Survivor Of Amazon Tribe: ಹೆಸರೇ ಇಲ್ಲದ, ಹೊರಜಗತ್ತಿನ ಸಂಪರ್ಕ ಇರದ ವ್ಯಕ್ತಿ ನಿಧನ

ಹೊರಜಗತ್ತಿನ ಜೊತೆ ಯಾವುದೇ ಸಂಪರ್ಕವನ್ನೂ ಇಟ್ಟುಕೊಳ್ಳದಿದ್ದ ಬುಡಕಟ್ಟು ಜನಾಂಗದ ಕೊನೆಯ ವ್ಯಕ್ತಿಯ ಹೆಸರು ಸಹ ಯಾರಿಗೂ ತಿಳಿದಿರಲಿಲ್ಲ. ಹೀಗಾಗಿ ಅವರ ನಿಧನವು ಇದೀಗ ಜಗತ್ತಿನಾದ್ಯಂತ ಸುದ್ದಿ ಮಾಡುತ್ತಿದೆ.

ವ್ಯಕ್ತಿಯ ಏಕೈಕ ಫೋಟೊ

ವ್ಯಕ್ತಿಯ ಏಕೈಕ ಫೋಟೊ

 • Share this:
  ಹೊರಜಗತ್ತಿನ ಜೊತೆ ಯಾವುದೇ ಸಂಪರ್ಕವನ್ನೂ ಇಟ್ಟುಕೊಳ್ಳದಿದ್ದ ಅಮೆಜಾನ್ ಬುಡಕಟ್ಟು ಜನಾಂಗವೊಂದರಲ್ಲಿ (Amazone Tribe Community) ಬದುಕಿದ್ದ ಕೊನೆಯ ವ್ಯಕ್ತಿಯೂ ಮೃತಪಟ್ಟಿದ್ದಾರೆ. ಈ ವ್ಯಕ್ತಿ 20 ವರ್ಷಗಳಿಗೂ ಹೆಚ್ಚು ಕಾಲ ಅಮೆಜಾನ್‌ ಕಾಡಿನಲ್ಲಿ (Amazon Forest) ಹಣ್ಣು, ಬೀಜಗಳನ್ನು ಸೇವಿಸುತ್ತಾ ಏಕಾಂಗಿಯಾಗಿ (Survivor Of Amazon Tribe) ಬದುಕಿದ್ದರಂತೆ. ಹೊರಜಗತ್ತಿನ ಜೊತೆ ಯಾವುದೇ ಸಂಪರ್ಕವನ್ನೂ ಇಟ್ಟುಕೊಳ್ಳದಿದ್ದ ಬುಡಕಟ್ಟು ಜನಾಂಗದ ಕೊನೆಯ ವ್ಯಕ್ತಿಯ ಹೆಸರು ಸಹ ಯಾರಿಗೂ ತಿಳಿದಿರಲಿಲ್ಲ. ಹೀಗಾಗಿ ಅವರ ನಿಧನವು ಇದೀಗ ಜಗತ್ತಿನಾದ್ಯಂತ ಸುದ್ದಿ ಮಾಡುತ್ತಿದೆ. ಈ ವ್ಯಕ್ತಿ ಮಳೆಕಾಡಿನಲ್ಲಿ ಪ್ರತ್ಯೇಕವಾಗಿ ವಾಸಿಸುವ ಸ್ಥಳೀಯ ಜನರ ಹೋರಾಟದ ಸಂಕೇತ ಎಂದೇ ವ್ಯಾಖ್ಯಾನಿಸಲ್ಪಟ್ಟಿದ್ದರು. ಈ ವ್ಯಕ್ತಿಯ ಚಿತ್ರವೊಂದನ್ನು ಬ್ರೆಜಿಲ್‌ನ ನ್ಯಾಷನಲ್ ಇಂಡಿಯನ್ ಫೌಂಡೇಶನ್‌ ಮಾರ್ಚ್ 2011 ರಲ್ಲಿ ಚಿತ್ರಿಸಿತ್ತು.

  ಪ್ರಾಚೀನ ಅಮೆಜಾನ್ ಕಾಡನ್ನು ಆಕ್ರಮಿಸಲು ಹಲವರು ನಡೆಸಿದ ಆಕ್ರಮಣಗಳನ್ನು ಇವರು ಮುಖತಃ ನೋಡಿದ್ದರು. ಅನುಭವಿಸಿದ್ದರು. ತಮ್ಮ ಜೀವನದಲ್ಲಿ ಹಲವು ಹತ್ಯಾಕಾಂಡಗಳನ್ನು ನೋಡಿದ್ದರು ಎಂದು ವರದಿಯಾಗಿದೆ.

  ಸಹಜ ಸಾವು ಎಂದು ಅಂದಾಜಿಸಿದ ಅಧಿಕಾರಿಗಳು
  ಹೊರ ಜಗತ್ತಿನಿಂದ ಸಂಪರ್ಕ ಇಲ್ಲದ ಬುಡಕಟ್ಟು ಜನಾಂಗದ ಈ ಹೆಸರು ತಿಳಿಯದ ವ್ಯಕ್ತಿ ಆಗಸ್ಟ್ 23 ರಂದು ತಾನಾರು ಸ್ಥಳೀಯ ಪ್ರಾಂತ್ಯದ ಉಯ್ಯಾಲೆ ಒಂದರಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ. ಅವರ ದೇಹದಲ್ಲಿ ಯಾವುದೇ ಗಾಯಗಳು ಪತ್ತೆಯಾಗಿಲ್ಲ. ಅವರು ಸಹಜವಾಗಿಯೇ ಮೃತಪಟ್ಟಿರಬಹುದು ಎಂದು ಅಧಿಕಾರಿಗಳು ಮೇಲ್ನೋಟಕ್ಕೆ ಅಂದಾಜಿಸಿದ್ದಾರೆ. ಗ್ವಾಕಮಾಯಾ ಎಂದು ಕರೆಯಲ್ಪಡುವ ಹಕ್ಕಿಯ ಗರಿಗಳಿಂದ ಇವರು ದೇಹವನ್ನು ಮುಚ್ಚಿಕೊಂಡಿದ್ದರು ಎಂದು ಸಹ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

  Man Of The Hole ಎಂದೇ ಪ್ರಸಿದ್ಧಿ ಪಡೆದಿದ್ದ ವ್ಯಕ್ತಿ
  "ಮ್ಯಾನ್ ಆಫ್ ದಿ ಹೋಲ್" ಎಂದೇ ಪ್ರಸಿದ್ಧಿ ಪಡೆದಿದ್ದ ಈ ವ್ಯಕ್ತಿಯ ಚಿತ್ರವನ್ನು 1996 ರಲ್ಲಿ ತನ್ನ ಬುಡಕಟ್ಟಿನ ವಿರುದ್ಧ ನಡೆಸಿದ ಹತ್ಯಾಕಾಂಡದ ತನಿಖೆಯನ್ನು ನಡೆಸುತ್ತಿರುವ ಸರ್ಕಾರಿ ಸಂಸ್ಥೆಯಾದ ನ್ಯಾಷನಲ್ ಇಂಡಿಯನ್ ಫೌಂಡೇಶನ್‌ನ ಅಧಿಕಾರಿಗಳೊಂದಿಗೆ ಪ್ರಯಾಣಿಸುತ್ತಿದ್ದ ಸಾಕ್ಷ್ಯಚಿತ್ರ ತಂಡ ಸೆರೆಹಿಡಿದಿತ್ತು.

  ಇದನ್ನೂ ಓದಿ: Rajnath Singh: ರಾಜನಾಥ್ ಸಿಂಗ್​ಗೆ ಮಂಗೋಲಿಯಾ ಕುದುರೆ ಉಡುಗೊರೆ! ಏನಿದರ ವಿಶೇಷತೆ?

  ಬಾಲಕಿಯ ಬಾಯಿಗೆ ಆ್ಯಸಿಡ್ ಸುರಿದು ಲೈಂಗಿಕ ದೌರ್ಜನ್ಯ; ಕತ್ತು ಸೀಳಿ ಭಯಾನಕ ವಿಕೃತಿ
  ಅಪ್ರಾಪ್ತ ಬಾಲಕಿಯ ಬಾಯಿಗೆ ಆ್ಯಸಿಡ್ ಸುರಿದು ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಲು ಯತ್ನಿಸಿದ ಭಯಂಕರ ಅಪರಾಧ ಕೃತ್ಯವೊಂದು (Crime News) ವರದಿಯಾಗಿದೆ. ಅಷ್ಟೇ ಅಲ್ಲದೇ ದಾಳಿ ನಡೆಸಿದ ವ್ಯಕ್ತಿ ಲೈಂಗಿಕ ದೌರ್ಜನ್ಯವನ್ನು ವಿರೋಧಿಸಿದ ಬಾಲಕಿಯ ಕತ್ತು ಸೀಳಿದ್ದಾನೆ. ಸೆಪ್ಟೆಂಬರ್ 5 ರ ಸೋಮವಾರ ರಾತ್ರಿ 9 ನೇ ತರಗತಿಯ ವಿದ್ಯಾರ್ಥಿನಿ 14 ವರ್ಷದ ಬಾಲಕಿ ತನ್ನ ಮನೆಯಲ್ಲಿ ಒಬ್ಬಳೇ ಇದ್ದಾಗ ಘಟನೆ ಸಂಭವಿಸಿದೆ. ಆಂಧ್ರ ಪ್ರದೇಶದ ನೆಲ್ಲೂರು ಜಿಲ್ಲೆಯ ಚೆಮುಡುಗುಂಟದ ನಕ್ಕಲ ಗಿರಿಜನ ಕಾಲೋನಿಯಲ್ಲಿ ಆರೋಪಿಯು ಬಾಲಕಿಯ ಮನೆಗೆ ನುಗ್ಗಿ ಈ ದುಷ್ಕೃತ್ಯ ನಡೆಸಿದ್ದಾನೆ.

  ಇದನ್ನೂ ಓದಿ: Nitin Gadkari: ಕಾರಿನ ಹಿಂಬದಿ ಸವಾರರಿಗೂ ಈಗ ಸೀಟ್​ಬೆಲ್ಟ್​ ಕಡ್ಡಾಯ, ತಪ್ಪಿದ್ರೆ ಬೀಳುತ್ತೆ ಭಾರೀ ದಂಡ!

  ತನ್ನನ್ನು ರಕ್ಷಿಸಿಕೊಳ್ಳುವ ಪ್ರಯತ್ನದಲ್ಲಿ, ಸಂತ್ರಸ್ತೆ ವಾಶ್ ರೂಂಗೆ ಓಡಿ ಬಂದು ಒಳಗೆ ಬೀಗ ಹಾಕಿಕೊಂಡಿದ್ದಾಳೆ. ಆರೋಪಿ ಬಾಗಿಲು ಒಡೆದು ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲು ಯತ್ನಿಸಿದ್ದಾನೆ. ಆತನ ಪ್ರಯತ್ನಕ್ಕೆ ಆಕೆ ಪ್ರತಿರೋಧ ತೋರಿದ ಕಾರಣ ಆತ ಆಕೆಯ ಮೇಲೆ ಟಾಯ್ಲೆಟ್ ಕ್ಲೀನಿಂಗ್ ಆ್ಯಸಿಡ್‌ನ್ನು ಆಕೆಯ ಬಾಯಿಗೆ ಮತ್ತು ಮುಖದ ಮೇಲೆ ಸುರಿದಿದ್ದಾನೆ ಎಂದು ವರದಿಯಾಗಿದೆ. ಆಕೆ ಕಿರುಚಲು ಆರಂಭಿಸಿದಾಗ ದುಷ್ಕರ್ಮಿ ಚಾಕುವಿನಿಂದ ಆಕೆಯ ಕತ್ತು ಸೀಳಿ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಮೂಲಕ ಆಂಧ್ರ ಪ್ರದೇಶದಲ್ಲಿ ನಡೆದ ಈ ಭೀಕರ ದುಷ್ಕೃತ್ಯ ದೇಶವನ್ನೇ ಬೆಚ್ಚಿ ಬೀಳಿಸಿದೆ.
  Published by:guruganesh bhat
  First published: