ನೀವು ನನ್ನನ್ನು 5 ವರ್ಷ ಶಾಶ್ವತವಾಗಿ ರೂಪಿಸಿದಾಗ ನಾನು ಏಕೆ ತಾತ್ಕಾಲಿಕ ವಿಧಿಗೆ ಅವಕಾಶ ನೀಡಲಿ; 370ನೇ ವಿಧಿ ಬಗ್ಗೆ ಮೋದಿ ಮಾತು

ಜಮ್ಮು-ಕಾಶ್ಮೀರದ ಮುಗ್ಧ ಜನರು, ಸೈನಿಕ ಪ್ರಾಣ ತ್ಯಾಗ ತಡೆಗಟ್ಟುವ ಪ್ರಾಮಾಣಿಕ ಪಯತ್ನ ಕಳೆದ 70 ವರ್ಷಗಳಲ್ಲಿ ನಡೆಯಲೇ ಇಲ್ಲ. ಬಿಜೆಪಿ ಅಂತಹ ಒಂದು ಕ್ರಮಕ್ಕೆ ಮುಂದಾದಾಗ ಕಾಂಗ್ರೆಸ್ ಅದನ್ನು ವಿರೋಧಿಸುತ್ತಿದೆ ಎಂದು ಮೋದಿ ಆರೋಪಿಸಿದರು.

HR Ramesh | news18-kannada
Updated:October 19, 2019, 7:48 PM IST
ನೀವು ನನ್ನನ್ನು 5 ವರ್ಷ ಶಾಶ್ವತವಾಗಿ ರೂಪಿಸಿದಾಗ ನಾನು ಏಕೆ ತಾತ್ಕಾಲಿಕ ವಿಧಿಗೆ ಅವಕಾಶ ನೀಡಲಿ; 370ನೇ ವಿಧಿ ಬಗ್ಗೆ ಮೋದಿ ಮಾತು
ಪ್ರಧಾನಿ ನರೇಂದ್ರ ಮೋದಿ
  • Share this:
ನವದೆಹಲಿ: 370 ವಿಧಿ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಕಾಂಗ್ರೆಸ್ ವಿರುದ್ಧ ಮತ್ತೊಮ್ಮೆ ಹರಿಹಾಯ್ದಿದ್ದಾರೆ. 370ನೇ ವಿಧಿಯನ್ನು ರದ್ದು ಮಾಡುವುದಾಗಿ 1964ರಲ್ಲಿ ಕಾಂಗ್ರೆಸ್ ನಾಯಕರು ಸಂಸತ್ತಿನಲ್ಲಿ ನೀಡಿದ್ದ ಭರವಸೆಯನ್ನು ಪೂರೈಸಲಿಲ್ಲ ಎಂದು ಆರೋಪಿಸಿದ್ದಾರೆ. 

ಹರಿಯಾಣ ವಿಧಾನಸಭಾ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಇಂದು ಮುಕ್ತಾಯಗೊಳ್ಳಲಿದೆ. ರಾಜ್ಯದ ಸಿರ್ಸಾದಲ್ಲಿ ಮಾತನಾಡಿದ ಪ್ರಧಾನಿ ಮೋದಿ, 1964ರ ಸಂಸತ್ ಚರ್ಚೆಯ ವೇಳೆ, ದೇಶದ ವಿಶಿಷ್ಟ ನಾಯಕರು ಕಾಂಗ್ರೆಸ್ ವಿಭಜನೆಯಿಂದ ಅಸಮಾಧಾನಗೊಂಡಿದ್ದರು. 370ನೇ ವಿಧಿಯನ್ನು ರದ್ದುಗೊಳಿಸಬೇಕು ಮತ್ತು ಸಂಸತ್ತಿನಲ್ಲಿ ಈ ವಿಷಯದ ಬಗ್ಗೆ ಚರ್ಚೆ ನಡೆಯಬೇಕು ಎಂಬ ಬೇಡಿಕೆ ಇಡಲಾಗಿತ್ತು. ಆ ವೇಳೆ ಕಾಂಗ್ರೆಸ್ ನಾಯಕರು, ಇನ್ನೊಂದು ವರ್ಷದಲ್ಲಿ 370 ವಿಧಿಯನ್ನು ರದ್ದುಗೊಳಿಸುವುದಾಗಿ ಹೇಳಿದ್ದರು. ಆದರೆ, ಕಾಂಗ್ರೆಸ್​ ತನ್ನ ಮಾತಿನಂತೆ ನಡೆದುಕೊಳ್ಳಲಿಲ್ಲ ಎಂದು ಹೇಳಿದರು.

ಇದಕ್ಕೂ ಮುನ್ನ ಎಲ್ಲೆನಾಬಾದ್​ ಚುನಾವಣಾ ರ್ಯಾಲಿಯಲ್ಲಿ ಪ್ರಧಾನಿ ಮೋದಿ ಅವರು 370ನೇ ವಿಧಿ ಮತ್ತು ಕರ್ತಾರ್​ಪುರ್​ ಕಾರಿಡಾರ್ ವಿಚಾರವನ್ನು ಪ್ರಸ್ತಾಪಿಸಿ, ಕಾಂಗ್ರೆಸ್ ವಿರುದ್ಧ ಹರಿಹಾಯ್ದರು. ಕಾಂಗ್ರೆಸ್​ ತನ್ನ ತಪ್ಪು ನೀತಿ ಮತ್ತು ತಂತ್ರಗಾರಿಕೆಯಿಂದ ಈ ದೇಶವನ್ನು ನಾಶ ಮಾಡುತ್ತಿದೆ ಎಂದು ಆರೋಪಿಸಿದ್ದರು. 370ನೇ ವಿಧಿಯನ್ನು ಉಲ್ಲೇಖಿಸಿದ ಪ್ರಧಾನಿ ಮೋದಿ, ಡಾ.ಬಿ.ಆರ್.ಅಂಬೇಡ್ಕರ್ ಅವರಿಂದ ತಾತ್ಕಾಲಿಕ ಪ್ರಾತಿನಿಧ್ಯದ 370ನೇ ವಿಧಿಯನ್ನು ಕಾಂಗ್ರೆಸ್ 70 ವರ್ಷಗಳ ಕಾಲ ಮುಂದುವರೆಸಿಕೊಂಡು ಬಂದಿತು ಎಂದು ಹೇಳಿದರು.

ಇದನ್ನು ಓದಿ: ಲೋಕಸಭೆ ಫಲಿತಾಂಶದಂತೆ ಹರಿಯಾಣ, ಮಹಾರಾಷ್ಟ್ರ ಚುನಾವಣೆಯಲ್ಲಿಯೂ ಕಾಂಗ್ರೆಸ್​ಗೆ ಹೀನಾಯ ಸೋಲು; ಮೋದಿ

ಜಮ್ಮು-ಕಾಶ್ಮೀರದ ಮುಗ್ಧ ಜನರು, ಸೈನಿಕ ಪ್ರಾಣ ತ್ಯಾಗ ತಡೆಗಟ್ಟುವ ಪ್ರಾಮಾಣಿಕ ಪಯತ್ನ ಕಳೆದ 70 ವರ್ಷಗಳಲ್ಲಿ ನಡೆಯಲೇ ಇಲ್ಲ. ಬಿಜೆಪಿ ಅಂತಹ ಒಂದು ಕ್ರಮಕ್ಕೆ ಮುಂದಾದಾಗ ಕಾಂಗ್ರೆಸ್ ಅದನ್ನು ವಿರೋಧಿಸುತ್ತಿದೆ ಎಂದು ಮೋದಿ ಆರೋಪಿಸಿದರು. ಜೊತೆಗೆ ನೀವು ನನ್ನನ್ನು ಐದು ವರ್ಷ ಶಾಶ್ವತವಾಗಿ ಮಾಡಿದಾಗ ನಾನು ಹೇಗೆ ತಾತ್ಕಾಲಿಕ ವಿಧಿಗೆ ಅವಕಾಶ ನೀಡಲಿ ಎಂದು ಹೇಳಿದರು.

 

First published:October 19, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading