ತಾಲಿಬಾನ್ ಸಂಘಟನೆ ಹೇಗೆ ರೂಪುಗೊಂಡಿತು..? ಅಪ್ಘನ್ ನೆಲದಲ್ಲಿ ಅಧಿಕಾರ ಸ್ಥಾಪಿಸಲು ಹೇಗೆ ಸಂಚು ರೂಪಿಸಿತು..?

ತಾಲಿಬಾನಿಗಳ ಕ್ರೌರ್ಯ ಹಾಗೂ ಬೇರೆ ದೇಶಗಳ ಮೇಲೆ ಈ ಸಂಘಟನೆಗಳು ಮಾಡುತ್ತಿರುವ ದಾಳಿಯನ್ನು ನೋಡಿದಾಗ ಈ ಸಂಘಟನೆ ಬೆಳೆದು ಬಂದು ಇಷ್ಟೊಂದು ಶಕ್ತಿಶಾಲಿಯಾಗಿದ್ದು ಹೇಗೆ ಎಂಬ ಅಂಶ ಕೂಡ ಪ್ರಮುಖವಾದುದು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:

  ಹಿಂದೊಮ್ಮೆ ಅಪ್ಘಾನಿಸ್ತಾನದ ಮೇಲೆ ನಿಯಂತ್ರಣ ಪಡೆದುಕೊಂಡಿದ್ದ ತಾಲಿಬಾನ್ ಅಧಿಪತ್ಯವನ್ನು ಅಮೆರಿಕ ಸರಕಾರ ಹಿಮ್ಮೆಟ್ಟಿಸಿ ತಾಲಿಬಾನ್ ಆಡಳಿತವನ್ನು ಕೆಳಗಿಳಿಸಿತ್ತು. ಆದರೆ ಪ್ರಸ್ತುತ ದಿನಗಳಲ್ಲಿ ತಾಲಿಬಾನಿ ಸಂಘಟನೆಗಳು ಮತ್ತೊಮ್ಮೆ ಅಪ್ಘಾನಿಸ್ತಾನದ ಚುಕ್ಕಾಣಿಯನ್ನು ತಮ್ಮ ನಿಯಂತ್ರಣದಲ್ಲಿರಿಸಿಕೊಂಡಿವೆ. ಕಾಬೂಲ್ ವಶಪಡಿಸಿಕೊಂಡ ತಕ್ನವೇ ಅಪ್ಘಾನಿಸ್ತಾನವನ್ನು ತನ್ನ ಸುಪರ್ದಿಗೆ ತೆಗೆದುಕೊಂಡಿದೆ. ತಾಲಿಬಾನಿಗಳ ಕ್ರೌರ್ಯ ಹಾಗೂ ಬೇರೆ ದೇಶಗಳ ಮೇಲೆ ಈ ಸಂಘಟನೆಗಳು ಮಾಡುತ್ತಿರುವ ದಾಳಿಯನ್ನು ನೋಡಿದಾಗ ಈ ಸಂಘಟನೆ ಬೆಳೆದು ಬಂದು ಇಷ್ಟೊಂದು ಶಕ್ತಿಶಾಲಿಯಾಗಿದ್ದು ಹೇಗೆ ಎಂಬ ಅಂಶ ಕೂಡ ಪ್ರಮುಖವಾದುದು. ಅಪ್ಘಾನಿಸ್ತಾನದಂತಹ ತರಬೇತಿ ಪಡೆದ ಸೇನಾ ಮಿಲಿಟರಿ ಇರುವ ದೇಶದಲ್ಲಿ ಕೂಡ ಇವರುಗಳು ಅಧಿಪತ್ಯ ನಡೆಸಲು ಕಂಡುಕೊಂಡ ಮಾರ್ಗವಾದರೂ ಯಾವುದು? ಈ ಸಂಘಟನೆಗಳನ್ನು ಪೋಷಿಸುತ್ತಿರುವ ಬೇರೆ ದೇಶಗಳಿವೆಯೇ ಎಂಬ ಪ್ರಶ್ನೆ ಕೂಡ ಪ್ರತಿಯೊಬ್ಬರಲ್ಲಿ ಮೂಡಿಯೇ ಮೂಡುತ್ತದೆ. ತಾಲಿಬಾನ್ ಸಂಘಟನೆಯ ಕುರಿತಾಗಿ ವಿವರ ಇಲ್ಲಿದೆ.


  ತಾಲಿಬಾನ್ ಯುಎಸ್ ಮಾತುಕತೆ


  ಯುಎಸ್ ಸೇನಾ ಪಡೆಗಳು ಅಪ್ಘಾನಿಸ್ತಾನದಲ್ಲಿ ಇರುವವರೆಗೆ ತಮಗೆ ಉಳಿಗಾಲವಿಲ್ಲ ಎಂಬುದನ್ನರಿತ ತಾಲಿಬಾನ್ ಪಡೆಗಳು ಅಮೆರಿಕದೊಂದಿಗೆ ಶಾಂತಿ ಸಂಧಾನಕ್ಕೆ ಮುಂದಾಯಿತು. 2020ರಲ್ಲಿ ಮಾಡಿಕೊಂಡ ಸಂಧಾನದ ಒಪ್ಪಂದದಂತೆ ಯುಎಸ್ ಸೇನಾ ಪಡೆಗಳ ವಾಪಸಾತಿ ಹಾಗೂ ಯುಎಸ್ ಸೇನಾ ಪಡೆಗಳ ಮೇಲೆ ತಾಲಿಬಾನಿಗಳ ದಾಳಿ ನಿಷೇಧಿಸಲಾಯಿತು. ತಾಲಿಬಾನ್ ನಿಯಂತ್ರಿಸುವ ಪ್ರದೇಶಗಳಲ್ಲಿ ಅಲ್-ಖೈದಾ ಹಾಗೂ ಇತರ ಉಗ್ರಗಾಮಿ ಸಂಘಟನೆಗಳಿಗೆ ಕಾರ್ಯಾಚರಣೆಗೆ ಅನುಮತಿ ನೀಡಬಾರದೆಂಬ ಭರವಸೆಯನ್ನೂ ಈ ಒಪ್ಪಂದ ಒಳಗೊಂಡಿತು.


  ಆದರೆ ಸಂಧಾನದ ನಂತರ ತನ್ನ ಹಳೆಯ ಚಾಳಿಯನ್ನೇ ಮುಂದುವರಿಸಿದ್ದ ತಾಲಿಬಾನ್ ಅಪ್ಘನ್ ಭದ್ರತಾ ಪಡೆಗಳು ಹಾಗೂ ಅಲ್ಲಿನ ಪ್ರಜೆಗಳ ಮೇಲೆ ನಿರಂತರ ದಾಳಿ ನಡೆಸಲು ಆರಂಭಿಸಿತು.


  ಅಧಿಕಾರಕ್ಕೆ ಬಂದ ತಾಲಿಬಾನ್


  ಅಪ್ಘಾನಿಸ್ತಾನದಿಂದ ಸೋವಿಯತ್ ಸೈನ್ಯ ಹಿಂತೆಗೆದೊಡನೆಯೇ ತಾಲಿಬಾನಿಗಳಿಗೆ ಬೆಳೆಯಲು ಇನ್ನಷ್ಟು ಅವಕಾಶ ದೊರೆಯಿತು. ಸೌದಿ ಅರೇಬಿಯಾ ಈ ಸಂಘಟನೆಗಳಿಗೆ ಆರ್ಥಿಕ ನೆರವು ನೀಡಿತು ಹಾಗೂ ಇಸ್ಲಾಂನ ಕಠಿಣ ನಿಯಮ ಬೋಧಿಸಿತು.


  ಪಾಕ್ ಹಾಗೂ ಅಪ್ಘಾನಿಸ್ತಾನ ಭೂಪ್ರದೇಶ ಸುತ್ತುವರೆದಿರುವ ಪಶ್ತೂನ್ ಪ್ರದೇಶಗಳಲ್ಲಿ ಶಾಂತಿ ಹಾಗೂ ಭದ್ರತೆಯ ಸ್ಥಾಪನೆ ಹಾಗೂ ತಮ್ಮದೇ ಆದ ಕಠಿಣ ಇಸ್ಲಾಮಿಕ್ ನೀತಿ ಜಾರಿಗೊಳಿಸುವುದು ಈ ಸಂಘಟನೆಗಳ ಆಶಯವಾಗಿತ್ತು.


  ತಾಲಿಬಾನ್ ಸಂಘಟನೆಯ ಬೆಳವಣಿಗೆ


  ನೈರುತ್ಯ ಅಫ್ಘಾನಿಸ್ತಾನದಿಂದ ತಾಲಿಬಾನ್ ಶೀಘ್ರವಾಗಿ ತನ್ನ ಪ್ರಭಾವ ವಿಸ್ತರಿಸಲಾರಂಭಿಸಿತು. ಇರಾನ್‌ನ ಹೆರಾತ್ ಪ್ರಾಂತ್ಯ ವಶಪಡಿಸಿಕೊಂಡ ನಂತರ ಅವರ ಗುರಿ ಅಪ್ಘಾನ್ ರಾಜಧಾನಿ ಕಾಬೂಲ್ ಮೇಲಾಯಿತು. ಹೀಗೆ ಅಪ್ಘಾನ್‌ನ 90% ಭಾಗವನ್ನು ತಾಲಿಬಾನ್ ನಿಯಂತ್ರಿಸಲು ಪ್ರಾರಂಭಿಸಿತು.


  ತನ್ನ ನಿಯಂತ್ರಣದ ವ್ಯಾಪ್ತಿಯಲ್ಲಿದ್ದ ಪ್ರದೇಶಗಳ ಮೇಲೆ ಆಡಳಿತ ನಡೆಸಲು ಪ್ರಾರಂಭಿಸಿದ ಸಂಘಟನೆ ಶರಿಯಾ ಕಾನೂನನ್ನು ಜಾರಿಗೆ ತಂದಿತು. ಮಹಿಳೆಯರು ಉದ್ಯೋಗಕ್ಕೆ ಹೋಗುವುದನ್ನು ವಿರೋಧಿಸುವುದು, ಪೂರ್ತಿಯಾಗಿ ಬುರ್ಖಾ ಧರಿಸಿ ಹೊರಗೆ ಓಡಾಡುವುದು, ಮಹಿಳೆಯರ ಸ್ವಾತಂತ್ರ್ಯಕ್ಕೆ ಅಡ್ಡಿ ಮೊದಲಾದ ನೀತಿಗಳನ್ನು ಜಾರಿಗೆ ತಂದಿತು.


  ತಾಲಿಬಾನ್ ವಶದಲ್ಲಿದ್ದ ಪ್ರದೇಶಗಳ ಮೂಲಕ ಪಾಕಿಸ್ತಾನವನ್ನು ಬಗ್ಗುಬಡಿಯುವ ಬೆದರಿಕೆ ಹಾಕಿದ ಸಂಘಟನೆ ಮಿಂಗೋರಾ ಪಟ್ಟಣದಲ್ಲಿ ಶಾಲಾ ಬಾಲಕಿ ಮಲಾಲಾ ಮೇಲೆ ಗುಂಡಿನ ದಾಳಿ ನಡೆಸಿತು. ಆದರೆ ಈ ಗುಂಡಿನ ದಾಳಿಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಖಂಡಿಸಿದ ಕಾರಣ ತಾಲಿಬಾನ್ ಅಲ್ಲಿಗೆ ಸುಮ್ಮನಾಗಬೇಕಾಯಿತು.


  ಅಲ್-ಖೈದಾ ಸಂಘಟನೆಗೆ ತಾಲಿಬಾನ್ ಅಭಯ ಹಸ್ತ


  11ನೇ ಸಪ್ಟೆಂಬರ್ 2001ರಂದು ನ್ಯೂರ್ಯಾರ್ಕ್‌ನ ವಿಶ್ವ ವ್ಯಾಪಾರ ಸಂಸ್ಥೆ (ವರ್ಲ್ಡ್ ಟ್ರೇಡ್ ಸೆಂಟರ್) ಮೇಲೆ ದಾಳಿ ನಡೆಸಿದ ನಂತರ ಸಂಪೂರ್ಣ ವಿಶ್ವವೇ ತಾಲಿಬಾನಿಗಳನ್ನು ಸಂಶಯಿಸಿತು. ಈ ದಾಳಿಯ ರೂವಾರಿಯಾದ ಒಸಾಮಾ ಬಿನ್ ಲಾಡೆನ್ ಹಾಗೂ ಅಲ್-ಕೈದಾ ಚಳುವಳಿಯ ಸಂಘಟಕರಿಗೆ ತಾಲಿಬಾನ್ ರಕ್ಷಣೆ ನೀಡಿದೆ ಎಂಬ ಆರೋಪಕ್ಕೆ ಒಳಗಾಯಿತು.


  ಈ ಘಟನೆಯ ನಂತರ ಯುಎಸ್ ಮಿಲಿಟರಿ ದಳವು ಅಪ್ಘಾನಿಸ್ತಾನದ ಮೇಲೆ ದಾಳಿಗಳನ್ನು ನಡೆಸಲು ಆರಂಭಿಸಿತು. ಇದರಿಂದ ತಾಲಿಬಾನ್ ಆಡಳಿತ ಕುಸಿಯತೊಡಗಿತು. ಬಿನ್ ಲಾಡೆನ್ ಜತೆಗೂಡಿ ಇನ್ನಷ್ಟು ಉಗ್ರರ ನಾಯಕರುಗಳನ್ನು ಯುಎಸ್ ಸೇನೆ ನಾಶಮಾಡಿತು. ಯುಎಸ್ ಆಕ್ರಮಣಕ್ಕೆ ಹೆದರಿ ಅಪ್ಘಾನ್ ನೆಲದಿಂದ ತಾಲಿಬಾನ್ ಪಡೆ ಕಾಲ್ಕಿತ್ತಿತು.


  ಇದನ್ನೂ ಓದಿ: ನನ್ನ ಇಬ್ಬರೂ ಹೆಣ್ಣು ಮಕ್ಕಳನ್ನು ಮಾರಿದ ಗಂಡ; 14ನೇ ವರ್ಷಕ್ಕೆ ಮದುವೆಯಾಗಿ ನರಕ ಅನುಭವಿಸಿದೆ

  ಆದರೆ ಯುಎಸ್ ಮಿಲಿಟರಿ ಪಡೆಗಳ ನಡುವೆಯೂ ಬೇರೆ ದೇಶಗಳ ಸಹಾಯದೊಂದಿಗೆ ತಾಲಿಬಾನ್ ಸಂಘಟನೆ ಪುನಃ ಚೇತರಿಕೆಯನ್ನು ಕಂಡುಕೊಂಡಿತು ಹಾಗೂ ಅಪ್ಘಾನಿಸ್ತಾನದ ಮೇಲೆ ತನ್ನ ಹಿಂದಿನ ನಿಯಂತ್ರಣ ಹೇರಲು ಆರಂಭಿಸಿತು. ಹೀಗೆ ನಿಧಾನವಾಗಿ ತಾಲಿಬಾನ್ ಅಮೆರಿಕ ಸೇನೆಯ ಮೇಲೆ ಯುದ್ಧ ಆರಂಭಿಸಿತು. ಹೀಗೆ ತನ್ನ ಕುಟಿಲ ಚಾಣಾಕ್ಷ ನೀತಿಗಳಿಂದ ಅಪ್ಘನ್ ನೆಲದ ಮೇಲೆ ತನ್ನ ಹಿಡಿತ ಸಾಧಿಸಿತು.


  ಅಧಿಕಾರ ವಶಪಡಿಸಿಕೊಳ್ಳುವ ತಂತ್ರ


  ಫೆಬ್ರವರಿ 2020 ರ ಯುಎಸ್-ತಾಲಿಬಾನ್ ಒಪ್ಪಂದದ ನಂತರ ತಾಲಿಬಾನ್ ಹಿಂದೆ ನೀಡಿದ ಅದೇ ವಚನಗಳನ್ನು ಅಮೆರಿಕಕ್ಕೆ ನೀಡಿತು. ಆದರೆ ಅಫ್ಘನ್‌ ಪತ್ರಕರ್ತರು, ನ್ಯಾಯಾಧೀಶರು, ಮಹಿಳಾ ಅಧಿಕಾರಿಗಳು ತಾಲಿಬಾನಿಗಳ ಕುತಂತ್ರ ಇದಾಗಿದ್ದು ತಮ್ಮ ಧೋರಣೆಗಳನ್ನು ಎಂದಿಗೂ ಬದಲಾಯಿಸುವುದಿಲ್ಲವೆಂದು ತಿಳಿಸಿದರು.


  ಇದನ್ನೂ ಓದಿ: ತಾಲಿಬಾನ್​ ಪ್ರಮುಖ ನಾಯಕ ಶೇರ್​ ಮೊಹಮ್ಮದ್​ಗೆ ಭಾರತದ ನಂಟು; ನೆನಪು ಹಂಚಿಕೊಂಡ ಮಿಲಿಟರಿ ಸ್ನೇಹಿತರು

  ಅಂತಾರಾಷ್ಟ್ರೀಯ ಬೆಂಬಲವಿಲ್ಲದೆ ಅಸಹಾಯಕರಾಗಿದ್ದ ಅಪ್ಘನ್ ಅಧಿಕಾರಿಗಳು ತಾಲಿಬಾನ್ ನಿಯಂತ್ರಣಕ್ಕೆ ದೇಶದ ಪ್ರಜೆಗಳು ಒಳಗಾಗುವುದನ್ನು ನೋಡುತ್ತಾ ಅಸಹಾಯಕರಾಗಿ ಕಳವಳ ವ್ಯಕ್ತಪಡಿಸಿದರೂ ಅಮೆರಿಕ ಅಧ್ಯಕ್ಷರಾದ ಜೋ ಬೈಡೆನ್ ಅಮೆರಿಕ ಸೇನಾ ಪಡೆಗಳು ಅಫ್ಘನ್ ನೆಲದಿಂದ ಹಿಂದಕ್ಕೆ ಬರುವಂತೆ ಆದೇಶ ನೀಡಿದರು. ಹೀಗೆ ಅಮೆರಿಕ ಪಡೆಗಳು ಅಪ್ಘಾನಿಸ್ತಾನ ತೊರೆಯುತ್ತಿರುವಂತೆಯೇ ತಾಲಿಬಾನಿಗಳು ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡು ನಿಯಂತ್ರಣ ಸಾಧಿಸಿದರು.
  ವಿದೇಶಿ ಸೇನೆಯ ಬಲದಲ್ಲಿದ್ದ ಅಫ್ಘಾನಿಸ್ತಾನವನ್ನು ತನ್ನ ಸುಪರ್ದಿಗೆ ತೆಗೆದುಕೊಂಡ ತಾಲಿಬಾನ್ ಕಾಬೂಲ್‌ನಲ್ಲಿ ಸರಕಾರ ಪತನ ಮಾಡುವ ಮುನ್ನ ವಿಶಾಲ ಪ್ರದೇಶಗಳನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿತು. ಕ್ಷಿಪ್ರ ಕಾರ್ಯಾಚರಣೆ ನಡೆಸಿ ತಾಲಿಬಾನ್ ಅಫ್ಘಾನಿಸ್ತಾನವನ್ನು ನಿಯಂತ್ರಣಕ್ಕೆ ತೆಗೆದುಕೊಂಡಿತು. ಅಪ್ಘನ್ ಉನ್ನತಿಗಾಗಿ ಭಾರತ ಸೇರಿದಂತೆ ಅದೆಷ್ಟೋ ರಾಷ್ಟ್ರಗಳು ಆರ್ಥಿಕ ನೆರವನ್ನು ದೇಶದ ಉನ್ನತಿಯನ್ನು ಮಾಡಿದ್ದವು. ಆದರೆ ತಾಲಿಬಾನ್ ಆಡಳಿತದ ನಂತರ ಸುಭೀಕ್ಷವಾಗಿದ್ದ ದೇಶ ಇದೀಗ ಮರಣ ಭೂಮಿಯಾಗಿದೆ. ಅಲ್ಲಿನ ಪ್ರಜೆಗಳು ತಾಲಿಬಾನಿಗಳ ಕ್ರೌರ್ಯಕ್ಕೆ ಹೆದರಿ ಪಲಾಯನಗೈಯ್ಯುತ್ತಿದ್ದಾರೆ. ಒಟ್ಟಿನಲ್ಲಿ ತಾಲಿಬಾನ್ ಅಪ್ಘನ್ ನೆಲದಲ್ಲಿ ಆಡಳಿತಕ್ಕೆ ಮರಳಿರುವುದು 20 ವರ್ಷಗಳ ಯುಎಸ್ ನೇತೃತ್ವದ ಒಕ್ಕೂಟದ ಅಸ್ತಿತ್ವಕ್ಕೆ ಅಂತ್ಯ ಹಾಡಿದೆ.

  First published: