ISIS ಗೆ ನೂತನ ಮುಖ್ಯಸ್ಥ! ಅಬು ಅಲ್ ಹಸನ್ ಅಲ್ ಹಾಶಿಮಿ ಅಲ್ ಖುರೇಷಿಗೆ ಉಗ್ರ ಸಂಘಟನೆಯ ನೇತೃತ್ವ

ಸಿರಿಯಾ ಮತ್ತು ಇರಾಕ್ ಉದ್ದಕ್ಕೂ ತಮ್ಮದೇ ಸಾಮ್ರಾಜ್ಯ ಸ್ಥಾಪಿಸಿ, ಆಡಳಿತ ನಡೆಸುತ್ತಿದ್ದ ಐಸಿಸ್‌ಗೆ ಖುರೇಷಿಯ ಸಾವು ಮತ್ತೊಂದು ಭಾರಿ ಹಿನ್ನಡೆಯಾಗಿದೆ ಎಂದು ಅಮೆರಿಕ ಹೇಳಿಕೊಂಡಿದೆ.

ಐಸಿಸ್

ಐಸಿಸ್

  • Share this:
ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಆ್ಯಂಡ್ ಸಿರಿಯಾ ಭಯೋತ್ಪಾದಕ ಸಂಘಟನೆ (ISIS Terrorist) ತನ್ನ ನೂತನ ಮುಖ್ಯಸ್ಥನ ಹೆಸರನ್ನು ಬಹಿರಂಗಪಡಿಸಿದೆ. ಈ ಹಿಂದಿನ ಮುಖ್ಯಸ್ಥನಾಗಿದ್ದ ಅಬು ಇಬ್ರಾಹಿಂ ಅಲ್ ಹಾಶಿಮಿ ಅಲ್ ಖುರೇಷಿ ಮತ್ತು ವಕ್ತಾರ ಅಬು ಹಮ್ಜಾ ಅಲ್ ಖುರೇಷಿ ಇಬ್ಬರೂ ಮೃತಪಟ್ಟಿದ್ದಾಗಿ ಐಸಿಸ್ ತಿಳಿಸಿದ್ದು, ನೂತನ ಮುಖ್ಯಸ್ಥನನ್ನಾಗಿ ಅಬು ಅಲ್ ಹಸನ್ ಅಲ್ ಹಾಶಿಮಿ ಅಲ್ ಖುರೇಷಿ (Al-Qurayshi) ಎಂಬುವನನ್ನು ನೇಮಕ ಮಾಡಿದ್ದಾಗಿ ಘೋಷಿಸಿದೆ. ಇರಾಕಿನ ಮಾಜಿ ನಾಯಕ ಸದ್ದಾಂ ಹುಸೇನ್‌ನ ಸೇನೆಯ ಧಾರ್ಮಿಕ ವಿದ್ವಾಂಸ ಮತ್ತು ಸೈನಿಕನಾಗಿ ಎರಡು ವರ್ಷಗಳ ಕಾಲ ಐಸಿಸ್ ಅನ್ನು ಮುನ್ನಡೆಸಿದ ಖುರೇಶಿಯನ್ನು 2022ರ ಫೆಬ್ರವರಿಯಲ್ಲಿ ಅಮೆರಿಕ  ಸೇನಾಪಡೆ (America Army ) ಸಿರಿಯಾದಲ್ಲಿ (Syria) ಹತ್ಯೆಗೈದಿದೆ.

ಈ ಬಗ್ಗೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಈಗಾಗಲೇ ಮಾಹಿತಿ ನೀಡಿದ್ದರು. ಉತ್ತರ ಸಿರಿಯಾದಲ್ಲಿ ಅಮೆರಿಕ ಪಡೆಗಳು ನಡೆಸಿದ ವೈಮಾನಿಕ ದಾಳಿಯಲ್ಲಿ ಆತ ಮತ್ತು ಆತನ ಕುಟುಂಬ ಮೃತಪಟ್ಟಿದ್ದಾಗಿ ಅಮೆರಿಕ ಆಡಳಿತ ಹೇಳಿತ್ತು.

ಅಮೆರಿಕವೇ ಕಾರಣವಾಯಿತಾ?
ಇದೀಗ ಐಸಿಸ್, ಹಾಶಿಮಿ ಅಲ್ ಖುರೇಷಿ ಮೃತಪಟ್ಟಿದ್ದಾಗಿ ತಿಳಿಸಿದ್ದರೂ ಕೂಡ ಆತನನ್ನು ಕೊಂದಿದ್ದು ಅಮೆರಿಕ ಸೇನೆ ಎಂಬುದನ್ನು ಎಲ್ಲಿಯೂ ಹೇಳಿಲ್ಲ. ಈಶಾನ್ಯ ಸಿರಿಯಾದ ನಗರವಾದ ಹಸಾಕಾದ ಘುವೈರಾನ್ ಜೈಲಿನ ಮೇಲೆ ನಡೆಸಲಾದ ದಾಳಿಯಲ್ಲಿ ಎಂದು ತಿಳಿಸಿದ್ದಾರೆ.

ದಾಳಿಯಲ್ಲಿ ಮೃತಪಟ್ಟವರೆಷ್ಟು?
ಈ ದಾಳಿ ಜನವರಿಯಲ್ಲಿ ನಡೆದಿತ್ತು. ಬಂಧಿತ ಉಗ್ರರನ್ನು ಬಿಡುಗಡೆ ಮಾಡುವಂತೆ ಐಸಿಸ್ ಭಯೋತ್ಪಾದಕರು ಜೈಲಿನ ಮೇಲೆ ದಾಳಿ ಮಾಡಿದ್ದರು. ಇದರಲ್ಲಿ ಸುಮಾರು 200ಕ್ಕೂ ಹೆಚ್ಚು ಕೈದಿಗಳು, 30ಕ್ಕೂ ಅಧಿಕ ಭದ್ರತಾ ಸಿಬ್ಬಂದಿ ಮತ್ತೂ ಕೆಲವು ಭಯೋತ್ಪಾದಕರೂ ಸಾವನ್ನಪ್ಪಿದ್ದರು ಎಂದು ಹೇಳಿದ್ದಾರೆ.

ಇದನ್ನೂ ಓದಿ: Endurance Found: ರಿಯಲ್ ಟೈಟಾನಿಕ್ ಕಥೆ.. 107 ವರ್ಷಗಳ ಹಿಂದೆ ಮುಳುಗಿದ್ದ ಹಡಗಿನ ಅವಶೇಷಗಳು ಪತ್ತೆ..!

ಹಿಂಸಾತ್ಮಕ ಸುನ್ನಿ ಮುಸ್ಲಿಂ ಗುಂಪು 2019 ರಲ್ಲಿಇದೇ ರೀತಿಯ ದಾಳಿಯಲ್ಲಿ ದೀರ್ಘಕಾಲದ ನಾಯಕ ಮನುಕುಲದ ಹೆಮ್ಮಾರಿ, ರಕ್ತ ಪಿಪಾಸು ಐಸಿಸ್ ಮುಖಂಡ ಅಬು ಬಕರ್ ಅಲ್-ಬಾಗ್ದಾದಿ ಸಾವನ್ನಪ್ಪಿದ್ದರು. ಇದಾದ ನಂತರ 45 ವರ್ಷದ ಖುರೇಷಿಯ ಸಾವು ಹಿಂಸಾತ್ಮಕ ಗುಂಪಿಗೆ ಮತ್ತೊಂದು ಆಘಾತಕಾರಿ ಹೊಡೆತವಾಗಿದೆ.

ಖುರೇಷಿ ಸಾವು ಭಾರೀ ಹಿನ್ನೆಡೆ
ಖುರೇಷಿ ಹತೈಗೈಯಲು ಅಮೆರಿಕ ಸೇನಾ ಪಡೆಗಳು ಈ ದಾಳಿಗೆ ಸುಮಾರು ಒಂದು ತಿಂಗಳಿನಿಂದ ಹೆಲಿಕಾಪ್ಟರ್ ಹಾರಾಟ ನಡೆಸಿ ಸತತ ತಾಲೀಮು ನಡೆಸಿತ್ತು. ಟರ್ಕಿ ಗಡಿಯಲ್ಲಿನ ಸಿರಿಯಾದ ಪಟ್ಟಣದಲ್ಲಿನ ವಸತಿ ಸಂಕೀರ್ಣದ ಮೂರನೇ ಮಹಡಿಯಲ್ಲಿ ಖುರೇಷಿ, ತನ್ನ ಕುಟುಂಬದ ಜತೆಗೆ ನೆಲೆಸಿರುವ ಬಗ್ಗೆ ಅಮೆರಿಕ ಸೇನೆಗೆ ನಿಖರ ಮಾಹಿತಿ ಇತ್ತು.

ಸಿರಿಯಾ ಮತ್ತು ಇರಾಕ್ ಉದ್ದಕ್ಕೂ ತಮ್ಮದೇ ಸಾಮ್ರಾಜ್ಯ ಸ್ಥಾಪಿಸಿ, ಆಡಳಿತ ನಡೆಸುತ್ತಿದ್ದ ಐಸಿಸ್‌ಗೆ ಖುರೇಷಿಯ ಸಾವು ಮತ್ತೊಂದು ಭಾರಿ ಹಿನ್ನಡೆಯಾಗಿದೆ ಎಂದು ಅಮೆರಿಕ ಹೇಳಿಕೊಂಡಿದೆ.

ಮೊದಲು ಒಪ್ಪಿಕೊಂಡಿರಲೇ ಇಲ್ಲ!
ಭಯೋತ್ಪಾದಕ ಗುಂಪುಗಳನ್ನು ನಿರ್ನಾಮ ಮಾಡುವಲ್ಲಿ 'ಇಸ್ಲಾಮಿಕ್ ಸ್ಟೇಟ್'ನ ಕಿಂಗ್‌ಪಿನ್‌ ಹತ್ಯೆ ಮೊದಲ ಹಾಗೂ ದೊಡ್ಡ ಹೆಜ್ಜೆ ಎಂಬುದರಲ್ಲಿ ಅನುಮಾನವೇ ಇಲ್ಲ. ಅಮೆರಿಕ ಖುರೇಷಿ ಸಾವನ್ನು ದೃಢಪಡಿಸಿತ್ತಾದರೂ, ಐಸಿಸ್ ಯುಎಸ್ ಹೇಳಿಕೆಯನ್ನು ಒಪ್ಪಿಕೊಂಡಿರಲಿಲ್ಲ. ಸದ್ಯ ಐಸಿಸ್ ಪ್ರಸ್ತುತ ತಮ್ಮ ನಾಯಕನ ಸಾವನ್ನು ಬಹಿರಂಗ ಮಾಡಿದ್ದು, ಮುಂದಿನ ಮುಖ್ಯಸ್ಥನ ಬಗ್ಗೆಯೂ ತಿಳಿಸಿದೆ.

ಚಲನವಲನದ ಮೇಲೆ ನಿಗಾ!
ಕಳೆದ ಏಪ್ರಿಲ್‌ನಲ್ಲಿ ಇರಾಕ್‌ನಲ್ಲಿ ನಡೆದ ವಾಯುದಾಳಿಯಲ್ಲಿ ಅಲ್-ಬಾಗ್ದಾದಿಯ 2ನೇ ಹಂತದ ನಾಯಕ ಹತನಾಗಿದ್ದನು. ಬಾಗ್ದಾದಿಯ ಚಲನವಲನಗಳ ಮೇಲೆ ನಿಗಾ ಇರಿಸಿದ್ದ ಸಿರಿಯಾ, ರಷ್ಯಾ, ಟರ್ಕಿ ಗುಪ್ತಚರರು ಅಮೆರಿಕದ ಗುಪ್ತಚರ ಸಂಸ್ಥೆ ಸಿಐಎಗೆ ಮಾಹಿತಿ ರವಾನಿಸಿದ್ದರು. ಇದನ್ನು ಆಧರಿಸಿ ಅಮೆರಿಕ ಪಡೆಗಳು ಬಾಗ್ದಾದಿಯನ್ನು ಹತ್ಯೆ ಮಾಡಿದವು.

ಇದನ್ನೂ ಓದಿ: Belagavi: ಭಾರತ- ಜಪಾನ್ ಸೈನಿಕರ ಸಮರಾಭ್ಯಾಸ, ಉಗ್ರರ ವಿರುದ್ಧ ಕಾರ್ಯಾಚರಣೆಯ ಅಣಕು ಪ್ರದರ್ಶನ

ಒಟ್ಟಾರೆ ವಿಶ್ವಕ್ಕೆ ಕಂಟಕವಾಗಿರುವ ಐಸಿಸ್ ನಾಯಕನ ಹತ್ಯೆಯನ್ನು ಅವರ ಪಡೆಗಳೇ ಅಧಿಕೃತವಾಗಿ ಘೋಷಿಸಿದೆ. ಮತ್ತು ತನ್ನ ಸಾರಥ್ಯ ಮುನ್ನಡೆಸಲು ಮತ್ತೊಬ್ಬ ನಾಯಕನಿಗೆ ಚುಕ್ಕಾಣಿ ನೀಡಿದೆ.
Published by:guruganesh bhat
First published: