ಉದ್ಯೋಗವೇ ಇಲ್ಲ ಎಂದ ಮೇಲೆ ಮೀಸಲಾತಿ ನೀಡಿ ಏನು ಪ್ರಯೋಜನ ಎಂದ ನಿತಿನ್ ಗಡ್ಕರಿ


Updated:August 5, 2018, 11:22 AM IST
ಉದ್ಯೋಗವೇ ಇಲ್ಲ ಎಂದ ಮೇಲೆ ಮೀಸಲಾತಿ ನೀಡಿ ಏನು ಪ್ರಯೋಜನ ಎಂದ ನಿತಿನ್ ಗಡ್ಕರಿ
ಕೇಂದ್ರ ಸಚಿವ ನಿತಿನ್ ಗಡ್ಕರಿ

Updated: August 5, 2018, 11:22 AM IST
ನ್ಯೂಸ್ 18 ಕನ್ನಡ

 

ಮಹಾರಾಷ್ಟ್ರ(ಆ.5): ಉದ್ಯೋಗದಲ್ಲಿ ಮೀಸಲಾತಿಗೆ ಆಗ್ರಹಿಸಿ ಮರಾಠರ ಪ್ರತಿಭಟನೆ ಮುಂದುವರೆದಿರುವಾಗಲೇ, ದೇಶದಲ್ಲಿ ಉದ್ಯೋಗಗಳೇ ಇಲ್ಲವಾದ ಮೇಲೆ ಇನ್ನು ಮೀಸಲಾತಿಯಿಂದ ಏನು ಪ್ರಯೋಜನ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.ಮಹಾರಾಷ್ಟ್ರದ ಔರಂಗಬಾದ್ನಲ್ಲಿ ಮಾತನಾಡಿರುವ ಗಡ್ಕರಿ, "ನಾವು ಮೀಸಲಾತಿ ನೀಡುತ್ತೇವೆ ಎಂದರೂ ಬ್ಯಾಂಕಿಂಗ್ ವಲಯ, ಐಟಿ, ಹಾಗೂ ಸರ್ಕಾರಿ ವಲಯದಲ್ಲಿ ಉದ್ಯೋಗವೇ ಇಲ್ಲದಂತಾಗಿದೆ. ಎಲ್ಲ ಕ್ಷೇತ್ರದ ನೌಕರಿಗಳು ಕ್ಷಿಣಿಸಿವೆ," ಎಂದು ಹೇಳಿರುವುದಾಗಿ ಪಿಇಐ ವರದಿ ಮಾಡಿದೆ.


"ಹಿಂದುಳಿದ ವರ್ಗ ಎಂಬುದು ಇಂದು ರಾಜಕೀಯ ಆಸಕ್ತಿಯ ವಿಷಯವಾಗಿದೆ," ಎಂದು ಹೇಳಿದ ಸಚಿವರು, "ಇಂದು ಪ್ರತಿಯೊಬ್ಬರು ಹಿಂದುಳಿದವರು ಎಂದು ಹೇಳುತ್ತಾರೆ. ಬಿಹಾರ ಮತ್ತು ಉತ್ತರಪ್ರದೇಶದಲ್ಲಿ ಬ್ರಾಹ್ಮಣರು ಪ್ರಬಲರಾಗಿದ್ದಾರೆ. ರಾಜಕೀಯವಾಗಿಯೂ ಪ್ರಭಾವ ಬೆಳೆಸಿಕೊಂಡಿದ್ದಾರೆ. ಅವರು ಕೂಡ ನಾವು ಹಿಂದುಳಿದವರು ಎನ್ನುತ್ತಾರೆ.

Loading...


ಡತನ ಎಂಬುದು ಜಾತಿ, ಭಾಷೆಯನ್ನು ಆಧರಿಸಿರುವಂತಹದ್ದಲ್ಲ. ಯಾವುದೇ ಪ್ರಾಂತ್ಯದ ಮುಸ್ಲಿಂ ಆಗಿರಲಿ, ಹಿಂದೂ ಆಗಿರಲಿ ಅಥವಾ ಮರಾಠರಾಗಿರಲಿ, ಎಲ್ಲ ಸಮುದಾಯಗಳು ಒಂದೇ ವರ್ಗ. ಯಾರಿಗೆ ಉಡಲು ಬಟ್ಟೆ ಇಲ್ಲ, ಯಾರಿಗೆ ತಿನ್ನಲು ಅನ್ನವಿಲ್ಲ. ಅವರನ್ನು ನಾವು ಬಡವರು ಎಂದು ಪರಿಗಣಿಸಬೇಕು. ಎಲ್ಲ ಸಮುದಾಯಗಳಲ್ಲೂ ಬಡತನ ಇದೆ. ಇದೇ ಸಾಮಾಜಿಕ-ಆರ್ಥಿಕ ಚಿಂತನೆ ಮತ್ತು ಇದನ್ನು ರಾಜಕೀಯಗೊಳಿಸಬಾರದು," ಎಂದು ಗಡ್ಕರಿ ಹೇಳಿದ್ದಾರೆ.


ಈ ಹೇಳಿಕೆ ನಂತರ ಟ್ವೀಟ್ ಮಾಡಿರುವ ನಿತಿನ್ ಗಡ್ಕರಿ, "ಮೀಸಲಾತಿಯಲ್ಲಿನ ಮಾನದಂಡಗಳನ್ನು ಬದಲಾಯಿಸುವ ಚಿಂತನೆ ಕೇಂದ್ರ ಸರ್ಕಾರಕ್ಕಿಲ್ಲ," ಎಂದು ಸ್ಪಷ್ಟಪಡಿಸಿದ್ದಾರೆ.

(

)

ಉದ್ಯೋಗದಲ್ಲಿ ಮೀಸಲಾತಿಗಾಗಿ ಮರಾಠರು ನಡೆಸುತ್ತಿರುವ ಪ್ರತಿಭಟನೆಯಲ್ಲಿ ಎರಡು ವಾರದಲ್ಲಿ ಏಳು ಮಂದಿ ಜೀವ ಕಳೆದುಕೊಂಡಿದ್ದಾರೆ.
First published:August 5, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...