• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Dengue: ಹೆಚ್ಚಾಯ್ತು ಡೆಂಗ್ಯೂ, ಚಿಕುನ್‌ಗುನ್ಯಾ ಅಬ್ಬರ, 129 ದೇಶಗಳಿಗೆ ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ!

Dengue: ಹೆಚ್ಚಾಯ್ತು ಡೆಂಗ್ಯೂ, ಚಿಕುನ್‌ಗುನ್ಯಾ ಅಬ್ಬರ, 129 ದೇಶಗಳಿಗೆ ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ!

Dengue and Chikungunya Alert

Dengue and Chikungunya Alert

ಡೆಂಗ್ಯೂ ಮತ್ತು ಚಿಕನ್‌ಗುನ್ಯಾ ಪ್ರಕರಣಗಳ ಸಂಖ್ಯೆಯು ಹೆಚ್ಚಳವಾಗಬಹುದೆಂದು ವಿಶ್ವ ಆರೋಗ್ಯ ಸಂಸ್ಥೆಯ ತಜ್ಞರು ಎಚ್ಚರಿಕೆ ನೀಡಿದ್ದಾರೆ.

  • Share this:

ಬೇಸಿಗೆ ಆರಂಭವಾಯ್ತೆಂದರೆ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಜ್ವರ, ಕೆಮ್ಮು, ವಾಂತಿ ಬೇಧಿ ಹೀಗೆ ಒಂದಲ್ಲ ಒಂದು ಆರೋಗ್ಯ ಸಮಸ್ಯೆ ಉಂಟಾಗುತ್ತಲೇ ಇರುತ್ತದೆ. ಈ ಮಧ್ಯೆ ಸೊಳ್ಳೆಯಿಂದ ಹರಡುವ ಡೆಂಗ್ಯೂ, ಚಿಕನ್‌ಗುನ್ಯಾ ಮತ್ತು ಇತರ ಕಾಯಿಲೆಗಳು ಪ್ರಪಂಚದಾದ್ಯಂತ ಹೆಚ್ಚು ವೇಗವಾಗಿ ಹರಡುತ್ತಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿದೆ.


ವಿಶ್ವ ಆರೋಗ್ಯ ಸಂಸ್ಥೆಯ ತಜ್ಞರು ಈ ಬಗ್ಗೆ ಮಾಹಿತಿ ನೀಡಿದ್ದು, ಡೆಂಗ್ಯೂ ಮತ್ತು ಚಿಕನ್‌ಗುನ್ಯಾ ಪ್ರಕರಣಗಳ ಸಂಖ್ಯೆಯು ಹೆಚ್ಚಳವಾಗಬಹುದೆಂದು ಎಚ್ಚರಿಕೆ ನೀಡಿದ್ದಾರೆ. ಅಲ್ಲದೇ ಜಿಕಾದ ಹೊಸ ಸಾಂಕ್ರಾಮಿಕ ರೋಗಗಳೂ ಸಹ ಕಾಣಿಸಿಕೊಳ್ಳುತ್ತವೆ ಎಂಬುದಾಗಿ ತಜ್ಞರು ಹೇಳಿದ್ದಾರೆ.


ಇದನ್ನೂ ಓದಿ: Raw Papaya: ಜೀರ್ಣಕ್ರಿಯೆಯಿಂದ ಡೆಂಗ್ಯೂವರೆಗೆ ಪಪ್ಪಾಯಕಾಯಿ ಪ್ರಯೋಜನಗಳಿವು


ಜಾಗತಿಕ ತಾಪಮಾನ ಹೆಚ್ಚಳವೂ ಕಾರಣ!


ವಿಶ್ವಸಂಸ್ಥೆಯ ತಾಂತ್ರಿಕ ಪ್ರಮುಖರಾದ ರಾಮನ್‌ ವೇಲಾಯುಧನ್‌ ಹಾಗೂ ಡಯಾನಾ ರೋಜಾಸ್‌ ಅಲ್ವಾರೆಜ್‌ ಅವರು, ಚಿಕುನ್‌ ಗುನ್ಯಾ ಹಾಗೂ ಜಿಕಾ ಕುರಿತು ಮಾಹಿತಿ ನೀಡಿದ್ದು, ಹೊಸ ಪ್ರದೇಶಗಳಲ್ಲಿ ಏಕಾಏಕಿ ಸಂಭವಿಸುವ ಭಯದ ನಡುವೆ ಸೊಳ್ಳೆಗಳ ಹರಡುವಿಕೆಯನ್ನು ನಿಯಂತ್ರಿಸಲು ತುರ್ತು ಕ್ರಮದ ಅಗತ್ಯವಿದೆ ಎಂದು ಹೇಳಿದ್ದಾರೆ.


ಡೆಂಗ್ಯು, ಚಿಕನ್‌ಗುನ್ಯಾ ಕಾಯಿಲೆಯು ಸೊಳ್ಳೆಗಳಿಂದ ಹರಡುವ ಆರ್ಬೋವೈರಸ್‌ಗಳಿಂದ ಉಂಟಾಗುತ್ತದೆ. ಇದು ಭೂಮಿಯ ತಾಪಮಾನ ಹೆಚ್ಚಾಗುತ್ತಿದ್ದಂತೆ ಹೊಸಹೊಸ ಪ್ರದೇಶಕ್ಕೆ ಹರಡುತ್ತಿದೆ."ಈ ಸೊಳ್ಳೆಗಳ ಹರಡುವಿಕೆಗೆ ಹವಾಮಾನ ಬದಲಾವಣೆಯೂ ಕಾರಣ" ಎಂದು ರಾಮನ್ ವೇಲಾಯುಧನ್ ಹೇಳಿದ್ದಾರೆ.


ಡೆಂಗ್ಯೂ ಅಪಾಯದಲ್ಲಿ 129 ದೇಶಗಳು !


ಪ್ರಪಂಚದಲ್ಲಿ ಸಂಪೂರ್ಣ 129 ದೇಶಗಳು ಈಗಾಗಲೇ ಡೆಂಗ್ಯೂನಿಂದ ಅಪಾಯದಲ್ಲಿದೆ ಎಂಬುದಾಗಿ ತಜ್ಞರು ಮಾಹಿತಿ ನೀಡಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಪ್ರಕರಣಗಳ ಸಂಖ್ಯೆಯು ಹೆಚ್ಚಿನ ಮಟ್ಟದಲ್ಲಿ ಬೆಳೆದಿದೆ. 2000ರಲ್ಲಿ ಸುಮಾರು ಅರ್ಧ ಮಿಲಿಯನ್‌ ನಷ್ಟಿದ್ದ ಡೆಂಗ್ಯೂ ಪ್ರಕರಣಗಳ ಸಂಖ್ಯೆ 2019 ರಲ್ಲಿ ಸುಮಾರು 5.2 ಮಿಲಿಯನ್‌ ನಷ್ಟು ಹೆಚ್ಚಾಗಿದ್ದು ಇದು ದಾಖಲೆಯ ಕೆಟ್ಟ ವರ್ಷವಾಗಿದೆ ಎಂದು ವೇಲಾಯುಧನ್ ತಿಳಿಸಿದ್ದಾರೆ.


ಅಲ್ಲದೇ ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಪ್ರಕರಣಗಳನ್ನು ಸರಿಯಾಗಿ ದಾಖಲಿಸಲಾಗಿಲ್ಲ, ಆದರೆ ಸಂಖ್ಯೆಗಳು ಹೆಚ್ಚಿವೆ ಎಂದು ಅವರು ಮಾಹಿತಿ ನೀಡಿದ್ದಾರೆ.


ಇದನ್ನೂ ಓದಿ: Explained: ಹೇಗಿರಲಿದೆ ಮರಗಳಿಲ್ಲದ ಭೂಮಿ? ಜಗತ್ತಿನ ಭವಿಷ್ಯದಲ್ಲಿ ಹಸಿರು ಬಿಟ್ಟು ಉಳಿದೆಲ್ಲಾ ಬಣ್ಣಗಳೂ ಇವೆ!


ಅಮೆರಿಕದಲ್ಲಿ ಚಿಕನ್‌ಗುನ್ಯಾ ಉಲ್ಬಣ


ಇನ್ನು, 1950ರಲ್ಲಿ ಪತ್ತೆಯಾದ ನಂತರ ಇಲ್ಲಿಯವರೆಗೆ 115 ದೇಶಗಳಲ್ಲಿ ವರದಿಯಾಗಿರುವ ಚಿಕೂನ್‌ಗುನ್ಯಾ, ಅಮೆರಿಕದಲ್ಲಿ ಹೆಚ್ಚು ಉಲ್ಬಣವನ್ನು ಕಂಡಿದೆ ಎಂದು ರೋಜಾಸ್ ಅಲ್ವಾರೆಜ್ ತಿಳಿಸಿದ್ದಾರೆ. ಈ ವರ್ಷ ಇಲ್ಲಿಯವರೆಗೆ, ಸುಮಾರು 135,000 ಪ್ರಕರಣಗಳು ವರದಿಯಾಗಿದ್ದು, 2022ರ ಮೊದಲಾರ್ಧದಲ್ಲಿ 50,000 ಪ್ರಕರಣಗಳು ವರದಿಯಾಗಿವೆ ಎಂದು ಹೇಳಿದ್ದಾರೆ.


ಬಹುಶಃ ಎರಡೂ ಕಾಯಿಲೆಗಳ ಭೌಗೋಳಿಕ ಹರಡುವಿಕೆ ವಿಸ್ತರಿಸುತ್ತಿದೆ. ಅಲ್ಲದೇ ಹಲವಾರು ಯುರೋಪಿಯನ್ ದೇಶಗಳನ್ನು ಒಳಗೊಂಡಂತೆ ಉತ್ತರ ಗೋಳಾರ್ಧಕ್ಕೆ ಚಲಿಸುತ್ತಿದೆ. "ಹವಾಮಾನ ಬದಲಾವಣೆಯೊಂದಿಗೆ ಸೊಳ್ಳೆಗಳು ಮತ್ತು ಈ ರೋಗಗಳು ಹೆಚ್ಚುತ್ತಿವೆ ಎಂದು ರೋಜಾಸ್ ಅಲ್ವಾರೆಜ್ ವಿವರಿಸಿದ್ದಾರೆ.


ಜೀವನಪರ್ಯಂತ ಅಂಗವೈಕಲ್ಯವೂ ಉಂಟಾಗಬಹುದು!


ಇನ್ನು ಈ ಪರಿಸ್ಥಿತಿಯನ್ನು "ಆತಂಕಕಾರಿ" ಎಂದು ಎಚ್ಚರಿಸಿರುವ ರೋಜಾಸ್‌, ಎರಡು ಕಾಯಿಲೆಗಳು ಸಾಮಾನ್ಯವಾಗಿ ಜ್ವರ, ದೇಹದ ನೋವು ಮತ್ತು ದದ್ದುಗಳಂತಹ ಸೌಮ್ಯ ಲಕ್ಷಣಗಳನ್ನು ಉಂಟುಮಾಡುತ್ತವೆ.


ಆದರೆ ಚಿಕುನ್‌ಗುನ್ಯಾಕ್ಕೆ ಒಳಗಾಗುವ ಜನರು ಸುಮಾರು ಒಂದು ವಾರದವರೆಗೆ ರೋಗಲಕ್ಷಣಗಳನ್ನು ಅನುಭವಿಸುತ್ತಾರೆ. ಅಲ್ಲದೇ ಶೇ. 40ರಷ್ಟು ಜನರು ತಿಂಗಳುಗಳು - ವರ್ಷಗಳವರೆಗೆ ಪರಿಣಾಮಗಳನ್ನು ಅನುಭವಿಸುತ್ತಾರೆ. ಅಲ್ಲದೇ “ಕೆಲವೊಮ್ಮೆ ಇದು ಜೀವನಪರ್ಯಂತ ಅಂಗವೈಕಲ್ಯಕ್ಕೂ ಕಾರಣವಾಗಬಹುದು" ಎಂದು ಅವರು ಎಚ್ಚರಿಸಿದ್ದಾರೆ.


ಇದು "ಅಂಗಾಂಗ ವೈಫಲ್ಯ ಮತ್ತು ಸಾವಿಗೆ ಕಾರಣವಾಗಬಹುದಾದಂತ ಈ ಕಾಯಿಲೆಗಳು ಜಗತ್ತಿಗೆ ದೊಡ್ಡ ಬೆದರಿಕೆಯಾಗಿವೆ. ದೇಶಗಳು ಸೊಳ್ಳೆ ನಿಯಂತ್ರಣಕ್ಕಾಗಿ ಕ್ರಮಗಳನ್ನು ತೆಗೆದುಕೊಳ್ಳಿ. ಹಾಗೆಯೇ ರೋಗಗಳು ಯಾವಾಗ ಹರಡುತ್ತಿವೆ ಎಂಬುದನ್ನು ಪತ್ತೆಹಚ್ಚಲು "ಎಚ್ಚರಿಕೆಯಿಂದಿರಿ" ಎಂದು ವಿಶ್ವ ಆರೋಗ್ಯ ಸಂಸ್ಥೆಯ ತಜ್ಞರಾದ ರಾಮನ್‌ ವೇಲಾಯುಧನ್ ಕರೆ ನೀಡಿದ್ದಾರೆ.

top videos
    First published: