Afghanistan Crisis: ಹೆಲಿಕಾಪ್ಟರ್ ತುಂಬ ಹಣ ತುಂಬಿಕೊಂಡು ಅಫ್ಘನ್ ಮಾಜಿ ಅಧ್ಯಕ್ಷ ಪರಾರಿಯಾಗಿದ್ದು ಎಲ್ಲಿಗೆ?

ಕಾಬೂಲ್‌ನ ರಷ್ಯಾದ ರಾಯಭಾರ ಕಚೇರಿಯ ಪ್ರಕಾರ, ಘನಿ ನಾಲ್ಕು ಕಾರುಗಳು ಮತ್ತು ಹೆಲಿಕಾಪ್ಟರ್ ತುಂಬ ಹಣದೊಂದಿಗೆ ದೇಶದಿಂದ ಪರಾರಿಯಾಗಿದ್ದಾರೆ. ಹೆಲಿಕಾಪ್ಟರ್‌ನಲ್ಲಿ ಸ್ಥಳಾವಕಾಶದ ಕೊರತೆಯಿಂದಾಗಿ ಘನಿ ಸ್ವಲ್ಪ ಹಣವನ್ನು ಬಿಟ್ಟು ಹೋಗಿದ್ದಾರೆ ಎಂದು ತಿಳಿಸಿದೆ.

ಅಫ್ಘಾನಿಸ್ತಾನದ ಮಾಜಿ ಅಧ್ಯಕ್ಷ ಅಶ್ರಫ್ ಘನಿ

ಅಫ್ಘಾನಿಸ್ತಾನದ ಮಾಜಿ ಅಧ್ಯಕ್ಷ ಅಶ್ರಫ್ ಘನಿ

  • Share this:
Ashraf Ghani: ತಾಲಿಬಾನಿ ಉಗ್ರರು ಅಫ್ಘಾನಿಸ್ತಾನದ ಒಂದೊಂದೇ ನಗರಗಳನ್ನು ವಶಪಡಿಸಿಕೊಂಡು ಕಾಬೂಲ್​​ ಮೇಲೆ ಪ್ರಭುತ್ವ ಸಾಧಿಸುತ್ತಲೇ ಅಫ್ಘಾನಿಸ್ತಾನದ ಅಂದಿನ ಅಧ್ಯಕ್ಷ ಅಶ್ರಫ್ ಘನಿ 4 ಕಾರುಗಳು, ಹೆಲಿಕಾಪ್ಟರ್​​ ತುಂಬ ಹಣ ತುಂಬಿಕೊಂಡು ದೇಶ ತೊರೆದಿದ್ದರು. ಅಫ್ಘಾನಿಸ್ತಾನದ ಮಾಜಿ ಅಧ್ಯಕ್ಷ ಅಶ್ರಫ್ ಘನಿಯ ಪ್ರಸ್ತುತ ಸ್ಥಳದ ಬಗ್ಗೆ ವದಂತಿಗಳು ಹರಿದಾಡುತ್ತಿವೆ. ರಷ್ಯಾದ ಮೂಲಗಳು ಅವರು ಒಮಾನ್‌ನಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ. ಕೆಲವು ವರದಿಗಳು ಭಾನುವಾರ (ಆಗಸ್ಟ್ 15) ರಂದು ಕಾಬೂಲ್‌ನಿಂದ ತಪ್ಪಿಸಿಕೊಂಡ ನಂತರ ಘನಿ ತಜಕಿಸ್ತಾನಕ್ಕೆ ಪಲಾಯನ ಮಾಡಿದ್ದಾರೆ ಎಂದು ಹೇಳಲಾಗಿದೆ. 

ಯುದ್ಧಪೀಡಿತ ರಾಷ್ಟ್ರದಲ್ಲಿ ಯುಎಸ್ ಬೆಂಬಲಿತ ಸರ್ಕಾರ ಪತನಗೊಂಡ ನಂತರ ಕಾಬೂಲ್ ನಿಂದ ತಪ್ಪಿಸಿಕೊಳ್ಳಲು ಅಶ್ರಫ್ ಘನಿ ನಿರ್ಧರಿಸಿದ್ದರು. ನಂತರ ತಾಲಿಬಾನ್ ಭಾನುವಾರ ಕಾಬೂಲ್ ಅನ್ನು ವಶಪಡಿಸಿಕೊಂಡಿತು.  ಕಾಬೂಲ್‌ನ ರಷ್ಯಾದ ರಾಯಭಾರ ಕಚೇರಿಯ ಪ್ರಕಾರ, ಘನಿ ನಾಲ್ಕು ಕಾರುಗಳು ಮತ್ತು ಹೆಲಿಕಾಪ್ಟರ್ ತುಂಬ ಹಣದೊಂದಿಗೆ ದೇಶದಿಂದ ಪರಾರಿಯಾಗಿದ್ದಾರೆ. ಹೆಲಿಕಾಪ್ಟರ್‌ನಲ್ಲಿ ಸ್ಥಳಾವಕಾಶದ ಕೊರತೆಯಿಂದಾಗಿ ಘನಿ ಸ್ವಲ್ಪ ಹಣವನ್ನು ಬಿಟ್ಟು ಹೋಗಿದ್ದಾರೆ ಎಂದು ರಷ್ಯಾದ ರಾಯಭಾರ ಕಚೇರಿ ಸೋಮವಾರ ಹೇಳಿಕೊಂಡಿದೆ.

ಘನಿ ಕಾಬೂಲ್‌ನಿಂದ ನೇರವಾಗಿ ಒಮಾನ್‌ನ ಸುಲ್ತಾನರ ಬಳಿಕೆ ಹಾರಿದರು ಎಂದು ರಷ್ಯಾದ ಮೂಲಗಳು ಸೋಮವಾರ ಪ್ರತಿಪಾದಿಸಿವೆ. ಅಜ್ಞಾತ ಸ್ಥಳದಲ್ಲಿರಲು ಘನಿ ಆದ್ಯತೆ ನೀಡಿದದ್ದಾರೆ ಎನ್ನಲಾಗುತ್ತಿದೆ. ಅಫ್ಘಾನ್ ರಾಜತಾಂತ್ರಿಕರ ಪ್ರಕಾರ ಕೊಂಡ ಅಧ್ಯಕ್ಷರು ಇರುವ ಸ್ಥಳದ ಬಗ್ಗೆ ನಿಖರವಾದ ಮಾಹಿತಿಯಿಲ್ಲ. ಕೆಲವು ಮೂಲಗಳ ಪ್ರಕಾರ, ಅವರು ಕಾಬೂಲ್‌ನಿಂದ ನೇರವಾಗಿ ಒಮಾನ್‌ನ ಸುಲ್ತಾನರ ಬಳಿ ಹಾರಿದರು ಎಂದು ಡೈಲಿ ಮೇಲ್‌ಗೆ ತಿಳಿಸಿದದ್ದಾರೆ.

ಅಫ್ಘಾನಿಸ್ತಾನದ ಮಾಜಿ ಅಧ್ಯಕ್ಷ ಘನಿ ಫೇಸ್‌ಬುಕ್ ಪೋಸ್ಟ್‌ನಲ್ಲಿ, ರಾಜಧಾನಿಯ ಲಕ್ಷಾಂತರ ಜನರಿಗೆ ಅಪಾಯವನ್ನುಂಟುಮಾಡುವ ತಾಲಿಬಾನ್‌ಗಳೊಂದಿಗಿನ ಘರ್ಷಣೆಯನ್ನು ತಪ್ಪಿಸಲು ಕಾಬೂಲ್‌ನಿಂದ ಹೊರಹೋಗಲು ನಿರ್ಧರಿಸಿದ್ದಾಗಿ ತಿಳಿಸಿದ್ದಾರೆ. ಫೇಸ್‌ಬುಕ್‌ನಲ್ಲಿ ಪೋಸ್ಟ್ ಹೇಳಿಕೆಯಲ್ಲಿ, ಪ್ರಿಯ ದೇಶವಾಸಿಗಳೇ! ಇಂದು ನಾನು ಕಠಿಣ ಆಯ್ಕೆಯನ್ನು ಎದುರಿಸಿದ್ದೇನೆ. ಅರಮನೆಯನ್ನು ಪ್ರವೇಶಿಸಲು ಸಶಸ್ತ್ರ ತಾಲಿಬಾನ್‌ ನಿಂತಿದ್ದಾರೆ.  ನಾನು ನನ್ನ ದೇಶವನ್ನು ರಕ್ಷಿಸಲು ನನ್ನ ಜೀವನವನ್ನು ಮೀಸಲಿಟ್ಟಿದ್ದೇನೆ. ಕಳೆದ ಇಪ್ಪತ್ತು ವರ್ಷಗಳಿಂದ ರಕ್ಷಿಸಿದ್ದೇನೆ. ನನ್ನಿಂದ ಅಸಂಖ್ಯಾತ ದೇಶವಾಸಿಗಳು ಹುತಾತ್ಮರಾಗುವುದನ್ನು ನಾನು ಬಯಸುವುದಿಲ್ಲ. ತಾಲಿಬಾನಿಗಳು ಕಾಬೂಲ್ ನಗರವನ್ನು ನಾಶ ಮಾಡುತ್ತಾರೆ. ಇದರಿಂದ ಆರು ಮಿಲಿಯನ್ ಜನಸಂಖ್ಯೆ ಇರುವ ನಗರ ದುರಂತಕ್ಕೀಡಾಗುತ್ತದೆ. ಇದನ್ನು ತಪ್ಪಿಸಲು ಪಲಾಯನ ಮಾಡಿರೋದಾಗಿ ಬರೆದುಕೊಂಡಿದ್ದಾರೆ.

ಸದ್ಯ ಅಫ್ಘಾನಿಸ್ತಾನದಲ್ಲಿ ಅರಾಜಕತೆ ಸೃಷ್ಟಿಯಾಗಿದೆ. ತಾಲಿಬಾನಿಗಳು ಬಂದೂಕುಗಳೊಂದಿಗೆ ಅಫ್ಘಾನಿಸ್ತಾನದ ಸಂಸತ್​ ಪ್ರವೇಶಿಸಿ ಎಲ್ಲಂದರಲ್ಲಿ ಕೂತಿದ್ದರು. ಅಧ್ಯಕ್ಷರ ಕುರ್ಚಿ ಮೇಲೆ ಕುಳಿತ್ತಿದ್ದ ಫೋಟೋಗಳು ಬಯಲಾಗಿದ್ದವು. ಇಂದು ಕಾಬೂಲ್​ನಲ್ಲಿರುವ ಅಮ್ಯೂಸ್​ಮೆಂಟ್​ ಪಾರ್ಕ್​​ಗಳಿಗೆ ಪ್ರವೇಶಿಸಿರುವ ಉಗ್ರರು ಮೋಜುಮಸ್ತಿಯಲ್ಲಿ ತೊಡಗಿರುವ ವಿಡಿಯೋ ಬಯಲಾಗಿದೆ. ಇವರ ಈ ಅಟ್ಟಹಾಸಕ್ಕೆ ಹೆದರಿರುವ ಅಘ್ಫನ್​ ಪ್ರಜೆಗಳು ದೇಶವನ್ನು ತೊರೆಯಲು ವಿಮಾನ ನಿಲ್ದಾಣಕ್ಕೆ ಗಂಟುಮೂಟೆಗಳ ಜೊತೆ ದೌಡಾಯಿಸುತ್ತಿದ್ದಾರೆ. ಬಸ್​​, ರೈಲುಗಳನ್ನು ಏರುವಂತೆ ಜನಸಂದಣಿ ಮಧ್ಯೆ ವಿಮಾನವನ್ನು ಏರಲು ಪ್ರಯತ್ನಿಸುತ್ತಿದ್ದಾರೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
Published by:Kavya V
First published: