Dr Anahita Pandole: ಸೈರಸ್ ಮಿಸ್ತ್ರಿ ಕಾರು ಚಲಾಯಿಸುತ್ತಿದ್ದ ಡಾ.ಅನಾಹಿತಾ ಪಂಡೋಲೆ ಯಾರು?

ಸೈರಸ್‌ ಮಿಸ್ತ್ರಿಯವರ ಕಾರು ಅಪಘಾತ ಸಂಭವಿಸುವ ವೇಳೆ ಕಾರಿನಲ್ಲಿ ಮುಂಬೈನ ಪ್ರಸಿದ್ಧ ಸ್ತ್ರೀರೋಗತಜ್ಞ ಡಾ. ಅನಾಹಿತಾ ಪಂಡೋಲೆ ಮತ್ತು ಅವರ ಪತಿ ಡೇರಿಯಸ್ ಪಂಡೋಲೆ ಇದ್ದರು. ಇಬ್ಬರೂ ಅಪಘಾತದಿಂದ ಪಾರಾಗಿದ್ದಾರೆ. ಹೆಚ್ಚು ವೇಗವಾಗಿ ಕಾರು ಚಲಾಯಿಸುತ್ತಿದ್ದು, ನಿಯಂತ್ರಣ ತಪ್ಪಿ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಹಿಂದಿನ ಸೀಟಿನಲ್ಲಿ ಸೀಟ್‌ ಬೆಲ್ಟ್‌ ಹಾಕದೇ ಕುಳಿತಿದ್ದ ಸೈರಸ್‌ ಮಿಸ್ತ್ರಿ ಮತ್ತು ಜಹಾಂಗೀರ್ ಪಂಡೋಲೆ ಇಬ್ಬರೂ ಸಾವನ್ನಪ್ಪಿದ್ದಾರೆ.

ಡಾ. ಅನಾಹಿತಾ ಪಂಡೋಲೆ

ಡಾ. ಅನಾಹಿತಾ ಪಂಡೋಲೆ

  • Share this:
ಟಾಟಾ ಸನ್ಸ್‌ (Tata Sons) ಮಾಜಿ ಅಧ್ಯಕ್ಷ ಸೈರಸ್‌ ಮಿಸ್ತ್ರಿ ಕಾರು ಅಪಘಾತದಲ್ಲಿ (Car Accident) ಭಾನುವಾರ ಸಾವೀಗೀಡಾಗಿದ್ದಾರೆ. ಮಿಸ್ತ್ರಿ ಮತ್ತು ಇತರ ಮೂವರು ಅಹಮದಾಬಾದ್‌ನಿಂದ ಮುಂಬೈಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ತೀವ್ರ ಅಪಘಾತಕ್ಕೀಡಾಗಿ ಮೃತಪಟ್ಟಿದ್ದಾರೆ. ಮುಂಬೈನಿಂದ ಸುಮಾರು 120 ಕಿ.ಮೀ ದೂರದಲ್ಲಿರುವ ಪಾಲ್ಘರ್‌ನ ಸೇತುವೆಯ (Palghar Bridge) ಮೇಲೆ ಈ ಅಪಘಾತ ಸಂಭವಿಸಿದ್ದು, ಟಾಟಾ ಸನ್ಸ್‌ ಸಂಸ್ಥೆಯ ಮಾಜಿ ಅಧ್ಯಕ್ಷರು ದುರಂತ ಅಂತ್ಯ ಕಂಡಿದ್ದಾರೆ. ಅಪಘಾತ ಸಂಭವಿಸುವ ವೇಳೆ ಕಾರಿನಲ್ಲಿ ಮುಂಬೈನ ಪ್ರಸಿದ್ಧ ಸ್ತ್ರೀರೋಗತಜ್ಞ ಡಾ. ಅನಾಹಿತಾ ಪಂಡೋಲೆ (Gynecologist Dr. Anahita Pandole) ಮತ್ತು ಅವರ ಪತಿ ಡೇರಿಯಸ್ ಪಂಡೋಲೆ ಇದ್ದರು. ಇಬ್ಬರೂ ಅಪಘಾತದಿಂದ ಪಾರಾಗಿದ್ದಾರೆ. 

ಸದ್ಯ ಭೀಕರ ಅಪಘಾತದಲ್ಲಿ ವೈದ್ಯೆ ಅನಾಹಿತಾ ಪಂಡೋಲೆ ಮತ್ತು ಆಕೆ ಪತಿ ಡೇರಿಯಸ್ ಪಂಡೋಲೆ ಸಾವಿನಂಚಿನಿಂದ ಪಾರಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಾಗಾದರೆ ಸೈರಸ್‌ ಮಿಸ್ತ್ರಿ ಸಂಚರಿಸುತ್ತಿದ್ದ ಕಾರನ್ನು ಚಲಾಯಿಸುತ್ತಿದ್ದ ಅನಾಹಿತಾ ಪಂಡೋಲೆ ಯಾರು? ಏನಿವರ ಹಿನ್ನಲೆ ಇಲ್ಲಿದೆ ಡಿಟೇಲ್ಸ್

ವೈದ್ಯ ವೃತ್ತಿ ಜೊತೆ ಪಾರ್ಸಿ ಸಮುದಾಯದ ಬೆಳವಣಿಗೆಗೆ ಶ್ರಮ
ಡಾ.ಅನಾಹಿತಾ ಪಂಡೋಲೆ, ವೃತ್ತಿಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮುಂಬೈನ ಉನ್ನತ ಸ್ತ್ರೀರೋಗತಜ್ಞರಲ್ಲಿ ಒಬ್ಬರಾದ ಇವರು ತಮ್ಮ ಪಾರ್ಸಿ ಸಮುದಾಯದ ಉಳಿವಿಗಾಗಿ ಮತ್ತು ಅಭಿವೃದ್ಧಿಗಾಗಿ ಶ್ರಮಿಸುತ್ತಿರುವವರಲ್ಲಿ ಒಬ್ಬರು. ಅಂತರ್-ವಿವಾಹದ ಪರಿಣಾಮವಾಗಿ ಪಾರ್ಸಿಗಳ ಸಂಖ್ಯೆ ಕ್ಷೀಣಿಸುತ್ತಿದ್ದು, ಇವರ ಉಳಿವಿಗಾಗಿ ಪಾರ್ಸಿ ಪರಂಪರೆಯ ಪ್ರಚಾರ ಮತ್ತು ಸಂರಕ್ಷಣೆಗಾಗಿ ರಾಷ್ಟ್ರವ್ಯಾಪಿ ಮನ್ನಣೆಯನ್ನು ಪಡೆದಿದ್ದಾರೆ.

ಇದನ್ನೂ ಓದಿ:  Cyrus Mistry Death: ಸೈರಸ್ ಮಿಸ್ತ್ರಿಯೊಂದೇ ಅಲ್ಲ, ಇನ್ನೂ ಅನೇಕ ಖ್ಯಾತನಾಮರದ್ದೂ ದುರಂತ ಅಂತ್ಯ!

ಅಲ್ಲದೇ ಜನವರಿ 2004 ರಲ್ಲಿ, ಡಾ ಪಂಡೋಲೆ, ಬಾಂಬೆ ಪಾರ್ಸಿ ಪಂಚಾಯತ್‌ನ ಸಹಯೋಗದೊಂದಿಗೆ, ಬಾಂಬೆ ಪಾರ್ಸಿ ಪಂಚೆತ್ ಫರ್ಟಿಲಿಟಿ ಪ್ರಾಜೆಕ್ಟ್ ಅನ್ನು ಪ್ರಾರಂಭಿಸಿದರು, ಇದು ಅವರಿಗೆ ಅತ್ಯಾಧುನಿಕ ವೈದ್ಯಕೀಯ ಸೌಲಭ್ಯಗಳನ್ನು ಪಡೆಯಲು ಅವಕಾಶ ಮಾಡಿಕೊಟ್ಟಿತು.

ʼಜಿಯೋ ಪಾರ್ಸಿʼ ಕಾರ್ಯಕ್ರಮದ ಪ್ರಮುಖ ರೂವಾರಿ ಅನಾಹಿತಾ
ಬಂಜೆತನ ಹೊಂದಿರುವ ಸಮುದಾಯದ ದಂಪತಿಗಳಿಗೆ ಪೋಷಕರಾಗಲು ಸಹಾಯ ಮಾಡಲು ಸರ್ಕಾರದಿಂದ ಅನುದಾನಿತ ಯೋಜನೆಯಾದ ʼಜಿಯೋ ಪಾರ್ಸಿʼ ಕಾರ್ಯಕ್ರಮದಲ್ಲಿ ಪಂಡೋಲೆ ಪ್ರಮುಖ ಪಾತ್ರ ವಹಿಸಿದ್ದಾರೆ. ಅಷ್ಟೇ ಅಲ್ಲ, ಪಾರ್ಜರ್ ಫೌಂಡೇಶನ್‌ನ ಸಹಾಯದಿಂದ, ಅವರು ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯಕ್ಕಾಗಿ ಭಾರತದಲ್ಲಿ ವಾಸಿಸುವ ಎಲ್ಲಾ ಪಾರ್ಸಿಗಳ ಪ್ರಸ್ತುತ ಡೇಟಾಬೇಸ್ ರಚಿಸಲು ಸಹಾಯ ಮಾಡಿದ್ದರು.

ಜಿಯೋ ಪಾರ್ಶಿ ಕಾರ್ಯಕ್ರಮದಲ್ಲಿ ಡಾ. ಅನಾಹಿತಾ ಅವರೊಟ್ಟಿಗೆ ಕೆಲಸ ಮಾಡುತ್ತಿರುವ ಸಹವರ್ತಿಯೊಬ್ಬರು, ಮಾತನಾಡಿ “ಸದ್ಯದ ಪರಿಸ್ಥಿತಿಯಲ್ಲಿ ಏನು ಮಾತನಾಡಲು ತೋಚುತಿಲ್ಲ. ಅವರ ಚೇತರಿಕೆಗಾಗಿ ಪ್ರಾರ್ಥಿಸುತ್ತಿದ್ದೇವೆ" ಎಂದಿದ್ದಾರೆ.

ಯೋಜನೆಯಡಿಯಲ್ಲಿ ಪ್ರಕಟವಾದ ತ್ರೈಮಾಸಿಕ ವರದಿಯ ಪ್ರಕಾರ, ಡಾ. ಅನಾಹಿತಾ ಈ ವರ್ಷದ ಜನವರಿ ಮತ್ತು ಮಾರ್ಚ್ ನಡುವೆ ಮುಂಬೈನಲ್ಲಿ 18 ದಂಪತಿಗಳಿಗೆ ಚಿಕಿತ್ಸೆ ನೀಡಿದ್ದಾರೆ.

ಸಾಮಾಜಿಕ ಕೆಲಸಗಳ ಬಗ್ಗೆ ಧ್ವನಿ
ವೈದ್ಯರಲ್ಲದೆ, ಡಾ ಪಂಡೋಲೆ ಅವರು ಸಮುದಾಯ ಸೇವೆಗೆ ಬದ್ಧರಾಗಿರುವ ಸಕ್ರಿಯ ನಾಗರಿಕರಾಗಿ ಕೆಲಸ ಮಾಡುತ್ತಿದ್ದಾರೆ ಎಂಬುವುದಕಕ್ಕೆ ಈ ಕೆಲಸಗಳು ಸಾಕ್ಷಿಯಾಗಿವೆ. ಹಲವು ಸಂದರ್ಭಗಳಲ್ಲಿ ಅಕ್ರಮ ಹೋರ್ಡಿಂಗ್‌ಗಳ ವಿರುದ್ಧ ಸಹ ಧ್ವನಿ ಎತ್ತಿದ್ದಾರೆ ವೈದ್ಯ ಪಂಡೋಲೆ.

ಕಳೆದ ವಾರವಷ್ಟೇ, ವೆಸ್ಟರ್ನ್ ಎಕ್ಸ್‌ಪ್ರೆಸ್ ಹೆದ್ದಾರಿಯ ಉದ್ದಕ್ಕೂ ಫುಟ್‌ಪಾತ್‌ಗಳಲ್ಲಿ ಸ್ಥಾಪಿಸಲಾದ ಹೋರ್ಡಿಂಗ್‌ಗಳನ್ನು ವಿರೋಧಿಸಿ ಬೃಹನ್‌ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (BMC) ಗೆ ಪತ್ರ ಬರೆದು, ಅವು ವಾಹನ ಚಾಲಕರಿಗೆ ಅಪಾಯವನ್ನುಂಟುಮಾಡುತ್ತವೆ, ಇದನ್ನು ಕೂಡಲೇ ನಿಲ್ಲಿಸಬೇಕು ಎಂದು ಎಚ್ಚರಿಕೆ ಪತ್ರವನ್ನು ಬರೆದಿದ್ದರು.

ಇದನ್ನೂ ಓದಿ: Seat Belt: ಕಾರು ಪ್ರಯಾಣಿಕರೇ ಎಚ್ಚೆತ್ತುಕೊಳ್ಳಿ! ಸೈರಸ್ ಮಿಸ್ತ್ರಿ ಸಾವಿಗೆ ಸೀಟ್ ಬೆಲ್ಟ್ ಕಾರಣ

ಅಪಘಾತ ಸಂಭವಿಸಿದ ಬಳಿಕ ಪಂಡೋಲೆ ಮತ್ತು ಅವರ ಪತಿಯನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದು, ಪ್ರಸ್ತುತ ಅವರು ಹೆಚ್‌ ಎನ್ ರಿಲಯನ್ಸ್ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಿದ್ದಾರೆ. ಆಸ್ಪತ್ರೆ ಸಿಇಒ, ಡಾ ತರಂಗ್ ಗಿಯಾಂಚಂದಾನಿ, ಮಾತನಾಡಿ, ನಮ್ಮ 20 ಜನರ ವೈದ್ಯರ ಕ್ಲಿನಿಕಲ್ ತಂಡವು ಪ್ರಸ್ತುತ ಅವರನ್ನು ಮೌಲ್ಯಮಾಪನ ಮಾಡುತ್ತಿದೆ ಮತ್ತು ಅವರನ್ನು ನೋಡಿಕೊಳ್ಳುತ್ತಿದೆ ಎಂದು ತಿಳಿಸಿದರು.

ಡಾ. ಪಂಡೋಲೆ ಅವರು ಜಸ್ಲೋಕ್, ಬ್ರೀಚ್ ಕ್ಯಾಂಡಿ, ಮಸಿನಾ ಮತ್ತು ಬಿಡಿ ಪೆಟಿಟ್ ಪಾರ್ಸಿ ಜನರಲ್ ಆಸ್ಪತ್ರೆಯಂತಹ ಆಸ್ಪತ್ರೆಗಳೊಂದಿಗೆ ಸಂಬಂಧ ಹೊಂದಿದ್ದಾರೆ.
Published by:Ashwini Prabhu
First published: