ಸಿಎಎಗೆ ಸುಪ್ರೀಂ ಮಾನ್ಯತೆ ಕೊಟ್ಟರೆ ರಾಜ್ಯಗಳು ವಿರೋಧಿಸಲು ಆಗುವುದಿಲ್ಲ: ಕಪಿಲ್ ಸಿಬಲ್

ಸಂವಿಧಾನಾತ್ಮಕ ದೃಷ್ಟಿಯಿಂದ ನಾನು ಅನುಷ್ಠಾನಗೊಳಿಸುವುದಿಲ್ಲ ಎಂದು ಹೇಳಿದರೆ ತೊಂದರೆ ಆಗುತ್ತದೆ. ಮುಂದೆ ಇನ್ನಷ್ಟು ತೊಡಕುಗಳು ಸೃಷ್ಟಿಯಾಗುತ್ತದೆ ಎಂದು ಕಪಿಲ್ ಸಿಬಲ್ ಎಚ್ಚರಿಸಿದ್ದಾರೆ,

Vijayasarthy SN | news18
Updated:January 19, 2020, 8:31 PM IST
ಸಿಎಎಗೆ ಸುಪ್ರೀಂ ಮಾನ್ಯತೆ ಕೊಟ್ಟರೆ ರಾಜ್ಯಗಳು ವಿರೋಧಿಸಲು ಆಗುವುದಿಲ್ಲ: ಕಪಿಲ್ ಸಿಬಲ್
ಕಪಿಲ್ ಸಿಬಲ್
  • News18
  • Last Updated: January 19, 2020, 8:31 PM IST
  • Share this:
ನವದೆಹಲಿ(ಜ. 19): ಪೌರತ್ವ ಕಾಯ್ದೆ ಮತ್ತು ಎನ್​ಆರ್​ಸಿಯನ್ನು ವಿರೋಧಿಸಿ ಬಿಜೆಪಿಯೇತರ ಪಕ್ಷಗಳ ಆಡಳಿತ ಇರುವ ರಾಜ್ಯಗಳು ಒಂದೊಂದಾಗಿ ನಿರ್ಣಯ ತೆಗೆದುಕೊಳ್ಳುತ್ತಿವೆ. ಕೇಂದ್ರ ಸರ್ಕಾರದ ನಿರ್ಧಾರದ ವಿರುದ್ಧ ರಾಜ್ಯ ಸರ್ಕಾರಗಳು ಹೋಗುವಂತಿಲ್ಲ ಎಂದು ಬಿಜೆಪಿ ಪದೇ ಪದೇ ವಾದಿಸುತ್ತಲೇ ಬಂದಿದೆ. ಆದರೂ ಸಿಎಎ ವಿರುದ್ಧ ಕೇರಳ, ರಾಜಸ್ಥಾನ, ಮಧ್ಯಪ್ರದೇಶ, ಪಶ್ಚಿಮ ಬಂಗಾಳ ಮೊದಲಾದ ರಾಜ್ಯಗಳು ನಿರ್ಣಯ ತೆಗೆದುಕೊಳ್ಳುವುದಕ್ಕೆ ಬದ್ಧವಾಗಿವೆ. ಈ ಬಗ್ಗೆ ಮಾತನಾಡಿರುವ ಹಿರಿಯ ಕಾಂಗ್ರೆಸ್ ಮುಖಂಡ ಹಾಗೂ ನ್ಯಾಯವಾದಿ ಕಪಿಲ್ ಸಿಬಲ್, ಸಿಎಎಗೆ ಸುಪ್ರೀಂ ಕೋರ್ಟ್ ಸಾಂವಿಧಾನಿಕ ಮಾನ್ಯತೆ ಕೊಟ್ಟರೆ ರಾಜ್ಯ ಸರ್ಕಾರಗಳು ವಿರುದ್ಧವಾಗಿ ನಿರ್ಣಯ ತೆಗೆದುಕೊಳ್ಳಲು ಆಗುವುದಿಲ್ಲ ಎಂದು ಎಚ್ಚರಿಸಿದ್ಧಾರೆ.

ಸಂಸತ್​ನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಅನುಮೋದನೆಗೊಂಡಿರುವುದರಿಂದ ಯಾವ ಸರ್ಕಾರವೂ ಅದರ ಅನುಷ್ಠಾನವನ್ನು ನಿರಾಕರಿಸಲು ಸಾಧ್ಯವಿಲ್ಲ ಎಂದು ಅವರು ನಿನ್ನೆಯೂ ಹೇಳಿಕೆ ನೀಡಿದ್ದರು. ಈಗ ಸುಪ್ರೀಂ ಕೋರ್ಟ್ ಒಪ್ಪಿಗೆ ನೀಡಿದ ಪಕ್ಷದಲ್ಲಿ ರಾಜ್ಯ ಸರ್ಕಾರಗಳು ವಿರುದ್ಧವಾಗಿ ನಡೆದುಕೊಂಡರೆ ತೊಂದರೆಯಾಗಬಹುದು ಎಂದು ಇವತ್ತೂ ಹೇಳಿದ್ಧಾರೆ.

ಇದನ್ನೂ ಓದಿ: ವಿದ್ಯಾರ್ಥಿಗಳಿಗೆ ಉಚಿತ ಬಸ್, ಯಮುನಾ ಸ್ವಚ್ಚ, ದೆಹಲಿ ಮಾಲಿನ್ಯ ನಿಯಂತ್ರಣ; 10 ಗ್ಯಾರಂಟಿ ಕಾರ್ಡ್​ ಬಿಡುಗಡೆ ಮಾಡಿದ ಆಪ್​

“ಸಿಎಎ ಅಸಂವಿಧಾನಿಕ ಎಂಬುದು ನನ್ನ ಅನಿಸಿಕೆ. ಪ್ರತಿಯೊಂದು ರಾಜ್ಯಕ್ಕೂ ಕೇಂದ್ರದ ಕಾಯ್ದೆ ವಿರುದ್ಧ ನಿರ್ಣಯ ಜಾರಿಗೊಳಿಸುವ ಸಂವಿಧಾನಿಕ ಹಕ್ಕು ಇರುತ್ತದೆ. ಒಂದು ಕಾನೂನನ್ನು ಸುಪ್ರೀಂ ಕೋರ್ಟ್ ಸಂವಿಧಾನಿಕ ಎಂದು ಘೋಷಿಸಿದಾಗ ಅದನ್ನು ವಿರೋಧಿಸುವುದರಿಂದ ತೊಂದರೆಯಾಗಬಹುದು. ಆದರೆ, ಹೋರಾಟ ಮಾತ್ರ ಮುಂದುವರಿಯುತ್ತಲೇ ಇರಬೇಕು” ಎಂದು ಕಪಿಲ್ ಸಿಬಲ್ ಟ್ವೀಟ್ ಮಾಡಿದ್ದಾರೆ.

ನಿನ್ನೆ ಶನಿವಾರ ಅವರು ಕೇರಳ ಸಾಹಿತ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, “ಸಿಎಎಗೆ ಅನುಮೋದನೆ ದೊರೆತಾಗ ಯಾವ ರಾಜ್ಯ ಕೂಡ ‘ಜಾರಿಗೊಳಿಸುವುದಿಲ್ಲ’ ಎನ್ನುವಂತಿಲ್ಲ. ಹಾಗೆ ಮಾಡಲು ಸಾಧ್ಯವಿಲ್ಲ. ಅದು ಅಸವಿಧಾನಿಕವಾಗುತ್ತದೆ. ನೀವು ವಿರೋಧಿಸಬಹುದು. ವಿಧಾನಸಭೆಯಲ್ಲಿ ನಿರ್ಣಯ ಜಾರಿ ಮಾಡಬಹುದು. ಕಾಯ್ದೆಯನ್ನು ಹಿಂಪಡೆಯಬೇಕೆಂದು ಕೇಂದ್ರ ಸರ್ಕಾರವನ್ನು ಕೇಳಬಹುದು” ಎಂದು ಹೇಳಿದ್ದರು.

ಇದನ್ನೂ ಓದಿ: ‘ಪೌರತ್ವ ಕಾಯ್ದೆ ಭಾರತದ ಆಂತರಿಕ ವಿಚಾರವಾದರೂ ಅನಗತ್ಯ‘: ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ

“ಆದರೆ, ಸಂವಿಧಾನಾತ್ಮಕ ದೃಷ್ಟಿಯಿಂದ ನಾನು ಅನುಷ್ಠಾನಗೊಳಿಸುವುದಿಲ್ಲ ಎಂದು ಹೇಳಿದರೆ ತೊಂದರೆ ಆಗುತ್ತದೆ. ಮುಂದೆ ಇನ್ನಷ್ಟು ತೊಡಕುಗಳು ಸೃಷ್ಟಿಯಾಗುತ್ತದೆ” ಎಂದು ಕಪಿಲ್ ಸಿಬಲ್ ನಿನ್ನೆ ಎಚ್ಚರಿಸಿದ್ದರು.ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಅಷ್ಟೇ ಅಲ್ಲ, ರಾಷ್ಟ್ರೀಯ ನಾಗರಿಕ ನೊಂದಣಿ (ಎನ್​ಆರ್​ಸಿ), ರಾಷ್ಟ್ರೀಯ ಜನಸಂಖ್ಯಾ ನೊಂದಣಿ (ಎನ್​ಪಿಆರ್) ವಿರುದ್ಧವೂ ಬಿಜೆಪಿಯೇತರ ಆಡಳಿತದ ರಾಜ್ಯಗಳು ವಿರೋಧ ವ್ಯಕ್ತಪಡಿಸಿವೆ. ಯಾವುದೇ ಕಾರಣಕ್ಕೂ ತಮ್ಮ ರಾಜ್ಯಗಳಲ್ಲಿ ಈ ಕಾನೂನು ಜಾರಿಯಾಗಲು ಬಿಡುವುದಿಲ್ಲ ಎಂದು ಪಟ್ಟುಹಿಡಿದಿವೆ. ದೇಶಾದ್ಯಂತ ನಿರಂತರ ಹೋರಾಟಗಳೂ ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ಕಪಿಲ್ ಸಿಬಲ್ ಅವರ ಈ ಹೇಳಿಕೆ ಕುತೂಹಲ ಮೂಡಿಸಿದೆ.

(ಪಿಟಿಐ ಸುದ್ದಿ ಸಂಸ್ಥೆ ವರದಿ)

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

First published:January 19, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading