ಅಸ್ಸಾಂ: ನಟ ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಅಭಿನಯದ ಪಠಾನ್ ಚಿತ್ರದ ‘ಬೇಷರಂ ರಂಗ್’ ಎಂಬ ಹಾಡು ಬಿಡುಗಡೆಯಾಗುತ್ತಿದ್ದಂತೆ ಭಾರೀ ಸದ್ದು ಮಾಡಿತ್ತು. ದೀಪಿಕಾ ಪಡುಕೋಣೆ ಧರಿಸಿದ್ದ ಕೇಸರಿ ಬಣ್ಣದ ಬಿಕಿನಿ ಹಾಗೂ ನೃತ್ಯದ ಹಾವ ಭಾವಗಳಿಂದಾಗಿ ದೊಡ್ಡ ಮಟ್ಟದ ಟೀಕೆಗೆ ಒಳಗಾಗಿತ್ತು. ಇನ್ನೂ ಅನೇಕರು ಈ ಹಾಡನ ಬಗ್ಗೆ ಅಶ್ಲೀಲ ಟೀಕೆ ಮಾಡಿದ್ದರು. ಈ ಮಧ್ಯೆ ಶಾರುಖ್ ಖಾನ್ (Shah Rukh Khan) ಯಾರು? ಅವರ ಬಗ್ಗೆ ಅಥವಾ ಪಠಾಣ್ ಚಿತ್ರದ ಬಗ್ಗೆ ನನಗೆ ಏನೂ ಗೊತ್ತಿಲ್ಲ ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ (Chief Minister Himanta Biswa Sarma) ಅವರು ಹೇಳಿದ್ದಾರೆ. ಶುಕ್ರವಾರ ನಗರದ ನರೇಂಗಿಯಲ್ಲಿ ಪಠಾಣ್ (Pathaan) ಚಿತ್ರ ಪ್ರದರ್ಶನಗೊಳ್ಳಲಿದ್ದು, ಈ ಹಿನ್ನೆಲೆ ಭಜರಂಗದಳದ ಕಾರ್ಯಕರ್ತರು (Bajarang Dal Workers) ಥಿಯೇಟರ್ಗೆ ನುಗ್ಗಿ ಪೋಸ್ಟರ್ಗಳನ್ನು ಹರಿದು, ಸುಟ್ಟು ಹಾಕಿ ಪ್ರತಿಭಟನೆ ನಡೆಸಿದರು. ಈ ಬಗ್ಗೆ ಮಾಧ್ಯಮದವರು ಹಿಮಂತ ಬಿಸ್ವಾ ಶರ್ಮಾ ಅವರನ್ನು ಇಂದು ಪ್ರಶ್ನಿಸಿದರು.
ಎಂದಿಗೂ ಶಾರೂಖ್ ಖಾನ್ ನಂಗೆ ಕರೆ ಮಾಡಿಲ್ಲ
ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈ ಸಿನಿಮಾ ಕುರಿತಂತೆ ಎಷ್ಟೆಲ್ಲಾ ಸಮಸ್ಯೆಯಾಗುತ್ತಿದ್ದರೂ, ಬಾಲಿವುಡ್ನ ಅನೇಕ ಮಂದಿ ತಿಳಿಸಿದರೂ, ಶಾರೂಖ್ ಖಾನ್ ಎಂದಿಗೂ ನನಗೆ ಕರೆ ಮಾಡಿಲ್ಲ. ಅವರು ಕರೆ ಮಾಡಿ ಮಾತನಾಡಿದ್ದರೆ ಈ ವಿಚಾರಿಸಲಬಹುದಿತ್ತು. ಆದರೆ ಕಾನೂನು ಸುವ್ಯವಸ್ಥೆ ಉಲ್ಲಂಘಿಸಿದರೆ ಪ್ರಕರಣ ದಾಖಲಾದರೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಈ ಮಧ್ಯೆ ಹಾಡಿನಲ್ಲಿ ನಟ ಶಾರುಖ್ ಖಾನ್ ಧರಿಸಿದ್ದ ಹಸಿರು ಬಣ್ಣದ ಶರ್ಟ್ ಕೂಡ ಅನೇಕರನ್ನು ಕೆರಳಿಸಿತ್ತು.ಅಲ್ಲದೇ ಶಾರುಖ್ ಖಾನ್ ಅವರನ್ನು ಭೇಟಿಯಾದರೆ ಅವರನ್ನು ಜೀವಂತವಾಗಿ ಸುಡುವ ಹಂತಕ್ಕೂ ಹೋಗುತ್ತೇನೆ ಎಂದು ತಪಸ್ವಿ ಚಾವ್ನಿಯ ಮಹಂತ್ ಪರಮಹಂಸ ಆಚಾರ್ಯ ಅವರು ಹೇಳಿದ್ದರು.
ನಮ್ಮ ಸನಾತನ ಧರ್ಮದ ಜನರು ಈ ವಿಚಾರದ ಬಗ್ಗೆ ನಿರಂತರವಾಗಿ ಪ್ರತಿಭಟಿಸುತ್ತಿದ್ದಾರೆ. ಇಂದು ನಾವು ಶಾರುಖ್ ಖಾನ್ ಅವರ ಪೋಸ್ಟರ್ ಅನ್ನು ಸುಟ್ಟು ಹಾಕಿದ್ದೇವೆ. ಜಿಹಾದಿ ಶಾರುಖ್ ಖಾನ್ ಅವರನ್ನು ಭೇಟಿ ಮಾಡುವ ಅವಕಾಶ ಸಿಕ್ಕರೆ ನಾನು ಅವರನ್ನು ಜೀವಂತವಾಗಿ ಸುಡುತ್ತೇನೆ ಎಂದಿದ್ದರು.
ಪಠಾಣ್ ವಿರುದ್ಧ ಅನಗತ್ಯ ಟೀಕೆ ಬೇಡ ಅಂದ ಮೋದಿ
ಮತ್ತೊಂದೆಡೆ ಇತ್ತೀಚೆಗಷ್ಟೇ ನಡೆದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪಾಲ್ಗೊಂಡಿದ್ದರು. ಈ ವೇಳೆ ಮಾತನಾಡಿದ ಅವರು, ಚಲನಚಿತ್ರಗಳಂತಹ ಅಪ್ರಸ್ತುತ ವಿಷಯಗಳ ಬಗ್ಗೆ ಅನಗತ್ಯ ಟೀಕೆಗಳನ್ನು ಮಾಡಬೇಡಿ. ಹಾಗೇನಾದರೂ ಮಾಡಿದರೆ, ಪಕ್ಷದ ಅಭಿವೃದ್ಧಿ ಅಜೆಂಡಾಗಳು ಹಿಂದೆ ಸರಿಯುತ್ತವೆ. ಹಾಗಾಗಿ ಇಂಥ ಟೀಕೆಗಳಿಂದ ಹಿಂದೆ ಸರಿದರೆ ಒಳ್ಳೆಯದು ಎಂದು ಪಕ್ಷದ ಕಾರ್ಯಕರ್ತರಿಗೆ ಸೂಚಿಸಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಜನವರಿ 25 ರಂದು ಪಠಾಣ್ ಚಿತ್ರ ಬಿಡುಗಡೆ
ಐದು ವರ್ಷಗಳ ನಂತರ ನಟ ಶಾರುಖ್ ಖಾನ್ ಪಠಾಣ್ ಚಿತ್ರದ ಮೂಲಕ ಮತ್ತೆ ತೆರೆ ಮೇಲೆ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ಶಾರುಖ್ ಮತ್ತು ದೀಪಿಕಾ ಜೊತೆಗೆ ನಟ ಜಾನ್ ಅಬ್ರಹಾಂ ಸಹ ನಟಿಸಿದ್ದಾರೆ. ಅಷ್ಟೇ ಅಲ್ಲದೇ ಈ ಚಿತ್ರದಲ್ಲಿ ಹೃತಿಕ್ ರೋಷನ್ ಅವರು ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಆದರೆ ಈ ಬಗ್ಗೆ ನಿರ್ದೇಶಕ ಸಿದ್ಧಾರ್ಥ್ ಆನಂದ್ ಇನ್ನೂ ದೃಢಪಡಿಸಿಲ್ಲ. ಈ ಚಿತ್ರವು ಜನವರಿ 25 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ