• Home
 • »
 • News
 • »
 • national-international
 • »
 • Rahul Gandhi: ಜೆ.ಪಿ. ನಡ್ಡಾ ಯಾರು, ನನ್ನ ಪ್ರಾಧ್ಯಾಪಕರೇ, ಅವರಿಗೇಕೆ ನಾನು ಉತ್ತರಿಸಲಿ?; ರಾಹುಲ್ ಗಾಂಧಿ ಕಿಡಿ

Rahul Gandhi: ಜೆ.ಪಿ. ನಡ್ಡಾ ಯಾರು, ನನ್ನ ಪ್ರಾಧ್ಯಾಪಕರೇ, ಅವರಿಗೇಕೆ ನಾನು ಉತ್ತರಿಸಲಿ?; ರಾಹುಲ್ ಗಾಂಧಿ ಕಿಡಿ

ರಾಹುಲ್ ಗಾಂಧಿ.

ರಾಹುಲ್ ಗಾಂಧಿ.

ನಾನು ನರೇಂದ್ರ ಮೋದಿ ಅಥವಾ ಯಾರಿಗೂ ಹೆದರುವುದಿಲ್ಲ. ಅವರಿಗೆ ನನ್ನನ್ನು ಮುಟ್ಟಲೂ ಸಹ ಸಾಧ್ಯವಿಲ್ಲ. ಅಗತ್ಯವಿದ್ದರೆ, ನನ್ನ ಮೇಲೆ ಹೆಚ್ಚೆಂದರೆ ಇವರು ಗುಂಡು ಹಾರಿಸಿ ಕೊಲ್ಲಬಹುದಷ್ಟೆ. ನಾನು ದೇಶಭಕ್ತ ಮತ್ತು ನನ್ನ ದೇಶವನ್ನು ಕೊನೆಯವರೆಗೆ ರಕ್ಷಿಸಲು ಯತ್ನಿಸುತ್ತೇನೆ. ಇದು ನನ್ನ ಧರ್ಮ. ನಾನು ಅವರಿಗಿಂತ ಹೆಚ್ಚು ಧರ್ಮಿಷ್ಠ ಎಂದು ರಾಹುಲ್ ಗಾಂಧಿ ಕಿಡಿಕಾರಿದ್ದಾರೆ.

ಮುಂದೆ ಓದಿ ...
 • Share this:

  ನವ ದೆಹಲಿ: ಭಾರತದಲ್ಲಿ ಇದೀಗ ಎರಡು ವಿಚಾರಗಳು ಭಾರೀ ದೊಡ್ಡ ಸದ್ದು ಮಾಡುತ್ತಿದೆ. ಒಂದೆಡೆ ಕೇಂದ್ರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೇಶದ ರೈತರು ಕಳೆದ ಹಲವು ದಿನಗಳಿಂದ ದೆಹಲಿ ಹೊರ ವಲಯಲ್ಲಿ ಹೋರಾಟ ನಡೆಸುತ್ತಿದ್ದಾರೆ. ಮತ್ತೊಂದೆಡೆ ಚೀನಾ ಅರುಣಾಚಲ ಪ್ರದೇಶದಲ್ಲಿ ಭಾರತದ ಗಡಿಯನ್ನು ಅತಿಕ್ರಮಿಸಿದ್ದು, ಪುಟ್ಟ ಗ್ರಾಮವನ್ನೇ ನಿರ್ಮಿಸಿಕೊಂಡಿದೆ. ಆದರೆ, ಈ ಎರಡೂ ವಿಚಾರ ಇದೀಗ ಕಾಂಗ್ರೆಸ್​ ಮಾಜಿ ರಾಷ್ಟ್ರ್ರಾಧ್ಯಕ್ಷ ರಾಹುಲ್ ಗಾಂಧಿ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡಾ ನಡುವೆ ಟ್ವಿಟರ್​ ವಾರ್​ಗೆ ಕಾರಣವಾಗಿದೆ. ಅಸಲಿಗೆ ಈ ಎರಡೂ ವಿಚಾರಗಳನ್ನೂ ಉಲ್ಲೇಖಿಸಿ ರಾಹುಲ್ ಮಾಡಿದ್ದ ಟ್ವೀಟ್​ಗೆ ಪ್ರತಿಕ್ರಿಯಿಸಿದ್ದ ಜೆಪಿ ನಡ್ಡಾ, "ರಾಹುಲ್ ತಮ್ಮ ಮಾಸಿಕ ರಜೆಯನ್ನು ಮುಗಿಸಿ ಈಗ ಹಿಂದಿರುಗಿದ್ದಾರೆಯೇ?.  ನಾನು ಅವರಿಗೆ ಕೆಲವು ಪ್ರಶ್ನೆಗಳನ್ನು ಕೇಳಲು ಬಯಸುತ್ತೇನೆ. ಅವರ ಇಂದಿನ ಪತ್ರಿಕಾಗೋಷ್ಠಿಯಲ್ಲಿ ಅವರು ಉತ್ತರಿಸುತ್ತಾರೆ ಎಂದು ನಾನು ಭಾವಿಸುತ್ತೇನೆ" ಎಂದು ಕಾಲೆಳೆಯಲು ಪ್ರಯತ್ನಿಸಿದ್ದರು. ಆದರೆ, ಇದಕ್ಕೆ ಉತ್ತರ ನೀಡಿರುವ ರಾಹುಲ್ ಗಾಂಧಿ, "ಜೆಪಿ ನಡ್ಡಾ ಯಾರು? ಅವರೇನು ನನ್ನ ಪ್ರಾಧ್ಯಾಪಕರೇ? ಅವರಿಗೇಕೆ ನಾನು ಉತ್ತರ ನೀಡಲಿ? ಎಂದು ಕಿಡಿಕಾರಿದ್ದಾರೆ.  ಸರಣಿ ಟ್ವೀಟ್ ಮೂಲಕ ರಾಹುಲ್ ಗಾಂಧಿಯನ್ನು ಕೆಣಕಿದ್ದ ಜೆ.ಪಿ. ನಡ್ಡಾ, "ರಾಹುಲ್ ಗಾಂಧಿ ಕುಟುಂಬ ಮತ್ತು ಕಾಂಗ್ರೆಸ್ ಚೀನಾ ಪರವಾಗಿರುವುದನ್ನು ಯಾವಾಗ ನಿಲ್ಲಿಸುತ್ತದೆ? ಅವರು ಉಲ್ಲೇಖಿಸುತ್ತಿರುವ ಅರುಣಾಚಲ ಪ್ರದೇಶ ಸೇರಿದಂತೆ ಸಾವಿರಾರು ಕಿ.ಮೀ.ಗಳನ್ನು ಚೀನಿಯರಿಗೆ ಉಡುಗೊರೆಯಾಗಿ ಪಂಡಿತ್ ನೆಹರೂ ನೀಡಿದ್ದಾರೆಯೆ ಹೊರತು ಬೇರೆ ಯಾರೂ ಅಲ್ಲ. ಇದನ್ನು ಅವರು ನಿರಾಕರಿಸುತ್ತಾರೆಯೆ? ಎಲ್ಲಾ ವಿಚಾರದಲ್ಲೂ ಕಾಂಗ್ರೆಸ್ ಚೀನಾಗೆ ಶರಣಾಗುವುದು ಏಕೆ?" ಎಂದು ಟ್ವೀಟ್ ಮಾಡಿದ್ದರು.  ಮತ್ತೊಂದು ಟ್ವೀಟ್​ನಲ್ಲಿ, "ರಾಹುಲ್ ಗಾಂಧಿ ರೈತರನ್ನು ಪ್ರಚೋದಿಸುವ ಮತ್ತು ದಾರಿತಪ್ಪಿಸುವ ಆರೋಪಗಳು ಡಬಲ್ ಸ್ಟ್ಯಾಂಡರ್ಡ್ ಆಗಿದೆ. ಕಾಂಗ್ರೆಸ್ ಸರ್ಕಾರಗಳ ಅಡಿಯಲ್ಲಿ ದಶಕಗಳಿಂದ ರೈತರು ಯಾಕೆ ಬಡವರಾಗಿದ್ದರು? ಪ್ರತಿಪಕ್ಷಗಳಲ್ಲಿ ಇದ್ದಾಗ ಮಾತ್ರ ಅವರು ರೈತರ ಬಗ್ಗೆ ಸಹಾನುಭೂತಿ ಹೊಂದಿದ್ದಾರೆ?. ಯುಪಿಎ ಸರ್ಕಾರವು ಸ್ವಾಮಿನಾಥನ್ ಆಯೋಗದ ವರದಿಯನ್ನು ವರ್ಷಗಳ ಕಾಲ ಏಕೆ "ಸ್ಥಗಿತಗೊಳಿಸಿತು" ಮತ್ತು ಕನಿಷ್ಠ ಬೆಂಬಲ ಬೆಲೆಯನ್ನು (ಎಂಎಸ್ಪಿ) ಹೆಚ್ಚಿಸಲಿಲ್ಲ" ಎಂದು ಪ್ರಶ್ನಿಸಿದ್ದರು.


  ಅಲ್ಲದೆ, "ಚೀನಾ ಮತ್ತು ಕಮ್ಯೂನಿಸ್ಟ್​ ಪಕ್ಷದ ಜೊತೆಗಿನ ತಮ್ಮ ಒಪ್ಪಂದವನ್ನು ರದ್ದುಗೊಳಿಸುವ ಉದ್ದೇಶ ಕಾಂಗ್ರೆಸ್​ಗೆ ಇದೆಯೇ? ಕಾಂಗ್ರೆಸ್​ ನೀತಿಗಳು ಚೀನಾದಿಂದ ಹರಿದು ಬರುವ ಹಣ ಮತ್ತು ಒಪ್ಪಂದದ ಪ್ರಕಾರ ನಿರ್ದೇಶಿಸಲ್ಪಡುತ್ತದೆ. ಕೋವಿಡ್​ 19 ಹೋರಾಟದಲ್ಲೂ ರಾಹುಲ್ ಗಾಂಧಿ ದೇಶವನ್ನು ಕೆಳಮಟ್ಟಕ್ಕೆ ಇಳಿಸುವ ಪ್ರಯತ್ನಕ್ಕೆ ಮುಂದಾಗಿದ್ದರು. ಕೊರೋನಾ ವೈರಸ್​ಗೆ ಲಸಿಕೆಯನ್ನು ಸಂಶೋಧಿಸಿದ ವಿಜ್ಞಾನಿಗಳಿಗೆ ಕನಿಷ್ಟ ಅಭಿನಂದನೆಗಳನ್ನೂ ಸಲ್ಲಿಸಿಲ್ಲ" ಎಂದು ಆರೋಪಿಸಿದ್ದರು.


  ಆದರೆ ಜೆ.ಪಿ. ನಡ್ಡಾ ಅವರ ಆರೋಪಕ್ಕೆ ಪ್ರತಿಕ್ರಿಯಿಸಿರುವ ರಾಹುಲ್ ಗಾಂಧಿ, "ಅವರ್ಯಾರು? ಅವರ ಪ್ರಶ್ನೆಗಳಿಗೆ ನಾನ್ಯಾಕೆ ಉತ್ತರಿಸಬೇಕು? ಅವರು ನನ್ನ ಪ್ರಾಧ್ಯಾಪಕನೇ? ನಾನು ದೇಶಕ್ಕೆ ಉತ್ತರಿಸುತ್ತೇನೆ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.


  ಇದನ್ನೂ ಓದಿ: Mamata Banerjee; ಮಾವೋವಾದಿಗಳಿಗಿಂತ ಬಿಜೆಪಿ ಹೆಚ್ಚು ಅಪಾಯಕಾರಿ: ಮಮತಾ ಬ್ಯಾನರ್ಜಿ ಆಕ್ರೋಶ


  "ರೈತರ ವಾಸ್ತವ ಸಮಸ್ಯೆಗಳು ನನಗೆ ತಿಳಿದಿದೆ. ರಾಹುಲ್ ಗಾಂಧಿ ಏನು ಮಾಡುತ್ತಾರೆಂದು ಎಲ್ಲಾ ರೈತರಿಗೆ ತಿಳಿದಿದೆ. 2011 ರಲ್ಲಿ ನಾನು ಉತ್ತರಪ್ರದೇಶದ ಇದೇ ಭಟ್ಟ ಪಾರ್ಸೌಲ್​ನಿಂದ ​ಭೂಸ್ವಾಧೀನ ವಿರುದ್ಧದ ಆಂದೋಲನದಲ್ಲಿ ರೈತರನ್ನು ಬೆಂಬಲಿಸಿ ಹೋರಾಟದಲ್ಲಿ ಭಾಗಿಯಾಗಿದ್ದೆ. ಆಗ ಈ ಜೆ.ಪಿ. ನಡ್ಡಾ ಎಲ್ಲಿದ್ದರು?


  ನಾನು ನರೇಂದ್ರ ಮೋದಿ ಅಥವಾ ಯಾರಿಗೂ ಹೆದರುವುದಿಲ್ಲ. ಅವರಿಗೆ ನನ್ನನ್ನು ಮುಟ್ಟಲೂ ಸಹ ಸಾಧ್ಯವಿಲ್ಲ. ಅಗತ್ಯವಿದ್ದರೆ, ನನ್ನ ಮೇಲೆ ಹೆಚ್ಚೆಂದರೆ ಇವರು ಗುಂಡು ಹಾರಿಸಿ ಕೊಲ್ಲಬಹುದಷ್ಟೆ. ನಾನು ದೇಶಭಕ್ತ ಮತ್ತು ನನ್ನ ದೇಶವನ್ನು ಕೊನೆಯವರೆಗೆ ರಕ್ಷಿಸಲು ಯತ್ನಿಸುತ್ತೇನೆ. ಇದು ನನ್ನ ಧರ್ಮ. ನಾನು ಅವರಿಗಿಂತ ಹೆಚ್ಚು ಧರ್ಮಿಷ್ಠ" ಎಂದು ರಾಹುಲ್ ಗಾಂಧಿ ಕಿಡಿಕಾರಿದ್ದಾರೆ.

  Published by:MAshok Kumar
  First published: