'ಸಾವಿನೊಂದಿಗೆ ಘರ್ಷಣೆಯಾದಾಗ' ತನ್ನ ಕವಿತೆಯಿಂದಲೇ ಗೆದ್ದ ವಾಜಪೇಯಿ...!

Precilla Olivia Dias
Updated:August 16, 2018, 5:12 PM IST
'ಸಾವಿನೊಂದಿಗೆ ಘರ್ಷಣೆಯಾದಾಗ' ತನ್ನ ಕವಿತೆಯಿಂದಲೇ ಗೆದ್ದ ವಾಜಪೇಯಿ...!
Precilla Olivia Dias
Updated: August 16, 2018, 5:12 PM IST
ಪ್ರೆಸಿಲ್ಲಾ ಒಲಿವಿಯಾ ಡಾಯಸ್​, ನ್ಯೂಸ್​ 18 ಕನ್ನಡ

ನವದೆಹಲಿ(ಆ.16): ಮಾಜಿ ಪ್ರಧಾನ ಮಂತ್ರಿ ವಾಜಪೇಯಿಯವರನ್ನು ರಾಜಕಾರಣಿಯಾಗಿ ಅದೆಷ್ಟು ಪ್ರಶಂಸಿಸುತ್ತಾರೋ, ಅಷ್ಟೇ ಪ್ರೀತಿ ಅವರು ಬರೆದ ಕವಿತೆಗಳಿಗೂ ಸಿಕ್ಕಿದೆ. ಅವರ ಲೇಖನಿಯಿಂದ ಮೂಡಿ ಬಂದ ಅದೆಷ್ಟೋ ಕವಿತೆಗಳು ಅವರ ವ್ಯಕ್ತಿತ್ವವನ್ನು ಪರಿಚಯಿಸಿದರೆ, ಮತ್ತೆ ಕೆಲವು ಅವರು ಜೀವನವನ್ನು ನೋಡುತ್ತಿದ್ದ ದೃಷ್ಟಿಯನ್ನು ಜಗತ್ತಿಗೆ ಪರಿಚಯಿಸಿವೆ. ದೀರ್ಘ ಕಾಲದಿಂದ ಅನಾರೋಗ್ಯದಿಂದ ಬಳಲುತ್ತಿರುವ ಅಟಲ್​ ಬಿಹಾರಿ ವಾಜಪೇಯಿಯವರಿಗೆ ಬುಧವಾರದಿಂದ ಕೃತಕ ಉಸಿರಾಟ ನೀಡಲಾಗುತ್ತಿದೆ. ಜಗತ್ತಿನಾದ್ಯಂತ ಅವರ ಅಭಿಮಾನಿಗಳು ಹಾಗೂ ಬೆಂಬಲಿಗರು ಗುಣಮುಖರಾಗಲು ಪ್ರಾರ್ಥಿಸುತ್ತಿದ್ದಾರೆ. ಒಂದು ವೇಳೆ ಇಂದು ಜನರು ತಮ್ಮ ಮೇಲೆ ತೋರಿಸುತ್ತಿರುವ ಈ ಪ್ರೀತಿ, ಕಾಳಜಿಯನ್ನು ಅಟಲ್​ ಬಿಹಾರಿ ವಾಜಪೇಯಿ ನೋಡಲು ಸಮರ್ಥರಾಗಿದ್ದರೆ, ಅವರು ಖಂಡಿತವಾಗಿಯೂ ಇದನ್ನು ಒಂದು ಅದ್ಭುತ ಕವಿತೆಯ ಮೂಲಕ ಅಭಿವ್ಯಕ್ತಪಡಿಸುತ್ತಿದ್ದರು.

1988ರಲ್ಲಿ ವಾಜಪೇಯಿಯವರು ಕಿಡ್ನಿ ಚಿಕಿತ್ಸೆಗಾಗಿ ಅಮೆರಿಕಾಗೆ ತೆರಳಿದ್ದ ಸಂದರ್ಭದಲ್ಲಿ ಅವರು ಧರ್ಮವೀರ್​ ಭಾರತಿಯವರಿಗೆ ಪತ್ರವೊಂದನ್ನು ಬರೆದಿದ್ದರು. ಈ ಪತ್ರದಲ್ಲಿ ವಾಜಪೇಯಿಯವರು ಸಾವಿನ ಕಣ್ಣಲ್ಲಿ ಕಣ್ಣಿಟ್ಟು ಅದನ್ನು ಸೋಲಿಸುವ ಆಕಾಂಕ್ಷೆಯನ್ನು ಕವಿತೆಯ ರೂಪದಲ್ಲಿ ಬಿಂಬಿಸಿದ್ದರು.

ठन गई!

मौत से ठन गई!

जूझने का मेरा इरादा न था,
मोड़ पर मिलेंगे इसका वादा न था,
Loading...

रास्ता रोक कर वह खड़ी हो गई,
यूं लगा जिंदगी से बड़ी हो गई।

मौत की उमर क्या है? दो पल भी नहीं,
जिंदगी सिलसिला, आज कल की नहीं।

मैं जी भर जिया, मैं मन से मरूं,
लौटकर आऊंगा, कूच से क्यों डरूं?

तू दबे पांव, चोरी-छिपे से न आ,
सामने वार कर फिर मुझे आजमा।

मौत से बेखबर, जिंदगी का सफ़र,
शाम हर सुरमई, रात बंसी का स्वर।

बात ऐसी नहीं कि कोई ग़म ही नहीं,
दर्द अपने-पराए कुछ कम भी नहीं।

प्यार इतना परायों से मुझको मिला,
न अपनों से बाक़ी हैं कोई गिला।

हर चुनौती से दो हाथ मैंने किए,
आंधियों में जलाए हैं बुझते दिए।

आज झकझोरता तेज़ तूफ़ान है,
नाव भंवरों की बांहों में मेहमान है।

पार पाने का क़ायम मगर हौसला,
देख तेवर तूफ़ां का, तेवरी तन गई।

मौत से ठन गई।

-अटल बिहारी वाजपेयी 


ವಾಜಪೇಯಿಯವರು ಬರೆದ ಈ ಕವಿತೆಯ ಕನ್ನಡ ಅನುವಾದ

ಘರ್ಷಣೆಯಾಯಿತು
ಸಾವಿನೊಂದಿಗೆ ಘರ್ಷಣೆಯಾಯಿತು
ಯುದ್ಧ ಮಾಡುವ ಉದ್ದೇಶ ನನಗಿರಲಿಲ್ಲ,
ತಿರುವಿನಲ್ಲಿ ಸಿಗುತ್ತೇವೆಂದು ಮಾತು ಕೊಟ್ಟಿರಲಿಲ್ಲ
ದಾರಿಗೆ ಅಡ್ಡವಾಗಿ ಅವಳು ನಿಂತಿದ್ದಳು
ಜೀವನಕ್ಕಿಂತ ತುಂಬಾ ಹಿರಿಯಳೆನಿಸಿದಳು
ಸಾವಿನ ಆಯಸ್ಸೆಷ್ಟು? ಎರಡು ಕ್ಷಣ ಕೂಡಾ ಇಲ್ಲ
ಬಾಳಿನ ಸಂಕೋಲೆ ಇಂದು ನಿನ್ನೆಯದಲ್ಲ
ಹೃದಯ ತುಂಬಿ ಬಾಳಿದೆ, ಮನಸ್ಸು ತುಂಬಿ ಸಾಯುವೆ
ಮರಳಿ ಬರುವೆ, ಪ್ರಸ್ಥಾನಕ್ಕೆ ಯಾಕೆ ಹೆದರಲಿ?
ನೀನು ಸದ್ದಿಲ್ಲದೆ, ಕದ್ದು ಮುಚ್ಚಿ ಬರಬೇಡ
ಎದುರಿನಿಂದ ದಾಳಿ ಮಾಡಿ ನನ್ನನ್ನು ಪರೀಕ್ಷಿಸು
ಸಾವಿನ ಅರಿವಿಲ್ಲದ ಜೀವನದ ಪ್ರಯಾಣ
ಸುಂದರ ಗೀತೆಯ ಸಂಜೆ, ಕೊಳಲ ಧ್ವನಿಯ ರಾತ್ರಿ
ವಿಷಯ ಅದಲ್ಲ, ನನಗ್ಯಾವ ನೋವಿಲ್ಲ
ನಮ್ಮ- ಪರರ ನೋವೂ ಕಡಿಮೆಯಿಲ್ಲ
ಅಪರಿಚಿತರಿಂದ ಅದೆಷ್ಟು ಪ್ರೀತಿ ಸಿಕ್ಕಿತೆಂದರೆ
ನನ್ನವರ ಮೇಲೆ ಯಾವುದೇ ಅಸಮಾಧಾನವಿಲ್ಲ
ಪ್ರತಿಯೊಂದು ಸ್ಪರ್ಧೆಯನ್ನು ನಾನು ಎದುರಿಸಿದ್ದೇನೆ
ಬಿರುಗಾಳಿಗೆ ಆರುವ ದೀಪವನ್ನೂ ಹೊತ್ತಿಸಿದ್ದೇನೆ
ಇಂದು ಪ್ರಚಂಡ ಚಂಡಮಾರುತವಿದೆ
ಈ ದೋಣಿ ಸುಂಟರಗಾಳಿಯ ನಡುವೆ ಅತಿಥಿಯಂತಿದೆ
ದಡ ಸೇರುವ ವಿಶ್ವಾಸ ನನ್ನಲ್ಲಿದೆ
ಬಿರುಗಾಳಿಯ ಅಹಂಕಾರ ನೋಡು, ಅಹಂಕಾರವೇ ಆಯಾಸಗೊಂಡಿತು
ಸಾವಿನೊಂದಿಗೆ ಘರ್ಷಣೆಯಾಯಿತು

-ಅಟಲ್​ ಬಿಹಾರಿ ವಾಜಪೇಯಿ

ಅಟಲ್​ರನ್ನು ಬದುಕಿಸಿದ ರಾಜೀವ್​ ಗಾಂಧಿಇದನ್ನೂ ಓದಿ: (LIVE): ಅಜಾತಶತ್ರು ಗಂಭೀರ; ಆರೋಗ್ಯ ಸ್ಥಿತಿಗತಿ ಕುರಿತು ಸಂಜೆ 5ಕ್ಕೆ ಪ್ರಕಟಣೆ ಹೊರಡಿಸಲಿರುವ ಏಮ್ಸ್​

ಧರ್ಮವೀರ್​ಗೆ ಬರೆದ ಈ ಪತ್ರದಲ್ಲಿ ವಾಜಪೇಯಿಯವರು ವೈದ್ಯರು ಸರ್ಜರಿ ಮಾಡುವ ಸಲಹೆ ನೀಡಿದ್ದಾರೆಂದೂ ತಿಳಿಸಿದ್ದರು. ಇದಾದ ಬಳಿಕ ಅವರಿಗೆ ನಿದ್ದೆಯೇ ಬಂದಿರಲಿಲ್ಲವಂತೆ, ಅವರ ಮನದಲ್ಲಾಗುತ್ತಿದ್ದ ಆ ಗೊಂದಲಗಳು ಈ ಕವಿತೆಗೆ ಜನ್ಮ ನೀಡಿದ್ದವು. ಆದರೆ ವಾಜಪೇಯಿಯವರನ್ನು ಅಮೆರಿಕಾಗೆ ಕಳುಹಿಸಿದ್ದರ ಹಿಂದೆ ದಿವಂಗತ ಪ್ರಧಾನಿ ರಾಜೀವ್​ ಗಾಂಧಿಯವ ಬಹುದೊಡ್ಡ ಪಾತ್ರವಿತ್ತು ಎಂಬುವುದೇ ಕುತೂಹಲಕಾರಿ ವಿಚಾರ.ರಾಜೀವ್​ ಗಾಂಧಿಯವರು ಸಂಯುಕ್ತ ರಾಷ್ಟ್ರಗಳಿಗೆ ಕಳುಹಿಸಿದ ನಿಯೋಗದ ಹೆಸರಿನಲ್ಲಿ ವಾಜಪೇಯೊಯವರ ಹೆಸರನ್ನೂ ಸೇರಿಸಿದ್ದರು. ಇದೇ ಸಂದರ್ಭದಲ್ಲಿ ಅವರು ತಮ್ಮ ಚಿಕಿತ್ಸೆ ಮಾಡಿಸಿಕೊಳ್ಳಬೇಕೆಂಬುವುದು ರಾಜೀವ್​ ಗಾಂಧಿಯವರ ಆಶಯವಾಗಿತ್ತು. ವಾಜಪೇಯಿಯವರು ರಾಜೀವ್​ ಗಾಂಧಿಯವರ ಈ ಹೃದಯವಂತಿಕೆಯನ್ನು ಯಾವತ್ತೂ ಪ್ರಶಂಸಿಸುತ್ತಿದ್ದರು. ಅಲ್ಲದೆ, ರಾಜೀವ್​ ಅವರಿಂದಲೇ ನಾನಿಂದು ಬದುಕಿದ್ದೇನೆ ಎನ್ನುತ್ತಿದ್ದರು.
First published:August 16, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ