್​ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರ ಪ್ರಯೋಜನ ಮತ್ತು ಅನುಭವ ಬಿಜೆಪಿ ಅರಿವಿಗೆ ಬರಲು ಏಕೆ ಐದು ವರ್ಷಗಳ ತೆಗೆದುಕೊಂಡಿತು  ಎಂದು ಪ್ರಶ್ನೆ ಮಾಡಿದೆ.

ಶಿವಸೇನೆಯ ಮುಖವಾಣಿ ಸಾಮ್ನಾ ಸಂಪಾದಕೀಯದಲ್ಲಿ, ಯಾವ ಅನುಕೂಲದಿಂದ ಬಿಜೆಪಿ ಎನ್​ಸಿಪಿಯ ಬೆಂಬಲ ಪಡೆಯಲು ಯತ್ನಿಸಿತು. ಇದಕ್ಕೂ ಮುನ್ನ ಇದೇ ಕೇಸರಿ ಪಕ್ಷ ಎನ್​ಸಿಪಿಯನ್ನು ನ್ಯಾಷನಲ್ ಕರಪ್ಟ್ ಪಾರ್ಟಿ (ರಾಷ್ಟ್ರೀಯ ಭ್ರಷ್ಟ  ಪಕ್ಷ) ಎಂದು ಜರಿದಿತ್ತು. ಇದೀಗ ಅದೇ ಪಕ್ಷದೊಂದಿಗೆ ಕೆಲಸ ಮಾಡಲು ಉತ್ಸುಕತೆ ತೋರಿದೆ ಎಂದು ಹೇಳಿದೆ. ಒಂದು ವೇಳೆ ಮಹಾರಾಷ್ಟ್ರ ಚುನಾವಣೆಯಲ್ಲಿ ಎನ್​ಸಿಪಿ 55 ಕ್ಷೇತ್ರಗಳಿಗಿಂತಲೂ ಕಡಿಮೆ ಸ್ಥಾನ ಗೆದ್ದಿದ್ದರೆ, ಶರದ್​ ಪವಾರ್ ಸ್ನೇಹ ಸಂಬಂಧ ಬೆಳೆಸುವ ಪ್ರಯತ್ನವನ್ನೂ ಮಾಡುತ್ತಿರಲಿಲ್ಲ ಎಂದು ಬಿಜೆಪಿಗೆ ತಿರುಗೇಟು ನೀಡಿದೆ.

ಶಿವಸೇನೆಯನ್ನು ಅಧಿಕಾರದಿಂದ ದೂರ ಇಡಲು ಬಿಜೆಪಿ ಎಲ್ಲ ರೀತಿಯ ಪ್ರಯತ್ನವನ್ನೂ ಮಾಡಿದೆ. ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು ಬಿಜೆಪಿಯ ಎಲ್ಲ ಪ್ರಯತ್ನವನ್ನು ತಲೆಕೆಳಗು ಮಾಡಿ, ಅಧಿಕಾರ ಹಿಡಿದಿದ್ದಾರೆ. ಮಹಾರಾಷ್ಟ್ರ ವಿಧಾನಸಭೆ ಫಲಿತಾಂಶ ಪ್ರಕಟಗೊಂಡ ತಿಂಗಳ ಬಳಿಕ ಹಲವು ರಾಜಕೀಯ ಕ್ಷಿಪ್ರ ಬೆಳವಣಿಗೆಗಳ ನಂತರ ಉದ್ಧವ್ ಠಾಕ್ರೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಮತ್ತೊಮ್ಮೆ ಕಾಲು ಜಾರಿದರೆ ಬೀಳುವುದು ಖಂಡಿತ ಎಂದು ಮರಾಠಿ ಪತ್ರಿಕೆಯಾದ ಸಾಮ್ನಾ ಬಿಜೆಪಿಗೆ ಎಚ್ಚರಿಕೆ ನೀಡಿದೆ.

ಇದನ್ನು ಓದಿ: ರಾಷ್ಟ್ರಪತಿ ಸ್ಥಾನ ಸುಳ್ಳು, ಮಗಳಿಗೆ ಸಚಿವ ಸ್ಥಾನದ ಭರವಸೆ ನೀಡಲಾಗಿತ್ತು; ಮೋದಿ ಭೇಟಿಯ ಮಾತುಕತೆ ಬಹಿರಂಗಪಡಿಸಿದ ಶರದ್ ಪವಾರ್

ಮರಾಠಿ ಟಿ.ವಿ ಒಂದಕ್ಕೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿದ್ದ ಎನ್​ಸಿಪಿ ಮುಖ್ಯಸ್ಥ ಶರದ್ ಪವಾರ್, ಜೊತೆಯಾಗಿ ಕೆಲಸ ಮಾಡೋಣ ಎಂದು ಮೋದಿ ಅವರು ಅವಕಾಶ ನೀಡಿದ್ದರು. ಆಗ ಅವರಿಗೆ ಹೇಳಿದೆ, ನಮ್ಮ ಖಾಸಗಿ ಸಂಬಂಧ ತುಂಬಾ ಚೆನ್ನಾಗಿದೆ. ಮತ್ತು ಅದನ್ನು ಹಾಗೆಯೇ ಮುಂದುವರೆಸಿಕೊಂಡು ಹೋಗುತ್ತೇನೆ. ಆದರೆ, ಜೊತೆಯಾಗಿ ಕೆಲಸ ಮಾಡುವುದು ಮಾತ್ರ ಅಸಾಧ್ಯ ಎಂದು ಹೇಳಿದ್ದಾಗಿ ತಿಳಿಸಿದ್ದರು.
First published: December 4, 2019, 4:46 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading