ವಾಜಪೇಯಿ ಜೀವನದ ಬೆಳದಿಂಗಳ ಬಾಲೆ: ಯಾರ ಸಿನಿಮಾ ಅವರು 25 ಬಾರಿ ನೋಡಿದ್ದು?

news18
Updated:August 17, 2018, 3:22 PM IST
ವಾಜಪೇಯಿ ಜೀವನದ ಬೆಳದಿಂಗಳ ಬಾಲೆ: ಯಾರ ಸಿನಿಮಾ ಅವರು 25 ಬಾರಿ ನೋಡಿದ್ದು?
news18
Updated: August 17, 2018, 3:22 PM IST
ನ್ಯೂಸ್​ 18 ಕನ್ನಡ

ಕವಿಗಳಿಗೂ ಸಿನಿಮಾ ರಂಗಕ್ಕೂ ಬಿಡಿಸಲಾಗದ ನಂಟು. ಇದು ನಮ್ಮನ್ನೆಲ್ಲ ಅಗಲಿದ ಅಪರೂಪದ ವಾಗ್ಮಿ ಅಟಲ್​ ಬಿಹಾರಿ ವಾಜಪೇಯಿ ಅವರ ವಿಷಯದಲ್ಲೂ ಸತ್ಯ. ಅವರಿಗೂ ಸಿನಿಮಾ ರಂಗಕ್ಕೂ ತುಂಬಾ ಹತ್ತಿರದ ಒಡನಾಟವಿತ್ತು. ಸಾಕಷ್ಟು ಸಿನಿಮಾ ನೋಡುವ ಹವ್ಯಾಸವಿತ್ತಂತೆ. ಹಲವಾರು ತಾರೆಯರೊಂದಿಗೆ ಅವರು ಇರುವ ಚಿತ್ರಗಳೇ  ಇದಕ್ಕೆ ಉದಾಹರಣೆ.

ಅಮಿತಾಭ್​ ಅವರ ತಂದೆ ಹರಿವಂಶ್​ ರಾಯ್​ ಬಚ್ಚನ್​ ಹಾಗೂ ಅಟಲ್​ ಅವರ ನಡುವೆ ಉತ್ತಮ ಸಂಬಂಧವಿತ್ತು. ಇಬ್ಬರೂ ಕವಿಗಳು ಒಬ್ಬರನ್ನೊಬ್ಬರು ಪರಸ್ಪರ ಹೊಗಳಿಕೊಳ್ಳುತ್ತಿದ್ದರಂತೆ. ಈ ಕುರಿತು ನಟ ಅಮಿತಾಭ್​ ಟ್ವೀಟ್​ ಮಾಡಿದ್ದಾರೆ.

T 2902 - Atal Bihari Vajpai (1924 - 2018 ) भावपूर्ण श्रधांजलि ; एक महान नेता , प्रख्यात कवि , अद्भुत वक्ता व प्रवक्ता , मिलनसार व्यक्तित्व ।ಬಿ-ಟೌನ್​ನ ಕಿಂಗ್​ಖಾನ್​ ಶಾರುಖ್​ ಸಹ ವಾಜಪೇಯಿ ಅವರೊಂದಿಗಿದ್ದ ಒಟನಾಟದ ಬಗ್ಗೆ ಟ್ವಿಟರ್​ನಲ್ಲಿ ಬರೆದುಕೊಂಡಿದ್ದಾರೆ. 'ಚಿಕ್ಕಂದಿನಿಂದ ಅಟಲ್​ ಅವರ ಪದ್ಯಗಳನ್ನು ಓದುತ್ತಲೇ ಬೆಳೆದ ನನಗೆ ಅವರನ್ನು ಭೇಟಿ ಮಾಡುವ ಅವಕಾಶ ಸಿಕ್ಕಿತ್ತು. ಸಿನಿಮಾ ಹಾಗೂ ಕವಿತೆಗಳ ಬಗ್ಗೆ ಅವರೊಂದಿಗೆ ಚರ್ಚೆಯನ್ನೂ ಮಾಡಿದ್ದೇನೆ. ಅವರ ಒಂದು ಪದ್ಯಕ್ಕೆ ಅಭಿನಯ ಮಾಡುವ ಅದೃಷ್ಟ ನನ್ನದಾಗಿದೆ. ಅವರನ್ನು ಮನೆಯಲ್ಲಿ 'ಬಾಪ್​ಜೀ' ಎಂದು ಕರೆಯಲಾಗುತ್ತಿತ್ತು. ಇಂತಹ ತಂದೆ ಸಮಾನದ ವ್ಯಕ್ತಿಯ ಛಾಯೆ ನನ್ನ ಬಾಲ್ಯದ ಮೇಲೆ ಬಿದ್ದಿದ್ದು ನನ್ನ ಅದೃಷ್ಟ. ಇಂತಹ ಹಿರಿಯ ಜೀವದ ಆತ್ಮಕ್ಕೆ ಶಾಂತಿ ಸಿಗಲಿ' ಎಂದು ಶಾರುಖ್​ ಬರೆದುಕೊಂಡಿದ್ದಾರೆ.ನಟಿ ಹಾಗೂ ರಾಜಕಾರಣಿ ಹೇಮಾ ಮಾಲಿನಿ ಅವರೂ ಸಹ ವಾಜಪೇಯಿ ಅವರ ಮೊದಲ ಭೇಟಿಯಾದ ಬಗ್ಗೆ ಬರೆದುಕೊಂಡಿದ್ದಾರೆ. 'ನಟ ವಿನೋದ್​ ಖನ್ನಾ ಅವರು ನನಗೆ ಮೊದಲ ಬಾರಿಗೆ ವಾಜಪೇಯಿ ಅವರನ್ನು ಪರಿಚಯಿಸಿದ್ದು. ಆಗಲೇ ನನಗೆ ಗೊತ್ತಾಗಿದ್ದು ಅವರು ಎಷ್ಟು ಸರಳ ವ್ಯಕ್ತಿ ಎಂದು. ಅಲ್ಲದೆ ಅವರಿಗೂ ಸಿನಿಮಾಗಳೆಂದರೆ ಎಷ್ಟು ಇಷ್ಟ ಎಂದು. ಅವರು ನಾನು ಅಭಿನಯಿಸಿದ್ದ 'ಸೀತಾ ಔರ್​ ಗೀತಾ' ಸಿನಿಮಾವನ್ನು 25 ಸಲ ನೋಡಿದ್ದರಂತೆ. ಹೀಗೆಂದು ಅವರೇ ನನ್ನ ಬಳಿ ಹೇಳಿದ್ದರು.' ಎಂದು ಟ್ವೀಟ್​ ಮಾಡಿದ್ದಾರೆ ಹೇಮಾ ಮಾಲಿನಿ.

First published:August 17, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

But the job is not done yet!
vote for the deserving condidate
this year

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626