ಪುಲ್ವಾಮ ದಾಳಿ ಘಟನೆಗೆ ವರ್ಷ: ರಾಹುಲ್ ಗಾಂಧಿಯಿಂದ ಬಿಜೆಪಿಗೆ 3 ಪ್ರಶ್ನೆಗಳು

ರಾಹುಲ್ ಗಾಂಧಿ ಈ ಪ್ರಶ್ನೆ ಕೇಳಲು ಅವರದ್ದೇ ಕಾರಣವಿದೆ. ಚುನಾವಣೆಯ ಹೊಸ್ತಿಲಲ್ಲೇ ನಡೆದಿದ್ದ ಪುಲ್ವಾಮ ದಾಳಿ ಘಟನೆಯನ್ನು ಬಿಜೆಪಿ ತನ್ನ ಚುನಾವಣಾ ಪ್ರಚಾರಕ್ಕೆ ಬಳಸಿಕೊಂಡಿದ್ದು ಸುಳ್ಳಲ್ಲ. ಆರ್ಥಿಕ ಪರಿಸ್ಥಿತಿಯು ಚುನಾವಣೆಯ ಮುಖ್ಯ ವಿಷಯ ಆಗುವ ಬದಲು ದೇಶದ ಭದ್ರತೆಯ ವಿಚಾರ ಮುನ್ನೆಲೆಗೆ ಬರಲು ಪುಲ್ವಾಮ ಘಟನೆ ಕಾರಣವಾಯಿತು.

news18
Updated:February 14, 2020, 10:55 AM IST
ಪುಲ್ವಾಮ ದಾಳಿ ಘಟನೆಗೆ ವರ್ಷ: ರಾಹುಲ್ ಗಾಂಧಿಯಿಂದ ಬಿಜೆಪಿಗೆ 3 ಪ್ರಶ್ನೆಗಳು
ರಾಹುಲ್ ಗಾಂಧಿ
  • News18
  • Last Updated: February 14, 2020, 10:55 AM IST
  • Share this:
ನವದೆಹಲಿ(ಫೆ. 14): ಸರಿಯಾಗಿ ಒಂದು ವರ್ಷದ ಹಿಂದೆ ಕಾಶ್ಮೀರದ ಪುಲ್ವಾಮದಲ್ಲಿ ರಸ್ತೆಯಲ್ಲಿ ಸಾಗುತ್ತಿದ್ದ ಸೇನಾ ವಾಹನಗಳ ಮೇಲೆ ಉಗ್ರಗಾಮಿಗಳು ಆತ್ಮಾಹುತಿ ದಾಳಿ ನಡೆಸಿದ್ದರು. ಉಗ್ರಗಾಮಿಯೊಬ್ಬ ಕಾರ್​ನಲ್ಲಿ ಬಾಂಬ್ ತುಂಬಿಸಿ ಒಂದು ಸೇನಾ ವಾಹನಕ್ಕೆ ಡಿಕ್ಕಿ ಹೊಡೆದಿದ್ದ. ಆ ಘಟನೆಯಲ್ಲಿ 40 ಮಂದಿ ಬಲಿಯಾಗಿದ್ದರು. ಈ ಘಟನೆಯು ಬಿಜೆಪಿ, ಕಾಂಗ್ರೆಸ್ ಹಾಗೂ ಇತರ ಪಕ್ಷಗಳಿಗೆ ಪರಸ್ಪರ ದಾಳಿಗೆ ಅಸ್ತ್ರವಾಯಿತು. ಇವತ್ತು ಈ ಘಟನೆಯಾಗಿ ಇವತ್ತು ಒಂದು ವರ್ಷವಾಯಿತು. ಈ ಹಿನ್ನೆಲೆಯಲ್ಲಿ ಇದನ್ನ ಪ್ರಸ್ತಾಪಿಸಿರುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಬಿಜೆಪಿಗೆ 3 ಪ್ರಶ್ನೆಗಳನ್ನ ಹಾಕಿದ್ದಾರೆ.

ಪುಲ್ವಾಮ ಉಗ್ರ ದಾಳಿ ಘಟನೆಯಿಂದ ಯಾರಿಗೆ ಅತಿ ಹೆಚ್ಚು ಲಾಭವಾಗಿದ್ದು ಎಂದು ರಾಹುಲ್ ಗಾಂಧಿ ಪ್ರಶ್ನೆ ಮಾಡಿದ್ದಾರೆ. ಘಟನೆಯನ್ನು ತನಿಖೆಗೆ ಒಳಪಡಿಸಲಾಗಿತ್ತು. ಆ ತನಿಖೆಯ ಕಥೆ ಏನಾಯಿತು ಎಂದು ಮತ್ತೊಂದು ಪ್ರಶ್ನೆ ಕೇಳಿದ್ಧಾರೆ. ದಾಳಿಗೆ ಕಾರಣವಾದ ಭದ್ರತಾ ಲೋಪವಾಗಲು ಬಿಜೆಪಿ ಸರ್ಕಾರದಲ್ಲಿ ಯಾರು ಹೊಣೆ ಎಂದು ಮಗದೊಂದು ಪ್ರಶ್ನೆ ಕೇಳಿದ್ದಾರೆ.

ಇದನ್ನೂ ಓದಿ: ಪುಲ್ವಾಮಾ ದಾಳಿಗೆ ಇಂದಿಗೆ ಒಂದು ವರ್ಷ; ಜೆಇಎಂ ಉಗ್ರ ಸಂಘಟನೆ ಮುಖ್ಯಸ್ಥ ಮಸೂದ್ ಅಜರ್ ಮೇಲೆ ಪ್ರತೀಕಾರ ಯಾವಾಗ?

ರಾಹುಲ್ ಗಾಂಧಿ 3 ಪ್ರಶ್ನೆಗಳು:

1) ದಾಳಿಯಿಂದ ಹೆಚ್ಚು ಲಾಭ ಮಾಡಿಕೊಂಡಿದ್ದು ಯಾರು?
2) ದಾಳಿ ಘಟನೆಯ ತನಿಖೆಯ ವರದಿ ಏನಾಯಿತು?
3) ದಾಳಿಗೆ ಕಾರಣವಾದ ಭದ್ರತಾ ಲೋಪಗಳಿಗೆ ಯಾರು ಹೊಣೆ?


ಇದನ್ನೂ ಓದಿ: ಗಂಡನ ಆತ್ಮಕ್ಕೆ ಶಾಂತಿ ನೀಡಲು ಸೇನೆಗೆ ಸೇರಿದ ಹುತಾತ್ಮ ಮೇಜರ್​​ ಮಡದಿ; ಇಲ್ಲಿದೆ ಒಂದು ಅಪರೂಪದ ಪ್ರೇಮಕಥೆ!

ರಾಹುಲ್ ಗಾಂಧಿ ಈ ಪ್ರಶ್ನೆ ಕೇಳಲು ಅವರದ್ದೇ ಕಾರಣವಿದೆ. ಚುನಾವಣೆಯ ಹೊಸ್ತಿಲಲ್ಲೇ ನಡೆದಿದ್ದ ಪುಲ್ವಾಮ ದಾಳಿ ಘಟನೆಯನ್ನು ಬಿಜೆಪಿ ತನ್ನ ಚುನಾವಣಾ ಪ್ರಚಾರಕ್ಕೆ ಬಳಸಿಕೊಂಡಿದ್ದು ಸುಳ್ಳಲ್ಲ. ಆರ್ಥಿಕ ಪರಿಸ್ಥಿತಿಯು ಚುನಾವಣೆಯ ಮುಖ್ಯ ವಿಷಯ ಆಗುವ ಬದಲು ದೇಶದ ಭದ್ರತೆಯ ವಿಚಾರ ಮುನ್ನೆಲೆಗೆ ಬರಲು ಪುಲ್ವಾಮ ಘಟನೆ ಕಾರಣವಾಯಿತು.

ದೇಶದ ಭದ್ರತೆ ಅಪಾಯದಲ್ಲಿದೆ. ಉಗ್ರಗಾಮಿಗಳು ಅಟ್ಟಹಾಸಗೈಯ್ಯುತ್ತಿದ್ದಾರೆ. ಅವರ ಮಟ್ಟ ಹಾಕುತ್ತೇವೆ ಎಂದು ಮೋದಿ ಪಣತೊಟ್ಟರು. ಸ್ವಲ್ಪ ದಿನಗಳ ನಂತರ ಪಾಕಿಸ್ತಾನದ ಬಾಲಾಕೋಟ್ ಮೇಲೆ ವಾಯು ದಾಳಿ ಆಯಿತು. ಮರುದಿನ ಭಾರತ ಮತ್ತು ಪಾಕಿಸ್ತಾನ ಗಡಿಭಾಗದಲ್ಲಿ ಎರಡೂ ದೇಶಘಳ ಮಧ್ಯೆ ವೈಮಾನಿಕ ಚಕಮಕಿ ನಡೆದವು. ಇವೆಲ್ಲವೂ ಬಿಜೆಪಿಗೆ ಚುನಾವಣೆಯಲ್ಲಿ ಜನರ ವಿಶ್ವಾಸ ಸೆಳೆಯಲು ಅನುಕೂಲ ಮಾಡಿಕೊಟ್ಟಿತು ಎಂಬುದು ಹಲವರ ವಿಶ್ಲೇಷಣೆ.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

First published: February 14, 2020, 10:55 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading