• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • ಅಧಿಕಾರದಲ್ಲಿದ್ದವರು ಚೀನಾ ಹೆಸರನ್ನು ಉಲ್ಲೇಖಿಸಲು ಏಕೆ ಹೆದರುತ್ತಿದ್ದಾರೆ?; ಪ್ರಧಾನಿ ಮೋದಿಗೆ ಸುರ್ಜೇವಾಲಾ ಪ್ರಶ್ನೆ

ಅಧಿಕಾರದಲ್ಲಿದ್ದವರು ಚೀನಾ ಹೆಸರನ್ನು ಉಲ್ಲೇಖಿಸಲು ಏಕೆ ಹೆದರುತ್ತಿದ್ದಾರೆ?; ಪ್ರಧಾನಿ ಮೋದಿಗೆ ಸುರ್ಜೇವಾಲಾ ಪ್ರಶ್ನೆ

ರಣದೀಪ್‌ ಸಿಂಗ್ ಸುರ್ಜೇವಾಲಾ.

ರಣದೀಪ್‌ ಸಿಂಗ್ ಸುರ್ಜೇವಾಲಾ.

ಭಾರತೀಯ ಭೂಪ್ರದೇಶವನ್ನು ಚೀನಾದ ಪಡೆಗಳು ಆಕ್ರಮಿಸಿಕೊಡಾಗ್ಯೂ ಅಧಿಕಾರದಲ್ಲಿ ಇದ್ದವರು ತಮ್ಮ ಭಾಷಣದಲ್ಲಿ ಚೀನಾ ದೇಶವನ್ನು ಹೆಸರಿಸಲು ಏಕೆ ಹೆದರುತ್ತಿದ್ದಾರೆ? ಚೀನಾಗೆ ಹೆದರುವ ಅಗತ್ಯವೇನಿದೆ? ಎಂದು ಸುರ್ಜೇವಾಲಾ ಕಿಡಿಕಾರಿದ್ದಾರೆ.

  • Share this:

ನವ ದೆಹಲಿ (ಆಗಸ್ಟ್‌ 15); ದೇಶದ ಪ್ರತಿಯೊಬ್ಬ ಭಾರತೀಯ ಪ್ರಜೆಗಳಿಗೂ ಗಡಿಯಲ್ಲಿ ದೇಶವನ್ನು ಕಾಯುತ್ತಿರುವ ಸೈನಿಕರ ಕುರಿತು ಹೆಮ್ಮೆ ಇದೆ. ಆದರೆ, "ಭಾರತೀಯ ಭೂ ಪ್ರದೇಶವನ್ನು ಅತಿಕ್ರಮವಾಗಿ ಪ್ರವೇಶಿಸಿದ ಚೀನಾ" ಎಂದು ಹೆಸರಿಸಲು ಅಧಿಕಾರದಲ್ಲಿ ಕುಳಿತವರು ಏಕೆ ಹೆದರುತ್ತಿದ್ದಾರೆ? ಎಂದು ಕಾಂಗ್ರೆಸ್ ನಾಯಕ ರಣದೀಪ್ ಸಿಂಗ್ ಸುರ್ಜೇವಾಲ ಕಟುವಾಗಿ ಪ್ರಶ್ನಿಸಿದ್ದಾರೆ.


ಇಂದು ನಡೆದ 74ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಕೆಂಪು ಕೋಟೆಯಿಂದ ಭಾಷಣ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿ ತಮ್ಮ ಭಾಷಣದ ವೇಳೆ ಚೀನಾವನ್ನು ಹೆಸರಿಸದ ಟೀಕಿಸಿದ್ದರು.


ಈ ಕುರಿತು ಕಟು ಅಸಮಾಧಾನವನ್ನು ಹೊರಹಾಕಿರುವ ರಣದೀಪ್ ಸಿಂಗ್ ಸುರ್ಜೇವಾಲಾ, "ಪ್ರತಿಯೊಬ್ಬ ಕಾಂಗ್ರೆಸ್ ಕಾರ್ಯಕರ್ತ ಮತ್ತು ಭಾರತದ ಎಲ್ಲಾ 130 ಕೋಟಿ ಭಾರತೀಯರು ನಮ್ಮ ಸಶಸ್ತ್ರ ಪಡೆಗಳ ಬಗ್ಗೆ ಹೆಮ್ಮೆ ಪಡುತ್ತಾರೆ. ಅಲ್ಲದೆ, ಅವರ ಮೇಲೆ ಸಂಪೂರ್ಣ ನಂಬಿಕೆಯನ್ನು ಹೊಂದಿದ್ದಾರೆ. ಗಡಿಯಲ್ಲಿ ಭಾರತದ ಮೇಲೆ ದಾಳಿ ನಡೆದಾಗಲೆಲ್ಲಾ ಚೀನಾಕ್ಕೆ ಸೂಕ್ತ ಉತ್ತರವನ್ನು ನೀಡಿದ್ದಕ್ಕಾಗಿ ನಾವು ಸಶಸ್ತ್ರ ಪಡೆಗಳಿಗೆ ನಮಸ್ಕರಿಸುತ್ತೇವೆ.


ಆದರೆ ಭಾರತೀಯ ಭೂಪ್ರದೇಶವನ್ನು ಚೀನಾದ ಪಡೆಗಳು ಆಕ್ರಮಿಸಿಕೊಡಾಗ್ಯೂ ಅಧಿಕಾರದಲ್ಲಿ ಇದ್ದವರು ತಮ್ಮ ಭಾಷಣದಲ್ಲಿ ಚೀನಾ ದೇಶವನ್ನು ಹೆಸರಿಸಲು ಏಕೆ ಹೆದರುತ್ತಿದ್ದಾರೆ? ಚೀನಾಗೆ ಹೆದರುವ ಅಗತ್ಯವೇನಿದೆ?" ಎಂದು ಸುರ್ಜೇವಾಲಾ ಕಿಡಿಕಾರಿದ್ದಾರೆ.


ಇದನ್ನೂ ಓದಿ : Coronavirus India: ಸ್ವಾತಂತ್ರ್ಯ ದಿನಾಚರಣೆ ದಿನ 25 ಲಕ್ಷ ದಾಟಿದ ಭಾರತದ ಕೊರೋನಾ ಸೋಂಕಿತರ ಸಂಖ್ಯೆ


ಇದೇ ವೇಳೆ ಕೇಂದ್ರ ಸರ್ಕಾರದ ‘ಆತ್ಮನಿರ್ಭರ್ (ಸ್ವಾವಲಂಬಿ)’ ಘೋಷಣೆಯನ್ನು ಟೀಕಿಸಿದ ಸುರ್ಜೇವಾಲಾ, "32 ಸಾರ್ವಜನಿಕ ವಲಯದ ಉದ್ಯಮಗಳನ್ನು ಮಾರಾಟ ಮಾಡಿ, ರೈಲ್ವೆ ಮತ್ತು ವಿಮಾನ ನಿಲ್ದಾಣಗಳನ್ನು ಖಾಸಗಿ ಕೈಗಳಿಗೆ ಹಸ್ತಾಂತರಿಸಿ, ಫುಡ್ ಕಾರ್ಪೊರೇಶನ್ ಆಫ್ ಇಂಡಿಯಾ (ಎಫ್‌ಸಿಐ), ಜೀವ ವಿಮಾ ನಿಗಮದ (ಎಲ್ಐಸಿ) ಮೇಲೆ ದಾಳಿ ಮಾಡಿದವರು ದೇಶದ ಸ್ವಾತಂತ್ರ್ಯವನ್ನು ಹೇಗೆ ಉಳಿಸಿಕೊಳ್ಳುತ್ತಾರೆ?" ಎಂದು ವಾಗ್ದಾಳಿ ನಡೆಸಿದ್ದಾರೆ.

top videos
    First published: