Cop Steal Goats: ಹೊಸ ವರ್ಷದ ಪಾರ್ಟಿಗೆ ಮೇಕೆ ಕದ್ದ ಪೊಲೀಸಪ್ಪ.. ಆಹಾ ಐನಾತಿ ಖಾಕಿ!

ತನ್ನ ಸ್ನೇಹಿತರ ಜೊತೆಗೆ ಪಾರ್ಟಿ ಮಾಡೋದಕ್ಕೆ ಫ್ಲ್ಯಾನ್‌ ಮಾಡಿದ್ದ ಸುಮನ್‌ ಮಲ್ಲಿಕ್‌ ಅದಕ್ಕಾಗಿ ಎರಡು ಮೇಕೆಗಳನ್ನು ಕದ್ದಿದ್ದಾರೆ.

ಮೇಕೆ ಕದ್ದ ಎಎಸ್‌ಐ

ಮೇಕೆ ಕದ್ದ ಎಎಸ್‌ಐ

 • Share this:
  ಹೊಸ ವರ್ಷವನ್ನು (New Year) ಬಹುತೇಕರು ಸಂಭ್ರಮದಿಂದಲೇ ( Celebrated) ಆಚರಿಸುವುದನ್ನು ರೂಡಿಸಿಕೊಂಡಿದ್ದಾರೆ, ಸಾಮಾನ್ಯ ಜನರಿಂದ ಹಿಡಿದು ಸೆಲಿಬ್ರಿಟಿಗಳು,(Celebrities) ಗಣ್ಯರು ಪ್ರತಿಯೊಬ್ಬರು ತರಾವೇರಿಯಾಗಿ ಅಡುಗೆ ಮಾಡಿ, ಕೇಕ್‌ ಕತ್ತರಿಸುವ ಮೂಲಕ ಹೊಸ ವರ್ಷವನ್ನು ಬರಮಾಡಿಕೊಳ್ಳುವುದು ವಾಡಿಕೆ, ಜನರು ಕುಣಿದು ಕುಪ್ಪಳಿಸುತ್ತಿರುವ ವೇಳೆ ಪೊಲೀಸರು ಮಾತ್ರ ಜನರನ್ನು ನಿಯಂತ್ರಿಸಲು ಹರಸಾಹಸಪಡುತ್ತಿರುತ್ತಾರೆ. ಆದರೆ ಇಲ್ಲೊಬ್ಬ ಪೊಲೀಸ್‌ ಅಧಿಕಾರಿ(Police Officer) ಹೊಸ ವರ್ಷಕ್ಕೆ ಬಾಡೂಟ ಬಡಿಸುವ ಸಲುವಾಗಿ ಎರಡು ಮೇಕೆ ಕದ್ದು (Stole Two Goats) ಇದೀಗ ಭಾರಿ ಸುದ್ದಿ ಮಾಡಿದ್ದಾರೆ.

  ಸ್ಟೇಷನ್ ಹಿಂಭಾಗದಲ್ಲೇ ಬಾಡೂಟ
  ಹೌದು ಕದ್ದ ಕಳ್ಳರನ್ನು ಸೆರೆಹಿಡಿದು ಶಿಕ್ಷಿಸಬೇಕಾದ ಪೊಲೀಸ್‌ ಅಸಾಮಿಯೇ ಮೇಕೆ ಕದ್ದು ಸಿಕ್ಕಿಬಿದ್ರಿ ಹೇಗೆ ಇರುತ್ತೆ ಅಲ್ವೇ, ಒಡಿಶಾದಲ್ಲಿ ಈ ಘಟನೆ ನಡೆದಿದೆ. ಘಟನೆಯ ಬೆನ್ನಲ್ಲೇ ಹಿರಿಯ ಅಧಿಕಾರಿಗಳು ಎಎಸ್‌ಐನನ್ನು ಸಸ್ಪೆಂಡ್‌ ಮಾಡಿದ್ದಾರೆ. ಶುಕ್ರವಾರ ತಮ್ಮ ಪೊಲೀಸ್ ಠಾಣೆಯ ಹತ್ತಿರ ಮೇಯುತ್ತಿದ್ದ 2 ಮೇಕೆಗಳನ್ನು ಕದ್ದಿದ್ದರು. ಜೊತೆಗೆ ಅದನ್ನು ಸ್ಟೇಷನ್ ಹಿಂಭಾಗದಲ್ಲೇ ಕತ್ತರಿಸಿ ಬಾಡೂಟ ಸಿದ್ದಪಡಿಸಿ ಸವಿದಿದ್ದಾರೆ ಎಂದು ತಿಳಿದು ಬಂದಿದೆ.

  ಇದನ್ನೂ ಓದಿ: Human Face Goat: ಮಾನವನ ಮುಖ ಹೋಲುವ ಮೇಕೆ ಮರಿ ಜನನ: Video ಇಲ್ಲಿದೆ

  ಒಡಿಶಾದ ಬಲಂಗೀರ್ ಜಿಲ್ಲೆಯ ಠಾಣೆ ಅಧಿಕಾರಿ
  ಎಎಸ್‌ಐ ಸುಮನ್ ಮಲ್ಲಿಕ್ ಎಂಬಾತನೇ ಮೇಕೆ ಕದ್ದ ಸಬ್ ಇನ್ಸ್‌ಪೆಕ್ಟರ್. ಒಡಿಶಾದ ಬಲಂಗೀರ್ ಜಿಲ್ಲೆಯ ಸಿಂಧೇಕೆಲಾ ಪೊಲೀಸ್ ಠಾಣೆಯಲ್ಲಿ ಸಹಾಯಕ ಸಬ್ ಇನ್ಸ್‌ಪೆಕ್ಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ತನ್ನ ಸ್ನೇಹಿತರ ಜೊತೆಗೆ ಪಾರ್ಟಿ ಮಾಡೋದಕ್ಕೆ ಫ್ಲ್ಯಾನ್‌ ಮಾಡಿದ್ದ ಸುಮನ್‌ ಮಲ್ಲಿಕ್‌ ಅದಕ್ಕಾಗಿ ಎರಡು ಮೇಕೆಗಳನ್ನು ಕದ್ದಿದ್ದಾರೆ. ಈ ವಿಚಾರ ಮಾಲೀಕರಿಗೆ ತಿಳಿದ ಕೂಡಲೇ ಮೇಕೆಗಳನ್ನು ಬಿಟ್ಟುಬಿಡುವಂತೆ ಎಎಸ್‌ಐ ಸುಮನ್‌ ಬಳಿಯಲ್ಲಿ ಮನವಿ ಮಾಡಿಕೊಂಡಿದ್ದಾರೆ, ಆದರೂ ಮೇಕೆಯನ್ನು ಬಿಟ್ಟಿಲ್ಲವಂತೆ

  ಗ್ರಾಮಸ್ಥರ ಆಕ್ರೋಶ
  ಆದರೆ ಸುಮನ್‌ ಮಾಲೀಕನ ಮನವಿಯನ್ನು ತಿರಸ್ಕರಿಸಿದಲ್ಲದೇ ಮೇಕೆಗಳನ್ನು ಕಡಿದು ಸ್ನೇಹಿತರ ಜೊತೆಗೆ ಭರ್ಜರಿ ಬಾಡೂಟ ಮಾಡಿ ಸವಿದಿದ್ದಾರೆ. ಇದರಿಂದ ಬೇಸರಗೊಂಡ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೇ ಸಿಂಧೇಕೆಲಾ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದಾರೆ. ಆದರೆ ಪೊಲೀಸರು ಮೇಕೆ ಕದಿಯುವುದನ್ನು ಮೇಕೆಗಳ ಮಾಲೀಕ ಸಂಕೀರ್ತನ್ ಗುರುವಿನ ಮಗಳು ನೋಡಿ ತನ್ನ ತಂದೆಗೆ ತಿಳಿಸಿದ್ದಾಳೆ. ಮೇಕೆಗಳ ಮಾಲೀಕ ಗ್ರಾಮಸ್ಥರೊಂದಿಗೆ ಪೊಲೀಸ್ ಠಾಣೆಗೆ ಹೋಗಿ ನೋಡಿದಾಗ ಠಾಣೆಯ ಹಿಂಭಾಗದಲ್ಲಿ ಮೇಕೆಗಳ ರಕ್ತ ಮತ್ತು ಸ್ವಲ್ಪ ಮಾಂಸ ಸಹ ಸಿಕ್ಕಿದೆ. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ಪೊಲೀಸರ ವಿರುದ್ಧ ಆಕ್ರೋಶ ಹೊರ ಹಾಕಿ ಕ್ರಮವನ್ನು ಖಂಡಿಸಿದ್ದಾರೆ.

  ಗಂಭೀರ ಪ್ರಕರಣ
  ಇದರ ಬೆನ್ನಲ್ಲೇ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಬಲಂಗೀರ್ ಪೊಲೀಸ್ ವರಿಷ್ಠಾಧಿಕಾರಿಯು ಸುಮನ್ ಮಲ್ಲಿಕ್‍ನನ್ನು ಅಮಾನತುಗೊಳಿಸಿ, ಹಿರಿಯ ಅಧಿಕಾರಿಗಳಿಂದ ತನಿಖೆಗೆ ಆದೇಶಿಸಿದ್ದಾರೆ. ಇದೀಗ ಕುರಿಗಳನ್ನು ಕದ್ದು ಹೊಸ ವರ್ಷದ ಪಾರ್ಟಿ ಮಾಡಿದ ಪೊಲೀಸ್‌ ಅಧಿಕಾರಿ ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ.ಈ ಕುರಿತು ಮಾಹಿತಿ ನೀಡಿರುವ ಬಾಲನ್ ಗಿರಿ ಜಿಲ್ಲೆಯ ಎಸ್ ಪಿ ನಿತಿನ್ ಕುಸಾಲ್ಕರ್ ಅವರು ‘ಪ್ರಾಥಮಿಕ ತನಿಖೆಯ ಬಳಿಕ ಎಸ್ ಎಸ್ ಐ ಅನ್ನು ಅಮಾನತು ಮಾಡಲಾಗಿದೆ.

  ಇದನ್ನೂ ಓದಿ: Viral Story: ಮೇಕೆಯೊಂದಿಗೆ ಸೆಕ್ಸ್ ಮಾಡಿ ಜೈಲು ಸೇರಿದ 60 ವರ್ಷದ ವ್ಯಕ್ತಿ!

  ನಮ್ಮ ತನಿಖೆಯಿಂದ ಎಎಸ್ ಐ ಮೇಕೆಗಳನ್ನು ಕದ್ದು, ಅದರಿಂದ ಬಾಡೂಟ ಮಾಡಿ ಊಟ ಮಾಡಿರುವುದು ದೃಢಪಟ್ಟಿದೆ. ಈ ಪ್ರಕರಣದಲ್ಲಿ ಬೇರೆ ಯಾವ ಪೊಲೀಸರೂ ಭಾಗಿಯಾಗಿಲ್ಲ’ ಎಂದು ಸ್ಪಷ್ಟನೆ ನೀಡಿದ್ದಾರೆ. ಈ ಸುದ್ದಿ ಸಾಮಾಜಿಕ ಜಾಲಾತಣದಲ್ಲಿ ವೈರಲ್‌ ಆಗುತ್ತಿದ್ದಂತೆ, ನೆಟ್ಟಿಗರು ಪೊಲೀಸ್‌ ಅಧಿಕಾರಿಗೆ ಛೀಮಾರಿ ಹಾಕಿದ್ದಾರೆ.
  Published by:vanithasanjevani vanithasanjevani
  First published: