ತಾಲಿಬಾನ್ ಸಂಘಟನೆಯ ಮುಖಂಡರು ಯಾರು..? ಪ್ರಬಲ ಸಂಘಟನೆಯಾಗಿ ರೂಪುಗೊಂಡಿದ್ದು ಹೇಗೆ..?

Leader of Terror Outfit Taliban: ತಾಲಿಬಾನ್ ಸಂಘಟನೆ ಮುನ್ನಡೆಸುತ್ತಿರುವ ಪ್ರಮುಖ ನಾಯಕರು ಹಾಗೂ ಅವರ ಪರಿಚಯವನ್ನು ಈ ಲೇಖನದಲ್ಲಿ ಪ್ರಸ್ತುತಪಡಿಸಲಾಗಿದೆ.

ಅಬ್ದುಲ್​​ ಬರಾದಾರ್

ಅಬ್ದುಲ್​​ ಬರಾದಾರ್

  • Share this:

ಕಾಬೂಲ್​: ಅಫ್ಘಾನಿಸ್ತಾನ ಇದೀಗ ತಾಲಿಬಾನಿಗಳ ನಿಯಂತ್ರಣಕ್ಕೊಳಪಟ್ಟಿದ್ದು 2001ರಿಂದ ಅಧಿಕಾರದಿಂದ ಹೊರಗುಳಿದ ಈ ಸಂಘಟನೆ ಇದೀಗ ಮತ್ತಷ್ಟು ಬಲ ಪಡೆದುಕೊಂಡು ಹೇಗೆ ಅಧಿಕಾರ ನಡೆಸಲಿದೆ ಎಂಬುದನ್ನು ಸಂಪೂರ್ಣ ವಿಶ್ವವೇ ನಿಬ್ಬೆರಗಾಗಿ ನೋಡುತ್ತಿದೆ. ಸಂಪೂರ್ಣ ದೇಶವನ್ನು ತನ್ನ ನಿಯಂತ್ರಣಕ್ಕೆ ಒಳಪಡಿಸಿದ ಈ ಸಂಘಟನೆ ಇಷ್ಟೊಂದು ಶಕ್ತಿ ಸಾಮರ್ಥ್ಯ ಪಡೆದುಕೊಂಡಿದ್ದಾದರೂ ಹೇಗೆ ಎಂಬುದು ಈಗ ವಿಶ್ವದ ಬಲಾಢ್ಯ ದೇಶಗಳನ್ನು ಕಾಡುತ್ತಿರುವ ಪ್ರಶ್ನೆಯಾಗಿದೆ.ಅಮೆರಿಕ ಹಾಗೂ ಅದರ ಮಿತ್ರರಾಷ್ಟ್ರಗಳು ತಮ್ಮ ಸೇನಾ ಪಡೆಗಳನ್ನು ಹಿಂತೆಗೆದುಕೊಳ್ಳುತ್ತಿದ್ದಂತೆಯೇ ಇಸ್ಲಾಮಿಕ್ ಉಗ್ರಗಾಮಿ ಸಂಘಟನೆ ಕಾಬೂಲ್ ವಶಪಡಿಸಿಕೊಂಡು ಅಧ್ಯಕ್ಷೀಯ ಅರಮನೆಗೆ ಮುತ್ತಿಗೆ ಹಾಕಿದೆ.


1996ರಿಂದ 2001ರವರೆಗೆ ತಾಲಿಬಾನಿಗಳ ಆಳ್ವಿಕೆ ಅಫ್ಘಾನಿಸ್ತಾನದಲ್ಲಿ ಕ್ರೂರವಾಗಿತ್ತು. ತೀಕ್ಷ್ಣ ರೂಪದ ಧಾರ್ಮಿಕ ಆದೇಶಗಳು, ಸಾರ್ವಜನಿಕ ಮರಣದಂಡನೆಗಳು ಹಾಗೂ ಮಹಿಳೆಯರು ಮತ್ತು ಬಾಲಕಿಯರ ಸ್ವಾತಂತ್ರ್ಯವನ್ನು ಕಸಿದುಕೊಂಡ ತಾಲಿಬಾನಿ ಆಡಳಿತದ ವಿರುದ್ಧ ಪ್ರಪಂಚದ ದೊಡ್ಡಣ್ಣ ಅಮೆರಿಕಾ ಸಿಟ್ಟಿಗೆದ್ದಿತ್ತು. ನಂತರ ಭಯೋತ್ಪಾದನೆ ವಿರುದ್ಧ ಸಮರ (ವಾರ್​ ಆನ್​ ಟೆರರ್​) ಸಾರಿದ ಪರಿಣಾಮ ತಾಲಿಬಾನಿಗರು ಅಫ್ಘಾನಿಸ್ತಾನದ ಅಧಿಕಾರ ಕಳೆದುಕೊಂಡಿತ್ತು. ಆದರೆ ಇದೀಗ ಮತ್ತೆ ತಾಲೀಬಾನ್​ ಸಂಘಟನೆ ದೇಶದ ಮೇಲೆ ಆಕ್ರಮಣ ನಡೆಸುವಷ್ಟು ಸಾಮರ್ಥ್ಯ ಪಡೆದುಕೊಂಡಿದ್ದು ಹೇಗೆ ಎಂಬ ಅನಿಶ್ಚತತೆ ಇನ್ನೂ ವಿಶ್ವವನ್ನು ಕಾಡುತ್ತಿದೆ. ತಾಲಿಬಾನ್ ಸಂಘಟನೆ ಮುನ್ನಡೆಸುತ್ತಿರುವ ಪ್ರಮುಖ ನಾಯಕರು ಹಾಗೂ ಅವರ ಪರಿಚಯವನ್ನು ಈ ಲೇಖನದಲ್ಲಿ ಪ್ರಸ್ತುತಪಡಿಸಲಾಗಿದೆ.


ಹೈಬತುಲ್ಲಾ ಅಖುಂಡಜಾದ:


ಈತ ತಾಲಿಬಾನ್ ಉಗ್ರ ಸಂಘಟನೆಯ ಪ್ರಮುಖ ನಾಯಕನಾಗಿದ್ದು ಸಂಘಟನೆಯ ಮಾಜಿ ನಾಯಕನಾಗಿದ್ದ ಅಖ್ತರ್ ಮಹಮ್ಮದ್ ಮನ್ಸೂರ್ ಪಾಕಿಸ್ತಾನದಲ್ಲಿ ಅಮೆರಿಕ ಡ್ರೋನ್ ಹೊಡೆತದಲ್ಲಿ ಮರಣ ಹೊಂದಿದ ಬಳಿಕ 2016 ರಲ್ಲಿ ಅಧಿಕಾರ ಪಡೆದುಕೊಂಡವನು.


ಒಂದು ಕಾಲದಲ್ಲಿ ಈತ ತಾಲಿಬಾನ್ ಪಡೆಗಳ ಅಗ್ರ ನ್ಯಾಯಾಧೀಶನಾಗಿದ್ದ. 2001ರಲ್ಲಿ ಪಾಕಿಸ್ತಾನಕ್ಕೆ ಪಲಾಯನಗೈದು ಮನ್ಸೂರ್‌ ಅಧಿಪತ್ಯದಲ್ಲಿ ಸೇವೆ ಸಲ್ಲಿಸುವ ಮೊದಲು ಧಾರ್ಮಿಕ ಶಾಲೆಗಳನ್ನು ನಡೆಸುತ್ತಿದ್ದ ಈತನಿಗೆ ಹೆಚ್ಚಿನ ಸೇನಾ ಜ್ಞಾನವಿಲ್ಲ. ಆದರೂ ತಾಲಿಬಾನಿಗಳ ನಾಯಕನಾದ ನಂತರ ಸಂಘಟನೆಗಳ ಹಣಕಾಸು ಮಟ್ಟ ಸುಧಾರಿಸಲು ಕೆಲಸ ಮಾಡಿದನು. ಮಾದಕ ವಸ್ತುಗಳ ವ್ಯಾಪಾರದ ಮೂಲಕ ತಾಲಿಬಾನಿಗಳ ಆರ್ಥಿಕ ಭದ್ರತೆಗೆ ಹೈಬತುಲ್ಲಾ ನೆರವಾದ ಎನ್ನಲಾಗುತ್ತದೆ. ಗುಂಪನ್ನು ಬಲಪಡಿಸಲು ಅಧಿಕಾರ ಒಗ್ಗೂಡಿಸುವ ಪ್ರಯತ್ನವನ್ನು ಮಾಡಿದ ಈತ, ಇಂದು ಅಫ್ಘಾನಿಸ್ತಾನದ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾನೆ.


ಅಬ್ದುಲ್ ಘನಿ ಬರಾದಾರ್:


ಅಬ್ದುಲ್ ಘನಿ ಬರಾದಾರ್ ಕತಾರ್‌ನ ದೋಹಾದಲ್ಲಿ ಶಾಂತಿ ಮಾತುಕತೆಯ ಸಂಧಾನಕಾರರಾಗಿ ಸೇವೆ ಸಲ್ಲಿಸಿದ್ದ ಮತ್ತು ಆತ ಸಂಸ್ಥೆಯ ಉನ್ನತ ರಾಜಕೀಯ ನಾಯಕನೂ ಹೌದು. ತಾಲಿಬಾನ್‌ ಮೂಲ ಸಂಸ್ಥಾಪಕರಲ್ಲಿ ಅಬ್ದುಲ್ ಘನಿ ಕೂಡ ಒಬ್ಬನಾಗಿದ್ದಾನೆ. ಅಮೆರಿಕಾ ಸರ್ಕಾರದ ಕೋರಿಕೆಯ ಮೇರೆಗೆ 2018ರಲ್ಲಿ ಬಿಡುಗಡೆಯಾಗುವ ಮೊದಲು ಪಾಕಿಸ್ತಾನದಲ್ಲಿ 2010ರಲ್ಲಿ ಈತನನ್ನು ಜೈಲಿಗೆ ಹಾಕಲಾಯಿತು. ಆದ್ದರಿಂದ ಆತ ಶಾಂತಿ ಮಾತುಕತೆಯಲ್ಲಿ ಗುಂಪಿನ ನಾಯಕರಾಗಿ ಸೇವೆ ಸಲ್ಲಿಸುವ ಅವಕಾಶ ಪಡೆದ.


ಅಫ್ಘಾನಿಸ್ತಾನದಲ್ಲಿದ್ದ ಅಮೆರಿಕಾ ಸೈನ್ಯವನ್ನು ಹಿಂಪಡೆಯಬೇಕು ಎಂಬ ಮನವಿಯನ್ನು ಬರಾದಾರ್​ ಮಾಡಿದ್ದ. ಆದರೆ ಬೈಡೆನ್ ಆಡಳಿತ ಸೇನೆ ನಿರ್ಗಮನ ದಿನಾಂಕವನ್ನು ಹಿಂದಕ್ಕೆ ತಳ್ಳುವ ಪ್ರಯತ್ನವನ್ನು ಮಾಡಿತ್ತು. ಆದರೆ ಬರಾದಾರ್ ಇದನ್ನು ವಿರೋಧಿಸಿದ್ದ. ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇತೃತ್ವದಲ್ಲಿ ತಾಲಿಬಾನ್ ಜೊತೆಗೆ ನಡೆಸಿದ ಶಾಂತಿ ಒಪ್ಪಂದದ ಷರತ್ತಿಗೆ ಅನುಗುಣವಾಗಿ ಯುಎಸ್ ಸೇನೆ ದೇಶವನ್ನು ತ್ಯಜಿಸಲು ಅಂಗೀಕರಿಸಿತು.


ಒಪ್ಪಂದಕ್ಕೆ ಸಹಿ ಹಾಕಿದ ನಂತರ, 2020ರಲ್ಲಿ ಅಮೆರಿಕ ಅಂದಿನ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಮತ್ತು ಬರಾದಾರ್ ನಡುವೆ ಮಾತುಕತೆಯಾಗಿತ್ತು. ಯುಎಸ್ ಅಧ್ಯಕ್ಷರೊಂದಿಗೆ ನೇರವಾಗಿ ಸಂವಹನ ನಡೆಸಿದ ಮೊದಲ ತಾಲಿಬಾನ್ ನಾಯಕ ಬರಾದಾರ್. ​


ಅಫ್ಘಾನಿಸ್ತಾನ ಅಧ್ಯಕ್ಷರಾದ ಅಶ್ರಫ್ ಘನಿ ದೇಶ ಬಿಟ್ಟು ಪಲಾಯನಗೈದ ನಂತರ ಅಪ್ಘಾನಿಸ್ತಾನದ ಪ್ರಜೆಗಳನ್ನು ಉದ್ದೇಶಿಸಿ ಭಾಷಣ ಮಾಡಿದ್ದು ಇದೇ ತಾಲಿಬಾನ್ ನಾಯಕ ಬರಾದಾರ್.


ನಾವು ನಿರೀಕ್ಷಿಸದೇ ಇರುವ ವಿಜಯ ಪಡೆದುಕೊಂಡಿದ್ದೇವೆ. ಅಲ್ಲಾಹುವಿನ ಎದುರು ನಾವು ವಿನಮ್ರತೆ ತೋರಿಸಬೇಕು ಎಂಬುದಾಗಿ ದೋಹಾದಲ್ಲಿ ದಾಖಲಾಗಿರುವ ಹೇಳಿಕೆಯಲ್ಲಿ ಬರಾದಾರ್ ನುಡಿದಿದ್ದಾನೆ. ನಮ್ಮ ದೇಶದ ಜನರಿಗೆ ನಾವು ಹೇಗೆ ಸಲ್ಲಿಸುತ್ತೇವೆ. ಅವರನ್ನು ಹೇಗೆ ಸುರಕ್ಷಿತರಾಗಿ ಕಾಪಾಡುತ್ತೇವೆ ಹಾಗೂ ಅವರ ಭವಿಷ್ಯವನ್ನು ಹೇಗೆ ರೂಪಿಸುತ್ತೇವೆ ಎಂಬುದು ನಮ್ಮ ಕೈಯಲ್ಲಿದೆ ಎಂಬುದಾಗಿ ತಿಳಿಸಿದ್ದಾನೆ.


ಮಹಮ್ಮದ್ ಯಾಖೂಬ್:


ಮಹಮ್ಮದ್ ಯಾಕೂಬ್ ತಾಲಿಬಾನ್ ಸ್ಥಾಪಕ ಮಹಮ್ಮದ್ ಒಮರ್‌ನ ಹಿರಿಯ ಮಗ ಹಾಗೂ ಸಂಸ್ಥೆಯ ಮಿಲಿಟರಿ ಮುಖ್ಯಸ್ಥನಾಗಿದ್ದಾನೆ. 2013ರಲ್ಲಿ ತಂದೆಯ ಮರಣದ ನಂತರ ಅಧಿಕಾರ ವಹಿಸಿಕೊಂಡ ಯಾಕೂಬ್ ಉತ್ತುಂಗಕ್ಕೇರಿದ್ದಾನೆ. ಈತನನ್ನು ಉಗ್ರಗಾಮಿ ತಂಡದ ಮಧ್ಯಮ ಸದಸ್ಯನೆಂದು ಗುರುತಿಸಲಾಗಿದೆ.


ತಾಲಿಬಾನಿ ಸಂಘಟನೆಗಳು ಪ್ರಾದೇಶಿಕ ಪ್ರಯೋಜನ ಗಳಿಸುತ್ತಿದ್ದಂತೆಯೇ ಅಫ್ಘಾನ್ ಮಿಲಿಟರಿ ಹಾಗೂ ಸರಕಾರದ ಸದಸ್ಯರಿಗೆ ಹಾನಿಯುಂಟು ಮಾಡದಂತೆ ಖಾಲಿ ಮನೆಗಳನ್ನು ಲೂಟಿ ಮಾಡದಂತೆ ಮಾರುಕಟ್ಟೆ ಹಾಗೂ ಅಂಗಡಿಗಳು ಕಾರ್ಯನಿರ್ವಹಿಸಲು ಅನುಮತಿಸುವಂತೆ ಈತ ತಾಲಿಬಾನಿ ಸಂಘಟನೆಗಳನ್ನು ಒತ್ತಾಯಿಸಿದ್ದನು ಎಂಬುದಾಗಿ ತಿಳಿದುಬಂದಿದೆ.


ಸಿರಾಜುದ್ದೀನ್ ಹಕ್ಕಾನಿ:


ಸಿಲಾಜುದ್ದೀನ್ ಹಕ್ಕಾನಿ, ಜಲಾಲುದ್ದೀನ್ ಹಕ್ಕಾನಿಯ ಮಗ, ಹಕ್ಕಾನಿ ಜಾಲವನ್ನು ಸ್ಥಾಪಿಸಿದನು, ಯುನೈಟೆಡ್ ಸ್ಟೇಟ್ಸ್ ಮೂಲಕ ಗೊತ್ತುಪಡಿಸಲಾದ ಈ ಜಾಲ ತಾಲಿಬಾನ್‌ನ ಒಂದು ಶಾಖೆಯಾಗಿದೆ.


ಇದನ್ನೂ ಓದಿ: ತಾಲಿಬಾನಿಗಳು ನನ್ನನ್ನು ಕೊಂದರೂ ಸರಿ ದೇವಸ್ಥಾನ ಬಿಟ್ಟು ಹೋಗೋದಿಲ್ಲ: ಆಫ್ಘನ್ ಹಿಂದೂ ಅರ್ಚಕ ಉದ್ಘಾರ

ಅಫ್ಘಾನಿಸ್ತಾನದಲ್ಲಿನ ಯುಎಸ್-ನೇತೃತ್ವದ ಒಕ್ಕೂಟವು ತನ್ನ ಕಾರ್ಯಾಚರಣೆಯ ಸಮಯದಲ್ಲಿ ಈ ಗುಂಪನ್ನು ಹಿಮ್ಮೆಟ್ಟಿಸಿತು. ಆದರೆ 2017ರಲ್ಲಿ ಈ ಗುಂಪು ಭಯಾನಕವಾಗಿ ಒಗ್ಗೂಡಿಸಿಕೊಂಡು ಆಗ್ನೇಯ ಅಫ್ಘಾನಿಸ್ತಾನದಲ್ಲಿ 5000 ಹೋರಾಟಗಾರರನ್ನು ಒಟ್ಟುಗೂಡಿಸಿತು. ಈ ಹೋರಾಟಗಾರರನ್ನು ಸಿರಾಜುದ್ದೀನ್ ಹಕ್ಕಾನಿ ಮುನ್ನಡೆಸಿದ್ದ.


ಇದನ್ನೂ ಓದಿ: ಕಾಬೂಲ್​ನಲ್ಲಿದ್ದ ಭಾರತದ ರಾಯಭಾರ ಕಚೇರಿಯ ಎಲ್ಲಾ ಸಿಬ್ಬಂದಿ ಸುರಕ್ಷಿತವಾಗಿ ವಾಪಸ್

ಹಕ್ಕಾನಿ ತಾನು ಸ್ಥಾಪಿಸಿದ ನೆಟ್‌ವರ್ಕ್ ಜಾಲ ಮತ್ತು ತಾಲಿಬಾನಿ ಗುಂಪನ್ನು ಮುನ್ನಡೆಸುವ ಉಪನಾಯಕನಾಗಿ ಕಾರ್ಯನಿರ್ವಹಿಸುತ್ತಿದ್ದಾನೆ.


2008ರಲ್ಲಿ ಕಾಬೂಲ್‌ನ ಹೋಟೆಲ್ ಮೇಲೆ ನಡೆಸಿದ ದಾಳಿಯಲ್ಲಿ ಒಬ್ಬ ಅಮೆರಿಕ ಪ್ರಜೆ ಸೇರಿದಂತೆ 6 ಜನರನ್ನು ಕೊಂದ ಪ್ರಕರಣಕ್ಕೆ ಸಂಬಂಧಿಸಿದಂತೆ FBI ಈತನನ್ನು ವಿಚಾರಣೆಗೆ ಹಾಜರಾಗುವಂತೆ ಆದೇಶಿಸಿದೆ. ಕಳೆದ ವರ್ಷ ನ್ಯೂಯಾರ್ಕ್ ಟೈಮ್ಸ್ “ನಾವು ಏನು, ತಾಲಿಬಾನಿಗಳು, ಏನು ಬಯಸಿದ್ದಾರೆ'' ಎಂಬ ಅಂಕಣ ಪ್ರಕಟಿಸಿದಾಗ ಹಕ್ಕಾನಿ ಸುದ್ದಿಯಾಗಿದ್ದ. ಭಯೋತ್ಪಾದಕ ಜಾಲದ ನಾಯಕನಾಗಿರುವ ಹಕ್ಕಾನಿಯ ಇತಿಹಾಸವನ್ನು ಓದುಗರಿಗೆ ಪತ್ರಿಕೆ ಸರಿಯಾಗಿ ತಿಳಿಸಿಲ್ಲವೆಂದು ಟೀಕೆಗೊಳಪಟ್ಟಿತ್ತು.


Published by:Sharath Sharma Kalagaru
First published: