Ayodhya Judgment: ಅಯೋಧ್ಯೆ ಭೂಮಿ ರಾಮಲಲ್ಲಾ ವಿರಾಜ್ಮಾನ್​ಗೆ ನೀಡಿದ ಸುಪ್ರೀಂ; ಇಷ್ಟಕ್ಕೂ ಯಾರಾತ?

ಸುಪ್ರೀಂಕೋರ್ಟ್​​ ವಿವಾದಿತ ಅಯೋಧ್ಯೆ ಜಾಗವನ್ನು ರಾಮಲಲ್ಲಾಗೆ ನೀಡಿದೆ. ಆದರೆ,  ರಾಮಲಲ್ಲಾಗೆ ಮಂದಿರ ನಿರ್ಮಾಣದ ಹಕ್ಕಿಲ್ಲ ಎಂದು ಹೇಳಿದೆ. ಈ ರಾಮ​ಲಲ್ಲಾ ವಿರಾಜ್​ಮಾನ್​ಗೆ ಯಾರು ಎನ್ನುವ ಪ್ರಶ್ನೆ ಅನೇಕರಲ್ಲಿದೆ. ಇದಕ್ಕೆ ಇಲ್ಲಿದೆ ಉತ್ತರ.

news18-kannada
Updated:November 9, 2019, 1:31 PM IST
Ayodhya Judgment: ಅಯೋಧ್ಯೆ ಭೂಮಿ ರಾಮಲಲ್ಲಾ ವಿರಾಜ್ಮಾನ್​ಗೆ ನೀಡಿದ ಸುಪ್ರೀಂ; ಇಷ್ಟಕ್ಕೂ ಯಾರಾತ?
ಸಾಂದರ್ಭಿಕ ಚಿತ್ರ
news18-kannada
Updated: November 9, 2019, 1:31 PM IST
ನವದೆಹಲಿ (ನ.9): ಅಯೋಧ್ಯೆಯ ವಿವಾದಿತ 2.75 ಎಕರೆ ಜಾಗವನ್ನು ಕೋರ್ಟ್​​ ರಾಮಲಲ್ಲಾ ವಿರಾಜ್​ಮಾನ್​ಗೆ ಸುಪ್ರೀಂಕೋರ್ಟ್​ ನೀಡಿದೆ. ರಾಮಲಲ್ಲಾ ಬದಲು ಕೇಂದ್ರ ಸರ್ಕಾರ ಒಂದು ಟ್ರಸ್ಟ್​ ನಿರ್ಮಾಣ ಮಾಡಬೇಕು ಎಂದು ಕೋರ್ಟ್​ ಹೇಳಿದೆ.  ಆದರೆ, ಈ ರಾಮ​ಲಲ್ಲಾ ವಿರಾಜ್​ಮಾನ್ ಯಾರು ಎನ್ನುವ ಪ್ರಶ್ನೆ ಅನೇಕರಲ್ಲಿದೆ. ಇದಕ್ಕೆ ಉತ್ತರ ಇಲ್ಲಿದೆ.

ಸುಪ್ರೀಂಕೋರ್ಟ್​​ ವಿವಾದಿತ ಅಯೋಧ್ಯೆ ಜಾಗವನ್ನು ರಾಮಲಲ್ಲಾಗೆ ನೀಡಿದೆ. ಆದರೆ,  ರಾಮಲಲ್ಲಾಗೆ ಮಂದಿರ ನಿರ್ಮಾಣದ ಹಕ್ಕಿಲ್ಲ ಎಂದು ಹೇಳಿದೆ. ವಿವಾದಿತ ಜಾಗವನ್ನು ಕೇಂದ್ರಸರ್ಕಾರಕ್ಕೆ ಒಪ್ಪಿಸಬೇಕು. ಕೇಂದ್ರ ಸರ್ಕಾರ ಮೂರು ತಿಂಗಳ ಒಳಗೆ ಟ್ರಸ್ಟ್ ರಚಿಸಬೇಕು. ನಂತರ ಈ ಜಾಗ ಟ್ರಸ್ಟ್​ಗೆ ಹಸ್ತಾಂತರವಾಗಲಿದೆ. ಟ್ರಸ್ಟ್ ಮೇಲುಸ್ತುವಾರಿಯಲ್ಲೇ ಮಂದಿರ ನಿರ್ಮಾಣವಾಗಬೇಕು. ಇದರಲ್ಲಿ ಬೇರೆ ಯಾರೊಬ್ಬರೂ ತಲೆ ಹಾಕುವಂತಿಲ್ಲ ಎಂದು ಕೋರ್ಟ್​ ಹೇಳಿದೆ. ಅಷ್ಟಕ್ಕೂ ಈ ರಾಮಲಲ್ಲಾ ಬೇರಾರೂ ಅಲ್ಲ, ಬಾಲ ರಾಮ!

ಹೌದು, ಹಿಂದು ಕಾನೂನಿನ ಪ್ರಕಾರ ದೇವರ ಮೇಲೆ ನೀವು ಪ್ರಕರಣ ದಾಖಲಿಸಬಹುದು. ಹೀಗಾಗಿ ಅಯೋಧ್ಯೆ ಪ್ರಕರಣದಲ್ಲಿ ಬಾಲ ರಾಮನ ಮೂರ್ತಿ ಕೂಡ ಫಿರ್ಯಾದಿ ಆಗಿತ್ತು. ಆದರೆ, ರಾಮ ಬಾಲಕ. ಹೀಗಾಗಿ ಈತನಿಗೆ ಪ್ರಕರಣದಲ್ಲಿ ಫೈಟ್​ ಮಾಡುವ ಹಕ್ಕಿಲ್ಲ.

ಇದನ್ನೂ ಓದಿ: ರಾಮ ಮಂದಿರ ನಿರ್ಮಾಣಕ್ಕೆ ಸುಪ್ರೀಂಕೋರ್ಟ್ ವಿಧಿಸಿದ ಷರತ್ತುಗಳೇನು?

ಹೀಗಾಗಿ ಈ ಪ್ರಕರಣದಲ್ಲಿ ರಾಮನನ್ನು ವ್ಯಕ್ತಿಯೊಬ್ಬರು ಪ್ರತಿನಿಧಿಸಬೇಕು. ಈ ಕಾರಣಕ್ಕೆ ವಿಎಚ್​ಪಿ ನಾಯಕ ತ್ರಿಲೋಕಿ ನಾಥ್​ ಪಾಂಡೆ ರಾಮನನ್ನು ಪ್ರತಿನಿಧಿಸಿದ್ದರು. ಈ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್​​ ಟ್ರಸ್ಟ್​​ ರಚನೆ ಮಾಡುವಂತೆ ಸೂಚನೆ ನೀಡಿದೆ.

ಏನಿದು ಪ್ರಕರಣ?:

ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿ ಇದ್ದ ಜಾಗದ 2.77 ಎಕರೆ ವಿವಾದಿತ ಭೂಮಿ ಯಾರಿಗೆ ಸೇರಿದ್ದು ಎಂಬುದೇ ಈಗ ಈ ಪ್ರಕರಣದ ವಸ್ತುವಾಗಿದೆ. 1528 ಶ್ರೀರಾಮ ಹುಟ್ಟಿದ ಸ್ಥಳ ಎಂದು ನಂಬಲಾಗುವ ಅಯೋಧ್ಯೆಯಲ್ಲಿ ಬಾಬರ್‌ ಮಸೀದಿ ನಿರ್ಮಾಣ ಮಾಡಿದ್ದ. ರಾಮ ಮಂದಿರ ಕೆಡವಿ ದೇವಾಲಯ ನಿರ್ಮಿಸಲಾಗಿದೆ ಎಂಬುದು ಆರೋಪ.
Loading...

ಇದು ಸುಳ್ಳು. ಬಾಬ್ರಿ ಮಸೀದಿ ಜಾಗ ತಮಗೆ ಸೇರಿದ್ದು ಎಂಬುದು ಸುನ್ನಿ ವಕ್ಫ್ ಮಂಡಳಿಯ ವಾದ. ಹಾಗೆಯೇ ನಿರ್ಮೋಹಿ ಅಖಾಡ ಕೂಡ ಇದು ತನಗೆ ಸೇರಿದ್ದೆಂದು ಹೇಳುತ್ತಿದೆ. 2010ರಲ್ಲಿ ಅಲಾಹಾಬಾದ್ ಉಚ್ಚ ನ್ಯಾಯಾಲಯವು ಈ ಮೂರೂ ಗುಂಪುಗಳಿಗೆ ವಿವಾದಿತ ಭೂಮಿಯನ್ನು ಸಮಾನವಾಗಿ ಹಂಚುವ ತೀರ್ಪು ನೀಡಿತ್ತು. ಆ ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್​ನಲ್ಲಿ ಹಲವು ಮೇಲ್ಮನವಿಗಳು ದಾಖಲಾದವು. ಈಗ ಸಿಜೆಐ ರಂಜನ್ ಗೊಗೋಯ್ ನೇತೃತ್ವದ ಸುಪ್ರೀಂ ನ್ಯಾಯಪೀಠವು ಇದರ ವಿಚಾರಣೆ ನಡೆಸಿ, ತೀರ್ಪು ನೀಡಿದೆ.

First published:November 9, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...