ಈಗಾಗಲೇ ಗೊತ್ತಿರುವಂತೆ ಜಗತ್ತಿನಲ್ಲಿ ಕೋವಿಡ್ (Covid) ಆಘಾತ ಇನ್ನೂ ಸಂಪೂರ್ಣವಾಗಿ ನಿರ್ನಾಮವಾಗಿಲ್ಲ. ಹಲವು ಮೂಲೆಗಳಿಂದ ನಿತ್ಯವೂ ಕೋವಿಡ್ ಪ್ರಕರಣಗಳು ಹಿಂದಿನಂತಿಲ್ಲದಿದ್ದರೂ ದಾಖಲಾಗುತ್ತಲೇ ಇವೆ. ಇದೀಗ ಚೈನಾ (China) ದೇಶದಲ್ಲಿ ಕೋವಿಡ್ ಸಂಕ್ರಮಣ ಮತ್ತಷ್ಟು ಉಲ್ಬಣಗೊಂಡಿರುವ ಸುದ್ದಿ ಬಂದಿದೆ. ಶತಾಯಗತಾಯ ಪ್ರಯತ್ನ ಮಾಡಿಯಾದರೂ ಇದನ್ನು ನಿಯಂತ್ರಿಸಲು ಚೀನಿ ಸರ್ಕಾರವು ಪಣತೊಟ್ಟಿದ್ದು ಅದಾಗಲೇ ಕೆಲವೆಡೆ ಕೋವಿಡ್ ಶೂನ್ಯ ನೀತಿಯನ್ನು ಅನುಷ್ಠಾನಗೊಳಿಸಿದೆ. ಆದರೆ, ಜನರು ಚೀನಾದ ಈ ಕ್ರಮದಿಂದಾಗಿ ಪ್ರದಾಡುವಂತಾಗಿದ್ದು ಸಾಕಷ್ಟು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಆದಾಗ್ಯೂ, ಒಂದು ವೇಳೆ ಚೀನಾದ ಕೋವಿಡ್ ಶೂನ್ಯ(Zero) ನೀತಿಯನು ಸಡಿಲಿಸಿದ್ದೇ ಆದಲ್ಲಿ ಅದು ಸಾಕಷ್ಟು ಆಘಾತಕಾರಿ ಕೋವಿಡ್ ಸಾವು/ಪ್ರಕರಣಗಳನ್ನು ಎದುರಿಸುವ ಸಾಧ್ಯತೆಯಿರುವುದಾಗಿ ಹಲವು ಸಂಶೋಧನೆಗಳು ಎಚ್ಚರಿಸಿವೆ. ಈ ಬಗ್ಗೆ ಕಿರು ಮಾಹಿತಿ ಇಲ್ಲಿದೆ.
ಶಾಂಘೈ: ಕಳೆದ ಕೆಲ ದಿನಗಳಿಂದ ದಾಖಲೆ ಪ್ರಮಾಣದಲ್ಲಿ ಹೊಸ ಕೋವಿಡ್ ಪ್ರಕರಣಗಳು ದಾಖಲಾಗುತ್ತಿರುವ ಚೀನಾದಲ್ಲಿ, ಪರಿಸ್ಥಿತಿ ನಿರ್ವಹಣೆಯಲ್ಲಿ ಚೀನಾ ಸರ್ಕಾರ ಭಾರೀ ವೈಫಲ್ಯ ಕಂಡಿದೆ. ದೇಶ ಇದೀಗ ಆರೋಗ್ಯ ತುರ್ತುಪರಿಸ್ಥಿತಿ ಎದುರಿಸುತ್ತಿದೆ.
ಚೀನಾ ಸರ್ಕಾರದ ಶೂನ್ಯ ಕೋವಿಡ್ ನೀತಿಯ ವಿರುದ್ಧ ಭಾರಿ ಪ್ರತಿಭಟನೆ ನಡೆದ ಬೆನ್ನಲ್ಲೇ ಚೀನಾ ಸರ್ಕಾರ ಮಣಿದಿದೆ. ಕೋವಿಡ್ ಕೇಸುಗಳು ಹೆಚ್ಚುತ್ತಿದ್ದರೂ ಸೋಮವಾರ ಕಠಿಣ ಲಾಕ್ಡೌನ್ ನಿಯಮಗಳ ಸಡಿಲಿಕೆಗೆ ಮುಂದಾಗಿದೆ.
ಆರೋಗ್ಯದ ವಿಷಯದಲ್ಲಿ ತುಲನಾತ್ಮಕವಾಗಿ ಅಧ್ಯಯನ ಮಾಡಿದಾಗ ಚೀನಾದಲ್ಲಿ ವ್ಯಾಕ್ಸಿನೇಷನ್ ದರಗಳು ಕಡಿಮೆಯಾದರೆ ಮತ್ತು ಕೆಲವು ವರ್ಗಗಳು ದುರ್ಬಲ ವರ್ಗಗಳಾಗಿ ತಿರುಗಿದರೆ ದೇಶದಲ್ಲಿ ಇನ್ನೆಷ್ಟು ಸಾವುಗಳನ್ನು ನೋಡಬಹುದು ಎಂದು ಸಂಶೋಧಕರು ವಿಶ್ಲೇಷಣೆ ನಡೆಸಿದ್ದಾರೆ. ಅದರ ವಿವರ ಕೆಳಗಿದೆ.
ಇದನ್ನೂ ಓದಿ: ಯುಕೆ ಪ್ರಜೆಗಳಿಗೆ ಮತ್ತೆ ಇ-ವೀಸಾಗಳನ್ನು ಅನುಮತಿಸುತ್ತಿರುವ ಭಾರತ,ಕೋವಿಡ್ ನಂತರ ಇದೇ ಮೊದಲ ಬಾರಿಗೆ ಇ-ವೀಸಾಗೆ ಅನುಮತಿ!
ಶುಕ್ರವಾರದ ಹೊತ್ತಿಗೆ, ಚೀನಾ COVID- ನಿಂದ 5,233 ಸಾವುಗಳು ಮತ್ತು 331,952 ಪ್ರಕರಣಗಳನ್ನು ಕೋವಿಡ್ನ ರೋಗಲಕ್ಷಣಗಳೊಂದಿಗೆ ವರದಿ ಮಾಡಿದೆ. ಅವುಗಳ ಕೆಲವು ಅಂದಾಜುಗಳು ಇಲ್ಲಿವೆ..
ಆರೋಗ್ಯ ಸಂಶೋಧಕರ ಕೆಲವು ಅಂದಾಜುಗಳು ಇಲ್ಲಿವೆ:
2 ಮಿಲಿಯನ್ಗಿಂತಲೂ ಹೆಚ್ಚು ಸಾವು ಸಂಭವಿಸಬಹುದು: ಝೌ ಜಿಯಾಟಾಂಗ್
“ಚೀನಾದ ಮುಖ್ಯ ಭೂಭಾಗವು ಹಾಂಗ್ ಕಾಂಗ್ ದೇಶ ಮಾಡಿದ ರೀತಿಯಲ್ಲಿ COVID ನಿರ್ಬಂಧಗಳನ್ನು ಸಡಿಲಗೊಳಿಸಿದರೆ 2 ದಶಲಕ್ಷಕ್ಕೂ ಹೆಚ್ಚು ಸಾವುಗಳನ್ನು ಈ ವರ್ಷ ಎದುರಿಸಬಹುದು ಎನ್ನುವುದನ್ನು ಅಂದಾಜಿಸಲಾಗಿದೆ” ಎಂದು ನೈಋತ್ಯ ಗುವಾಂಗ್ಕ್ಸಿ ಪ್ರದೇಶದ ರೋಗ ನಿಯಂತ್ರಣ ಕೇಂದ್ರದ ಮುಖ್ಯಸ್ಥ ಝೌ ಜಿಯಾಟಾಂಗ್, ಕಳೆದ ತಿಂಗಳು ಶಾಂಘೈ ಜರ್ನಲ್ ಆಫ್ ಪ್ರಿವೆಂಟಿವ್ ಮೆಡಿಸಿನ್ ಪ್ರಕಟಿಸಿದ ಪತ್ರಿಕೆಯಲ್ಲಿ ಹೇಳಿದ್ದಾರೆ.
ಕೋವಿಡ್ ಸೋಂಕುಗಳು 233 ಮಿಲಿಯನ್ಗಿಂತಲೂ ಹೆಚ್ಚಾಗಬಹುದು ಎಂದು ಅವರು ಮುನ್ಸೂಚನೆಯನ್ನು ನೀಡಿದ್ದಾರೆ.
1.55 ಮಿಲಿಯನ್ ಸಾವಾಗಬಹುದು: ನೇಚರ್ ಮೆಡಿಸಿನ್
ನೇಚರ್ ಮೆಡಿಸಿನ್ನಲ್ಲಿ ಪ್ರಕಟವಾದ ಸಂಶೋಧನೆಯ ಪ್ರಕಾರ, ಮೇ ತಿಂಗಳಲ್ಲಿ ಚೀನಾ ಮತ್ತು ಯುನೈಟೆಡ್ ಸ್ಟೇಟ್ಸ್ನ ವಿಜ್ಞಾನಿಗಳು ಚೀನಾ ತನ್ನ ಕಠಿಣವಾದ ಶೂನ್ಯ-COVID ನೀತಿಯನ್ನು ʼಲಸಿಕೆ ಮತ್ತು ಚಿಕಿತ್ಸೆಗಳಂತಹ ಸುರಕ್ಷತೆಗಳಿಲ್ಲದೆ ಕೈಬಿಟ್ಟರೆ 1.5 ಮಿಲಿಯನ್ COVID ಸಾವುಗಳಿಗೆ ನೇರ ಕಾರಣವಾಗಬಹುದು ಎಂದು ಅಂದಾಜಿಸಿದ್ದಾರೆ.
ಕೋವಿಡ್ಗೆ ಸಂಬಂಧಿಸಿದ ರೋಗಿಗಳಲ್ಲಿ ತೀವ್ರ ನಿಗಾದಲ್ಲಿರುವ ರೋಗಿಗಳು ಇನ್ನು 15 ಪಟ್ಟು ಹೆಚ್ಚಾಗುವ ಸಂಭವಿದೆ ಎಂದು ಅವರು ಮುನ್ಸೂಚನೆ ನೀಡಿದ್ದಾರೆ. ಇದು ಕೋವಿಡ್ ರೂಪಾಂತರ ರೋಗದ ತೀವ್ರತೆಯ ಬಗ್ಗೆ ವಿಶ್ವಾದ್ಯಂತ ಸಂಗ್ರಹಿಸಿದ ಡೇಟಾದ ಆಧಾರದ ಮೇಲೆ ಸರಿಸುಮಾರು 1.5 ಮಿಲಿಯನ್ ಸಾವುಗಳಿಗೆ ಕಾರಣವಾಗಬಹುದು ಎಂದು ಅಂದಾಜಿಸಲಾಗಿದೆ.
ಇದರ ಬೆನ್ನಲ್ಲೇ, ಸಂಶೋಧಕರು, ಚೀನಾದ ಫುಡಾನ್ ವಿಶ್ವವಿದ್ಯಾನಿಲಯದ ಪ್ರಮುಖ ಲೇಖಕರು, ವ್ಯಾಕ್ಸಿನೇಷನ್ ಮೇಲೆ ಗಮನಹರಿಸಿದರೆ ಸಾವಿನ ಸಂಖ್ಯೆಯನ್ನು ತೀವ್ರವಾಗಿ ಕಡಿಮೆ ಮಾಡಬಹುದು ಎಂದು ಹೇಳಿದ್ದಾರೆ.
2.1 ಮಿಲಿಯನ್ ವರೆಗೆ ಕೂಡ ಸಾವುಗಳು ಸಂಭವಿಸಬಹುದು: ಏರ್ಫಿನಿಟಿ ಕಂಪನಿ
ಕಡಿಮೆ ವ್ಯಾಕ್ಸಿನೇಷನ್ ಮತ್ತು ಬೂಸ್ಟರ್ ದರಗಳು ಮತ್ತು ಹೈಬ್ರಿಡ್ ವಿನಾಯಿತಿ ಕೊರತೆಯಿಂದಾಗಿ ಚೀನಾ ತನ್ನ ಶೂನ್ಯ-COVID ನೀತಿಯನ್ನು ತೆಗೆದುಹಾಕಿದರೆ 1.3 ಮಿಲಿಯನ್ನಿಂದ 2.1 ಮಿಲಿಯನ್ ಜನರು ಕೋವಿಡ್ನಿಂದ ಸಾವಿಗೀಡಾಗಬಹುದೆಂದು ಬ್ರಿಟಿಷ್ ವೈಜ್ಞಾನಿಕ ಮಾಹಿತಿ ಮತ್ತು ವಿಶ್ಲೇಷಣಾ ಕಂಪನಿ ಏರ್ಫಿನಿಟಿ ಸೋಮವಾರ ತಿಳಿಸಿದೆ.
ಚೀನಾ ಅಧ್ಯಕ್ಷರ ಮೇಲೆ ಪ್ರಜೆಗಳ ಆಕ್ರೋಶ
ಚೀನಾದಲ್ಲಿ ಕೋವಿಡ್ ಉಲ್ಬಣಗೊಂಡಿದ್ದು ಅಲ್ಲಿನ ಆಸ್ಪತ್ರೆಗಳು ಹೌಸ್ ಫುಲ್ ಆಗಿವೆ. ಬೆಡ್, ವೆಂಟಿಲೇಟರ್ ಸಿಗದೆ ಜನರು ಪರದಾಟ ನಡೆಸುತ್ತಿದ್ದಾರೆ, ಪ್ರತಿನಿತ್ಯ ಸಂಕಷ್ಟಗಳನ್ನು ಅಲ್ಲಿನ ಜನರು ಎದುರಿಸುವಂತಾಗಿದ್ದು ಈ ಹಿನ್ನೆಲೆಯಲ್ಲಿ ಪ್ರಸ್ತುತ ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಹಾಗೂ ಕಮ್ಯುನಿಸ್ಟ್ ಪಕ್ಷದ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆಂದು ತಿಳಿದುಬಂದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ