Omicron: ಕೋವಿಡ್​​ ಲಸಿಕೆಗೂ ಬಗ್ಗಲ್ಲ ದಕ್ಷಿಣ ಆಫ್ರಿಕಾದ ಸೋಂಕು; ಹೆಚ್ಚಿದ ಆತಂಕದ ಹಿನ್ನಲೆ ಪ್ರಧಾನಿ ತುರ್ತು ಸಭೆ

ಭಾರತಕ್ಕೆ ಪ್ರಯಾಣ ಬೆಳೆಸಿದ ದಕ್ಷಿಣ ಆಫ್ರಿಕಾ, ಬೋಟ್ಸ್ವಾನಾ ಮತ್ತು ಹಾಂಗ್ ಕಾಂಗ್‌ನ ಪ್ರಯಾಣಿಕರನ್ನು ಕಠಿಣ ತಪಾಸಣೆಗೆ ಕರೆಯಲಾಗಿದೆ.

ಪ್ರಧಾನಿ ಮೋದಿ

ಪ್ರಧಾನಿ ಮೋದಿ

  • Share this:
    ನವದೆಹಲಿ (ನ. 27) ದಕ್ಷಿಣ ಆಫ್ರಿಕಾದ ರೂಪಾಂತಾರ ತಳಿ ಓಮ್ರಿಕಾನ್ (Omicron)​ ಸದ್ಯ ದೇಶದಲ್ಲೆಡೆ ಆತಂಕ ಮೂಡಿಸಿದೆ. ಈ ವೈರಸ್​​ ಭಾರೀ ರೂಪಾಂತರವಾಗಿದೆ (Mutand Virus). ಈ ಹಿನ್ನಲೆ ಜಾಗರೂಕತೆ ಅವಶ್ಯಕತೆ ಇದೆ ಎಂದು ಐಸಿಎಂಆರ್​ ವಿಜ್ಞಾನಿ ಡಾ ಸಮೀರನ್​ ಪಾಂಡಾ ತಿಳಿಸಿದ್ದಾರೆ. ಸೋಂಕು ಕಡಿಮೆಯಾಯಿತು ಎಂಬ ನಡುವೆ ಜಗತ್ತಿನಲ್ಲಿ ಆತಂಕ ಮೂಡಿಸಿರುವ ಈ B.1.1.529 ತಳಿ (Omicron​). ಅತ್ಯಂತ ವೇಗವಾಗಿ ಹರಡುವ ಈ ತಳಿ ಮೇಲೆ ಕೋವಿಡ್​ ಲಸಿಕೆ ಬೀರುವ ಪರಿಣಾಮ ಕೂಡ ಕಡಿಮೆ ಇದೆ. ಹೀಗಾಗಿ ಈ ಬಗ್ಗೆ ಕಟ್ಟೆಚ್ಚರವಹಿಸುವಂತೆ ಈಗಾಗಲೇ ಬ್ರಿಟನ್​ ಆರೋಗ್ಯ ಸಚಿವಾಲಯ ತಿಳಿಸಿದೆ. ಇದೇ ಹಿನ್ನಲೆ ದೇಶದಲ್ಲಿನ ಕೋವಿಡ್​ ಸ್ಥಿತಿಗತಿಗಳ ಕುರಿತು ಹಾಗೂ ಮೂರನೇ ಅಲೆ ಭೀತಿ ಮತ್ತು ಈ ಓಮ್ರಿಕಾನ್​ ಸೋಂಕು ದೇಶದಲ್ಲಿ ಹರಡದಂತೆ ಕಟ್ಟೆಚ್ಚರ ಕೈಗೊಳ್ಳಲು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಆರೋಗ್ಯ ಇಲಾಖೆ ಅಧಿಕಾರಿಗಳ ಜೊತೆ ಸಭೆ ನಡೆಸಲು ಮುಂದಾಗಿದ್ದಾರೆ.

    ಬೆಳಗ್ಗೆ ಪ್ರಧಾನಿ ಸಭೆ
    ಇಂದು ಬೆಳಗ್ಗೆ 10. 30ಕ್ಕೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಈ ಸಭೆ ನಡೆಯಲಿದೆ. ಈ ವೇಳೆ ಪ್ರಧಾನಿ ಅವರು, ದಕ್ಷಿಣ ಆಫ್ರಿಕಾದ ಹೊಸ ತಳಿ ಬಗ್ಗೆಯೂ ಮಾಹಿತಿ ಪಡೆಯಲಿದ್ದಾರೆ



    ಮೊದಲು ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಯ್ತು ಈ ಓಮ್ರಿಕಾನ್​​
    B.1.1.529 ರೂಪಾಂತರ ತಳಿ ಈ ವಾರದ ಆರಂಭದಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಮೊದಲ ಬಾರಿಗೆ ಪತ್ತೆಯಾಯಿತು. ಬೋಟ್ಸ್ವಾನಾ, ಹಾಂಗ್ ಕಾಂಗ್, ಇಸ್ರೇಲ್ ಮತ್ತು ಬೆಲ್ಜಿಯಂನಲ್ಲಿ - 50 ರೂಪಾಂತರಗಳನ್ನು ಹೊಂದಿದೆ.

    ನಮ್ಮ ದೇಹದ ಜೀವಕೋಶಗಳಿಗೆ ಪ್ರವೇಶವನ್ನು ಈ ವೈರಲ್​ ತಡೆಯುತ್ತದೆ. ಹಿಂದಿನ ರೂಪಾಂತರಗಳಿಗಿಂತ ಇದು ಹೆಚ್ಚು ಹರಡುತ್ತದೆಯೇ ಅಥವಾ ಮಾರಕವಾಗಿದೆಯೇ ಎಂದು ಸಂಶೋಧಕರು ಇನ್ನೂ ಖಚಿತಪಡಿಸಿಲ್ಲ.

    ಇದನ್ನು ಓದಿ: ಭಾರತದಲ್ಲೀಗ ಪುರುಷರಿಗಿಂತ ಮಹಿಳೆಯರ ಸಂಖ್ಯೆಯೇ ಹೆಚ್ಚು: NFHS ಸಮೀಕ್ಷೆಯಲ್ಲಿ ಬಯಲು

    ಅಪೆಕ್ಸ್ ಹೆಲ್ತ್ ರಿಸರ್ಚ್ ಇನ್ಸ್ಟಿಟ್ಯೂಟ್, ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ನಲ್ಲಿ ಸಾಂಕ್ರಾಮಿಕ ರೋಗ ವಿಭಾಗದ ಮುಖ್ಯಸ್ಥರಾಗಿರುವ ಪಾಂಡಾ ಹೇಳುವಂತೆ, ಈ ವೈರಸ್ ಹೆಚ್ಚು ಹರಡುವ ಅಥವಾ ರೂಪಾಂತರ ಸಂಖ್ಯೆ ಹೆಚ್ಚು ಮಾಡುವ ವೈರಸ್​ ಅಲ್ಲ. ಬದಲಿಗೆ, ಇದು ಕಾರ್ಯರೂಪಕ್ಕೆ ಬರುವ ರಚನೆಯ ಕ್ರಿಯೆಯ ಸಂಬಂಧಿಸಿದೆ ಎಂದು ತಿಳಿಸಿದ್ದಾರೆ.

    ಇದನ್ನು ಓದಿ: ದಕ್ಷಿಣ ಆಫ್ರಿಕಾದಲ್ಲಿ ಹೊಸ ತಳಿ ಪತ್ತೆ, ಭಾರೀ ವೇಗದಲ್ಲಿ ಹರಡುತ್ತಿದೆ ವೈರಸ್!

    ರೆಡ್​ ಆಲರ್ಟ್​ ಘೋಷಿಸಿದ ವಿಶ್ವ ಆರೋಗ್ಯ ಸಂಸ್ಥೆ
    ವಿಶ್ವ ಆರೋಗ್ಯ ಸಂಸ್ಥೆ (WHO) ಈ B.1.1.529 ರೂಪಾಂತರ ತಳಿಯ ಕುರಿತು ಕಳವಳ ವ್ಯಕ್ತಪಡಿಸಿದ್ದು, ಎಚ್ಚರದಿಂದ ಇರಲು ಎಲ್ಲಾ ರಾಷ್ಟ್ರಗಳಿಗೆ ತಿಳಿಸಿದೆ. ಈ ತಳಿಗೆ Omicron ಎಂದು ಮರುನಾಮಕರಣ ಮಾಡಿದೆ. ಈ ತಳಿಯ ಕುರಿತು ಹೆಚ್ಚಿನ ಮಾಹಿತಿ ಸಿಕ್ಕಿಲ್ಲ. ಈ ತಳಿಯ ವಿರುದ್ಧ ಲಸಿಕೆಗಳು ಪರಿಣಾಮಕಾರಿಯಾಗಿ ಹೋರಾಡುತ್ತದೆಯಾ ಎಂಬುದನ್ನು ತಿಳಿದುಕೊಳ್ಳಲು ಇನ್ನು ಒಂದು ವಾರ ಸಮಯ ಬೇಕು ಎಂದು ಡಬ್ಲ್ಯೂಎಚ್​ಒ ತಿಳಿಸಿದೆ.

    ಭಾರತಕ್ಕೆ ಪ್ರಯಾಣ ಬೆಳೆಸಿದ ದಕ್ಷಿಣ ಆಫ್ರಿಕಾ, ಬೋಟ್ಸ್ವಾನಾ ಮತ್ತು ಹಾಂಗ್ ಕಾಂಗ್‌ನ ಪ್ರಯಾಣಿಕರನ್ನು ಕಠಿಣ ತಪಾಸಣೆಗೆ ಕರೆಯಲಾಗಿದೆ. ಈ ಕುರಿತು ಮಾಹಿತಿ ನೀಡಿರುವ ಆರೋಗ್ಯ ಇಲಾಖೆ ಇತ್ತೀಚೆಗೆ ವೀಸಾ ನಿರ್ಬಂಧಗಳು ಸಡಿಲಗೊಳಿಸಿದ್ದು, ಅಂತರರಾಷ್ಟ್ರೀಯ ಪ್ರಯಾಣಕ್ಕೆ ಅವಕಾಶ ನೀಡಿರುವುದು ಸಾರ್ವಜನಿಕ ಆರೋಗ್ಯದ ಗಂಭೀರ ಪರಿಣಾಮಗಳನ್ನು ಹೊಂದಿದೆ ಎಂದು ತಿಳಿಸಿದೆ.

    ಭಾರತದಲ್ಲಿ ಸದ್ಯ ಸಕ್ರಿಯ ಕೊರೋನಾ ಪ್ರಕರಣಗಳು  1,07,019ರಷ್ಟಿದ್ದು, 3,39,88,797 ಮಂದು ಸೋಂಕಿನಿಂದ ಗುಣಮುಖರಾಗಿದ್ದಾರೆ. ಕೋವಿಡ್ ಸೋಂಕಿನಿಂದ ಒಟ್ಟು 4,67,933 ಮಂದಿ ಸಾವನ್ನಪ್ಪಿದ್ದಾರೆ.
    Published by:Seema R
    First published: