Explained: ಯಾರು ಈ ಸುಖಜಿಂದರ್ ಸಿಂಗ್ ರಾಂಧವ?; ಪಂಜಾಬ್ ಮುಂದಿನ ಸಿಎಂ ಬಗ್ಗೆ ನೀವು ತಿಳಿಯಬೇಕಾದ ವಿಷಯ?

ರಾಂಧವ ಅವರು ಕ್ಯಾಪ್ಟನ್ ಅಮರೀಂದರ್ ಅವರ ನಿಕಟ ಸಹೋದ್ಯೋಗಿಗಳಲ್ಲಿ ಒಬ್ಬರಾಗಿದ್ದರು. ಆದರೆ, ಈಡೇರದ ಚುನಾವಣಾ ಭರವಸೆಗಳಿಂದಾಗಿ ಮಾಜಿ ಮುಖ್ಯಮಂತ್ರಿಯೊಂದಿಗೆ ಮುನಿಸಿಕೊಂಡರು ಮತ್ತು ಈ ವರ್ಷದ ಆರಂಭದಲ್ಲಿ ನವಜೋತ್ ಸಿಂಗ್ ಸಿಧು ಜೊತೆ ಕೈಜೋಡಿಸಿದ್ದರು.

ಸುಖಜಿಂದರ್ ಸಿಂಗ್ ರಾಂಧವ

ಸುಖಜಿಂದರ್ ಸಿಂಗ್ ರಾಂಧವ

  • Share this:
    ಪಂಜಾಬ್ ರಾಜ್ಯ ರಾಜಕೀಯ ಬಿಕ್ಕಟ್ಟು (Punjab Politics) ಇದೀಗ ಮತ್ತೊಂದು ದಿಕ್ಕಿಗೆ ಹೊರಳಿದೆ. ಅನಿಶ್ಚಿತ ಬೆಳವಣಿಗೆಯ ನಡುವೆ ಪಂಜಾಬ್ ರಾಜ್ಯ ಸರ್ಕಾರದ ಮುಖ್ಯಮಂತ್ರಿ ಸ್ಥಾನಕ್ಕೆ ಕ್ಯಾಪ್ಟನ್ ಅಮರೀಂದರ್ ಸಿಂಗ್ (Captain Amarinder Singh) ಅವರು ಶನಿವಾರ ರಾಜೀನಾಮೆ ಸಲ್ಲಿಸಿದ್ದರು. ಇವರ ಸ್ಥಾನಕ್ಕೆ ಪಂಜಾಬ್ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿದು (Navjot Singh Sidu) ಅವರು ಆಯ್ಕೆ ಆಗಲಿದ್ದಾರೆ ಎಂದು ಹೇಳಲಾಗುತ್ತಿತ್ತು. ಆದರೆ, ಕಾಂಗ್ರೆಸ್ ಹೈಕಮಾಂಡ್ ಇದೀಗ ಅಚ್ಚರಿಯ ಅಭ್ಯರ್ಥಿಯ ಹೆಸರನ್ನು ಸಿಎಂ ಸ್ಥಾನಕ್ಕೆ ಆಯ್ಕೆ ಮಾಡಿದೆ. ಸುಖಜಿಂದರ್ ಸಿಂಗ್ ರಾಂಧವ  (Sukhjinder Singh Randhawa to be the next CM of Punjab) ಅವರು ಪಂಜಾಬ್ ಮುಂದಿನ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಲಿದ್ದಾರೆ ಎಂದು ಹೇಳಲಾಗುತ್ತಿದೆ.

    ಪಂಜಾಬ್‌ನ ಹೊಸ ಮುಖ್ಯಮಂತ್ರಿಯಾಗಲು ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರ ಕ್ಯಾಬಿನೆಟ್‌ನಲ್ಲಿ ಮಂತ್ರಿಯಾಗಿದ್ದ ಸುಖಜಿಂದರ್ ಸಿಂಗ್ ರಾಂಧವಾ ಅವರ ಹೆಸರನ್ನು ಕಾಂಗ್ರೆಸ್ ಶಾಸಕರು ಪ್ರಸ್ತಾಪಿಸಿದ್ದಾರೆ ಎಂದು ಕಾಂಗ್ರೆಸ್ ಶಾಸಕ ಪ್ರೀತಮ್ ಕೋಟ್‌ಭಾಯ್ ಹೇಳಿದ್ದಾರೆ.

     ಯಾರು ಈ ಸುಖಜಿಂದರ ಸಿಂಗ್ ರಾಂಧವ?


    1959 ಏಪ್ರಿಲ್ 25ರಂದು ಗುರ್ದಾಸ್​ಪುರ ಜಿಲ್ಲೆಯಲ್ಲಿ ಜನಿಸಿದ ಸುಖಜಿಂದರ್ ಸಿಂಗ್ ಅವರು ಪದವಿ ಶಿಕ್ಷಣ ಪಡೆದಿದ್ದಾರೆ. ಸುಖಜಿಂದರ ಅವರು 1975ರಲ್ಲಿ ಚಂಡೀಗಢ ಗೌರ್ಮೆಂಟ್ ಸ್ಕೂಲ್​ನಲ್ಲಿ ಪದವಿ ಪೂರೈಸಿದರು. ಇವರ ತಂದೆ ಸಂತೋಖ ಸಿಂಗ್ ಅವರು ಎರಡು ಬಾರಿ ಪಂಜಾಬ್ ರಾಜ್ಯ ಕಾಂಗ್ರೆಸ್ ಮುಖ್ಯಸ್ಥರಾಗಿದ್ದರು. ಮತ್ತು ಕಾಂಗ್ರೆಸ್​ನ ಅತ್ಯಂತ ಹಿರಿಯ ನಾಯಕರಲ್ಲಿ ಒಬ್ಬರಾಗಿದ್ದರು.

    ಸುಖಜಿಂದರ ಸಿಂಗ್ ರಾಜಕೀಯ ಜೀವನ

    ಸುಖಜಿಂದರ್ ಸಿಂಗ್ ರಾಂಧವ ಅವರು 2002ರಲ್ಲಿ ಫತೇಗರ್ ಚೌರಿಯಾ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಮೊದಲ ಬಾರಿಗೆ ಅಕಲಿ ದಳದ ನಿರ್ಮಲ ಸಿಂಗ್ ಕಹ್ಲೊನ್ ಅವರನ್ನು ಸೋಲಿಸಿ, ಶಾಸಕರಾದರು. ಆ ಬಳಿಕ 2012 ಮತ್ತು2017 ರಲ್ಲಿ ದೆರಾ ಬಾಬಾ ನಾನಕ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಪಡೆದರು. ಸುಖಜಿಂದರ್ ಸಿಂಗ್ ರಾಂಧವ ಅವರು ಪಂಜಾಬ್ ಯೂತ್ ಕಾಂಗ್ರೆಸ್ ಉಪಾಧ್ಯಕ್ಷರಾಗಿ, ಪಿಪಿಸಿಸಿ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. ಪ್ರೈಮರಿ ಆಗ್ರೋ ಸರ್ವಿಸ್ ಸೊಸೈಟಿ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರ ಸಚಿವ ಸಂಪುಟದಲ್ಲಿ ಕ್ಯಾಬಿನೆಟ್ ಸಚಿವರಾಗಿ ಸೇವೆ ಸಲ್ಲಿಸುತ್ತಿದ್ದರು. ಮೂಲತಃ ಕೃಷಿ ಕುಟುಂಬದಿಂದ ಬಂದ ಸುಖಜಿಂದರ್ ಸಿಂಗ್ ರಾಂಧವ ಅವರು ಇದೀಗ ಪಂಜಾಬ್ ಮುಖ್ಯಮಂತ್ರಿ ಆಗಲಿದ್ದಾರೆ.

    ವರದಿಗಳ ಪ್ರಕಾರ, ಸಟ್ಲೆಜ್- ಯಮುನಾ ಲಿಂಕ್ (ಎಸ್‌ವೈಎಲ್) ಪಂಜಾಬ್ ಅನ್ನು ಮುಕ್ತಾಯಗೊಳಿಸುವುದು ಕಾನೂನುಬಾಹಿರ ಎಂದು ಭಾರತದ ಸುಪ್ರೀಂ ಕೋರ್ಟ್ ತೀರ್ಪನ್ನು ಪ್ರತಿಭಟಿಸಿ ರಾಜೀನಾಮೆ ನೀಡಿದ 42 ಐಎನ್‌ಸಿ ಶಾಸಕರಲ್ಲಿ ಸುಖಜಿಂದರ ಸಿಂಗ್ ರಾಂಧವ ಅವರೂ ಒಬ್ಬರು. ಸಾಂಪ್ರದಾಯಿಕ ಕಾಂಗ್ರೆಸ್ಸಿಗರಾಗಿರುವ ರಾಂಧವ ಅವರು ಕ್ಯಾಪ್ಟನ್ ಅಮರೀಂದರ್ ಸಿಂಗ್ ವಿರೋಧ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

    ಇದನ್ನು ಓದಿ: Sukhjinder Singh Randhawa: ಸುಖಜಿಂದರ ಸಿಂಗ್ ರಾಂಧವ ಪಂಜಾಬ್ ಮುಂದಿನ ಮುಖ್ಯಮಂತ್ರಿ!

    ರಾಂಧವ ಅವರು ಕ್ಯಾಪ್ಟನ್ ಅಮರೀಂದರ್ ಅವರ ನಿಕಟ ಸಹೋದ್ಯೋಗಿಗಳಲ್ಲಿ ಒಬ್ಬರಾಗಿದ್ದರು. ಆದರೆ, ಈಡೇರದ ಚುನಾವಣಾ ಭರವಸೆಗಳಿಂದಾಗಿ ಮಾಜಿ ಮುಖ್ಯಮಂತ್ರಿಯೊಂದಿಗೆ ಮುನಿಸಿಕೊಂಡರು ಮತ್ತು ಈ ವರ್ಷದ ಆರಂಭದಲ್ಲಿ ನವಜೋತ್ ಸಿಂಗ್ ಸಿಧು ಜೊತೆ ಕೈಜೋಡಿಸಿದ್ದರು.

    ಅಮರೀಂದರ್ ಸಿಂಗ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಇಂದು ಸುಖಜಿಂದರ ಸಿಂಗ್ ರಾಂಧವ ಅವರನ್ನು ಭೇಟಿಯಾದ ಸುದ್ದಿಗಾರರು, ನಾವು ಮುಖ್ಯಮಂತ್ರಿಯೊಂದಿಗೆ ಮಾತನಾಡುತ್ತಿದ್ದೇವೆ ಎಂದು ಭಾವಿಸಬಹುದೇ ಎಂದು ಕೇಳಿದಾಗ, "ನೀವು ಕಾಂಗ್ರೆಸ್ಸಿಗರೊಂದಿಗೆ ಮಾತನಾಡುತ್ತಿದ್ದೀರಿ" ಎಂದು ರಾಂಧವ ವ್ಯಂಗ್ಯವಾಡಿದ್ದರು.
    Published by:HR Ramesh
    First published: