ಬಿಹಾರದಲ್ಲಿ ಮಕ್ಕಳ ನಿರಂತರ ಸಾವು, ಪೋಷಕರ ಆಕ್ರಂದನ; ಎಲ್​ಜೆಪಿ ನಾಯಕ ಮಾತ್ರ ಗೋವಾದಲ್ಲಿ ಮೋಜು-ಮಸ್ತಿ?

ಎಲ್​ಜೆಪಿ ವರಿಷ್ಠ ರಾಮ್​ ವಿಲಾಸ್​ ಪಾಸ್ವಾನ್​ ಮಗ ಚಿರಾಗ್​​​ ಪಾಸ್ವಾನ್​ ಅವರನ್ನು ರಾಧಿಕಾ ಖೇರ್​ ದೂಷಿಸಿದ್ದಾರೆ. ಬಿಹಾರದಲ್ಲಿ ಬಿಜೆಪಿ ಮೈತ್ರಿಯ ಸರ್ಕಾರ ಅಮಾಯಕರ ಸಾವಿನ ಬಗ್ಗೆ ಸಂಪೂರ್ಣವಾಗಿ ಅಸಡ್ಡೆ ಹೊಂದಿದೆ ಎಂದು ಟ್ವೀಟ್​ ಮಾಡಿದ್ದಾರೆ.

Latha CG | news18
Updated:June 18, 2019, 4:11 PM IST
ಬಿಹಾರದಲ್ಲಿ ಮಕ್ಕಳ ನಿರಂತರ ಸಾವು, ಪೋಷಕರ ಆಕ್ರಂದನ; ಎಲ್​ಜೆಪಿ ನಾಯಕ ಮಾತ್ರ ಗೋವಾದಲ್ಲಿ ಮೋಜು-ಮಸ್ತಿ?
ಟ್ವೀಟ್​ ಚಿತ್ರ
  • News18
  • Last Updated: June 18, 2019, 4:11 PM IST
  • Share this:
ನವದೆಹಲಿ(ಜೂ. 18): ಬಿಹಾರದಲ್ಲಿ ನೂರಾರು ಮಕ್ಕಳು ಮೆದುಳು ಜ್ವರಕ್ಕೆ ಬಲಿಯಾಗಿದ್ದಾರೆ. ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ. ಮುಜಾಫರ್​ನಗರ ಹಾಗೂ ಇನ್ನಿತರೆ ಜಿಲ್ಲೆಗಳಲ್ಲಿ 17 ದಿನಗಳ ಅವಧಿಯಲ್ಲಿ ಒಟ್ಟು 126 ಮಕ್ಕಳು ಪ್ರಾಣ ಬಿಟ್ಟಿದ್ದಾರೆ. ಒಂದೆಡೆ ಮಕ್ಕಳ ಸಾವು, ಪೋಷಕರ ಆಕ್ರಂದನ, ಗೋಳಾಟ.. ಇಡೀ ಮುಜಾಫರ್​ ನಗರದಲ್ಲಿ ಶೋಕ ಮಡುಗಟ್ಟಿದೆ. ಇನ್ನೊಂದೆಡೆ ತೀವ್ರ ತಾಪಮಾನಕ್ಕೆ 70 ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, ಇಡೀ ಬಿಹಾರವೇ ಹೊತ್ತಿ ಉರಿಯುತ್ತಿದೆ. ಆದರೆ ಬಿಹಾರದ ಲೋಕ್​ ಜನಶಕ್ತಿ ಪಕ್ಷದ(ಎಲ್​​ಜೆಪಿ) ಮುಖಂಡ, ಪ್ರಮುಖ ರಾಜ್ಯ ನಾಯಕ ಚಿರಾಗ್​ ಪಾಸ್ವಾನ್ ಮಾತ್ರ​ ಗೋವಾದಲ್ಲಿ ಗೆಳೆಯರೊಂದಿಗೆ ಮೋಜು-ಮಸ್ತಿ ಮಾಡುತ್ತಿದ್ದಾರೆ.

ಕಾಂಗ್ರೆಸ್ ಪಕ್ಷದ​ ರಾಷ್ಟ್ರೀಯ ಮಾಧ್ಯಮ ಸಂಯೋಜಕಿ ರಾಧಿಕಾ ಖೇರಾ ಅವರು ಎಲ್​ಜೆಪಿ ನಾಯಕ ಚಿರಾಗ್​ ಪಾಸ್ವಾನ್ ಗೋವಾದಲ್ಲಿ ಪಾರ್ಟಿ ಮಾಡುತ್ತಿರುವ​ ಫೋಟೋಗಳನ್ನು ಟ್ವಿಟ್ಟರ್​ನಲ್ಲಿ ಹಂಚಿಕೊಂಡಿದ್ದಾರೆ. ಬಿಹಾರದಲ್ಲಿ ಅತ್ಯಂತ ಕೆಟ್ಟ ಪರಿಸ್ಥಿತಿ ಇರುವಾಗ ಜಮೈ ಸಂಸದ ಗೋವಾದಲ್ಲಿ ಪಾರ್ಟಿ ಮಾಡಿ ಎಂಜಾಯ್​ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.ಎಲ್​ಜೆಪಿ ವರಿಷ್ಠ ರಾಮ್​ ವಿಲಾಸ್​ ಪಾಸ್ವಾನ್​ ಮಗ ಚಿರಾಗ್​​​ ಪಾಸ್ವಾನ್​ ಅವರನ್ನು ರಾಧಿಕಾ ಖೇರ್​ ದೂಷಿಸಿದ್ದಾರೆ. ಬಿಹಾರದಲ್ಲಿ ಬಿಜೆಪಿ ಮೈತ್ರಿಯ ಸರ್ಕಾರ ಅಮಾಯಕರ ಸಾವಿನ ಬಗ್ಗೆ ಸಂಪೂರ್ಣವಾಗಿ ಅಸಡ್ಡೆ ಹೊಂದಿದೆ ಎಂದು ಟ್ವೀಟ್​ ಮಾಡಿದ್ದಾರೆ.

ಇದನ್ನೂ ಓದಿ:ಬಿಹಾರದಲ್ಲಿ ಮಕ್ಕಳ ಸಾವು; ವೈದ್ಯರು, ಮಕ್ಕಳನ್ನು ಭೇಟಿ ಮಾಡಲಿರುವ ಸಿಎಂ ನಿತೀಶ್​ಗೆ ಸಂಬಂಧಿಕರಿಂದ 'ಗೋ ಬ್ಯಾಕ್'​ ಘೋಷಣೆ

ಇದೇ ವೇಳೆ, 17 ದಿನಗಳ ಬಳಿಕ ಇಂದು ಬಿಹಾರ ಸಿಎಂ ನಿತೀಶ್​ ಕುಮಾರ್ ಮುಜಾಫರ್​​ ಆಸ್ಪತ್ರೆಗೆ ಭೇಟಿ ನೀಡಲಿದ್ದಾರೆ ಎಂದು ಕಿಡಿಕಾರಿದ ಮಕ್ಕಳ ಪೋಷಕರು, ಸಂಬಂಧಿಕರು 'ಗೋ ಬ್ಯಾಕ್​' ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪರಿಸ್ಥಿತಿಯನ್ನು ಪರಿಶೀಲಿಸಲು ಬಿಹಾರ ಸಿಎಂ ಆಗಮಿಸಿದಾಗ ಸರ್ಕಾರಿ ಶ್ರೀ ಕೃಷ್ಣ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಹೊರಗೆ ಪ್ರತಿಭಟನೆ ನಡೆದಿದೆ.
"ಮುಖ್ಯಮಂತ್ರಿ ವಾಪಸ್ ಜಾವೊ (ಮುಖ್ಯಮಂತ್ರಿಗಳೇ ಹಿಂದಿರುಗಿ)" ಎಂಬ ಘೋಷಣೆಗಳನ್ನು ಕೂಗುತ್ತಾ, ಪ್ರತಿಭಟನಾಕಾರರು ವೈದ್ಯಕೀಯ ಸೌಲಭ್ಯಗಳ ಕೊರತೆಯಿಂದಾಗಿ ಸಾವು ಸಂಭವಿಸುತ್ತಿದೆ ಎಂದು ತಮ್ಮ ಆಕ್ರೋಶವನ್ನು ಹೊರಹಾಕಿದರು.

ಭಾನುವಾರ ಮುಜಾಫರ್​​ನಗರದಲ್ಲಿ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಅವರು ಪತ್ರಿಕಾಗೋಷ್ಠಿ ನಡೆಸುತ್ತಿದ್ದಾಗ, ಬಿಹಾರದ ಆರೋಗ್ಯ ಸಚಿವ ಮಂಗಲ್ ಪಾಂಡೆ ಅವರು ಭಾರತ ಮತ್ತು ಪಾಕಿಸ್ತಾನ ವಿಶ್ವಕಪ್ ಕ್ರಿಕೆಟ್ ಪಂದ್ಯದ ಸ್ಕೋರ್ ತಿಳಿದುಕೊಳ್ಳುವ ಧಾವಂತದಲ್ಲಿದ್ದರು. ಇದರಿಂದಾಗಿ ಪಾಂಡೆ ವಿರುದ್ಧ ಭಾರೀ ಟೀಕೆ ವ್ಯಕ್ತವಾಗಿತ್ತು.
First published:June 18, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ