HOME » NEWS » National-international » WHEN TO TAKE SECOND COVID 19 VACCINE IF I HAVE TESTED POSITIVE AFTER FIRST DOSE DOCTOR EXPLAINS STG LG

Corona Vaccine: ಮೊದಲನೇ​ ಡೋಸ್ ಲಸಿಕೆ ಹಾಕಿಸಿಕೊಂಡ ಬಳಿಕ ಕೊರೋನಾ ಪಾಸಿಟಿವ್ ಬಂದರೆ, 2ನೇ  ಡೋಸ್ ಯಾವಾಗ ತೆಗೆದುಕೊಳ್ಳಬೇಕು?

ಕೋವಿಡ್-19 ಪಾಸಿಟಿವ್‌ ಬಂದಿರುವ ಯಾರಾದರೂ ಈಗ ಲಸಿಕೆ ತೆಗೆದುಕೊಳ್ಳಲು ಬಯಸಿದರೆ, ಆ ವ್ಯಕ್ತಿಯು SARS- CoV-2 ಸೋಂಕಿಗೊಳಗಾದ ನಂತರ ರೋಗಲಕ್ಷಣ ಗುಣವಾದ ಒಂದರಿಂದ ಮೂರು ತಿಂಗಳ ನಡುವೆ ಲಸಿಕೆ ಹಾಕಿಸಿಕೊಳ್ಳಬೇಕು.

news18-kannada
Updated:May 1, 2021, 1:44 PM IST
Corona Vaccine: ಮೊದಲನೇ​ ಡೋಸ್ ಲಸಿಕೆ ಹಾಕಿಸಿಕೊಂಡ ಬಳಿಕ ಕೊರೋನಾ ಪಾಸಿಟಿವ್ ಬಂದರೆ, 2ನೇ  ಡೋಸ್ ಯಾವಾಗ ತೆಗೆದುಕೊಳ್ಳಬೇಕು?
ಸಾಂದರ್ಭಿಕ ಚಿತ್ರ
  • Share this:
ದೇಶದಲ್ಲಿ ಒಂದೆಡೆ ಕೊರೊನಾ ವೈರಸ್‌ ಎರಡನೇ ಅಲೆಯ ಅಬ್ಬರ ಹೆಚ್ಚಾಗುತ್ತಿದ್ದು, ಇನ್ನೊಂದೆಡೆ ವ್ಯಾಕ್ಸಿನೇಷನ್‌ ಪ್ರಕ್ರಿಯೆ ಸಹ ನಡೆಯುತ್ತಿದೆ. ಇಂದಿನಿಂದ ಅಂದರೆ ಮೇ 1 ರಿಂದ ಎಲ್ಲಾ ವಯಸ್ಕರಿಗೆ ಸಹ ಆರಂಭವಾಗುತ್ತಿದೆ. ಈ ಹಿನ್ನೆಲೆ ಲಸಿಕೆ ತೆಗೆದುಕೊಳ್ಳುವ ಮುನ್ನ ಕೆಲವು ವಿಚಾರಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳುವುದು ಅತ್ಯಗತ್ಯ. ಈ ವಿಚಾರಗಳನ್ನು ನವದೆಹಲಿಯ ಐಸಿಎಂಆರ್ ಸಾಂಕ್ರಾಮಿಕ ರೋಗಶಾಸ್ತ್ರ ಮತ್ತು ಸಾಂಕ್ರಾಮಿಕ ರೋಗಗಳ ವಿಭಾಗದ ಮುಖ್ಯಸ್ಥ ಡಾ. ಪಾಂಡಾ ನ್ಯೂಸ್‌ 18 ಜತೆಗೆ ಹಂಚಿಕೊಂಡಿದ್ದಾರೆ.

ತಾತ್ವಿಕವಾಗಿ, ಕೋವ್ಯಾಕ್ಸಿನ್‌ನ ಎರಡು ಪ್ರಮಾಣಗಳನ್ನು ನಾಲ್ಕು ವಾರಗಳ ಅಂತರದಲ್ಲಿ ತೆಗೆದುಕೊಳ್ಳಬೇಕಾಗುತ್ತದೆ, ಮತ್ತು ಕೋವಿಶೀಲ್ಡ್‌ ಆದರೆ, 6-8 ವಾರಗಳ ಮಧ್ಯಂತರದಲ್ಲಿ ಎರಡು ಡೋಸ್‌ಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಆದರೆ, ಎರಡು ಡೋಸ್‌ಗಳ ನಡುವಿನ ಮಧ್ಯಂತರ ಅವಧಿಯಲ್ಲಿ, ಯಾರಾದರೂ ಕೋವಿಡ್ -19 ಪಾಸಿಟಿವ್‌ ಆದರೆ, ಅವನು ಅಥವಾ ಅವಳು ಸ್ವಲ್ಪ ಸಮಯ ಕಾಯಬೇಕು ಮತ್ತು ಕೋವಿಡ್-19ನ ಎಲ್ಲಾ ಲಕ್ಷಣಗಳು ಗುಣವಾದ 2-4 ವಾರಗಳ ನಂತರ ಯಾವುದೇ ಸಮಯದಲ್ಲಿ ಸುರಕ್ಷಿತವಾಗಿ ಲಸಿಕೆ ತೆಗೆದುಕೊಳ್ಳಬೇಕು.

ಇನ್ನೊಂದೆಡೆ, ಕೋವಿಡ್-19 ಪಾಸಿಟಿವ್‌ ಬಂದಿರುವ ಯಾರಾದರೂ ಈಗ ಲಸಿಕೆ ತೆಗೆದುಕೊಳ್ಳಲು ಬಯಸಿದರೆ, ಆ ವ್ಯಕ್ತಿಯು SARS- CoV-2 ಸೋಂಕಿಗೊಳಗಾದ ನಂತರ ರೋಗಲಕ್ಷಣ ಗುಣವಾದ ಒಂದರಿಂದ ಮೂರು ತಿಂಗಳ ನಡುವೆ ಲಸಿಕೆ ಹಾಕಿಸಿಕೊಳ್ಳಬೇಕು.

ವ್ಯಾಕ್ಸಿನ್​ ಲಭ್ಯವಿಲ್ಲ ಎಂದು ಹೇಳಿಕೊಂಡೇ ಇಂದು ಸಾಂಕೇತಿಕವಾಗಿ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿದ ಸಿಎಂ ಯಡಿಯೂರಪ್ಪ

ಕೋವಿಡ್ - 19ನ ಲಸಿಕೆಗಳು ರೋಗ-ಮಾರ್ಪಡಿಸುವ ಲಸಿಕೆಗಳಾಗಿವೆ ಎಂಬುದನ್ನು ಜನರು ಅರ್ಥಮಾಡಿಕೊಳ್ಳಬೇಕು. ಕೋವ್ಯಾಕ್ಸಿನ್ ಮತ್ತು ಕೋವಿಶೀಲ್ಡ್ ಎರಡೂ ನಿಮಗೆ ಸೋಂಕು ಬರದಂತೆ ತಡೆಯುವುದಿಲ್ಲ. ಆದರೆ ಭವಿಷ್ಯದಲ್ಲಿ ಕೋವಿಡ್ - 19 ಕಾಯಿಲೆಯ ತೀವ್ರತೆಯಿಂದ ಅವು ನಿಮ್ಮನ್ನು ರಕ್ಷಿಸುತ್ತವೆ ಮತ್ತು ಕಾಪಾಡುತ್ತವೆ. ಆದರೂ, ಲಸಿಕೆಯ ಎರಡೂ ಡೋಸ್‌ ತೆಗೆದುಕೊಂಡ ನಂತರ ನೀವು ಸೋಂಕಿಗೆ ಒಳಗಾಗಿದ್ದರೆ, ಪ್ರಸ್ತುತ ಸಮಯದಲ್ಲಿ ಮತ್ತೆ ವ್ಯಾಕ್ಸಿನೇಷನ್‌ ಮಾಡಿಸುವ ಅಗತ್ಯವಿಲ್ಲ. ನಿಮ್ಮ ಲಸಿಕೆ ಪರಿಣಾಮಕಾರಿಯಾಗಿ ಉಳಿಯುತ್ತದೆ ಮತ್ತು ನಿಮ್ಮ ರೋಗಲಕ್ಷಣಗಳನ್ನು ಉತ್ತಮವಾಗಿ ನಿರ್ವಹಿಸುತ್ತದೆ.

ಇನ್ನು, ಲಕ್ಷಣರಹಿತ ಕೋವಿಡ್ ಸೋಂಕಿನ ವ್ಯಕ್ತಿಯು ಲಸಿಕೆ ತೆಗೆದುಕೊಂಡರೂ ಯಾವುದೇ ಚಿಂತೆ ಮಾಡುವ ಅಗತ್ಯವಿಲ್ಲ. ಇದು ಯಾವುದೇ ಪ್ರತಿಕೂಲ ಪರಿಣಾಮಗಳನ್ನು ಉಂಟುಮಾಡುವುದಿಲ್ಲ. ಆದರೆ ನೈಸರ್ಗಿಕ ಸೋಂಕಿನ ಸಂದರ್ಭದಲ್ಲಿ, ಉತ್ಪತ್ತಿಯಾಗುವ ಪ್ರತಿಕಾಯಗಳು ಸಾಕಷ್ಟು ರಕ್ಷಣೆ ನೀಡಲು ಸಾಕಾಗುತ್ತದೆಯೇ ಎಂದು ನಾವು ಎಂದಿಗೂ ಖಚಿತವಾಗಿ ಹೇಳಲಾಗುವುದಿಲ್ಲ. ನೈಸರ್ಗಿಕ ಸೋಂಕಿನ ಸಂದರ್ಭದಲ್ಲಿ ಪ್ರತಿಕಾಯ ಅಥವಾ ಆ್ಯಂಟಿಬಾಡೀಸ್‌ ಸಾಮಾನ್ಯವಾಗಿ 6-9 ತಿಂಗಳುಗಳಲ್ಲಿ ಕಡಿಮೆಯಾಗಬಹುದು. ಆದರೆ, ಲಸಿಕೆ ಹಾಕಿಸಿಕೊಂಡರೆ ರೋಗನಿರೋಧಕ ಶಕ್ತಿ ಹೆಚ್ಚು ಕಾಲ ಇರುತ್ತದೆ.

ಮುಂದಿನ ದಿನಗಳಲ್ಲಿ ನಾವು ಡೇಟಾವನ್ನು ಸಂಗ್ರಹಿಸುತ್ತಿದ್ದಂತೆ, ವ್ಯಾಕ್ಸಿನೇಷನ್ ನಂತರದ ಪ್ರತಿರಕ್ಷೆಯ ಅವಧಿಯ ಬಗ್ಗೆ ನಾವು ಇನ್ನಷ್ಟು ತಿಳಿದುಕೊಳ್ಳುತ್ತೇವೆ. ಇದನ್ನು ಇಮ್ಯೂನ್ ಮೆಮೋರಿ ಎಂದೂ ಕರೆಯಲಾಗುತ್ತದೆ.ಪ್ರಸ್ತುತ ಸಮಯದಲ್ಲಿ ರೋಗ ಮತ್ತು ಲಸಿಕೆ ಎರಡೂ ಹೊಸದು. ಈ ಹಿನ್ನೆಲೆ ಅವುಗಳ ಬಗ್ಗೆ ನಮ್ಮ ತಿಳುವಳಿಕೆ ಸೀಮಿತವಾಗಿದೆ.

ಲಸಿಕೆ ಹಾಕಿಸಿಕೊಂಡರೂ ಸೋಂಕು ಸಂಭವಿಸಬಹುದು. ಇದು ಹಳೆಯ ಸ್ಟ್ರೈನ್ ಅಥವಾ ಯಾವುದೇ ಹೊಸ ರೂಪಾಂತರಿತ ಕಾರಣದಿಂದಾಗಿರಬಹುದು. ಆದರೆ ಲಸಿಕೆ ತೀವ್ರ ರೋಗವನ್ನು ತಡೆಗಟ್ಟಲು ಸಹಾಯ ಮಾಡುತ್ತದೆ ಎಂದು ನವದೆಹಲಿಯ ಐಸಿಎಂಆರ್ ಸಾಂಕ್ರಾಮಿಕ ರೋಗಶಾಸ್ತ್ರ ಮತ್ತು ಸಾಂಕ್ರಾಮಿಕ ರೋಗಗಳ ವಿಭಾಗದ ಮುಖ್ಯಸ್ಥ ಡಾ. ಪಾಂಡಾ ತಿಳಿಸಿದ್ದಾರೆ.
Published by: Latha CG
First published: May 1, 2021, 1:44 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories