ದಾಳಿಯಲ್ಲಿ ಗಂಭೀರ ಗಾಯಗೊಂಡಿದ್ದರೂ "ಆ ಉಗ್ರರು ಏನಾದರು?" ಎಂದು ಪ್ರಶ್ನಿಸಿ ಕರ್ತವ್ಯಕ್ಕೆ ಹಾಜರಾಗಲು ಸಿದ್ದನಾದ ಸೈನಿಕ


Updated:February 13, 2018, 4:55 PM IST
ದಾಳಿಯಲ್ಲಿ ಗಂಭೀರ ಗಾಯಗೊಂಡಿದ್ದರೂ
"ಆ ಉಗ್ರರು ಏನಾದರು?" ಎಂದು ಪ್ರಶ್ನಿಸಿ ಕರ್ತವ್ಯಕ್ಕೆ ಹಾಜರಾಗಲು ಸಿದ್ದನಾದ ಮೇಜರ್ ಅಭಿಜಿತ್

Updated: February 13, 2018, 4:55 PM IST
-ನ್ಯೂಸ್ 18 ಕನ್ನಡ

ಸುಂಜವಾನ್​(ಫೆ.13): ಜಮ್ಮು ಕಾಶ್ಮೀರದ ಸುಂಜವಾನ್​ನಲ್ಲಿ ಆರ್ಮಿ ಕ್ಯಾಂಪ್​ ಮೇಲೆ ಉಗ್ರರು ನಡೆಸಿದ ದಾಳಿಯಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಮೇಜರ್ ಅಭಿಜಿತ್​ರವರು ಕೊನೆಗೂ ಚೇತರಿಸಿಕೊಂಡಿದ್ದು, ಪ್ರಜ್ಞೆ ಬಂದಿದೆ. ದಾಳಿ ಸಂದರ್ಭದಲ್ಲಿ ಮೇಜರ್ ಅಭಿಜಿತ್ ಗಂಭೀರವಾಗಿ ಗಾಯಗೊಂಡಿದ್ದರು ಹೀಗಿದ್ದರೂ ಅವರಿಗೆ ತಮ್ಮ ಪ್ರಾಣಕ್ಕಿಂತ ಹೆಚ್ಚು ದಾಳಿಯಲ್ಲಿ ಏನಾಗುತ್ತದೆ ಎಂಬ ಚಿಂತೆ ಕಾಡಿತ್ತು. ಯಾಕೆಂದರೆ ಮಂಗಳವಾರದಂದು ಅವರಿಗೆ ಪ್ರಜ್ಞೆ ಬರುತ್ತಿದ್ದಂತೆಯೇ ತನಗೇನಾಗಿದೆ ಎಂದು ತಿಳಿದುಕೊಳ್ಳುವುದಕ್ಕಿಂತ ಮೊದಲು 'ಆ ಉಗ್ರರು ಏನಾದರು?' ಎಂದು ಪ್ರಶ್ನಿಸಿದ್ದಾರೆ ಈ ಯುವ ಸೈನಿಕ.

ಧನ್​ಪುರದ ಕಮಾಂಡ್ ಹಾಸ್ಪಟಲ್​ನ ಕಮಾಂಡೆಂಟ್ ಮೇಜರ್ ಜನರಲ್ ನದೀಪ್ ನೈಥಾನಿ ಈ ಸೈನಿಕನ ಕುರಿತಾಗಿ ಮಾತನಾಡುತ್ತಾ "ಅವರೊಬ್ಬ ಧೃಡ ವಿಶ್ವಾಸವುಳ್ಳ ಸೈನಿಕ. ಸರ್ಜರಿ ನಡೆದು ಚೇತರಿಸಿಕೊಂಡ ಕೂಡಲೇ "ಆ ಉಗ್ರರು ಏನಾದರು?" ಎಂದು ಪ್ರಶ್ನಿಸಿದ್ದರು. ಅಲ್ಲದೇ ಅವರು ಮತ್ತೆ ತಮ್ಮ ಕರ್ತವ್ಯಕ್ಕೆ ಹಾಜರಾಗಲು ಸಿದ್ಧರಾಗಿದ್ದರು" ಎಂದಿದ್ದಾರೆ.


Loading...

ಇನ್ನು ಗಂಭೀರವಾಗಿ ಗಾಯಗೊಂಡಿದ್ದ ಮೇಜರ್ ಅಭಿಜಿತ್​ರನ್ನು ಉಧಮ್​ಪುರ್​ನ ಆರ್ಮಿ ಹಾಸ್ಪಿಟಲ್​ಗೆ ದಾಖಲಿಸಲಾಗಿತ್ತು. ಕಳೆದೆರಡು ದಿನಗಳಿಂದ ಇವರಿಗೆ ಆಪರೇಷನ್​ಗಳು ನಡೆದಿದ್ದು, ಇಂದು ಅವರಿಗೆ ಪ್ರಜ್ಞೆ ಬಂದಿದೆ. ತಮ್ಮ ಕುಟುಂಬ ಸದಸ್ಯರೊಂದಿಗೆ ಫೋನ್ ಮೂಲಕ ಮಾತನಾಡಿದ್ದಾರೆ. ಇನ್ನು ಇವರ ಆರೋಗ್ಯದಲ್ಲಿ ಚೇತರಿಕೆಯಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ನ್ಯೂಸ್ ಏಜೆನ್ಸಿ ANI ನೊಂದಿಗೆ ಮಾತನಾಡಿದ ಅವರು 'ಸದ್ಯ ಒಳ್ಳೆಯ ಅನುಭವವಾಗುತ್ತಿದೆ. ಈಗ ವೈದ್ಯರ ಬಳಿಯೂ ಮಾತನಾಡಲು ಶಕ್ತನಾಗಿದ್ದೇನೆ. ದಿನದಲ್ಲಿ ಎರಡು ಬಾರಿ ನಾನೇ ಖುದ್ದಾಗಿ, ಯಾರ ಸಹಾಯವೂ ಇಲ್ಲದೆ ನಡೆದಾಡುತ್ತಿದ್ದೇನೆ.' ಎಂದಿದ್ದಾರೆ.ಶನಿವಾರದಂದು ಜಮ್ಮು-ಕಾಶ್ಮೀರದ ಸುಂಜವಾನ್ ಆರ್ಮಿ ಕ್ಯಾಂಪ್​ಗೆ ಕೆಲ ಉಗ್ರರು ನುಸುಳಿ, ದಾಳಿ ನಡೆಸಿದ್ದರು. ಸೈನಿಕರು ಹಾಗೂ ಉಗ್ರರ ನಡುವೆ ಫೈರಿಂಗ್ ನಡೆದಿತ್ತು. ಈ ದಾಳಿಯಲ್ಲಿ ಈವರೆಗೂ 6 ಭಾರತೀಯ ಯೋಧರು ಹುತಾತ್ಮರಾಗಿದ್ದಾರೆ.
First published:February 13, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ