• Home
  • »
  • News
  • »
  • national-international
  • »
  • Explained: ಇರಾನ್‌ನ ಪ್ರಬಲ ಸಫಾವಿದ್ ರಾಜವಂಶದ ಸ್ಥಾಪಕ ಶಾ ಇಸ್ಮಾಯಿಲ್ಗೂ ಬಾಬರ್‌ಗೂ ಸಂಬಂಧವಿದೆ, ಈ ಸಬಂಧಕ್ಕೆ ಕಾರಣ ಇಲ್ಲಿದೆ

Explained: ಇರಾನ್‌ನ ಪ್ರಬಲ ಸಫಾವಿದ್ ರಾಜವಂಶದ ಸ್ಥಾಪಕ ಶಾ ಇಸ್ಮಾಯಿಲ್ಗೂ ಬಾಬರ್‌ಗೂ ಸಂಬಂಧವಿದೆ, ಈ ಸಬಂಧಕ್ಕೆ ಕಾರಣ ಇಲ್ಲಿದೆ

ಶಾ ಇಸ್ಮಾಯಿಲ್

ಶಾ ಇಸ್ಮಾಯಿಲ್

1501 ರಿಂದ 1524 ರ ವರೆಗೆ ಇರಾನ್‌ನ ರಾಜರ ರಾಜನಾಗಿ ಆಳ್ವಿಕೆ ಮಾಡಿದ ಸಮರ್ಥ ಆಡಳಿತಗಾರನಾಗಿದ್ದ. ಶಾ ಇಸ್ಮಾಯಿಲ್ ಅವರ ಆಳ್ವಿಕೆಯು ಮಧ್ಯಕಾಲೀನ ಏಷ್ಯಾದ ಅತ್ಯಂತ ಮಹತ್ವದ ಚಳುವಳಿಗಳಲ್ಲಿ ಒಂದಾಗಿದೆ. ಸಫಾವಿದ್ ಸಾಮಾಜ್ಯವು ಆ ಸಮಯದಲ್ಲಿ ಅತ್ಯಂತ ಬಲಾಢ್ಯ ಆಡಳಿತವನ್ನು ಹೊಂದಿತ್ತು ಹಾಗೂ ಈ ರಾಜವಂಶವು ಭಾರತದಲ್ಲಿ ಮೊಘಲ್ ಸಾಮ್ರಾಜ್ಯದ ಸಂಸ್ಥಾಪಕ ಬಾಬರ್ ಜೀವನದಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿತು.

ಮುಂದೆ ಓದಿ ...
  • Share this:

1501 ರಿಂದ 1736 ರವರೆಗೆ ಆಳಿದ ಇರಾನ್‌ನ (Iran) ಅತ್ಯಂತ ಮಹತ್ವದ ಆಡಳಿತ ರಾಜವಂಶಗಳಲ್ಲಿ ಸಫಾವಿದ್ ರಾಜವಂಶವು ಪ್ರಮುಖವಾದುದಾಗಿದೆ. ಏಕೆಂದರೆ ಈ ಆಡಳಿತವನ್ನು ಆಧುನಿಕ ಇರಾನಿನ ಇತಿಹಾಸದ ಆರಂಭ ಎಂದು ಪರಿಗಣಿಸಲಾಗಿದೆ. ಸಫಾವಿದ್ ರಾಶವಂಶದ ಸ್ಥಾಪಕ ಇಸ್ಮಾಯಿಲ್ I. ಈತನನ್ನು ಶಾ ಇಸ್ಮಾಯಿಲ್ (Shah Ismail) ಎಂದೂ ಕರೆಯುತ್ತಾರೆ. 1501 ರಿಂದ 1524 ರ ವರೆಗೆ ಇರಾನ್‌ನ ರಾಜರ ರಾಜನಾಗಿ ಆಳ್ವಿಕೆ ಮಾಡಿದ ಸಮರ್ಥ ಆಡಳಿತಗಾರನಾಗಿದ್ದ. ಶಾ ಇಸ್ಮಾಯಿಲ್ ಅವರ ಆಳ್ವಿಕೆಯು ಮಧ್ಯಕಾಲೀನ ಏಷ್ಯಾದ ಅತ್ಯಂತ ಮಹತ್ವದ ಚಳುವಳಿಗಳಲ್ಲಿ ಒಂದಾಗಿದೆ. ಸಫಾವಿದ್ ಸಾಮಾಜ್ಯವು (Safavid Dynasty) ಆ ಸಮಯದಲ್ಲಿ ಅತ್ಯಂತ ಬಲಾಢ್ಯ ಆಡಳಿತವನ್ನು ಹೊಂದಿತ್ತು ಹಾಗೂ ಈ ರಾಜವಂಶವು ಭಾರತದಲ್ಲಿ ಮೊಘಲ್ ಸಾಮ್ರಾಜ್ಯದ ಸಂಸ್ಥಾಪಕ ಬಾಬರ್ (Babur) ಜೀವನದಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿತು.


ಶಾ ಇಸ್ಮಾಯಿಲ್ ಕುರಿತು
ಜುಲೈ 17, 1487 ರಂದು ಮಾರ್ಥಾ ಮತ್ತು ಶೇಖ್ ಹೈದರ್‌ಗೆ ಅರ್ದಬಿಲ್‌ನಲ್ಲಿ ಶಾ ಇಸ್ಮಾಯಿಲ್, ಜನಿಸಿದರು. ಇವರ ತಂದೆ ಹೈದರ್, ಕುರ್ದಿಶ್ ಸಂಸ್ಥಾಪಕನಾಗಿದ್ದು, ಸಫಿ-ಅದ್-ದಿನ್ ಅರ್ದಬಿಲಿ (1252-1334) ಅವರ ನೇರ ವಂಶಸ್ಥರಾಗಿದ್ದಾರೆ.


ಇವರ ಪೂರ್ವಜರು ಜಾರ್ಜಿಯನ್ನರು, ಗ್ರೀಕರು, ಕುರ್ಡ್ಸ್ ಮತ್ತು ತುರ್ಕಮನ್‌ಗಳಂತಹ ವಿವಿಧ ಜನಾಂಗೀಯ ಗುಂಪುಗಳಿಂದ ಮಿಶ್ರಗೊಂಡಿದ್ದರು. 1488 ರಲ್ಲಿ, ಇರಾನ್‌ನ ಹೆಚ್ಚಿನ ಭಾಗವನ್ನು ನಿಯಂತ್ರಿಸುತ್ತಿದ್ದ ತುರ್ಕಿಯ ಬುಡಕಟ್ಟು ಒಕ್ಕೂಟವಾದ ಶಿರ್ವಾನ್‌ಶಾ ಫರೂಖ್ ಯಾಸ್ಸಾರ್ ಮತ್ತು ಅವನ ಅಧಿಪತಿಯಾದ ಅಕ್ ಕೊಯುನ್ಲುನ ಪಡೆಗಳ ವಿರುದ್ಧ ತಬಸರನ್‌ನಲ್ಲಿ ನಡೆದ ಯುದ್ಧದಲ್ಲಿ ಶಾ ತಮ್ಮ ತಂದೆಯನ್ನು ಕಳೆದುಕೊಂಡರು.


7 ರ ಹರೆಯದ ಇಸ್ಮಾಯಿಲ್‌ರನ್ನು ಅಡಗಿಕೊಳ್ಳುವಂತೆ ತಿಳಿಸಲಾಯಿತಾದರೂ ಇಸ್ಮಾಯಿಲ್ ಬರೇ 12 ವರ್ಷದವರಾಗಿದ್ದಾಗ, ತಂದೆಯ ಸಾವಿಗೆ ಪ್ರತೀಕಾರ ಕೈಗೊಳ್ಳುವ ನಿರ್ಧಾರವನ್ನು ಮಾಡಿದರು ಹಾಗಾಗಿ ಅಡಗುದಾಣದಿಂದ ಹೊರಬಂದರು. ತಮ್ಮ ಅನುಯಾಯಿಗಳೊಂದಿಗೆ ಇರಾನ್‌ನ ಅಜೆರ್‌ಬೈಜಾನ್‌ಗೆ ಮರಳಿದರು. ಕಿಝಿಲ್ಬಾಶ್ ಚಳುವಳಿಯ ಪ್ರಮುಖ ಭಾಗವಾದ ಅನಟೋಲಿಯಾ ಮತ್ತು ಅಜೆರ್ಬೈಜಾನ್ ನ ತುರ್ಕೋಮನ್ ಬುಡಕಟ್ಟುಗಳ ನಾಯಕನಾದರು.


ಇರಾನ್‌ನ ರಾಜನಾದ ಇಸ್ಮಾಯಿಲ್
1500 ರಲ್ಲಿ, ಷಾ ಇಸ್ಮಾಯಿಲ್ ಸುಮಾರು 7,000 ಕಿಝಿಲ್ಬಾಶ್ ಪಡೆಗಳನ್ನು ಒಟ್ಟುಗೂಡಿಸಿ, ಬಾಕುವನ್ನು ವಶಪಡಿಸಿಕೊಳ್ಳಲು ಶಿರ್ವಾನ್ಶಾ ರಾಜ್ಯದ ಕಡೆಗೆ ದಂಡೆತ್ತಿ ಹೋದರು. ಇಸ್ಮಾಯಿಲ್ ತಬ್ರಿಜ್ ಮತ್ತು ನಖ್ಚಿವನ್ ಅನ್ನು ವಶಪಡಿಸಿಕೊಂಡರು ಮತ್ತು ತಂತ್ರಗಾರಿಕೆ ಮತ್ತು ನಾಯಕನಾಗಿ ತಮ್ಮ ಕುಶಾಗ್ರಮತಿ ಕೌಶಲ್ಯದಿಂದ ಜುಲೈ 1501 ರಲ್ಲಿ ಇರಾನ್‌ನ ಷಾ ಎಂದೆನಿಸಿದರು ಮತ್ತು ಟ್ಯಾಬ್ರಿಜ್ ಅನ್ನು ತನ್ನ ರಾಜಧಾನಿಯನ್ನಾಗಿ ಮಾಡಿಕೊಂಡರು.


1502 ರಲ್ಲಿ, ಅಕ್ ಕೊಯುನ್ಲು ಸೈನ್ಯವನ್ನು ಸೋಲಿಸಿದ ನಂತರ, ಇಸ್ಮಾಯಿಲ್ "ಇರಾನ್‌ನ ಶಾ" ಎಂಬ ಬಿರುದನ್ನು ಪಡೆದರು. 1510 ರ ಹೊತ್ತಿಗೆ, ಇಸ್ಮಾಯಿಲ್ ಸಂಪೂರ್ಣ ಇರಾನ್ (ಶಿರ್ವಾನ್ ಸೇರಿದಂತೆ), ದಕ್ಷಿಣ ಡಾಗೆಸ್ತಾನ್ (ಅದರ ಪ್ರಮುಖ ನಗರವಾದ ಡರ್ಬೆಂಟ್), ಮೆಸೊಪಟೊಮಿಯಾ, ಅರ್ಮೇನಿಯಾ, ಖೊರಾಸನ್ ಮತ್ತು ಪೂರ್ವ ಅನಾಟೋಲಿಯಾವನ್ನು ವಶಪಡಿಸಿಕೊಂಡರು ಮತ್ತು ಜಾರ್ಜಿಯನ್ ಸಾಮ್ರಾಜ್ಯಗಳಾದ ಕಾರ್ಟ್ಲಿ ಮತ್ತು ಕಾಖೆಟಿಯನ್ನು ತನ್ನ ಸಾಮಂತರನ್ನಾಗಿ ಮಾಡಿಕೊಂಡರು.


ಒಟ್ಟೋಮನ್ ಸಾಮ್ರಾಜ್ಯದೊಂದಿಗೆ ಘರ್ಷಣೆ
ಬುಡಕಟ್ಟು ಜನಾಂಗದವರಾದ ಒಟ್ಟೋಮನ್ ಪ್ರಜೆಗಳು ಹಾಗೂ ಪೂರ್ವ ಅನಾಟೋಲಿಯದ ಟರ್ಕೋಮನ್ ಬುಡಕಟ್ಟು ಜನಾಂಗದವರಲ್ಲಿ ಸಫಾವಿದ್ ಸಾಮ್ರಾಜ್ಯದ ಕಾರಣಕ್ಕಾಗಿ ನಡೆದ ಬೆಂಬಲದ ಸಕ್ರಿಯ ನೇಮಕಾತಿಯಿಂದ ನೆರೆಯ ಒಟ್ಟೋಮನ್ ಸಾಮ್ರಾಜ್ಯ ಮತ್ತು ಸಫಾವಿದ್ ಸಾಮ್ರಾಜ್ಯದ ನಡುವೆ ಘರ್ಷಣೆಯನ್ನು ಉಂಟುಮಾಡಿತು.


ಇದನ್ನೂ ಓದಿ:  Explained: ಜಮ್ಮು ಕಾಶ್ಮೀರದಲ್ಲಿ ನೆಹರೂ ಪ್ರಮಾದಗಳು; ಕೇಂದ್ರ ಸಚಿವ ಕಿರಣ್ ರಿಜಿಜು ಬರಹ ಓದಿ


ಆಗಿನ ಒಟ್ಟೋಮನ್ ಚಕ್ರವರ್ತಿ ಸೆಲಿಮ್ I, 1514 ರಲ್ಲಿ ಚಲ್ದಿರಾನ್ ಕದನದಲ್ಲಿ ಇಸ್ಮಾಯಿಲ್ ಅನ್ನು ಸೋಲಿಸಿದನು. ಇಸ್ಮಾಯಿಲ್ ಹೆಚ್ಚು ಚಲನಶೀಲವಾದ ಸೈನ್ಯವನ್ನು ಹೊಂದಿದ್ದರು ಮತ್ತು ಅವನ ಸೈನಿಕರು ಉತ್ತಮವಾಗಿ ಸಿದ್ಧರಾಗಿದ್ದರು. ಅದಾಗ್ಯೂ ಒಟ್ಟೋಮನ್‌ಗಳು ಮುಖ್ಯವಾಗಿ ತಮ್ಮ ಸಮರ್ಥ ಆಧುನಿಕ ಸೈನ್ಯ ಮತ್ತು ಫಿರಂಗಿಗಳ ಬಳಕೆಯಿಂದಾಗಿ ಯುದ್ಧದಲ್ಲಿ ಮೇಲುಗೈ ಸಾಧಿಸಿದರು.


ಇಸ್ಮಾಯಿಲ್ ಯುದ್ಧದಲ್ಲಿ ಗಾಯಗೊಂಡರು ಮತ್ತು ಯುದ್ಧದಲ್ಲಿ ಬಹುತೇಕ ಸೆರೆಹಿಡಿಯಲ್ಪಟ್ಟರು. ಸೆಲಿಮ್ ಸೆಪ್ಟೆಂಬರ್ 5 ರಂದು ಇರಾನಿನ ರಾಜಧಾನಿ ತಬ್ರಿಜ್ ಅನ್ನು ವಿಜಯೋತ್ಸವದಲ್ಲಿ ಪ್ರವೇಶಿಸಿದರು ಆದರೆ ಅಕಾಲಿಕವಾಗಿ ಹಿಂತೆಗೆದುಕೊಂಡರು, ಇದು ಇಸ್ಮಾಯಿಲ್‌ಗೆ ಚೇತರಿಸಿಕೊಳ್ಳಲು ಸಮಯವನ್ನು ನೀಡಿತು. ಸೋಲಿನ ಹೊರತಾಗಿಯೂ, ಇಸ್ಮಾಯಿಲ್ ತನ್ನ ಸಾಮ್ರಾಜ್ಯದ ಬಹುಭಾಗವನ್ನು ತ್ವರಿತವಾಗಿ ವಶಪಡಿಸಿಕೊಂಡರು.


ಬಾಬರ್ ತನ್ನ ಸಹೋದರಿಯೊಂದಿಗೆ ಮತ್ತೆ ಒಂದಾಗಲು ಶಾ ಇಸ್ಮಾಯಿಲ್ ಹೇಗೆ ಸಹಾಯ ಮಾಡಿದರು
ಬಾಬರ್‌ ತನ್ನ ಜೀವನದಲ್ಲಿ ಅವನು ರಾಜ್ಯವಿಲ್ಲದೆ ಯಾವುದೇ ಗುರಿಯಿಲ್ಲದೆ ಅಲೆದಾಡುತ್ತಿದ್ದ ಕಾಲವಿತ್ತು. ಆದರೆ ಅದೃಷ್ಟವೆಂಬಂತೆ, 1504 ರಲ್ಲಿ, ಆತನಿಗೆ ಹಿಮಭರಿತ ಹಿಂದೂ ಕುಶ್ ಪರ್ವತಗಳನ್ನು ದಾಟಲು ಮತ್ತು ಕಾಬೂಲ್ ಅನ್ನು ವಶಪಡಿಸಿಕೊಳ್ಳಲು ಸಾಧ್ಯವಾಯಿತು.


ಈ ಮೂಲಕ ಬಾಬರ್ ಹೊಸ ರಾಜ್ಯವನ್ನು ಸ್ಥಾಪಿಸಿದನು ಹಾಗೂ 1526 ರವರೆಗೆ ರಾಜ್ಯಾಭಾರ ಮಾಡಿದ. ಆದರೆ ಬಾಬರ್‌ನ ಅತ್ಯಂತ ಅಸಾಧಾರಣ ಪ್ರತಿಸ್ಪರ್ಧಿ, ಉಜ್ಬೆಕ್‌ನ ಖಾನ್, ಮುಹಮ್ಮದ್ ಶೈಬಾನಿ, ಬಾಬರ್ ಆಳ್ವಿಕೆಯ ಮೇಲೆ ಕಣ್ಣಿಟ್ಟಿದ್ದರು. ಬಾಬರ್ ಕಾಬೂಲ್‌ನಲ್ಲಿನ ದಂಗೆಯನ್ನು ನಿಗ್ರಹಿಸಲು ಸಾಧ್ಯವಾಯಿತಾದರೂ, ಒಂದೆರಡು ವರ್ಷಗಳ ನಂತರ ಅವನ ಹಾಗೂ ಕೆಲವು ಪ್ರಮುಖ ಜನರಲ್‌ಗಳ ನಡುವಿನ ದಂಗೆಯಿಂದಾಗಿ ಬಾಬರ್‌ ತನ್ನ ರಾಜ್ಯದಿಂದಲೇ ಹೊರನೂಕಲ್ಪಟ್ಟನು.


ಇದನ್ನೂ ಓದಿ:   Explained: ಜಾಗತಿಕ ಆರ್ಥಿಕತೆಯನ್ನು ಯುಎಸ್ ಡಾಲರ್ ಹೇಗೆ ನಿಯಂತ್ರಿಸುತ್ತದೆ? ಇಲ್ಲಿದೆ ವಿವರ


ಕೆಲವೇ ಕೆಲವು ಸಹಚರರೊಂದಿಗೆ ತಪ್ಪಿಸಿಕೊಂಡು, ಬಾಬರ್ ಶೀಘ್ರದಲ್ಲೇ ನಗರಕ್ಕೆ ಹಿಂದಿರುಗಿದನು, ಮತ್ತೆ ಕಾಬೂಲ್ ಅನ್ನು ವಶಪಡಿಸಿಕೊಂಡನು ಮತ್ತು ಬಂಡುಕೋರರ ನಿಷ್ಠೆಯನ್ನು ಮರಳಿ ಪಡೆದನು. ನಿರ್ಣಾಯಕ ಹಂತದಲ್ಲಿ, ಶಾ ಇಸ್ಮಾಯಿಲ್, ಬಾಬರ್‌ಗೆ ಒಂದು ದೊಡ್ಡ ಉಪಕಾರವನ್ನು ಮಾಡಿದ. 1510 ರಲ್ಲಿ ಶೈಬಾನಿಯನ್ನು ಸೋಲಿಸಿ ಕೊಲ್ಲುವ ಮೂಲಕ ನಂತರದ ಅದೃಷ್ಟದ ಹಾದಿಯನ್ನು ಬಾಬರ್‌ಗೆ ದೊರಕಿತು. ಇದರಿಂದ ಬಾಬರ್ ಮತ್ತು ಉಳಿದ ತೈಮೂರಿಡ್‌ಗಳಿಗೆ ತಮ್ಮ ಪೂರ್ವಜರ ಪ್ರದೇಶಗಳನ್ನು ಪುನಃ ವಶಪಡಿಸಿಕೊಳ್ಳುವ ಅವಕಾಶ ದೊರಕಿತು. ಮುಂದಿನ ಕೆಲವು ವರ್ಷಗಳಲ್ಲಿ, ಬಾಬರ್ ಮತ್ತು ಶಾ ಇಸ್ಮಾಯಿಲ್ ಮಧ್ಯ ಏಷ್ಯಾದ ಕೆಲವು ಭಾಗಗಳನ್ನು ಸ್ವಾಧೀನಪಡಿಸಿಕೊಳ್ಳುವ ಪ್ರಯತ್ನದಲ್ಲಿ ಪಾಲುದಾರಿಕೆಯನ್ನು ರಚಿಸಿದರು.


ಇಸ್ಮಾಯಿಲ್‌ನ ಸಹಾಯಕ್ಕೆ ಪ್ರತಿಯಾಗಿ, ಬಾಬರ್ ತನ್ನ ಮತ್ತು ಅವನ ಅನುಯಾಯಿಗಳ ಮೇಲೆ ಸಾರ್ವಭೌಮರಾಗಿ ಕಾರ್ಯನಿರ್ವಹಿಸಲು ಸಫಾವಿಡ್‌ಗಳಿಗೆ ಅನುಮತಿ ನೀಡಿದನು. 1513 ರಲ್ಲಿ, ಕಾಬೂಲ್ ಅನ್ನು ಆಳಲು ತನ್ನ ಸಹೋದರ ನಾಸಿರ್ ಮಿರ್ಜಾನನ್ನು ತೊರೆದ ನಂತರ, ಅವನು ಮೂರನೇ ಬಾರಿಗೆ ಸಮರ್ಕಂಡ್ ಅನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾದನು ಮತ್ತು ಬೊಖಾರಾವನ್ನು ಸಹ ವಶಪಡಿಸಿಕೊಂಡನು. ಆದರೆ, ಉಜ್ಬೆಕ್‌ಗಳಿಗೆ ಮತ್ತೊಮ್ಮೆ ಸೋತನು. ಶಾ ಇಸ್ಮಾಯಿಲ್, ಬಾಬರ್‌ನನ್ನು ತನ್ನ ಸಹೋದರಿ ಖಾಂಜಾದಾಳೊಂದಿಗೆ ಮತ್ತೆ ಒಂದುಗೂಡಿಸಿರು, 1514 ರಲ್ಲಿ, ಬಾಬರ್ ಕಾಬೂಲ್‌ಗೆ ಹಿಂದಿರುಗಿದನು ಮತ್ತು ಮುಂದಿನ 11 ವರ್ಷಗಳ ಕಾಲ ಶಾಂತಿಯುತವಾಗಿ ಆಳ್ವಿಕೆ ನಡೆಸಿದನು.


ಶಾ ಇಸ್ಮಾಯಿಲ್ ಸಾಹಿತ್ಯ ರಚನೆಗಳು
ಖತಾಯಿ ಎಂಬ ಕಾವ್ಯನಾಮದಲ್ಲಿ ಅನೇಕ ಕವಿತೆಗಳನ್ನು ಇಸ್ಮಾಯಿಲ್ ಬರೆಯುತ್ತಿದ್ದ ಹಾಗೂ ಅವರ ಕೃತಿಗಳು ಮೆಚ್ಚುಗೆಗೆ ಪಾತ್ರವಾಗಿದ್ದವು. ತಮ್ಮ ಹೆಚ್ಚಿನ ಕಲಾ ಸಂಗ್ರಹಗಳನ್ನು ಇಸ್ಮಾಯಿಲ್ ಅಜೆರ್ಬೈಜಾನಿ ಭಾಷೆಯಲ್ಲಿ ಬರೆದಿದ್ದು, ತುರ್ಕಿಕ್ ಭಾಷೆ ಮತ್ತು ಪರ್ಷಿಯನ್ ಭಾಷೆಯಲ್ಲಿದೆ.


ಇಸ್ಮಾಯಿಲ್ ಅಜರ್ಬೈಜಾನಿ ಭಾಷೆಯ ಸಾಹಿತ್ಯ ಇತಿಹಾಸದಲ್ಲಿ ಪ್ರಮುಖ ವ್ಯಕ್ತಿಯಾಗಿದ್ದಾರೆ ಮತ್ತು ಈ ಭಾಷೆಯಲ್ಲಿ ಸುಮಾರು 1,400 ಪದ್ಯಗಳನ್ನು ರಚಿಸಿದ್ದಾರೆ ಮತ್ತು ಪರ್ಷಿಯನ್ ಕಾವ್ಯದ ಸುಮಾರು 50 ಪದ್ಯಗಳು ಅವರ ಹೆಸರಿನಲ್ಲಿವೆ.


ಎನ್‌ಸೈಕ್ಲೋಪೀಡಿಯಾ ಇರಾನಿಕಾ ಹೇಳುವಂತೆ ಇಸ್ಮಾಯಿಲ್ ಒಬ್ಬ ಕೌಶಲ್ಯಪೂರ್ಣ ಕವಿಯಾಗಿದ್ದು, ಅವರು ಪ್ರಚಲಿತ ವಿಷಯಗಳು ಮತ್ತು ಚಿತ್ರಗಳನ್ನು ಭಾವಗೀತೆ ಮತ್ತು ನೀತಿಬೋಧಕ-ಧಾರ್ಮಿಕ ಕಾವ್ಯಗಳಲ್ಲಿ ಸುಲಭವಾಗಿ ಬಳಸಿದ್ದಾರೆ ಎಂದಾಗಿದೆ.


ಶಾ ಇಸ್ಮಾಯಿಲ್ ಮರಣ
ಶಾ ಇಸ್ಮಾಯಿಲ್ ಸಾಯುವ ಮೊದಲು ಬಹಳ ದುಃಖ ಮತ್ತು ಖಿನ್ನತೆಯ ಜೀವನವನ್ನು ಅನುಭವಿಸಿದರು. ಚಲ್ದಿರಾನ್ ಯುದ್ಧದ ನಂತರ, ಅವರು ಖಿನ್ನತೆಗೆ ಒಳಗಾಗಿದ್ದರು ಮತ್ತು ಮದ್ಯದ ಚಟಕ್ಕೆ ದಾಸರಾದರು. ಮಿಲಿಟರಿ ಕಾರ್ಯಾಚರಣೆಯಲ್ಲಿ ಭಾಗವಹಿಸಲಿಲ್ಲ ಮತ್ತು ಮಿರ್ಜಾ ಶಾ ಹುಸೇನ್ ನಿರ್ವಹಿಸುತ್ತಿದ್ದ ರಾಜ್ಯದ ವ್ಯವಹಾರಗಳಿಂದ ಹಿಂದೆ ಸರಿದರು. ಹೆಚ್ಚಿನ ಸಮಯಗಳನ್ನು ಅರಮನೆಯಲ್ಲಿಯೇ ಕಳೆಯುತ್ತಿದ್ದರು. ಇಸ್ಮಾಯಿಲ್ ಮೇ 23, 1524 ರಂದು, ತಮ್ಮ 36 ನೇ ವಯಸ್ಸಿನಲ್ಲಿ ನಿಧನರಾದರು. ಅವರನ್ನು ಅರ್ದಬಿಲ್‌ನಲ್ಲಿ ಸಮಾಧಿ ಮಾಡಲಾಯಿತು ಮತ್ತು ಅವರ ಮಗ ತಹ್ಮಾಸ್ಪ್ I ಇಸ್ಮಾಯಿಲ್‌ನ ಉತ್ತರಾಧಿಕಾರಿಯಾದರು.


ಇಸ್ಮಾಯಿಲ್ I ರ ಆಳ್ವಿಕೆಯು ಇರಾನಿನ ಇತಿಹಾಸದಲ್ಲಿ ಅತ್ಯಂತ ಪ್ರಮುಖವಾದುದಾಗಿದೆ. 1501 ರಲ್ಲಿ ಇಸ್ಮಾಯಿಲ್‌ನ ಆಗಮನಕ್ಕೆ ಮುಂಚಿತವಾಗಿ, ಇರಾನ್ ಅನ್ನು ಅರಬರು ವಶಪಡಿಸಿಕೊಂಡ ನಂತರ, ಸ್ಥಳೀಯ ಇರಾನಿನ ಆಳ್ವಿಕೆಯ ಅಡಿಯಲ್ಲಿ ಏಕೀಕೃತ ದೇಶವಾಗಿರಲಿಲ್ಲ. . ಬದಲಿಗೆ, ಇದು ಅರಬ್ ಖಲೀಫರು, ತುರ್ಕಿಕ್ ಸುಲ್ತಾನರು ಮತ್ತು ಮಂಗೋಲ್ ಖಾನ್ಗಳ ಸರಣಿ ಆಳ್ವಿಕೆಯಿಂದ ನಿಯಂತ್ರಿಸಲಾಗಿತ್ತು.


ಇದನ್ನೂ ಓದಿ:  Explained: ಶಸ್ತ್ರಸಜ್ಜಿತ ರಷ್ಯಾದ ವಾಯುಪಡೆ ಉಕ್ರೇನ್‌ನಲ್ಲಿ ವಿಫಲವಾಗಿದ್ದೇಕೆ? ಇದರಿಂದ ಭಾರತದ ವಾಯುಪಡೆ ಕಲಿಯಬೇಕಾಗಿರುವುದೇನು?


ಇಸ್ಮಾಯಿಲ್ ಸ್ಥಾಪಿಸಿದ ಸಫಾವಿದ್ ರಾಜವಂಶವು 200 ವರ್ಷಗಳ ಕಾಲ ಇರಾನ್‌ನಲ್ಲಿ ಆಳ್ವಿಕೆ ನಡೆಸಿದೆ ಹಾಗೂ ಈ ರಾಜವಂಶವು ಇರಾನಿನ ಶ್ರೇಷ್ಠ ಸಾಮ್ರಾಜ್ಯಗಳಲ್ಲಿ ಒಂದಾಗಿದೆ ಮತ್ತು ಅತ್ಯಂತ ಶಕ್ತಿಶಾಲಿ ಸಾಮ್ರಾಜ್ಯಗಳಲ್ಲಿ ಒಂದೆನಿಸಿದೆ.

Published by:Ashwini Prabhu
First published: