Gita Gopinath: ಗೀತಾ ಗೋಪಿನಾಥ್‍ ಪತಿ ಯಾರು ಗೊತ್ತಾ ? ಇಲ್ಲಿದೆ ಸಾಧಕಿ ಕುಟುಂಬದ ಮಾಹಿತಿ

Gita Gopinath: ಗೀತಾ ಗೋಪಿನಾಥ್ ಪತಿ ಇಕ್ಬಾಲ್ ಧಲಿವಾಲ್ 1972ರಲ್ಲಿ ಜನಿಸಿದರು. ತಂದೆ ಬೆಂಗಳೂರಿನಲ್ಲಿ ಗಡಿ ಭದ್ರತಾ ಪಡೆಯಲ್ಲಿದ್ದರು. ತಾಯಿ ಶಿಕ್ಷಕಿ. ಇರುವ ಒಬ್ಬ ಸಹೋದರಿಯು ವೈದ್ಯರಾಗಿದ್ದಾರೆ.

ಕುಟುಂಬದೊಂದಿಗೆ ಗೀತಾ ಗೋಪಿನಾಥ್

ಕುಟುಂಬದೊಂದಿಗೆ ಗೀತಾ ಗೋಪಿನಾಥ್

  • Share this:
ಭಾರತೀಯ-ಅಮೆರಿಕನ್ ಗೀತಾ ಗೋಪಿನಾಥ್, ( Gita Gopinath)ಅಂತಾರಾಷ್ಟ್ರೀಯಮಾನಿಟರಿ ಫಂಡ್ (ಐಎಂಎಫ್) ನಲ್ಲಿ ಮುಖ್ಯ ಅರ್ಥಶಾಸ್ತ್ರಜ್ಞ (Chief Economist )ಜಿಫ್ರಿ ಒಕಾಮೊಟೊ (Geoffrey Okamoto)ನಂತರ ಐಎಂಎಫ್‌ನ ಮೊದಲ ಉಪವ್ಯವಸ್ಥಾಪಕ ನಿರ್ದೇಶಕರಾಗಿ (Managing Director)ನೇಮಕಗೊಂಡಿದ್ದಾರೆ. ಮಹಿಳೆಯೊಬ್ಬರು ಈ ಹುದ್ದೆಗೆ ಮುಖ್ಯಸ್ಥರಾಗಿರುವುದು ಇದೇ ಮೊದಲು. ಅವರು ಐಎಂಎಫ್‌ನ ಮೊದಲ ಮಹಿಳಾ ಮುಖ್ಯ ಅರ್ಥಶಾಸ್ತ್ರಜ್ಞೆಯೂ ಆಗಿರುವುದು ಮತ್ತಷ್ಟು ಹೆಮ್ಮೆ.ಗೀತಾ ಅತ್ಯುತ್ತಮ ಜೀವನ ಸಂಗಾತಿಯನ್ನು ಹೊಂದಿದ್ದಕ್ಕಾಗಿ ನಾನು ದೇವರಿಗೆ ಕೃತಜ್ಞನಾಗಿದ್ದೇನೆ(grateful). ಗೀತಾ ಪ್ರತಿದಿನ ಕೆಲಸಕ್ಕೆ ಹೋಗುತ್ತಾಳೆ. ಗಂಡನ ಬೆಂಬಲವಿಲ್ಲದೆ ಮಹಿಳೆ ಯಶಸ್ವಿಯಾಗುವುದು ಸುಲಭವಲ್ಲ ಎಂದು ಗೀತಾ ತಾಯಿ ವಿಜಯಲಕ್ಷ್ಮೀ(Vijayalakshmi) ಹೇಳಿದರು.

ಒಂದೇ ಬಸ್‍ನಲ್ಲಿ ಪ್ರಯಾಣ
ಗೀತಾ ದೆಹಲಿ ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿದ್ದಾಗ ತಮ್ಮ ಭಾವಿ ಪತಿ ಇಕ್ಬಾಲ್ ಸಿಂಗ್ ಧಲಿವಾಲ್‌ರನ್ನು ಭೇಟಿಯಾದರು. ಅವರು ಒಂದೇ ಬಸ್‍ನಲ್ಲಿ ಪ್ರತಿದಿನ ಕಾಲೇಜಿಗೆ ಒಟ್ಟಿಗೆ ಪ್ರಯಾಣಿಸುತ್ತಿದ್ದರು, ನಂತರ ಪ್ರಿನ್ಸ್‌ಟನ್‍ಗೆ ಹೋದರು, ಅಲ್ಲಿ ಇಬ್ಬರೂ ತಮ್ಮ ಸ್ನಾತಕೋತ್ತರ ಪದವಿ ಪಡೆದರು. ಗೀತಾ ಗೋಪಿನಾಥ್ ಪತಿ ಇಕ್ಬಾಲ್ ಧಲಿವಾಲ್ 1972ರಲ್ಲಿ ಜನಿಸಿದರು. ತಂದೆ ಬೆಂಗಳೂರಿನಲ್ಲಿ ಗಡಿ ಭದ್ರತಾ ಪಡೆಯಲ್ಲಿದ್ದರು. ತಾಯಿ ಶಿಕ್ಷಕಿ. ಇರುವ ಒಬ್ಬ ಸಹೋದರಿಯು ವೈದ್ಯರಾಗಿದ್ದಾರೆ.

Gita Gopinath: ಮೈಸೂರಿನ ಗೀತಾ ಗೋಪಿನಾಥ್ IMF ಅಧಿಕಾರ ಸ್ಥಾನ ಅಲಂಕರಿಸಲು ನಡೆದ ದಾರಿಯೇ ರೋಚಕ

ಶಿಕ್ಷಕರಾಗಿ ಕೆಲಸ
ಇಕ್ಬಾಲ್ ದೆಹಲಿಯ ಮದರ್ಸ್ ಇಂಟರ್‌ನ್ಯಾಶನಲ್ ಸ್ಕೂಲ್‍ನಲ್ಲಿ ಅಧ್ಯಯನ ಮಾಡಿದರು ಮತ್ತು 1989ರ ಬ್ಯಾಚ್‍ನ ಮುಖ್ಯಸ್ಥರಾಗಿದ್ದರು. ಅವರು ತಮ್ಮ ವಿದ್ಯಾರ್ಥಿ ಜೀವನದ 14 ವರ್ಷಗಳನ್ನು ಅದೇ ಶಾಲೆಯಲ್ಲಿ ಕಳೆದರು. ದೆಹಲಿ ವಿಶ್ವವಿದ್ಯಾನಿಲಯದಿಂದ ಅರ್ಥಶಾಸ್ತ್ರದಲ್ಲಿ ಬಿಎ ಮಾಡಿದರು.

ನಂತರ ದೆಹಲಿ ಸ್ಕೂಲ್ ಆಫ್ ಎಕನಾಮಿಕ್ಸ್‌ನಿಂದ ಅರ್ಥಶಾಸ್ತ್ರದಲ್ಲಿ ಎಂಎ ಮತ್ತು ಪ್ರಿನ್ಸ್‌ಟನ್ ಸ್ಕೂಲ್ ಆಫ್ ಪಬ್ಲಿಕ್ ಅಂಡ್ ಇಂಟರ್‌ನ್ಯಾಷನಲ್ ಅಫೇರ್ಸ್‍ನಿಂದ ಇಂಟರ್‌ನ್ಯಾಷನಲ್ ಡೆವಲಪ್‍ಮೆಂಟ್‍ನಲ್ಲಿ ಎಂಪಿಎ ಮಾಡಿದರು. ನಾಗರಿಕ ಸೇವಾ ಪರೀಕ್ಷೆಗೆ ಪ್ರಯತ್ನಿಸುವ ಮೊದಲು, ಇಕ್ಬಾಲ್ ಮೇ 1994ರಿಂದ ಜುಲೈ 1996ರವರೆಗೆ ಗುರ್ಗಾಂವ್‍ನ ಸಂತ ಸ್ಮಾರಕ ಪಬ್ಲಿಕ್ ಸ್ಕೂಲ್‍ನಲ್ಲಿ ಶಿಕ್ಷಕರಾಗಿ ಕೆಲಸ ಮಾಡಿದರು.

ಐಎಎಸ್ ಅಧಿಕಾರಿ
ಜೂನ್ 1994ರಲ್ಲಿ, ಇಕ್ಬಾಲ್ ತನ್ನ ಮೊದಲ ಯುಪಿಎಸ್‍ಸಿ ಸಿಎಸ್‍ಇ ಪರೀಕ್ಷೆ ಬರೆದರು ಮತ್ತು 229ರ ಅಖಿಲ ಭಾರತ ಶ್ರೇಣಿ ಪಡೆದರು ಮತ್ತು ಭಾರತೀಯ ಸಿವಿಲ್ ಅಕೌಂಟ್ಸ್ ಸರ್ವೀಸ್‌ ಗ್ರೂಪ್ ಎಗೆ ನಿಯೋಜಿಸಲಾಯಿತು. ಆದರೂ, ಅವರು ತಮ್ಮ ಶ್ರೇಣಿಯನ್ನು ಉತ್ತಮಗೊಳಿಸಲು ಬಯಸಿದ್ದರಿಂದ, ಅವರು 1996ರಲ್ಲಿ ಮತ್ತೊಮ್ಮೆ ಪರೀಕ್ಷೆಗೆ ಪ್ರಯತ್ನಿಸಿದರು ಮತ್ತು 1ರ ಎಐಆರ್ ಶ್ರೇಣಿಯನ್ನು ಪಡೆದುಕೊಂಡರು ಮತ್ತು ತಮಿಳುನಾಡು ಕೇಡರ್‌ನಲ್ಲಿ ಭಾರತೀಯ ಆಡಳಿತ ಸೇವಾಧಿಕಾರಿಯಾಗಿ ನಿಯೋಜಿಸಲಾಯಿತು. ಐಎಎಸ್ ಅಧಿಕಾರಿಯಾಗಿ ಐದು ವರ್ಷಗಳ ಕಾಲ ಸೇವೆ ಸಲ್ಲಿಸಿದ ಅವರು ತೊರೆದು ಯುಎಸ್‍ಗೆ ತೆರಳಿದರು.

ಸಾಧಕರ ಪ್ರಶಸ್ತಿ
ಅವರು ನ್ಯಾಷನಲ್ ಅಕಾಡೆಮಿ ಆಫ್ ಅಡ್ಮಿನಿಸ್ಟ್ರೇಷನ್‍ನಲ್ಲಿ (ಈಗ ಲಾಲ್ ಬಹದ್ದೂರ್ ಶಾಸ್ತ್ರಿ ನ್ಯಾಷನಲ್ ಅಕಾಡೆಮಿ ಆಫ್ ಅಡ್ಮಿನಿಸ್ಟ್ರೇಷನ್ ಎಂದು ಕರೆಯುತ್ತಾರೆ) ಚಿನ್ನದ ಪದಕ ಪಡೆದಿದ್ದಾರೆ. 2019ರಲ್ಲಿ, ಪಂಜಾಬ್ ಸರ್ಕಾರವು ಅವರಿಗೆ ಅರ್ಥಶಾಸ್ತ್ರ ಮತ್ತು ಬಡತನ ನಿರ್ಮೂಲನೆ ಕ್ಷೇತ್ರಕ್ಕೆ ನೀಡಿದ ಕೊಡುಗೆಗಳಿಗಾಗಿ ಗುರುನಾನಕ್ ದೇವ್‌ಜಿ ಸಾಧಕರ ಪ್ರಶಸ್ತಿ ನೀಡಿದೆ. ಅವರು ಪ್ರಿನ್ಸ್‌ಟನ್ ವಿಶ್ವವಿದ್ಯಾನಿಲಯದಲ್ಲಿ ಡೀನ್‍ನ ಫೆಲೋಶಿಪ್ ಪಡೆದರು ಮತ್ತು ಪದವಿಪೂರ್ವ ಕಾಲೇಜಿನಲ್ಲಿ ಮೊದಲ ಚಿನ್ನದ ಪದಕ ಪಡೆದರು. ಇಕ್ಬಾಲ್ ಪ್ರಸ್ತುತ ಮ್ಯಾಸಚೂಸೆಟ್ಸ್ ಮೂಲದ ಲತೀಫ್ ಜಮೀಲ್ ಪಾವರ್ಟಿ ಆ್ಯಕ್ಷನ್ ಲ್ಯಾಬ್‍ನ ಜಾಗತಿಕ ಕಾರ್ಯನಿರ್ವಾಹಕ ನಿರ್ದೇಶಕರಾಗಿದ್ದಾರೆ.

ಇದನ್ನೂ ಓದಿ: ಭಾರತದ ಹೊಸ ಕೃಷಿ ಕಾನೂನುಗಳು ರೈತರ ಆದಾಯ ಹೆಚ್ಚಿಸಲಿವೆ, ಆದರೆ ಸಾಮಾಜಿಕ ಸುರಕ್ಷೆ ಅಗತ್ಯ; ಐಎಂಎಫ್​ನ ಗೀತಾ ಗೋಪಿನಾಥ್

ಗೀತಾ ಗೋಪಿನಾಥ್ ಅಂತಾರಾಷ್ಟ್ರೀಯ ಹಣಕಾಸು ನಿಧಿಯ ಮೊದಲ ಮಹಿಳಾ ಮುಖ್ಯ ಅರ್ಥಶಾಸ್ತ್ರಜ್ಞರಾಗಿದ್ದರು ಮತ್ತು ಈಗ  ಮತ್ತೊಮ್ಮೆ ಇತಿಹಾಸ ನಿರ್ಮಿಸಿದ್ದು, ಈ ಮೂಲಕ ಅವರ ಸಾಧನೆಗಳ ಬಗ್ಗೆ ಭಾರತೀಯರು ಹೆಮ್ಮೆಪಡುವಂತೆ ಮಾಡಿದ್ದಾರೆ. ಜೆಫ್ರಿ ಮತ್ತು ಗೀತಾ ಇಬ್ಬರೂ ಪ್ರಚಂಡ ಸಹೋದ್ಯೋಗಿಗಳು, ಜೆಫ್ರಿ ಹೋಗುವುದನ್ನು ನೋಡಲು ನನಗೆ ಬೇಸರವಾಗಿದೆ. ಆದರೆ, ಅದೇ ಸಮಯದಲ್ಲಿ, ಗೀತಾ ಕಂಪನಿಯಲ್ಲಿ ಉಳಿಯಲು ನಿರ್ಧರಿಸಿದ್ದಾರೆ ಮತ್ತು ನಮ್ಮFDMDಯಾಗಿ ಹೊಸ ಜವಾಬ್ದಾರಿ ಸ್ವೀಕರಿಸಲಿರುವುದು ನನಗೆ ಸಂತೋಷವಾಗಿದೆ" ಎಂದು IMFನ ವ್ಯವಸ್ಥಾಪಕ ನಿರ್ದೇಶಕಿ ಕ್ರಿಸ್ಟಲಿನಾ ಜಾರ್ಜಿವಾ ನಿರ್ಧಾರವನ್ನು ಪ್ರಕಟಿಸುವಾಗ ಹೇಳಿದ್ದಾರೆ.
Published by:vanithasanjevani vanithasanjevani
First published: