ಕಳೆದ ಕೆಲವು ತಿಂಗಳುಗಳ ಹಿಂದೆ ರಿಷಿ ಸುನಕ್ (Rishi Sunak) ಎಂದರೆ ಯುಕೆಯ ಹಣಕಾಸು ಸಚಿವ (Finance Minister of the UK) ಅಂತ ಅಷ್ಟೇ ಜನರಿಗೆ ಗೊತ್ತಿತ್ತು. ಅದಕ್ಕೂ ಮೀರಿ ಇವರು ಇನ್ಫೋಸಿಸ್ ಸ್ಥಾಪಕ ನಾರಾಯಣ ಮೂರ್ತಿ (Narayana Murthy) ಮತ್ತು ಶಿಕ್ಷಕಿ ಮತ್ತು ಲೇಖಕಿ ಸುಧಾ ಮೂರ್ತಿ ಅವರ ಮಗಳಾದ ಅಕ್ಷತಾ ಮೂರ್ತಿಯ ಪತಿ ಅಂತ ತಿಳಿದಿತ್ತು ಎಂದು ಹೇಳಬಹುದು. ಆದರೆ ಟೋರಿ ಸಂಸದರ ನಡುವೆ ಗುರುವಾರ ನಡೆದ ಮತದಾನದಲ್ಲಿ, ಸುನಕ್ 101 ರ ಅನುಮೋದನೆಯನ್ನು ಪಡೆದರು. ಪೆನ್ನಿ ಮೊರ್ಡಾಂಟ್ 83, ಲಿಜ್ ಟ್ರಸ್ 64, ಕೆಮಿ ಬಡೆನೋಚ್ 49, ಟಾಮ್ ಟುಗೆಂಡಾಟ್ 32 ಮತ್ತು ಸುಯೆಲ್ಲಾ ಬ್ರೇವರ್ಮನ್ 27 ಮತಗಳನ್ನು (Vote) ಪಡೆದಿದ್ದಾರೆ.
ಯುಕೆಯ ರಾಜಕೀಯದಲ್ಲಿ ಭಾರೀ ಸಂಚಲನ ಸೃಷ್ಟಿಸಿರುವ ರಿಷಿ ಸುನಕ್
ಯುಕೆಯ ರಾಜಕೀಯದಲ್ಲಿ ಭಾರೀ ಸಂಚಲನ ಸೃಷ್ಟಿಸಿರುವ ರಿಷಿ ಸುನಕ್ ಅವರು ಬ್ರಿಟನ್ ಪ್ರಧಾನಿಯಾಗಿದ್ದ ಬೋರಿಸ್ ಜಾನ್ಸನ್ ರಾಜೀನಾಮೆ ನೀಡಿದ ಹಿನ್ನೆಲೆ ಇದೀಗ ಪ್ರಧಾನಿ ಹುದ್ದೆಗೇರಲು ಮುಂಚೂಣಿಯಲ್ಲಿದ್ದಾರೆ ಎಂದು ಹೇಳಬಹುದು.
ಈಗ ಪಿಎಂ ಅಭ್ಯರ್ಥಿಗಳ ರೇಸ್ನಲ್ಲಿ ಭಾರತ ಮೂಲದ ರಿಷಿ ಸುನಕ್ ಹೆಸರು ಕೂಡ ಕೇಳಿ ಬಂದಿದೆ. ರಿಷಿ ಸುನಕ್ ಅವರು ಮುಂದಿನ ಯುಕೆ ಪ್ರಧಾನ ಮಂತ್ರಿಯಾಗುವ ಎಲ್ಲಾ ಸಾಧ್ಯತೆಗಳು ಇದೆ ಎಂದು ಹೇಳಲಾಗುತ್ತಿದೆ. ಇವರು ಈ ಹಿಂದೆ ಯುಕೆಯ ಮೊದಲ ಹಿಂದೂ ಹಣಕಾಸು ಸಚಿವ, ಬ್ರಿಟನ್ ನ ಅತ್ಯಂತ ಶ್ರೀಮಂತ ಸಂಸದರಾಗಿದ್ದರು.
ಇದನ್ನೂ ಓದಿ: Population: ಭಾರತ vs ಚೀನಾ; ಜನಸಂಖ್ಯೆಯಲ್ಲಿ ಯಾರು ಮುಂದೆ? ಯಾರು ಹಿಂದೆ?
ರಿಷಿ ಅವರು ಕಳೆದ ವಾರವಷ್ಟೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು ಮತ್ತು ಮೂರು ದಿನಗಳ ನಂತರ ಪ್ರಧಾನಿ ಹುದ್ದೆಗೆ ಸ್ಪರ್ಧಿಸುತ್ತಿರುವುದಾಗಿ ಘೋಷಿಸಿ ಅದರಲ್ಲಿ ಸ್ಪರ್ಧಿಸಿದರು. ರಿಷಿ ಸುನಕ್ ಅವರು ಇತ್ತೀಚೆಗಷ್ಟೇ ಜುಲೈ 18 ರಂದು ಟಿವಿಯಲ್ಲಿ ಪ್ರಸಾರವಾದ ಒಂದು ಚರ್ಚೆಯಲ್ಲಿ ತಮ್ಮ ಕುಟುಂಬದ ಸಂಪತ್ತಿನ ಸುತ್ತಲಿನ ವಿವಾದವನ್ನು ಪ್ರಸ್ತಾಪಿಸಿದರು.
ಅತ್ತೆ-ಮಾವನ ಜೀವನದ ಬಗ್ಗೆ ಸುನಕ್ ಏನು ಹೇಳಿದ್ದಾರೆ ನೋಡಿ
ಯುಕೆಯ ಮಾಜಿ ಚಾನ್ಸಲರ್ ತಮ್ಮ ಕುಟುಂಬದ ತೆರಿಗೆ ವ್ಯವಸ್ಥೆಗಳ ಬಗ್ಗೆ ದೀರ್ಘಕಾಲದಿಂದ ಅನೇಕ ರೀತಿಯ ಪ್ರಶ್ನೆಗಳನ್ನು ಎದುರಿಸಿದ್ದಾರೆ. ಭಾನುವಾರ ಐಟಿವಿ ಪ್ರಸಾರ ಮಾಡಿದ ಚರ್ಚೆಯಲ್ಲಿ, ಸುನಕ್ ತನ್ನ ಅತ್ತೆ-ಮಾವನ ಜೀವನದ ಪ್ರಯಾಣದ ಬಗ್ಗೆ ಎಷ್ಟು ಹೆಮ್ಮೆ ಪಡುತ್ತಾರೆ ಎಂಬುದರ ಬಗ್ಗೆ ಮನಬಿಚ್ಚಿ ಮಾತನಾಡಿದರು.
"ನನ್ನ ಮಾವನವರ ಕೈಯಲ್ಲಿ ಏನೂ ಇರಲಿಲ್ಲ, ಸಂಪೂರ್ಣವಾಗಿ ಶೂನ್ಯದಿಂದ ಬಂದವರು ಮತ್ತು ನನ್ನ ಅತ್ತೆಯ ಉಳಿತಾಯದ ಹಣದಿಂದ ಚಿಕ್ಕದಾಗಿ ಒಂದು ಕನಸನ್ನು ಹೊಂದಿದ್ದರು" ಎಂದು ಸುನಕ್ ಹೇಳಿದರು. "ಅಲ್ಲಿಂದ, ಅವರು ವಿಶ್ವದ ಅತಿದೊಡ್ಡ, ಅತ್ಯಂತ ಗೌರವಾನ್ವಿತ ಕಂಪನಿಗಳಲ್ಲಿ ಒಂದನ್ನು ನಿರ್ಮಿಸಿರುವುದು ತುಂಬಾನೇ ಹೆಮ್ಮೆಯ ವಿಷಯ. ಅಂದ ಹಾಗೆ, ಯುಕೆಯಲ್ಲಿ ಸಹ ಸಾವಿರಾರು ಜನರಿಗೆ ಕಂಪನಿಯು ಉದ್ಯೋಗ ನೀಡಿದೆ" ಎಂದು ಹೇಳಿದರು.
ರಿಷಿ ಸುನಕ್ ಬಗ್ಗೆ ಜೆರೋಧಾ ಸಹ-ಸಂಸ್ಥಾಪಕ ನಿಖಿಲ್ ಕಾಮತ್ ಹೇಳಿದ್ದು ಹೀಗೆ
"ಇದು ನಾನು ನಿಜವಾಗಿಯೂ ಹೆಮ್ಮೆ ಪಡುವ ಕಥೆಯಾಗಿದೆ ಮತ್ತು ಪ್ರಧಾನಿಯಾಗಿ ನಾವು ನಮ್ಮ ಮನೆಯಲ್ಲಿ ಅಂತಹ ಹೆಚ್ಚಿನ ಕಥೆಗಳನ್ನು ರಚಿಸಬಹುದು ಎಂದು ಖಚಿತಪಡಿಸಿಕೊಳ್ಳಲು ನಾನು ಬಯಸುತ್ತೇನೆ" ಎಂದು ಅವರು ಹೇಳಿದರು. ಕನ್ಸರ್ವೇಟಿವ್ ಪಕ್ಷದ ನಾಯಕರಾಗಿ ಬೋರಿಸ್ ಜಾನ್ಸನ್ ಅವರ ರಾಜೀನಾಮೆಯ ನಂತರದ ಸ್ಥಾನಕ್ಕೆ ಸುನಕ್ ಅಗ್ರ ಸ್ಪರ್ಧಿಯಾಗಿ ಹೊರ ಹೊಮ್ಮಿದ್ದಾರೆ.
ಇದನ್ನೂ ಓದಿ: Rashtrapati Bhavan: ರಾಷ್ಟ್ರಪತಿ ಭವನದ ಭೋಜನ ಕೂಟ ಸಂದರ್ಭ ನೀಲಿ, ಹಸಿರು, ಕೆಂಪು ಬೆಳಕು! ಏನಿದರ ಅರ್ಥ?
ಜೆರೋಧಾ ಸಹ-ಸಂಸ್ಥಾಪಕ ನಿಖಿಲ್ ಕಾಮತ್ ಇತ್ತೀಚೆಗೆ ಬೋರಿಸ್ ಜಾನ್ಸನ್ ಅವರ ಬದಲಿಗೆ ಕನ್ಸರ್ವೇಟಿವ್ ನಾಯಕ ಮತ್ತು ಬ್ರಿಟನ್ ಪ್ರಧಾನಿಯಾಗಿ ರೇಸ್ ನಲ್ಲಿ ಮುಂಚೂಣಿಯಲ್ಲಿರುವ ರಿಷಿ ಸುನಕ್ ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಇವರಿಬ್ಬರ ಫೋಟೋವನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿರುವ ಜೆರೋಧಾ ಸಿಐಒ ಅವರು "75 ವರ್ಷಗಳ ಹಿಂದೆ ಎಂದರೆ ಆಗಸ್ಟ್ 15, 1947 ರಂದು, ಭಾರತೀಯ ಮೂಲದ ವ್ಯಕ್ತಿಯೊಬ್ಬ ಮುಂದೊಂದು ದಿನ ಬ್ರಿಟನ್ ನ ಪ್ರಧಾನಿಯಾಗಬಹುದು ಎಂದು ಯಾರು ಭಾವಿಸಿದ್ದರು" ಎಂದು ಹೆಮ್ಮೆಯಿಂದ ಬರೆದುಕೊಂಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ