• Home
  • »
  • News
  • »
  • national-international
  • »
  • Mallikarjun Kharge: 7ನೇ ವಯಸ್ಸಿಗೆ ಅಮ್ಮನನ್ನು ಕಳೆದುಕೊಂಡ ಖರ್ಗೆ, 80ರ ಹರೆಯದಲ್ಲಿ ಕಾಂಗ್ರೆಸ್​ ಬಾಸ್ ಆದ ಕನ್ನಡಿಗ!

Mallikarjun Kharge: 7ನೇ ವಯಸ್ಸಿಗೆ ಅಮ್ಮನನ್ನು ಕಳೆದುಕೊಂಡ ಖರ್ಗೆ, 80ರ ಹರೆಯದಲ್ಲಿ ಕಾಂಗ್ರೆಸ್​ ಬಾಸ್ ಆದ ಕನ್ನಡಿಗ!

ರಾಹುಲ್ ಗಾಂಧಿ, ಮಲ್ಲಿಕಾರ್ಜುನ್ ಖರ್ಗೆ (ಸಂಗ್ರಹ ಚಿತ್ರ)

ರಾಹುಲ್ ಗಾಂಧಿ, ಮಲ್ಲಿಕಾರ್ಜುನ್ ಖರ್ಗೆ (ಸಂಗ್ರಹ ಚಿತ್ರ)

Mallikarjun Kharge Profile: ಖರ್ಗೆಯವರು ದಕ್ಷಿಣ ಭಾರತದ ಕರ್ನಾಟಕದ ಕಲಬುರಗಿಯವರು. ಕನ್ನಡಿಗನಾಗಿದ್ದರೂ ಅವರು ಚೆನ್ನಾಗಿ ಹಿಂದಿ ಮಾತನಾಡುತ್ತಾರೆ. 2014ರ ಚುನಾವಣೆಯಲ್ಲಿ ಮೋದಿ ಅಲೆಯಲ್ಲಿ ಅನೇಕ ದಿಗ್ಗಜರು ಸೋತರೂ ಖರ್ಗೆ ವಿಜಯ ಪತಾಕೆ ಹಾರಿಸಿದ್ದರು.

  • Share this:

ನವದೆಹಲಿ(ಅ.19): ಕಾಂಗ್ರೆಸ್ ಅಧ್ಯಕ್ಷ (Congress President) ಸ್ಥಾನಕ್ಕೆ ನಡೆದ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು, ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಕಾಂಗ್ರೆಸ್ ಪಕ್ಷದ ನೂತನ ನಾಯಕರಾಗಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ 7,897 ಮತಗಳನ್ನು ಪಡೆದರೆ, ಶಶಿ ತರೂರ್ (Shashi Tharoor) ಅವರು ಸುಮಾರು 1,000 ಮತಗಳನ್ನು ಪಡೆದರು. ಈ ಮೂಲಕ ಖರ್ಗೆ ಅವರು ತರೂರ್ ಅವರನ್ನು ಸುಮಾರು 8 ಪಟ್ಟು ಹೆಚ್ಚು ಮತಗಳಿಂದ ಸೋಲಿಸಿದರು. ಮಲ್ಲಿಕಾರ್ಜುನ ಖರ್ಗೆ ಅವರು ಕಾಂಗ್ರೆಸ್ ಅಧ್ಯಕ್ಷರಾದ ಎರಡನೇ ದಲಿತ ನಾಯಕರಾಗಿದ್ದಾರೆ. ಈ ಹಿಂದೆ 1971ರಲ್ಲಿ ಜಗಜೀವನ್ ರಾಮ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು.


ಕನ್ನಡಿಗ ಖರ್ಗೆ


ಖರ್ಗೆಯವರು ದಕ್ಷಿಣ ಭಾರತದ ಕರ್ನಾಟಕದ ಕಲಬುರಗಿಯವರು. ಕನ್ನಡಿಗನಾಗಿದ್ದರೂ ಅವರು ಚೆನ್ನಾಗಿ ಹಿಂದಿ ಮಾತನಾಡುತ್ತಾರೆ. ಮಲ್ಲಿಕಾರ್ಜುನ ಖರ್ಗೆ ಸತತ ಒಂಬತ್ತು ಬಾರಿ ಶಾಸಕರಾಗಿದ್ದಾರೆ. ಅಷ್ಟೇ ಅಲ್ಲ, 2014ರ ಚುನಾವಣೆಯಲ್ಲಿ ಮೋದಿ ಅಲೆಯಲ್ಲಿ ದಿಗ್ಗಜರು ಸೋತಾಗಲೂ ಖರ್ಗೆ ವಿಜಯ ಪತಾಕೆ ಹಾರಿಸಿದ್ದರು. ಆದರೆ 2019ರ ಲೋಕಸಭೆ ಚುನಾವಣೆಯಲ್ಲಿ ಅವರು ಸೋಲನುಭವಿಸಿದರು.


ಇದನ್ನೂ ಓದಿ: Congress President Polls Result: ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್‌ ನೂತನ ಅಧ್ಯಕ್ಷ, 7,897 ಮತಗಳೊಂದಿಗೆ ಗೆಲುವು!


ವಕೀಲರಾಗಿದ್ದ ಮಲ್ಲಿಕಾರ್ಜುನ ಖರ್ಗೆ


21 ಜುಲೈ 1942 ರಂದು ಜನಿಸಿದ ಮಲ್ಲಿಕಾರ್ಜುನ ಖರ್ಗೆ ರಾಜಕೀಯಕ್ಕೆ ಸೇರುವ ಮೊದಲು ವಕೀಲ ವೃತ್ತಿ ಮಾಡಿಕೊಂಡಿದ್ದರು. ಅವರು ಕರ್ನಾಟಕದ ಬಡ ಕುಟುಂಬದಲ್ಲಿ ಜನಿಸಿದರು ಮತ್ತು ಪದವಿ ಶಿಕ್ಷಣ ಪೂರೈಸಿದರು. ಬಳಿಕ ಕಾನೂನಿನ ಪದವಿ ಗಳಿಸಿದರು. ಮಲ್ಲಿಕಾರ್ಜುನ ಖರ್ಗೆ ಕರ್ನಾಟಕದಿಂದ ಕಾಂಗ್ರೆಸ್ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ ಎರಡನೇ ವ್ಯಕ್ತಿ. ಈ ಹಿಂದೆ ಕರ್ನಾಟಕದ ಎಸ್. ನಿಜಲಿಂಗಪ್ಪ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು.


Bharat Jodo yatra 17 day in karnataka mrq


ಗಾಂಧಿ ಕುಟುಂಬಕ್ಕೆ ನಿಷ್ಠರಾಗಿರುವ ಖರ್ಗೆ


ಸತತ 9 ಬಾರಿ ಶಾಸಕರಾಗಿದ್ದ 80 ವರ್ಷದ ಮಲ್ಲಿಕಾರ್ಜುನ ಖರ್ಗೆ 50 ವರ್ಷಕ್ಕೂ ಹೆಚ್ಚು ಕಾಲ ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ. ಅವರು ಗಾಂಧಿ-ನೆಹರೂ ಅವರ ನಿಷ್ಠಾವಂತ ಎಂದು ಪರಿಗಣಿಸಲ್ಪಟ್ಟಿದ್ದಾರೆ. ಇತ್ತೀಚೆಗೆ ರಾಜ್ಯಸಭೆಯ ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಮಹಾದಲಿತ ಸಮುದಾಯಕ್ಕೆ ಸೇರಿದವರು. ಅವರ ರಾಜಕೀಯದ ವನದ ಬಗ್ಗೆ ಹೇಳುವುದಾದರೆ, ಅವರು ಮೊದಲು ಕೇವಲ ವಕೀಲ ವೃತ್ತಿ ಮಾಡಿಕೊಂಡಿದ್ದರು. ಕಾಂಗ್ರೆಸ್ ಸೇರುವ ಮುನ್ನ ಖರ್ಗೆಯವರು ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರಿಂದ ಪ್ರೇರಿತರಾಗಿ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಆರ್‌ಪಿಐ)ಗೆ ಸೇರಿದರು.


ವಿದ್ಯಾರ್ಥಿ ಸಂಘ ಪ್ರಾರಂಭ


ಆದರೆ, ಖರ್ಗೆಯವರು ತಮ್ಮ ರಾಜಕೀಯ ಜೀವನ ಆರಂಭಿಸಿದ್ದು ವಿದ್ಯಾರ್ಥಿ ಸಂಘದ ನಾಯಕರಾಗಿ. ಅಲ್ಲಿ ಕಲಬುರಗಿ (ಗುಲ್ಬರ್ಗ)ಯ ಸರ್ಕಾರಿ ಕಾಲೇಜು ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದರು. 1969 ರಲ್ಲಿ, ಅವರು MSK ಮಿಲ್ಸ್ ಎಂಪ್ಲಾಯಿಸ್ ಯೂನಿಯನ್‌ನ ಕಾನೂನು ಸಲಹೆಗಾರರಾದರು. ಅವರು ಯುನೈಟೆಡ್ ಮಜ್ದೂರ್ ಸಂಘದ ಎಂಬ ಪ್ರಭಾವಿ ಕಾರ್ಮಿಕ ಸಂಘದ ನಾಯಕರಾಗಿದ್ದರು. ಈ ಮೂಲಕ ಕಾರ್ಮಿಕರ ಹಕ್ಕುಗಳಿಗಾಗಿ ಹೋರಾಡುವ ಹಲವಾರು ಚಳುವಳಿಗಳನ್ನು ಮುನ್ನಡೆಸಿದರು. 1969 ರಲ್ಲಿ ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸೇರಿದರು ಮತ್ತು ಅಂದಿನ ಗುಲ್ಬರ್ಗಾ ಇಂದಿನ ಕಲಬುರಗಿ ನಗರ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದರು.


ಖರ್ಗೆ ಸತತ ಒಂಬತ್ತು ಬಾರಿ ಶಾಸಕರಾದರು


ಖರ್ಗೆ ಅವರು 1972 ರಲ್ಲಿ ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಮೊದಲು ಗುರುಮಠಕಲ್ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದರು. 1976 ರಲ್ಲಿ, ಅವರು ಪ್ರಾಥಮಿಕ ಶಿಕ್ಷಣ ರಾಜ್ಯ ಸಚಿವರಾಗಿ ನೇಮಕಗೊಂಡರು. 1978 ರಲ್ಲಿ, ಅವರು ಗುರುಮಠಕಲ್ ಕ್ಷೇತ್ರದಿಂದ ಎರಡನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ರಾಜ್ಯ ಸಚಿವರಾಗಿ ನೇಮಕಗೊಂಡರು. 1980ರಲ್ಲಿ ಗುಂಡೂರಾವ್ ಸಂಪುಟದಲ್ಲಿ ಕಂದಾಯ ಸಚಿವರಾದರು. 1983 ರಲ್ಲಿ ಗುರುಮಠಕಲ್​ನಿಂದ ಕರ್ನಾಟಕ ವಿಧಾನಸಭೆಗೆ ಮೂರನೇ ಬಾರಿಗೆ ಆಯ್ಕೆಯಾದರು. 1985 ರಲ್ಲಿ, ಅವರು ಗುರುಮಠಕಲ್​ನಿಂದ ನಾಲ್ಕನೇ ಬಾರಿಗೆ ಗೆದ್ದು, ಕರ್ನಾಟಕ ವಿಧಾನಸಭೆಯ ವಿರೋಧ ಪಕ್ಷದ ಉಪನಾಯಕರಾಗಿ ನೇಮಕಗೊಂಡರು.


mallikarjun kharge emerging as top choice for congress president
ಕಾಂಗ್ರೆಸ್​ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ


ಹಿಂತಿರುಗಿ ನೋಡಲಿಲ್ಲ ಖರ್ಗೆ


1989ರಲ್ಲಿ ಗುರುಮಠಕಲ್​ನಿಂದ ಐದನೇ ಬಾರಿಗೆ ಗೆಲುವು ಸಾಧಿಸಿದರು. ಅದೇ ರೀತಿ 2004ರಲ್ಲಿ ಖರ್ಗೆ ಸತತ ಎಂಟನೇ ಬಾರಿಗೆ ವಿಧಾನಸಭೆ ಚುನಾವಣೆಯಲ್ಲಿ ಗೆದ್ದಿದ್ದರು. 2005 ರಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿ ನೇಮಕಗೊಂಡರು. 2008ರಲ್ಲಿ ಚಿತಾಪುರದಿಂದ ಸತತ ಒಂಬತ್ತನೇ ಬಾರಿಗೆ ವಿಧಾನಸಭೆಗೆ ಆಯ್ಕೆಯಾದರು. 2008ರಲ್ಲಿ ಖರ್ಗೆ ಎರಡನೇ ಬಾರಿಗೆ ವಿರೋಧ ಪಕ್ಷದ ನಾಯಕರಾಗಿ ನೇಮಕಗೊಂಡರು. 2009 ರಲ್ಲಿ, ಖರ್ಗೆ ಅವರು ಕಲಬುರಗಿ ಲೋಕಸಭಾ ಕ್ಷೇತ್ರದಿಂದ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದರು ಮತ್ತು ಸತತ ಹತ್ತನೇ ಚುನಾವಣೆಯಲ್ಲಿ ಗೆದ್ದರು.


ಮೋದಿ ಅಲೆಯಲ್ಲೂ ಸೋಲಲಿಲ್ಲ ಖರ್ಗೆ


ಮೋದಿ ಅಲೆಯ ನಡುವೆಯೂ ಖರ್ಗೆ ಅವರು 2014ರ ಲೋಕಸಭೆ ಚುನಾವಣೆಯಲ್ಲಿ ಕಲಬುರಗಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದಿದ್ದರು. ಅವರು ತಮ್ಮ ಎದುರಾಳಿಯಾಗಿದ್ದ ಬಿಜೆಪಿ ಪ್ರತಿಸ್ಪರ್ಧಿಯನ್ನು 13,404 ಮತಗಳಿಂದ ಸೋಲಿಸಿದರು. ಜೂನ್‌ನಲ್ಲಿ ಅವರನ್ನು ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷದ ನಾಯಕರನ್ನಾಗಿ ನೇಮಿಸಲಾಯಿತು. ಆದರೆ, 2019 ರಲ್ಲಿ ಖರ್ಗೆ ಗೆಲ್ಲಲು ಸಾಧ್ಯವಾಗಲಿಲ್ಲ. ಅಂದು ಅವರುಸುಮಾರು 95 ಸಾವಿರ ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಜಿ ಮಾಧವ್ ಅವರಿಂದ ಸೋತರು.


ಕರ್ನಾಟಕದಿಂದ ರಾಜ್ಯಸಭೆಗೆ


ಇದರ ನಂತರ, 12 ಜೂನ್ 2020 ರಂದು, ಖರ್ಗೆ ಅವರು ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾದರು. 2021ರ ಫೆಬ್ರವರಿಯಲ್ಲಿ ಖರ್ಗೆ ಅವರನ್ನು ವಿರೋಧ ಪಕ್ಷದ ನಾಯಕರನ್ನಾಗಿ ನೇಮಿಸಲಾಯಿತು. ಅವರು ಯುಪಿಎ ಸರ್ಕಾರದಲ್ಲಿ ಕೇಂದ್ರ ಕ್ಯಾಬಿನೆಟ್ ಸಚಿವರಾಗಿ ಕಾರ್ಮಿಕ ಮತ್ತು ಉದ್ಯೋಗ, ರೈಲ್ವೆ ಮತ್ತು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆಗಳನ್ನು ಹೊಂದಿದ್ದರು.


ತಮ್ಮ 7ನೇ ವಯಸ್ಸಿನಲ್ಲಿ ತಾಯಿಯನ್ನು ಕಳೆದುಕೊಂಡಿದ್ದ ಖರ್ಗೆ


ಮಲ್ಲಿಕಾರ್ಜುನ ಖರ್ಗೆ ಅವರು ತಮ್ಮ 7ನೇ ವಯಸ್ಸಿನಲ್ಲಿ ತಾಯಿ ಹಾಗೂ ಕೆಲವು ಕುಟುಂಬ ಸದಸ್ಯರನ್ನು ಕಳೆದುಕೊಂಡಿದ್ದರು. ಕೋಮು ಉದ್ವಿಗ್ನತೆಯಿಂದಾಗಿ, ಅವರು ತಾವು ಹುಟ್ಟಿ ಬರಳೆದ ಮನೆಯನ್ನು ತೊರೆದು ನೆರೆಯ ಜಿಲ್ಲೆ ಕಲ್ಬುರ್ಗಿಗೆ ಬರಬೇಕಾಯ್ತು. ಇದನ್ನು ಈ ಮೊದಲು ಗುಲ್ಬರ್ಗಾ ಎಂದು ಕರೆಯಲಾಗುತ್ತಿತ್ತು. ಓದಿನ ವೆಚ್ಚ ಭರಿಸಲು ಸಿನಿಮಾ ಥಿಯೇಟರ್​ನಲ್ಲಿ ಕೆಲಸವನ್ನೂ ಮಾಡುತ್ತಿದ್ದರು.


ಇದನ್ನೂ ಓದಿ: Mallikarjun Kharge: ಸ್ವಂತ ಕಾರಿಲ್ಲ, ಆಯುಧವಿಲ್ಲ: ಕಾಂಗ್ರೆಸ್​ ನೂತನ ಸಾರಥಿ ಖರ್ಗೆ ಹೆಸರಲ್ಲಿದೆ ಇಷ್ಟು ಆಸ್ತಿ


ಯಾರ ಪ್ರಭಾವವಿಲ್ಲದೇ ತಮ್ಮದೇ ಪರಿಶ್ರಮದಿಂದ ರಾಜಕೀಯ ಕ್ಷೇತ್ರದಲ್ಲಿ ಬೆಳೆದು ನಿಂತ ಈ ಹಿರಿಯ ರಾಜಕಾರಣಿ ಕಳೆದ 12 ಚುನಾವಣೆಗಳಲ್ಲಿ 11 ಬಾರಿ ಗೆದ್ದಿದ್ದಾರೆ. ಅವರು ಮೂರು ಬಾರಿ ಮುಖ್ಯಮಂತ್ರಿಯಾಗುವ ಅವಕಾಶ ಕಳೆದುಕೊಂಡಿದ್ದಾರೆ. ಅವರಿಗೆ 6 ಭಾಷೆಗಳ ಜ್ಞಾನವಿದೆ. ಖರ್ಗೆಯವರು 13 ಮೇ 1968 ರಂದು ರಾಧಾಬಾಯಿ ಅವರನ್ನು ವಿವಾಹವಾದರು ಮತ್ತು ಅವರಿಗೆ ಇಬ್ಬರು ಪುತ್ರಿಯರು ಮತ್ತು ಮೂವರು ಗಂಡು ಮಕ್ಕಳಿದ್ದಾರೆ.

Published by:Precilla Olivia Dias
First published: