ಟೊಕಿಯೋ ಒಲಿಂಪಿಕ್ಸ್ನಲ್ಲಿ ಭಾರತದ ಕ್ರೀಡಾಪಟುಗಳ ಪದಕದ ಬೇಟೆ ಮುಂದುವರೆದಿದ್ದು, ಭಾರತದ ಪುರುಷರ ಹಾಕಿ ತಂಡ ಐತಿಹಾಸಿಕ ಗೆಲುವು ದಾಖಲಿಸಿದೆ. ಹಾಕಿಯಲ್ಲಿ 41 ವರ್ಷಗಳ ಬಳಿ ಕಂಚಿನ ಪದಕ ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿದೆ. ಜರ್ಮನಿ ತಂಡದ ವಿರುದ್ಧ 5-4 ಅಂತರದಲ್ಲಿ ಗೆಲ್ಲುವ ಮೂಲಕ ಭಾರತದ ತಂಡ ಕಂಚಿನ ಪದಕಕ್ಕೆ ಮುತ್ತಿಟ್ಟಿದೆ. ಭಾರತ ಹಾಕಿ ಟೀಂ ಪದಕ ಗೆಲ್ಲುತ್ತಲೇ ದೇಶಾದ್ಯಂತ ಜನ ಸಂಭ್ರಮಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ತಂಡದ ನಾಯಕ ಮನಪ್ರೀತ್ ಸಿಂಗ್ ಹಾಗೂ ಕೋಚ್ ಗ್ರ್ಯಾಮ್ ರಿಡ್ಗೆ ಫೋನ್ ಕರೆ ಮಾಡಿ ಶುಭಾಶಯಗಳನ್ನು ತಿಳಿಸಿದ್ದಾರೆ. ಸರ್ಪ್ರೈಸ್ ಕಾಲ್ ತಂಡದ ಗೆಲುವಿನ ಖುಷಿಯನ್ನು ಮತ್ತಷ್ಟು ಹೆಚ್ಚಿಸಿದೆ.
ಮನ್ಪ್ರೀತ್ ನಿಮಗೆ ಹಾಗೂ ಇಡೀ ತಂಡಕ್ಕೆ ಶುಭಾಶಯಗಳು. ನೀವು ಅತ್ತುತ್ತಮ ಸಾಧನೆ ಮಾಡಿದ್ದೀರ. ಇಡೀ ದೇಶ ನಿಮ್ಮ ಗೆಲುವಿನಿಂದ ಖುಷಿಯಲ್ಲಿ ಕುಣಿಯುತ್ತಿದೆ. ನನ್ನ ಹೃದಯವೂ ತುಂಬಿ ಬಂದಿದೆ. ನನ್ನ ಶುಭಾಶಯಗಳನ್ನು ತಂಡದ ಪ್ರತಿಯೊಬ್ಬರಿಗೂ ತಿಳಿಸಿ. ಆಗಸ್ಟ್ 15ರಂದು ಭೇಟಿಯಾಗಲು ನಿಮ್ಮನ್ನು ಆಹ್ವಾನಿಸುತ್ತಿದ್ದೇನೆ ಎಂದು ಮೋದಿ ಅವರು ಕರೆ ಮಾಡಿ ತಿಳಿಸಿದ್ದಾರೆ.
ಪ್ರಧಾನಿ ಮೋದಿ ಅವರು ಹಾಕಿ ತಂಡ ಸೆಮಿಫೈನಲ್ನಲ್ಲಿ ಸೋಲು ಕಂಡ ಬಳಿಕವೂ ಕರೆ ಮಾಡಿ ಮಾತನಾಡಿದ್ದರು. ಆ ವೇಳೆ ಕೋಚ್ ಗ್ರ್ಯಾಮ್ ರಿಡ್ ಜೊತೆ ಮಾತನಾಡಿದ್ದ ಪ್ರಧಾನಿ, ನಿಮ್ಮ ಶ್ರಮ ತಂಡದ ಆಟದಲ್ಲಿ ಕಾಣುತ್ತಿದೆ ಎಂದು ಆಸ್ಟ್ರೇಲಿಯಾ ಮೂಲದ ತರಬೇತುದಾರನ ಕೊಡುಗೆಯನ್ನು ಮೋದಿ ಪ್ರಶಂಸಿಸಿ ಅಭಿನಂದನೆಗಳನ್ನು ತಿಳಿಸಿದ್ದರು. ರಿಡ್ ಅವರು ಸಹ ಮೋದಿ ಅವರಿಗೆ ಧನ್ಯವಾದಗಳನ್ನು ತಿಳಿಸಿದ್ದರು. ಸೋಲಿನ ಬಳಿಕ ನಿಮ್ಮ ಪ್ರೋತ್ಸಾಹದಾಯಕ ಮಾತುಗಳು ನಮಗೆ ದೊಡ್ಡ ಬಲ ತಂದು ಕೊಟ್ಟಿದೆ ಎಂದು ಹೇಳಿದ್ದರು.
ಭಾರತದ ಹಾಕಿ ತಂಡ ಕಂಚಿನ ಪದಕ ಗೆಲ್ಲುತ್ತಲೇ ಟ್ವೀಟ್ ಮಾಡಿದ್ದ ಪ್ರಧಾನಿ ಮೋದಿ, ಭಾರತದ ಪಾಲಿಗೆ ಇಂದು ಐಸಿಹಾಸಿಕ ದಿನ ಎಂದು ಬಣ್ಣಿಸಿದ್ದರು. ಇಡೀ ದೇಶಕ್ಕೆ ಹೆಮ್ಮೆ ತಂದ ತಂಡದ ಪ್ರತಿಯೊಬ್ಬರಿಗೆ ಅಭಿನಂದನೆಗಳು ಎಂದಿದ್ದರು.
ಇದನ್ನೂ ಓದಿ:
Tokyo Olympics- ಭಾರತ ಹಾಕಿ ತಂಡಕ್ಕೆ ಕಂಚಿನ ಪದಕ; ಕುಸ್ತಿಪಟು ವಿನೇಶ್ ಫೋಗಾಟ್, ಅಂಶುಗೆ ನಿರಾಸೆ
ಆ.15ರಂದು ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದ ವಿಶೇಷ ಅತಿಥಿಗಳಾಗಿ ಹಾಕಿ ತಂಡದ ಆಟಗಾರರನ್ನು ಪಧಾನಿ ಮೋದಿ ಆಹ್ವಾನಿಸಿದ್ದಾರೆ. ಕೆಂಪುಕೋಟೆ ಧ್ವಜಾರೋಹಣದಲ್ಲಿ ಹಾಕಿ ತಂಡ ಭಾಗಿಯಾಗಲಿದೆ. 1980ರಲ್ಲಿ ನಡೆದ ಒಲಂಪಿಕ್ಸ್ನಲ್ಲಿ ಭಾರತದ ಹಾಕಿ ತಂಡ 8 ಚಿನ್ನದ ಪದಕಗಳನ್ನು ಗೆದ್ದಿತ್ತು. ನಂತರ ಒಲಿಂಪಿಕ್ಸ್ನಲ್ಲಿ ಯಾವುದೇ ಪದಕವನ್ನು ಗೆದ್ದಿರಲಿಲ್ಲ. 41 ವರ್ಷಗಳ ಪದಕದ ಬರವನ್ನು ಈ ಬಾರಿ ಹಾಕಿ ತಂಡ ನಿವಾರಿಸಿದೆ. ಈ ಕಂಚಿನ ಪದಕದ ಮೂಲಕ ಭಾರತ ಈ ಬಾರಿಯ ಒಲಿಪಿಂಕ್ಸ್ನಲ್ಲಿ 4 ಪದಕಗಳನ್ನು ಗೆದ್ದಂತಾಗಿದೆ.
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ