ಮೂವರಲ್ಲಿ ಒಬ್ಬ ಮಹಿಳೆ ಲೈಂಗಿಕ ದೌರ್ಜನ್ಯ ಅನುಭವಿಸಿರುತ್ತಾರೆ; ವಿಶ್ವ ಆರೋಗ್ಯ ಸಂಸ್ಥೆ ಬಯಲು

ವಿಶ್ವಾದ್ಯಂತ ಮೂರು ಮಹಿಳೆಯರಲ್ಲಿ ಒಬ್ಬರು ಆಕೆಯ ಜೀವಿತಾವಧಿಯಲ್ಲಿ ದೈಹಿಕ ಅಥವಾ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿರುತ್ತಾರೆ, ಸಾಂಕ್ರಾಮಿಕ ಸಮಯದಲ್ಲಿ ಈ ಅಪರಾಧ ವರ್ತನೆ ವ್ಯಾಪಕವಾಗಿ ಹೆಚ್ಚಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌) ತಿಳಿಸಿದೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

 • Share this:
  ದೇಶಗಳು ಎಷ್ಟು ಅಭಿವೃದ್ಧಿಯಾಗುತ್ತಿದ್ರೂ ಮಹಿಳೆಯರ ಮೇಲೆ ಕಿರುಕುಳ ನಡೆಯುತ್ತಲೇ ಇದೆ. ಕೊರೊನಾ ಸಾಂಕ್ರಾಮಿಕ ಸಮಯದಲ್ಲಿ ಈ ಕಿರುಕುಳ ಇನ್ನೂ ಹೆಚ್ಚಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಆತಂಕಕಾರಿ ವರದಿಯನ್ನು ನೀಡಿದೆ. ಅಲ್ಲದೆ, ಇದನ್ನು ತಡೆಯಲು ದೇಶಗಳು ಇನ್ನೂ ಹೆಚ್ಚಿನ ಕ್ರಮಗಳನ್ನು ಕೈಗೊಳ್ಳಬೇಕೆಂದು WHO ಆಗ್ರಹಿಸಿದೆ. ವಿಶ್ವಾದ್ಯಂತ ಮೂರು ಮಹಿಳೆಯರಲ್ಲಿ ಒಬ್ಬರು ಆಕೆಯ ಜೀವಿತಾವಧಿಯಲ್ಲಿ ದೈಹಿಕ ಅಥವಾ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿರುತ್ತಾರೆ, ಸಾಂಕ್ರಾಮಿಕ ಸಮಯದಲ್ಲಿ ಈ ಅಪರಾಧ ವರ್ತನೆ ವ್ಯಾಪಕವಾಗಿ ಹೆಚ್ಚಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌) ತಿಳಿಸಿದೆ.

  ಈ ದೌರ್ಜನ್ಯ ತಡೆಗಟ್ಟಲು, ಸಂತ್ರಸ್ಥೆಯರಿಗೆ ಸೇವೆಗಳನ್ನು ಸುಧಾರಿಸಲು ಮತ್ತು ಆರ್ಥಿಕ ಅಸಮಾನತೆಗಳನ್ನು ನಿಭಾಯಿಸಲು WHO ಸರ್ಕಾರಗಳನ್ನು ಒತ್ತಾಯಿಸಿದೆ. ಇದರಿಂದಲೇ ಆಗಾಗ ಮಹಿಳೆಯರು ಮತ್ತು ಯುವತಿಯರು ಇಂತಹ ಕಿರುಕುಳಕ್ಕೆ ಸಿಲುಕುತ್ತಾರೆ. ಸಂಬಂಧಗಳಲ್ಲಿ ಪರಸ್ಪರ ಗೌರವ ಮತ್ತು ಲೈಂಗಿಕತೆಯಲ್ಲಿ ಪರಸ್ಪರ ಒಪ್ಪಿಗೆಯ ಅಗತ್ಯತೆಯ ಬಗ್ಗೆ ಶಾಲೆಯಲ್ಲಿ ಹುಡುಗರಿಗೆ ಕಲಿಸಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ಅಧಿಕಾರಿಗಳು ತಿಳಿಸಿದ್ದಾರೆ.

  "ಮಹಿಳೆಯರ ಮೇಲಿನ ದೌರ್ಜನ್ಯವು ಪ್ರತಿ ದೇಶ ಮತ್ತು ಸಂಸ್ಕೃತಿಯಲ್ಲಿ ಸ್ಥಳೀಯವಾಗಿದೆ. ಇದು ಲಕ್ಷಾಂತರ ಮಹಿಳೆಯರು ಮತ್ತು ಅವರ ಕುಟುಂಬಗಳಿಗೆ ಹಾನಿಯನ್ನುಂಟುಮಾಡುತ್ತದೆ ಮತ್ತು ಕೋವಿಡ್ - 19 ಸಾಂಕ್ರಾಮಿಕ ರೋಗದಿಂದ ಉಲ್ಬಣಗೊಂಡಿದೆ" ಎಂದು WHO ಮಹಾನಿರ್ದೇಶಕ ಟೆಡ್ರೊಸ್ ಅಧಾನಮ್ ಘೆಬ್ರೆಯೆಸಸ್ ಹೇಳಿದ್ದಾರೆ.

  15-49 ವರ್ಷ ವಯಸ್ಸಿನ ಮಹಿಳೆಯರಲ್ಲಿ ಸುಮಾರು ಶೇ. 31 ರಷ್ಟು ಅಥವಾ 852 ಮಿಲಿಯನ್‌ ಮಹಿಳೆಯರು ದೈಹಿಕ ಅಥವಾ ಲೈಂಗಿಕ ದೌರ್ಜನ್ಯವನ್ನು ಅನುಭವಿಸಿದ್ದಾರೆ ಎಂದು ಡಬ್ಲ್ಯುಎಚ್‌ಒ ಹೇಳಿದೆ. ಇದು 2000-2018ರವರೆಗೆ ರಾಷ್ಟ್ರೀಯ ದತ್ತಾಂಶ ಮತ್ತು ಸಮೀಕ್ಷೆಗಳನ್ನು ಒಳಗೊಂಡಿದ್ದು, ಈ ಹಿನ್ನೆಲೆ ಇದುವರೆಗಿನ ಅತಿದೊಡ್ಡ ಅಧ್ಯಯನ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿಕೊಂಡಿದೆ.

  ಇದನ್ನೂ ಓದಿ: Covid Vaccination - ಮುಂದಿನ ಹಂತದಲ್ಲಿ 50 ವರ್ಷ ಮೇಲ್ಪಟ್ಟವರಿಗೆ ಕೋವಿಡ್ ಲಸಿಕೆ ನೀಡುವ ಸಾಧ್ಯತೆ

  ಪತಿ ಅಥವಾ ನಿಕಟ ಸಂಗಾತಿ ಸಾಮಾನ್ಯ ಅಪರಾಧಿಯಾಗಿದ್ದು, ಅಸಂಖ್ಯಾತ ಸಂತ್ರಸ್ಥೆಯರು ಬಡ ದೇಶಗಳಲ್ಲಿದ್ದಾರೆ ಎಂದು WHO ಹೇಳಿದೆ. ಇನ್ನು, ಲೈಂಗಿಕ ಕಿರುಕುಳ ಸರಿಯಾಗಿ ವರದಿಯಾಗುವುದಿಲ್ಲ. ಈ ಹಿನ್ನೆಲೆ ನಿಜವಾದ ಅಂಕಿ ಅಂಶಗಳು ಸಿಗುವುದಿಲ್ಲ. ಸಂತ್ರಸ್ಥೆಯರು, ದೌರ್ಜನ್ಯಗಳ ಸಂಖ್ಯೆ ಇನ್ನೂ ಹೆಚ್ಚಿರುತ್ತದೆ ಎಂದೂ ಹೇಳಿದೆ. "ಈ ಸಂಖ್ಯೆಗಳು ಬಹಳ ಆಘಾತಕಾರಿ ಮತ್ತು ಈ ದೌರ್ಜನ್ಯವನ್ನು ತಡೆಗಟ್ಟಲು ಸರ್ಕಾರಗಳು ಹೆಚ್ಚಿನದನ್ನು ಮಾಡಬೇಕೆಂಬ ಎಚ್ಚರಿಕೆಯ ಕರೆ" ಎಂದು ಈ ವರದಿ ನೀಡಿರುವ ಲೇಖಕಿ ಕ್ಲಾಡಿಯಾ ಗಾರ್ಸಿಯಾ-ಮೊರೆನೊ ಹೇಳಿದರು.

  ಕೆಲವು ಪ್ರದೇಶಗಳಲ್ಲಿ, ಅರ್ಧಕ್ಕಿಂತ ಹೆಚ್ಚು ಮಹಿಳೆಯರು ಕೆಲವು ಸಮಯದಲ್ಲಿ ಕಿರುಕುಳ ಎದುರಿಸುತ್ತಾರೆ. ಈ ಪೈಕಿ ಓಷಾನಿಯಾ, ಉಪ-ಸಹಾರನ್ ಆಫ್ರಿಕಾ ಮತ್ತು ದಕ್ಷಿಣ ಏಷ್ಯಾ ರಾಷ್ಟ್ರಗಳು ಎಂದು ರಾಯಿಟರ್ಸ್‌ಗೆ ಲೇಖಕಿ ಹೇಳಿದ್ದಾರೆ. ಕಿರಿಬಾಟಿ, ಫಿಜಿ, ಪಪುವಾ ನ್ಯೂಗಿನಿ, ಬಾಂಗ್ಲಾದೇಶ, ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯ ಮತ್ತು ಅಫ್ಘಾನಿಸ್ತಾನಗಳಲ್ಲಿ ಅತಿ ಹೆಚ್ಚು ಕಿರುಕುಳ ನಡೆಯುತ್ತವೆ. ಆದರೆ, ಯುರೋಪಿನಲ್ಲಿ ಇದು ಕಡಿಮೆ. ಈ ದೌರ್ಜನ್ಯವು ಅತಿ ಕಡಿಮೆ ವಯಸ್ಸಿನವರಿಗೆ ಪ್ರಾರಂಭವಾಗುತ್ತಿರುವುದು ಆತಂಕಕಾರಿ ಎಂದೂ WHO ಹೇಳುತ್ತದೆ.

  15-19 ವಯಸ್ಸಿನ ನಾಲ್ಕು ಹದಿಹರೆಯದ ಹುಡುಗಿಯರಲ್ಲಿ ಒಬ್ಬರು ದೈಹಿಕ ಅಥವಾ ಲೈಂಗಿಕ ದೌರ್ಜನ್ಯಕ್ಕೆ ಒಳಪಡಿಸಲಾಗಿದೆ. ಈ ಪೈಕಿ ಹೆಚ್ಚಿನ ಯುವತಿಯರು ರಿಲೇಷನ್‌ಶಿಪ್‌ನಲ್ಲಿದ್ದವರು. “ಈ ವಯಸ್ಸುಗಳು ಜೀವನದಲ್ಲಿ ಬಹಳ ಮುಖ್ಯವಾದ ಮತ್ತು ರಚನಾತ್ಮಕ ಸಮಯ. ಮತ್ತು ಈ ಹಿಂಸಾಚಾರದ ಪರಿಣಾಮಗಳು ದೀರ್ಘಕಾಲೀನವಾಗಬಹುದು ಮತ್ತು ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು ಮತ್ತು ಅನಗತ್ಯ ಗರ್ಭಧಾರಣೆ ಹಾಗೂ ಇತರ ತೊಡಕುಗಳಿಗೆ ಕಾರಣವಾಗಬಹುದು ಎಂದು ನಮಗೆ ತಿಳಿದಿದೆ, ” ಎಂದು ಕ್ಲಾಡಿಯಾ ಗಾರ್ಸಿಯಾ-ಮೊರೆನೊ ಹೇಳಿದ್ದಾರೆ.
  Published by:Sushma Chakre
  First published: