Deve Gowda: ಭತ್ತದ ತಳಿಗೆ ದೇವೇಗೌಡರ ಹೆಸರಿಟ್ಟಿರುವ ಪಂಜಾಬ್‌ ರೈತರು..!

Deve Gowda: 1996ರಲ್ಲಿ ಮುಜಾಫರ್‌ನಗರದಲ್ಲಿ ನಡೆದ ಸಭೆಯಲ್ಲಿ ಪಶ್ಚಿಮ ಉತ್ತರ ಪ್ರದೇಶದ ರೈತರ ನಾಯಕ ಮಹೇಂದ್ರ ಸಿಂಗ್ ಟಿಕಾಯತ್‌, ದೇವೇಗೌಡರನ್ನು 'ದಕ್ಷಿಣದ ಚೌಧರಿ ಚರಣ್ ಸಿಂಗ್' ಎಂದು ಶ್ಲಾಘಿಸಿದರು

ಮಾಜಿ ಪ್ರಧಾನಿ ದೇವೇಗೌಡ

ಮಾಜಿ ಪ್ರಧಾನಿ ದೇವೇಗೌಡ

  • Share this:
ಮಾಜಿ ಪ್ರಧಾನಿ (Former Prime Minister) ದೇವೇಗೌಡರೆಂದರೆ (Deve Gowda) ತಟ್ಟನೆ ನೆನಪಾಗೋದು ಜೆಡಿಎಸ್‌ ನಾಯಕ(JDS leader) ಹಾಗೂ ಮಾಜಿ ಪ್ರಧಾನಿ ಎಂದು. ದೇಶದ ಪ್ರಧಾನಿಗಳ ಪೈಕಿ ದೇವೇಗೌಡರು ಮಾತ್ರ ನಮ್ಮ ರಾಜ್ಯದವರು. ಅಲ್ಲದೆ, ರೈತರ (Farmers) ಪರವಾಗಿ ದೇವೇಗೌಡರು ಆಗಾಗ್ಗೆ ದನಿ ಎತ್ತುತ್ತಾರೆಂದೂ ಹಲವರು ನೆನಪಿಸಿಕೊಳ್ಳುತ್ತಾರೆ. ಹೌದು,ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಆಗಾಗ್ಗೆ ರೈತರ ಪರವಾಗಿ ಹೋರಾಡುತ್ತಿದ್ದರು. ಈ ಹಿನ್ನೆಲೆ, ರೈತ ಸಮುದಾಯದ ಕಡೆಗೆ ಮಾಜಿ ಪ್ರಧಾನಿಯ ಬದ್ಧತೆ ಮತ್ತು ಉಪಕ್ರಮಗಳಿಗೆ ಗೌರವವಾಗಿ, ಪಂಜಾಬ್‌ನ (Punjab) ರೈತರು ಅತ್ಯುತ್ತಮ ಭತ್ತದ ತಳಿಗಳಲ್ಲಿ(Rice breeds) ಒಂದಕ್ಕೆ ಅವರ ಹೆಸರಿಟ್ಟಿದ್ದಾರೆ ಎಂದು ಜೀವನಚರಿತ್ರೆ (Biographer) ಹೇಳುತ್ತದೆ.

ಶಿಷ್ಟಾಚಾರ ಉಲ್ಲಂಘಿಸಿ

ಗೌಡರು ಶಾಸಕರಾಗಿ ಮತ್ತು ಸಂಸದರಾಗಿ ಯಾವತ್ತೂ ಸದನದ ಶಿಷ್ಟಾಚಾರ ಉಲ್ಲಂಘಿಸಿಲ್ಲ ಎಂದು ತಿಳಿದುಬಂದಿದೆ. ಆದರೂ, ತಮ್ಮ ಸುದೀರ್ಘ ವೃತ್ತಿಜೀವನದಲ್ಲಿ ಒಮ್ಮೆ ಮಾತ್ರ ಈ ಸ್ವಯಂ ಪ್ರೇರಿತ ತತ್ವವನ್ನು ಮಾಜಿ ಪ್ರಧಾನಿ ಉಲ್ಲಂಘಿಸಿದ್ದಾರೆ.

ಇದನ್ನೂ ಓದಿ: HD Devegowda Biography: ಮಣ್ಣಿನ ಮಗ-ಮಾಜಿ ಪ್ರಧಾನಿ ದೇವೇಗೌಡರ ಜೀವನಾಧಾರಿತ ಕೃತಿ ಬಿಡುಗಡೆ

ಅದೂ ಕೂಡ ರೈತರ ಹಿತಕ್ಕೆ ‘ಬೆದರಿಕೆ’ ಎದುರಾದಾಗಲೇ ಎಂದು ಪತ್ರಕರ್ತ ಸುಗತ ಶ್ರೀನಿವಾಸರಾಜು ತಮ್ಮ ‘ಫರ್ರೋಸ್ ಇನ್ ಎ ಫೀಲ್ಡ್: ದಿ ಅನ್ ಎಕ್ಸ್‌ಪ್ಲೋರ್ಡ್ ಲೈಫ್ ಆಫ್ ಎಚ್‌ಡಿ ದೇವೇಗೌಡ’ (Furrows in a Field: The Unexplored Life of H D Deve Gowda) ಎಂಬ ಪುಸ್ತಕದಲ್ಲಿ ಬರೆದಿದ್ದಾರೆ.

ನಾನೊಬ್ಬ ರೈತ,
ಕೃಷಿ ವಲಯಕ್ಕೆ ಸಬ್ಸಿಡಿಗಳನ್ನು ಕೊನೆಗೊಳಿಸುವ ನಿರ್ಧಾರವನ್ನು ಹಿಂತೆಗೆದುಕೊಳ್ಳುವಂತೆ ಸರ್ಕಾರದ ಮೇಲೆ ಒತ್ತಡ ಹೇರಲು ದೇವೇಗೌಡರು ಲೋಕಸಭೆಯಲ್ಲಿ ಸದನದ ಬಾವಿಗಿಳಿದು ಪ್ರತಿಭಟನೆ ಮಾಡಿದ್ದರು. ಮನಮೋಹನ್‌ ಸಿಂಗ್‌ ಕೇಂದ್ರ ಹಣಕಾಸು ಸಚಿವರಾಗಿ ಮೊದಲ ಬಾರಿಗೆ ಬಜೆಟ್‌ ಮಂಡನೆ ಮಾಡಿದ ನಂತರದ ಬಿಸಿ ಬಿಸಿ ಚರ್ಚೆಯ ಸಂದರ್ಭದಲ್ಲಿ ಅಂದರೆ ಜುಲೈ 31 ಮತ್ತು ಆಗಸ್ಟ್ 1, 1991ರಲ್ಲಿ ಈ ಘಟನೆ ನಡೆದಿತ್ತು.

ಇದನ್ನು ಈ ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ. ನಾನೊಬ್ಬ ರೈತ, ಉಳುವವನ ಮಗನಾಗಿದ್ದು, ಇದಕ್ಕೆ ಅವಕಾಶ ನೀಡುವುದಿಲ್ಲ, ಧರಣಿ ಕೂರುತ್ತೇನೆ, ಈ ಮನೆಯಿಂದ ಹೊರಗೆ ಹೋಗುವುದಿಲ್ಲ, ಪ್ರಚಾರಕ್ಕಾಗಿ ಈ ರೀತಿ ಮಾಡುತ್ತಿಲ್ಲ ಎಂದು ಅವರು ಹೇಳಿದ್ದರು.

ದೆಹಲಿಗೆ 2,000 ರೈತರನ್ನು ಕರೆದೊಯ್ದಿದ್ದ ದೇವೇಗೌಡರು..!

ಇನ್ನೊಂದು ಘಟನೆ ಬಗ್ಗೆಯೂ 2002ರಲ್ಲಿ, ಭಾರತದಾದ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ರೈತರ ಆತ್ಮಹತ್ಯೆಗಳು ವರದಿಯಾದಾಗ, ಗೌಡರು ಕರ್ನಾಟಕದಿಂದ ಸುಮಾರು 2,000 ರೈತರ ನಿಯೋಗವನ್ನು ರೈಲಿನಲ್ಲಿ ದೆಹಲಿಗೆ ಕರೆದೊಯ್ದು ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿರನ್ನು ಭೇಟಿ ಮಾಡಿದ್ದರು.

ಇದು ಅಭೂತಪೂರ್ವವಾಗಿದೆ, ವಿಶೇಷವಾಗಿ ಮಾಜಿ ಪ್ರಧಾನಿಯೊಬ್ಬರು ಈ ರೀತಿ ಪ್ರತಿಭನೆ ಮಾಡಿದ್ದನ್ನು ನೋಡಿ ದೆಹಲಿಯ ಜನರು ದಿಗ್ಭ್ರಮೆಗೊಂಡರು" ಎಂದು ಪೆಂಗ್ವಿನ್ ರ‍್ಯಾಂಡಮ್ ಹೌಸ್ ಇಂಡಿಯಾ ಪ್ರಕಟಿಸಿದ ಪುಸ್ತಕ ಹೇಳುತ್ತದೆ.

ಪಂಜಾಬ್‌ನ ರೈತರು

ಈ ಹಿನ್ನೆಲೆ ರೈತರ ಉದ್ದೇಶಕ್ಕಾಗಿ ಗೌಡರ ಜೀವಮಾನದ ಬದ್ಧತೆ ಮತ್ತು ರೈತ ಸಮುದಾಯದ ಬಗ್ಗೆ ಅವರ ನೀತಿ ಉಪಕ್ರಮಗಳು ಮತ್ತು 1996-97ರ ರೈತ ಪರವಾದ ಬಜೆಟ್‌ಗೆ ಗೌರವ ಸಲ್ಲಿಸುವ ಸಲುವಾಗಿ, ಪಂಜಾಬ್‌ನ ರೈತರು ಭತ್ತದ ಅತ್ಯುತ್ತಮ ತಳಿಗಳಲ್ಲಿ ಒಂದಕ್ಕೆ ದೇವ್‌ ಗೌಡ ‘Dev Gowda’ ಎಂದು ದೇವೇಗೌಡರು ಪ್ರಧಾನಿ ಹುದ್ದೆಯಿಂದ ಕೆಳಗಿಳಿದ ನಂತರ ಹೆಸರಿಸಿದರು ಎಂದು ಸುಗತ ಶ್ರೀನಿವಾಸರಾಜು ತಮ್ಮ ಪುಸ್ತಕದಲ್ಲಿ ಬರೆದಿದ್ದಾರೆ.

ಭತ್ತದ ತಳಿ ಜನಪ್ರಿಯ

ಈ ಭತ್ತದ ತಳಿಯು 2 ದಶಕಗಳ ಹಿಂದೆ ಬಹಳ ಜನಪ್ರಿಯವಾಗಿತ್ತು ಎಂದು ಹೇಳಲಾಗಿದೆ.ಇನ್ನೊಂದೆಡೆ, ಪಂಜಾಬಿ, ಹಿಂದಿ, ಕನ್ನಡ ಅಥವಾ ಇಂಗ್ಲಿಷ್‌ನಲ್ಲಿ ಗೌಡರೊಂದಿಗೆ ಮಾತನಾಡಲು ಸಾಧ್ಯವಾಗದ ರೈತರು ಸಹ ಆ ವ್ಯಕ್ತಿಯ ಉದ್ದೇಶವನ್ನು ಅರ್ಥಮಾಡಿಕೊಂಡರು ಮತ್ತು ಒಪ್ಪಿಕೊಂಡರು. ವಿಪರ್ಯಾಸವೆಂದರೆ, ಈ ರೀತಿ ಪಂಜಾಬ್‌ ರೈತರು ಭತ್ತದ ತಳಿಗೆ ದೇವೇಗೌಡರ ಹೆಸರಿಟ್ಟು ಗೌರವ ನೀಡಿರುವುದು ಬಹುತೇಕರಿಗೆ ತಿಳಿದಿರಲಿಲ್ಲ.

ದೇವೇಗೌಡರಿಗೇ ಗೊತ್ತಿಲ್ಲ..!

ಪಂಜಾಬ್‌ನ ಕರ್ನಾಟಕ ಕೇಡರ್ ಐಎಎಸ್ ಅಧಿಕಾರಿ ಚಿರಂಜೀವ್ ಸಿಂಗ್ 2014ರಲ್ಲಿ ತಮ್ಮ ಕನ್ನಡ ಪತ್ರಿಕೆಯ ಅಂಕಣದಲ್ಲಿ ಈ ಭತ್ತದ ತಳಿಯ ಬಗ್ಗೆ ಬರೆಯುವವರೆಗೂ ಸ್ವತ: ದೇವೇಗೌಡರಿಗೆ ಈ ಭತ್ತದ ತಳಿಯ ಬಗ್ಗೆ ತಿಳಿದಿರಲಿಲ್ಲ" ಎಂಬುದನ್ನು ಪುಸ್ತಕದಲ್ಲಿ ಹೇಳಲಾಗಿದೆ. ಭತ್ತದೊಂದಿಗಿನ ಒಡನಾಟ, ಮಣ್ಣಿನೊಂದಿಗಿನ ಒಡನಾಟ, ಜನರ ಮುಖ್ಯ ಆಹಾರದೊಂದಿಗಿನ ಒಡನಾಟವು ದೇವೇಗೌಡರಿಗೆ ಯೋಚಿಸಬಹುದಾದ ಅತ್ಯಂತ ಮಾಂತ್ರಿಕ ಮತ್ತು ಮೂಲ ರೂಪಕಗಳಾಗಿವೆ ಎಂದು ಲೇಖಕರು ಹೇಳುತ್ತಾರೆ.

1996ರಲ್ಲಿ ಮುಜಾಫರ್‌ನಗರದಲ್ಲಿ ನಡೆದ ಸಭೆಯಲ್ಲಿ ಪಶ್ಚಿಮ ಉತ್ತರ ಪ್ರದೇಶದ ರೈತರ ನಾಯಕ ಮಹೇಂದ್ರ ಸಿಂಗ್ ಟಿಕಾಯತ್‌, ದೇವೇಗೌಡರನ್ನು 'ದಕ್ಷಿಣದ ಚೌಧರಿ ಚರಣ್ ಸಿಂಗ್' ಎಂದು ಶ್ಲಾಘಿಸಿದರು. ದೇವೇಗೌಡರು ಸುಮಾರು 7 ದಶಕಗಳಿಂದ ಸಾರ್ವಜನಿಕ ಜೀವನದಲ್ಲಿದ್ದಾರೆ. ಹೊಳೆನರಸೀಪುರ ತಾಲೂಕು ಅಭಿವೃದ್ಧಿ ಮಂಡಳಿಯ ಸದಸ್ಯರಾಗಿ ಪ್ರಾರಂಭಿಸಿದರು ಮತ್ತು 1996ರಲ್ಲಿ ಭಾರತದ 11ನೇ ಪ್ರಧಾನ ಮಂತ್ರಿಯಾಗಿ ಉನ್ನತ ಸ್ಥಾನ ತಲುಪಿದ್ದರು.

ಇತರೆ ವಿಚಾರಗಳ ಅನಾವರಣ
ಪ್ರಧಾನಿ ಹುದ್ದೆಯಿಂದ ಕೆಳಗಿಳಿದ 25 ವರ್ಷಗಳ ನಂತರವೂ ದೇವೇಗೌಡರು ಭಾರತೀಯ ರಾಜಕೀಯದಲ್ಲಿ ಸಕ್ರಿಯವಾಗಿದ್ದಾರೆ. ಇನ್ನು, ಈ ಪುಸ್ತಕವು ದೇವೇಗೌಡ ಮತ್ತು ವಾಜಪೇಯಿ ನಡುವಿನ ಹಲವಾರು ಇತರ ವಿಷಯಗಳ ವಿವರವಾದ ಸಂವಹನಗಳನ್ನು ವಿವರಿಸುತ್ತದೆ. ಗೌಡರು ವಾಜಪೇಯಿಯವರ ಮೊದಲ ಬಾರಿಗೆ ಪ್ರಧಾನಿಯಾಗಿ 13 ದಿನಗಳ ಅಧಿಕಾರದ ನಂತರ ತಕ್ಷಣವೇ ಉತ್ತರಾಧಿಕಾರಿಯಾದರು.

ಇದನ್ನೂ ಓದಿ: ಆಪರೇಷನ್ JDSಗೆ ಇಳಿದಿದ್ದಾರಾ ಸಿದ್ದರಾಮಯ್ಯ? ದೇವೇಗೌಡ್ರು-ಕುಮಾರಸ್ವಾಮಿಗೆ ಚೆಕ್​​ಮೆಟ್​​​ ಅಂದ್ರಾ?

ಗೌಡ ಮತ್ತು ವಾಜಪೇಯಿ ಇಬ್ಬರು ವಿಭಿನ್ನ ವ್ಯಕ್ತಿಗಳಾಗಿದ್ದರು. ವಾಜಪೇಯಿ ಮೂಲಭೂತವಾಗಿ ಹಿಂದಿ ವ್ಯಕ್ತಿಯಾಗಿದ್ದರು, ಗೌಡರು ಸಂವಹನ ಮಾಡಲು ಇಂಗ್ಲಿಷ್ ಬಳಸುತ್ತಿದ್ದರು, ಇದು ವಾಸ್ತವದಲ್ಲಿ ವಾಜಪೇಯಿ ಅವರ ಗೌರವಕ್ಕಿಂತ ಹೆಚ್ಚಿನದಾಗಿತ್ತು. ವಾಜಪೇಯಿ ವಾಕ್ಚಾತುರ್ಯ, ಪ್ರವರ್ಧಮಾನಗಳಿಂದ ತುಂಬಿದ್ದರೆ, ಗೌಡರು ಯಾವಾಗಲೂ ಶುಷ್ಕ ವಿವರಗಳು, ದಾಖಲೆಗಳು ಮತ್ತು ಒಂದು ರೀತಿಯ ಡ್ರಾಲ್ ಆಗಿದ್ದರು’’ ಎಂದೂ ಲೇಖಕರು ಹೇಳುತ್ತಾರೆ

.

Published by:vanithasanjevani vanithasanjevani
First published: