ಮುಂಬೈ (ಸೆಪ್ಟೆಂಬರ್ 11); ಮಹಾರಾಷ್ಟ್ರದಲ್ಲಿ ಶಿವಸೇನೆ ಮತ್ತು ಬಾಲಿವುಡ್ ನಟಿ ಕಂಗನಾ ರನೌತ್ ನಡುವಿನ ಭಿಕ್ಕಟ್ಟು ದಿನದಿಂದ ದಿನಕ್ಕೆ ಬಿಗಡಾಯಿಸುತ್ತಲೇ ಇದೆ. ಒಂದೆಡೆ ನಟಿ ಕಂಗನಾ ಇಡೀ ಮುಂಬೈ ಮಹಾನಗರವನ್ನು ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ ಹೋಲಿಸಿ ಪೇಚಿಗೆ ಸಿಲುಕಿದ್ದರೆ, ಮತ್ತೊಂದೆಡೆ ನಟಿಯ ವಿರುದ್ಧ ಕಾನೂನು ಸಮರ ಸಾರಿರುವ ಮುಂಬೈ ಮಹಾನಗರ ಪಾಲಿಕೆ, ಕಂಗನಾ ಅವರ ಕಚೇರಿಯನ್ನು ಕಾನೂನು ಬಾಹೀರವಾಗಿ ನಿರ್ಮಿಸಲಾಗಿದೆ ಎಂದು ಕಳೆದ ಬುಧವಾರ ಅದನ್ನು ನೆಲಸಮ ಮಾಡಿತ್ತು. ಮಹಾರಾಷ್ಟ್ರದಲ್ಲಿ ಇಷ್ಟೆಲ್ಲಾ ಆವಾಂತರ ನಡೆಯುತ್ತಿದ್ದರೂ ಸಹ ಶಿವಸೇನೆಯ ಮಿತ್ರಪಕ್ಷವಾದ ಕಾಂಗ್ರೆಸ್ ಪಕ್ಷದ ಹಂಗಾಮಿ ರಾಷ್ಟ್ರಾಧ್ಯಕ್ಷೆ ಸೋನಿಯಾ ಗಾಂಧಿ ತಟಸ್ಥ ನಿಲುವು ತಳೆದಿದ್ದಾರೆ. ಈ ಕುರಿತ ಮೌನಕ್ಕೆ ಶರಣಾಗಿದ್ದಾರೆ. ಆದರೆ, ನಟಿ ಕಂಗನಾ ಈ ಸಂಬಂಧ ಟ್ವೀಟ್ ಮಾಡುವ ಮೂಲಕ ಸೋನಿಯಾ ಗಾಂಧಿಯನ್ನು ಮತ್ತೊಮ್ಮೆ ಕೆಣಕಿದ್ದಾರೆ.
ಸೋನಿಯಾ ಗಾಂಧಿ ವಿರುದ್ಧ ಸರಣಿ ಟ್ವೀಟ್ ಮೂಲಕ ಕಿಡಿಕಾರಿರುವ ಕಂಗನಾ ರನೌತ್, "ಗೌರವಾನ್ವಿತ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಸೋನಿಯಾ ಗಾಂಧಿಯವರೇ, ಒಬ್ಬ ಮಹಿಳೆ ಎಂಬ ಕಾರಣಕ್ಕೆ ನಿಮ್ಮ ಮಹಾರಾಷ್ಟ್ರ ಸರ್ಕಾರ ನನಗೆ ಕಿರುಕುಳ ನೀಡುತ್ತಿರುವುದು ನಿಮಗೆ ಸಂಕಟ ತರುತ್ತಿಲ್ಲವೇ? ಡಾ. ಅಂಬೇಡ್ಕರ್ ಅವರು ನಮಗೆ ನೀಡಿರುವ ಸಂವಿಧಾನದ ತತ್ವಗಳನ್ನು ಎತ್ತಿ ಹಿಡಿಯುವಂತೆ ಆ ನಿಮ್ಮ ಸರ್ಕಾರಕ್ಕೆ ಸೂಚನೆ ನೀಡಲು ಸಾಧ್ಯವಿಲ್ಲವೇ?" ಎಂದು ಕಿಡಿಕಾರಿದ್ದಾರೆ.
You have grown up in the west and lived here in India. You may be aware of the struggles of women. History will judge your silence and indifference when your own Government is harassing women and ensuring a total mockery of law and order. I hope you will intervene 🙏@INCIndia
— Kangana Ranaut (@KanganaTeam) September 11, 2020
ನಟಿ ಕಂಗನಾ ಟ್ವೀಟ್‌ಗೆ ಈವರೆಗೆ ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ, ನಟಿ ಕಂಗನಾ ಟ್ವೀಟ್ ಇದೀಗ ಸಾಮಾಜಿ ಜಾಲತಾಣದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದೆ. ಹಲವರು ನಟಿಯ ಪರ ಮಾತನಾಡಿದ್ದರೆ, ಇನ್ನೂ ಕೆಲವರು ಕಂಗನಾ ಸಮಸ್ಯೆಗೂ ಸೋನಿಯಾ ಗಾಂಧಿಗೂ ಇರುವ ನಂಟೇನು? ಈ ಹಿಂದೆ ಸಾಮಾಜಿಕ ಜಾಲತಾಣಗಳಲ್ಲಿ ಇಟಲಿ ಮಹಿಳೆ ಎಂದು ಸೋನಿಯಾ ಗಾಂಧಿಯನ್ನು ಹಲವರು ಕೀಳು ದರ್ಜೆಯ ಟೀಕೆಗಳನ್ನು ಮುಂದಿಡುತ್ತಿದ್ದಾಗ ಕಂಗನಾ ಎಲ್ಲಿದ್ದರು?
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ