Monkeypox ಸೋಂಕು ಇವರಿ'ಗೇ' ಜಾಸ್ತಿ ಬರೋದಾ? ಸಂಚಲನ ಮೂಡಿಸಿದ WHO ರಿಪೋರ್ಟ್

ವಿಶ್ವ ಆರೋಗ್ಯ ಸಂಸ್ಥೆಯ 42 ಸದಸ್ಯ ರಾಷ್ಟ್ರಗಳಲ್ಲಿ ಮಂಕಿಪಾಕ್ಸ್ ಕಾಣಿಸಿಕೊಂಡಿದೆ. ಭಾರತದಲ್ಲೂ 2 ಮಂಕಿಪಾಕ್ಸ್ ಕೇಸ್‌ಗಳು ಪತ್ತೆಯಾಗಿದೆ. ಇಂತಹ ಆತಂಕದ ಪರಿಸ್ಥಿತಿಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಸ್ಫೋಟಕ ವರದಿಯೊಂದನ್ನು ನೀಡಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಡಬ್ಲ್ಯೂಎಚ್‌ಒ, ಜಿನಿವಾ: ಇಡೀ ವಿಶ್ವದಾದ್ಯಂತ ಮಂಕಿಪಾಕ್ಸ್ ಕಾಯಿಲೆಯ (Monkeypox disease) ಅಬ್ಬರ ಜೋರಾಗುತ್ತಿದೆ. ಇದುವರೆಗೂ ಸುಮಾರು 6 ಸಾವಿರ ಮಂದಿ ಮಂಕಿಪಾಕ್ಸ್ ಸೋಂಕಿಗೆ (Infection) ತುತ್ತಾಗಿದ್ದಾರೆ ಅಂತ ವಿಶ್ವ ಆರೋಗ್ಯ ಸಂಸ್ಥೆ (World Health Organization) ವರದಿ (Report) ಹೇಳಿದೆ. ಅಮೆರಿಕಾ, ಆಫ್ರಿಕಾ, ಯುರೋಪ್, ಪೂರ್ವ ಮೆಡಿಟರೇನಿಯನ್ ಮತ್ತು ಪಶ್ಚಿಮ ಪೆಸಿಫಿಕ್ ಪ್ರದೇಶಗಳು ಸೇರಿದಂತೆ ವಿಶ್ವ ಆರೋಗ್ಯ ಸಂಸ್ಥೆಯ 42 ಸದಸ್ಯ ರಾಷ್ಟ್ರಗಳಲ್ಲಿ ಮಂಕಿಪಾಕ್ಸ್ ಕಾಣಿಸಿಕೊಂಡಿದೆ. ಭಾರತದಲ್ಲೂ (India) 2 ಮಂಕಿಪಾಕ್ಸ್ ಕೇಸ್‌ಗಳು ಪತ್ತೆಯಾಗಿದೆ. ಇಂತಹ ಆತಂಕದ ಪರಿಸ್ಥಿತಿಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಸ್ಫೋಟಕ ವರದಿಯೊಂದನ್ನು ನೀಡಿದೆ. ಪುರುಷರೊಂದಿಗೆ ಲೈಂಗಿಕ ಸಂಪರ್ಕ ನಡೆಸಿದ ಪುರುಷ ಸಲಿಂಗಿ ಅಥವಾ ಗೇ (Gay) ವ್ಯಕ್ತಿಗಳಿಗೆ ಈ ಸೋಂಕಿನ ಅಪಾಯ ಜಾಸ್ತಿ ಅಂತ ವರದಿಯಲ್ಲಿ ಹೇಳಲಾಗಿದೆ.

ಸ್ಪೋಟಕ ವರದಿ ನೀಡಿದ WHO

ಡಬ್ಲ್ಯುಎಚ್‌ಒ ಮತ್ತೊಂದು ಅಚ್ಚರಿ ಮಾಹಿತಿ ನೀಡಿದ್ದು, ಮಂಕಿಪಾಕ್ಸ್‌ ಕಂಡು ಬಂದಿರುವವರು ಬಹುತೇಕರು ಮಧ್ಯವಯಸ್ಸಿನವರಾಗಿದ್ದಾರೆ. ಅಲ್ಲದೇ ಇವರಲ್ಲಿ ಬಹುತೇಕರು ಪುರುಷರೇ ಆಗಿದ್ದಾರೆ. ಇನ್ನೂ ವಿಚಿತ್ರವೆಂದರೆ ಈ ಖಾಯಿಲೆ ಕಾಣಿಸಿಕೊಂಡ ಪ್ರತಿ ಐವರಲ್ಲಿ ಮೂವರು, ಪುರುಷ ಮತ್ತು ಪುರುಷ ಲೈಂಗಿಕ ಸಂಪರ್ಕ ಮಾಡಿರುವವರು ಎಂದು ಡಬ್ಲ್ಯುಎಚ್‌ಒ ಹೇಳಿದೆ ಅಂತ ಎನ್‌ಡಿಟಿವಿ ವರದಿ ಮಾಡಿದೆ.

ಎಲ್‌ಜಿಬಿಟಿ ಕಮ್ಯೂನಿಟಿ ವಿರೋಧ

ಇನ್ನು ವಿಶ್ವ ಆರೋಗ್ಯ ಸಂಸ್ಥೆಯ ವರದಿಗೆ ಎಲ್‌ಜಿಬಿಟಿ ಸಮುದಾಯ ಖಂಡಿಸಿದೆ. ಮಂಕಿಪಾಕ್ಸ್ ಅನ್ನು ಲೈಂಗಿಕವಾಗಿ ಹರಡುವ ರೋಗವೆಂದು ಪರಿಗಣಿಸಲಾಗುವುದಿಲ್ಲ. ಇದೊಂದು ಆತಂಕಕಾಗಿ ವರದಿ ಅಂತ ಟೀಕಿಸಿದೆ.

ಇದನ್ನೂ ಓದಿ: Explained: ವಿದೇಶಗಳನ್ನು ಕಂಗೆಡಿಸುತ್ತಿರುವ ಮಂಕಿಪಾಕ್ಸ್! ಏನಿದು ಕಾಯಿಲೆ? ಇದರ ಲಕ್ಷಣಗಳೇನು?

ಮಂಕಿಪಾಕ್ಸ್ ಹೆಚ್ಚಳದ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಕಳವಳ

ಪಶ್ಚಿಮ ಮತ್ತು ಮಧ್ಯ ಆಫ್ರಿಕಾ ದೇಶಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದ್ದ 'ಮಂಕಿಪಾಕ್ಸ್‌' ಪ್ರಕರಣಗಳು ಮೇ ತಿಂಗಳಿನಿಂದ ಈಚೆಗೆ ಇತರ ದೇಶಗಳಲ್ಲಿಯೂ ಉಲ್ಬಣಗೊಂಡಿವೆ. ಹೆಚ್ಚಾಗಿ ಪಶ್ಚಿಮ ಯುರೋಪ್‌ನಲ್ಲಿ ಪತ್ತೆಯಾಗುತ್ತಿವೆ. ಹೀಗಿ ಮಂಕಿಪಾಕ್ಸ್ ಪ್ರಕರಣಗಳು ಏರಿಕೆಯಾಗುತ್ತಿರುವ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥ ಟೆಡ್ರೋಸ್ಗೆ ಬ್ರೇಯೇಸಸ್‌ ಕಳವಳ ವ್ಯಕ್ತಪಡಿಸಿದ್ದಾರೆ. ಸದ್ಯ ಈ ಸೋಂಕು ಆರೋಗ್ಯ ತುರ್ತುಸ್ಥಿತಿಯಲ್ಲ ಎಂದು ಅವರು ಹೇಳಿದ್ದಾರೆ.

ಭಾರತದಲ್ಲಿ ಎರಡನೇ ಕೇಸ್ ಪತ್ತೆ

ಭಾರತದಲ್ಲಿ ಈಗಾಗಲೇ ಮೊದಲ ಕೇಸ್ ಪತ್ತೆಯಾಗಿತ್ತು. ಕೇರಳದ ವ್ಯಕ್ತಿಯಲ್ಲಿ ಮಂಕಿಪಾಕ್ಸ್ ಸೋಂಕು ದೃಢಪಟ್ಟಿತ್ತು. ಇದೀಗ ಮತ್ತೊಂದು ಕೇಸ್ ಸಹ ಕೇರಳದಲ್ಲೇ ದೃಢಪಟ್ಟಿದೆ. ಜುಲೈ 13 ರಂದು ದುಬೈನಿಂದ ಆಗಮಿಸಿದ ಕೊಣ್ಣೂರಿನ 31 ವರ್ಷದ ವ್ಯಕ್ತಿಗೆ ಮಂಕಿಪಾಕ್ಸ್ ದೃಢಪಟ್ಟಿದೆ. ಈ ಹಿಂದೆ ಮೊದಲ ಪ್ರಕರಣ ಕೇರಳದಲ್ಲಿಯೇ ಪತ್ತೆಯಾಗಿತ್ತು. ಸೋಂಕಿತ ವ್ಯಕ್ತಿ ಕಣ್ಣೂರಿನ ಪರಿಯಾರಂ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಆರೋಗ್ಯ ತೃಪ್ತಿಕರವಾಗಿದೆ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ತಿಳಿಸಿದ್ದಾರೆ.

ಸಹ ಪ್ರಯಾಣಿಕರ ಮೇಲೆ ನಿಗಾ

ಜುಲೈ 14 ರಂದು ಅಬುಧಾಬಿಯಿಂದ ಕೇರಳಕ್ಕೆ ಹಿಂದಿರುಗಿದ 35 ವರ್ಷದ ವ್ಯಕ್ತಿಯಲ್ಲಿ ದೇಶದ ಮೊದಲ ಮಂಕಿಪಾಕ್ಸ್ ಪ್ರಕರಣ ದೃಢಪಟ್ಟಿತ್ತು. ಅವರು ಪ್ರಸ್ತುತ ತಿರುವನಂತಪುರಂ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರೋಗಿಯೊಂದಿಗೆ ಪ್ರಯಾಣಿಸಿದ ಐದು ಜಿಲ್ಲೆಗಳ 164 ಪ್ರಯಾಣಿಕರ ಮೇಲೆ ನಿಗಾವಹಿಸಲಾಗಿದೆ.

ಇದನ್ನೂ ಓದಿ: Monkeypox: ಭಾರತದಲ್ಲಿ ಮಂಕಿಪಾಕ್ಸ್ ಟೆನ್ಶನ್, ಮಹಾಮಾರಿ ಕಂಟ್ರೋಲ್‌ಗೆ ಕೇಂದ್ರದಿಂದ ಗೈಡ್‌ಲೈನ್

 ಮಂಗಳೂರಲ್ಲಿ ಹೈ ಅಲರ್ಟ್

ಕೇರಳದ ಸೋಂಕಿತ ವ್ಯಕ್ತಿ ಮಂಗಳೂರು ವಿಮಾನ ನಿಲ್ದಾಣದ ಮೂಲಕ ಆಗಮಿಸಿದ್ದ. ಈ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣದಲ್ಲಿ ವಿದೇಶಿ ಪ್ರಯಾಣಿಕರ ಮೇಲೆ ನಿಗಾ ಇರಿಸಲಾಗಿದೆ. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸೂಚನೆಯಂತೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೂ ಸ್ಕ್ರೀನಿಂಗ್ ಆರಂಭಿಸಲಾಗಿದೆ.  ವಿದೇಶದಿಂದ ಆಗಮಿಸುವ ಪ್ರಯಾಣಿಕರನ್ನು ಥರ್ಮಲ್ ಸ್ಕ್ರೀನಿಂಗ್ ಗೆ ಒಳಪಡಿಸಲಾಗುತ್ತಿದ್ದು, ಅವರು ತೆರಳುವ ಸ್ಥಳದ ಬಗ್ಗೆ ಮಾಹಿತಿಯನ್ನು ಪಡೆದುಕೊಳ್ಳಲಾಗುತ್ತಿದೆ. ಅಲ್ಲದೇ 10 ಹಾಸಿಗೆಗಳ ವಿಶೇಷ ವಾರ್ಡ್​ನ್ನು ಸಹ ಮಂಗಳೂರಿನಲ್ಲಿ ಆರಂಭಿಸಲಾಗಿದೆ.
Published by:Annappa Achari
First published: