ಬೆಂಗಳೂರು: ನಗರದ ಹೊರ ವಲಯದಲ್ಲಿರುವ ಸಮಗ್ರ ಆರೋಗ್ಯ ಮತ್ತು ಸಮಗ್ರ ಕೇಂದ್ರ ಎನಿಸಿರುವ ಸೌಕ್ಯ ಸಂಸ್ಥಾಪಕ, ಇಸಾಕ್ ಮಥಾಯ್ ರಾಜ ಚಾರ್ಲ್ಸ್ ಪಟ್ಟಾಭಿಷೇಕದಲ್ಲಿ ಭಾಗಿಯಾಗಿದ್ದು, ಪಟ್ಟಾಭಿಷೇಕದ ಸ್ಥಳ ಹಾಗೂ ಅಲ್ಲಿನ ಊಟೋಪಚಾರ ಹಾಗೂ ವ್ಯವಸ್ಥೆಗಳ ಕುರಿತು ಕೆಲವೊಂದಿಷ್ಟು ಮಾಹಿತಿ ನೀಡಿದ್ದಾರೆ.
ರಾಜಮನೆತನದವರು ಭೇಟಿ ನೀಡುವ ತಾಣ ಸೌಕ್ಯ
ಇಸಾಕ್ ಹಾಗೂ ಅವರ ಪತ್ನಿ ಸುಜಾ ಇಬ್ಬರಿಗೂ ರಾಜಮನೆತನದಿಂದ ಪಟ್ಟಾಭಿಷೇಕಕ್ಕಾಗಿ ವಿಶೇಷ ಇಮೇಲ್ ಅನ್ನು ಕಳುಹಿಸಲಾಗಿತ್ತು. ಸೌಕ್ಯ ಸಂಸ್ಥೆಯು ಸಾವಯವ ಹಾಗೂ ಔಷಧನೀಯ ಉದ್ಯಾನ ನೀರಿನ ಕೊಯ್ಲುಗಳ ಸೌಲಭ್ಯಗಳನ್ನು ಹೊಂದಿದ್ದು ಯುನೈಟೆಡ್ ಕಿಂಗ್‌ಡಮ್‌ನ ಹೊಸದಾಗಿ ಪಟ್ಟಾಭಿಷೇಕ ಮಾಡಿದ 2018 ರಿಂದ 2023 ರವರೆಗೆ ಏಳು ಬಾರಿ ಭೇಟಿ ನೀಡಿದ್ದಾರೆ, ರಾಜ ಚಾರ್ಲ್ಸ್ ತನ್ನ 71 ನೇ ಹುಟ್ಟುಹಬ್ಬವನ್ನು ಕೇಂದ್ರದಲ್ಲಿ ಆಚರಿಸಿದ್ದಾರೆ ಎಂದು ಇಸಾಕ್ ತಿಳಿಸಿದ್ದಾರೆ.
ಇದನ್ನೂ ಓದಿ: Digvijay Singh: ಹಿಂದುತ್ವ ಅನ್ನೋದು ಧರ್ಮವಲ್ಲ, ಬಜರಂಗ ದಳ ಗೂಂಡಾಗಳ ಗುಂಪು: ದಿಗ್ವಿಜಯ್ ಸಿಂಗ್
ರಾಜ ಚಾರ್ಲ್ಸ್‌ನ ಪಟ್ಟಾಭಿಷೇಕಕ್ಕೆ ಇಸಾಕ್ ದಂಪತಿಗಳಿಗಿತ್ತು ಆಹ್ವಾನ
ಹೀಗಾಗಿಯೇ ರಾಜ ಚಾರ್ಲ್ಸ್‌ನ ಪಟ್ಟಾಭಿಷೇಕಕ್ಕೆ ಇಸಾಕ್ ಅವರಿಗೆ ಆಹ್ವಾನ ನೀಡಲಾಗಿತ್ತು ಜೊತೆಗೆ ಪಟ್ಟಾಭಿಷೇಕದ ಸಂಭ್ರಮ ಹಾಗೂ ವೈಭೋಗವನ್ನು ಅವರು ಹಂಚಿಕೊಂಡಿದ್ದಾರೆ. ಕಳೆದ ವರ್ಷ ನವೆಂಬರ್‌ನಲ್ಲಿ ಸೌಕ್ಯಾಕ್ಕೆ ಭೇಟಿದ್ದ ರಾಜ ಚಾರ್ಲ್ಸ್ ಅರಮನೆಯಲ್ಲಿ ನಡೆಯುವ ಪಟ್ಟಾಭಿಷೇಕ ಕಾರ್ಯಕ್ರಮದಲ್ಲಿ ಇಸಾಕ್ ಹಾಗೂ ಅವರ ಪತ್ನಿ ಸುಜಾ ಪಾಲ್ಗೊಳ್ಳಬೇಕೆಂದು ವಿನಂತಿಸಿಕೊಂಡಿದ್ದರು ಎಂದು ತಿಳಿಸಿದ್ದಾರೆ. ಪತ್ನಿ ಹಾಗೂ ಮಕ್ಕಳನ್ನು ಕರೆದುಕೊಂಡು ಬನ್ನಿ ಎಂದು ರಾಣಿ ಕ್ಯಾಮಿಲ್ಲಾ ಒತ್ತಾಯಿಸಿದ್ದನ್ನು ಕೂಡ ಇಸಾಕ್ ಸ್ಮರಿಸಿಕೊಂಡಿದ್ದಾರೆ.
ಸುಂದರವಾಗಿದ್ದ ಆಹ್ವಾನ ಪತ್ರಿಕೆ
ಮೇ 3 ರಂದು ಬಕಿಂಗ್ ಹ್ಯಾಮ್ ಅರಮನೆಯಲ್ಲಿ ಗಾರ್ಡನ್ ಪಾರ್ಟಿಗೆ ಇಸಾಕ್ ಹಾಗೂ ಅವರ ಪತ್ನಿ ಸುಜಾ ಅವರನ್ನು ಆಹ್ವಾನಿಸಿ ಅರಮನೆಯಿಂದ ಇಮೇಲ್ ಬಂದಿರುವುದಾಗಿ ಇಸಾಕ್ ತಿಳಿಸಿದ್ದು, ಇದು ಪಟ್ಟಾಭಿಷೇಕಕ್ಕೆ ಹಾಜರಾಗಲು ಬಂದ ಆಹ್ವಾನ ಪತ್ರಿಕೆಯಾಗಿತ್ತು ಎಂದು ಇಸಾಕ್ ಹೇಳಿದ್ದಾರೆ.
ಖ್ಯಾತ ಗಾಯಕ ಲಿಯೋನೆಲ್ ರಿಚಿಯಿಂದ ಗಾಯನ
ಇಸಾಕ್ ಹಾಗೂ ಅವರ ಪತ್ನಿ ಪಟ್ಟಾಭಿಷೇಕ ನಡೆಯುವ ಸ್ಥಳಕ್ಕೆ ಆಗಮಿಸಿದಾಗ ಸಂಜೆ 4 ಗಂಟೆಯಾಗಿತ್ತು. ಈ ವೇಳೆ ಪ್ರಸಿದ್ಧ ಗಾಯಕರಾದ ಲಿಯೋನೆಲ್ ರಿಚಿಯವರ ಗಾಯನವನ್ನು ಏರ್ಪಡಿಸಲಾಗಿತ್ತು ಎಂದು ಇಸಾಕ್ ತಿಳಿಸುತ್ತಾರೆ. ಅಲ್ಲಿದ್ದ ರಾಜ ಹಾಗೂ ರಾಣಿ ಇಸಾಕ್ ಮತ್ತು ಅವರ ಪತ್ನಿಯ ಕುಶಲೋಪಚಾರ ವಿಚಾರಿಸಿದ್ದು ರಾಣಿ ಕ್ಯಾಮಿಲ್ಲಾ ಆತ್ಮೀಯತೆಯಿಂದ ಸುಜಾರ ಕೆನ್ನೆಯನ್ನು ಚುಂಬಿಸಿದ್ದನ್ನ ಇಸಾಕ್ ನೆನಪಿಸಿಕೊಂಡಿದ್ದಾರೆ.
ದತ್ತಿ ಸಂಸ್ಥೆಗಳಲ್ಲಿ ಕೆಲಸ ಮಾಡುವವರೇ ಹೆಚ್ಚು ಹಾಜರಿದ್ದರು
ಇಸಾಕ್ ದಂಪತಿಗಳು ಮಾತ್ರವಲ್ಲದೆ ಅನೇಕ ದತ್ತಿ ಸಂಸ್ಥೆಗಳಲ್ಲಿ ಕೆಲಸ ಮಾಡುವ ಇಸಾಕ್‌ಗೆ ಗೊತ್ತಿರುವ ಪರಿಚಯಸ್ಥರು, ಸ್ನೇಹಿತರು ಪಟ್ಟಾಭಿಷೇಕ ಕಾರ್ಯಕ್ರಮಕ್ಕೆ ಬಂದಿದ್ದರು ಎಂದು ಇಸಾಕ್ ತಿಳಿಸಿದ್ದಾರೆ. ಇಂತಹ ಸಂಸ್ಥೆಗಳಿಂದ ಬಂದಿದ್ದ ಆಹ್ವಾನಿತರು ಸಂಸತ್ತಿನ ಅಥವಾ ಲಾರ್ಡ್ಸ್ ಸದಸ್ಯರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿದ್ದರು ಎಂದು ತಿಳಿಸಿದ್ದಾರೆ.
800 ದೊರೆಗಳಲ್ಲಿ ಕೇವಲ 20 ದೊರೆಗಳನ್ನು ಮಾತ್ರ ಆಹ್ವಾನಿಸಲಾಗಿತ್ತು ಎಂದು ಇಸಾಕ್ ತಿಳಿಸಿದ್ದು, ರಾಜ ಚಾರ್ಲ್ಸ್ ಮತ್ತು ರಾಣಿ ಕ್ಯಾಮಿಲ್ಲಾ ಅವರನ್ನು ಹೊರತುಪಡಿಸಿ ಹಾಜರಿದ್ದ ರಾಜಮನೆತನದ ಇತರ ಸದಸ್ಯರೆಂದರೆ ಪ್ರಿನ್ಸ್ ಎಡ್ವರ್ಡ್ ಮತ್ತು ಎಡಿನ್‌ಬರ್ಗ್‌ನ ಡಚೆಸ್ ಸೋಫಿ ಎಂದು ಇಸಾಕ್ ತಿಳಿಸುತ್ತಾರೆ.
ಇದನ್ನೂ ಓದಿ: Narendra Modi: 396 ಲೋಕಸಭಾ ಕ್ಷೇತ್ರಗಳು, 51 ಸಮಾವೇಶ! 1 ತಿಂಗಳಲ್ಲಿ 1 ಲಕ್ಷ ಮನೆಗೆ ಮೋದಿ ಸಂದೇಶ ತಲುಪಿಸಲು ಬಿಜೆಪಿ ನಿರ್ಧಾರ
ಪಾರ್ಟಿಯ ಮೆನುವಿನಲ್ಲಿದ್ದ ಐಟಂಗಳೇನು?
ಪಾರ್ಟಿಯ ಮೆನುವಿನಲ್ಲಿ ಸ್ಯಾಂಡ್‌ವಿಚ್, ಕೇಕ್ ಹಾಗೂ ಪಾರ್ಟಿ ಟೀ ಸಾಮಾನ್ಯವಾಗಿತ್ತು ಎಂದು ತಿಳಿಸಿರುವ ಇಸಾಕ್ ರಾಜ ಮತ್ತು ರಾಣಿಯನ್ನು ಪ್ರತ್ಯೇಕವಾಗಿ ಭೇಟಿಯಾಗಲು ಆಯ್ಕೆಯಾಗಿದ್ದ 100 ಜನರಲ್ಲಿ ನಾವು ಒಬ್ಬರಾಗಿದ್ದೆವು ಎಂಬುದಾಗಿ ತಮಗೆ ನೀಡಿದ್ದ ಗೌರವವನ್ನು ನೆನಪಿಸಿಕೊಂಡಿದ್ದಾರೆ. ಆದರೆ ಇತರರಿಗೂ ಭೇಟಿಯಾಗಲು ಅವಕಾಶ ಸಿಗಲಿ ಎಂದು ಭೇಟಿಯನ್ನು ನಿರಾಕರಿಸಿದೆವು ಎಂದು ತಿಳಿಸಿದ್ದಾರೆ.
ಪಟ್ಟಾಭಿಷೇಕದ ದಿನ ಕೂಡ ವಿಶೇಷವಾಗಿತ್ತು
ಮರುದಿನ, ಲಂಡನ್‌ನ ಪ್ರಸಿದ್ಧ ಭಾರತೀಯ ರೆಸ್ಟೊರೆಂಟ್ ಚಟ್ನಿ ಮೇರಿಯಲ್ಲಿ, ಖಾಸಗಿ ಕೊಠಡಿಯೊಂದರಲ್ಲಿ ವಿಶೇಷ ಪಾರ್ಟಿಯನ್ನು ಆಹ್ವಾನಿತರಿಗಾಗಿ ಏರ್ಪಡಿಸಲಾಯಿತು. ಇದಕ್ಕಾಗಿಯೇ ವಿಶೇಷ ಮೆನುವನ್ನು ಏರ್ಪಡಿಸಲಾಗಿತ್ತು ಹಾಗೂ ಬಡಿಸುವುದಕ್ಕೂ ಮುನ್ನ ಕಾಕ್‌ಟೈಲ್‌ಗಳನ್ನು ರಾಜನ ಲಾಂಛನದಿಂದ ಅಲಂಕರಿಸಲಾಗಿತ್ತು ಎಂದು ಇಸಾಕ್ ಮಾಹಿತಿ ನೀಡಿದ್ದಾರೆ.
ಪಟ್ಟಾಭಿಷೇಕದ ದಿನದಂದು, ಬೆಳಿಗ್ಗೆ 8 ಗಂಟೆಗೆ ವೆಸ್ಟ್‌ಮಿನಿಸ್ಟರ್ ಅಬ್ಬಿಯಲ್ಲಿ ಕುಳಿತುಕೊಳ್ಳಲು ಇಸಾಕ್ ದಂಪತಿಗಳಿಗೆ ಸೂಚಿಸಲಾಯಿತು. ಭದ್ರತಾ ತಪಾಸಣೆಗಳು ಕಟ್ಟುನಿಟ್ಟಾಗಿದ್ದವು ಮತ್ತು ಅತಿಥಿಗಳು ತಮ್ಮ ಛತ್ರಿಗಳನ್ನು ಒಳಗೆ ಸಾಗಿಸಲು ಅನುಮತಿಸಲಿಲ್ಲ ಎಂದು ಇಸಾಕ್ ತಿಳಿಸುತ್ತಾರೆ. ಇಲ್ಲಿದ್ದ ಸುಮಾರು 50 ಜನರಲ್ಲಿ 15 ಜನರು ಸೌಕ್ಯಾಗೆ ಭೇಟಿ ನೀಡಿದ ಗಣ್ಯರು ಎಂದೇ ಇಸಾಕ್ ತಮ್ಮ ಸಂಸ್ಥೆಯ ಪ್ರಗತಿಯ ಬಗ್ಗೆ ಹೊಗಳಿಕೊಂಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ