HOME » NEWS » National-international » WHATSAPP THE NEW JOINABLE CALLS FEATURE ALLOWS USERS TO JOIN A GROUP CALL AT THEIR OWN PACE STG AE

ಇನ್ಮುಂದೆ ವಾಟ್ಸ್​ಆ್ಯಪ್​ನ ಗ್ರೂಪ್ ಕಾಲ್‌ನಿಂದ ಹೊರಬಂದು ಮತ್ತೆ ಸೇರಿಕೊಳ್ಳಬಹುದು..!

ನೀವು ನೆಟ್​ವರ್ಕ್​ ಸಮಸ್ಯೆಯಿಂದ ವಾಟ್ಸ್​ಆ್ಯಪ್​ ಗ್ರೂಪ್ ಕಾಲ್​ನಿಂದ ಹೊರ ಬಂದರೆ, ಮತ್ತೆ ನೀವು ಅದರಲ್ಲಿ ಸೇರಿಕೊಳ್ಳಬಹುದಾಗಿದೆ. ವಿಡಿಯೋ ಮತ್ತು ವಾಯ್ಸ್ ಕಾಲ್​ನಲ್ಲಿ ಗ್ರೂಪ್​ನ ಸದಸ್ಯರೊಂದಿಗೆ ಸಂವಾದವನ್ನು ಮುಂದುವರೆಸಬಹುದಾಗಿದೆ.

Trending Desk
Updated:July 20, 2021, 5:57 PM IST
ಇನ್ಮುಂದೆ ವಾಟ್ಸ್​ಆ್ಯಪ್​ನ ಗ್ರೂಪ್ ಕಾಲ್‌ನಿಂದ ಹೊರಬಂದು ಮತ್ತೆ ಸೇರಿಕೊಳ್ಳಬಹುದು..!
ಸಾಂದರ್ಭಿಕ ಚಿತ್ರ
  • Share this:
ಸಾಮಾನ್ಯವಾಗಿ ವಾಟ್ಸ್​ಆ್ಯಪ್​ ತನ್ನ ಬಳಕೆದಾರರಿಗೆ ನಿರಂತರವಾಗಿ ಹೊಸ  ಹೊಸ  ಫೀಚರ್​ಗಳನ್ನು ಪರಿಚಯಿಸುತ್ತಲೇ ಬಂದಿದೆ. ಇದು ನಿಜಕ್ಕೂ ಗಮನಿಸಬೇಕಾದಂತಹ ಅಂಶವಾಗಿದೆ. ಪ್ರತಿಸಲದಂತೆ ಈ ಬಾರಿಯೂ ಒಂದು ವಿಶಿಷ್ಟವಾದ ಫೀಚರ್ ಒಂದನ್ನು ಸೇರಿಸಿದೆ ವಾಟ್ಸ್​ಆ್ಯಪ್. ನೀವು ಮುಂದಿನ ಬಾರಿ ನಿಮ್ಮ ವಾಟ್ಸ್​ಆ್ಯಪ್ ಅಪಡೇಟ್ ಕೇಳಿದಾಗ ಅಲ್ಲಿದೆ ನೋಡಿ ಮಜಾ. ಏಕೆಂದರೆ ವಾಟ್ಸ್​ಆ್ಯಪ್​ನಲ್ಲಿ ಮಾಡುವ ಗ್ರೂಪ್ ವಿಡಿಯೋ ಅಥವಾ ಗ್ರೂಪ್ ವಾಯ್ಸ್ ಕಾಲ್ ನಲ್ಲಿ ನೀವು ಮೊದಲಿನಂತೆ ಎಲ್ಲರೂ ಒಂದೇ ಬಾರಿಗೆ ಕನೆಕ್ಟ್ ಆಗಿ ಮಧ್ಯ ನಿಮ್ಮ ಗ್ರೂಪ್ ವಿಡಿಯೋ ಅಥವಾ ಗ್ರೂಪ್ ವಾಯ್ಸ್ ಕಾಲ್ ಕಟ್ಟಾದರೆ ನೀವು ಅದರಲ್ಲಿ ಸೇರಲು ಅವಕಾಶವಿರಲಿಲ್ಲ. ಆದರೆ, ಈ ಸಮಸ್ಯೆ ಇನ್ನು ಮುಂದೆ ಇರುವುದಿಲ್ಲ. ಹಾಗೆ ಮಾಡಲು ಮತ್ತೆ ಎಲ್ಲರೂ ಗ್ರೂಪ್ ವಿಡಿಯೋ ಮತ್ತು ಗ್ರೂಪ್ ವಾಯ್ಸ್ ಕಾಲ್ ಶುರು ಮಾಡಬೇಕಾಗಿತ್ತು.

ಆದರೆ, ಇನ್ಮುಂದೆ ನೀವು ನೆಟ್​ವರ್ಕ್​ ಸಮಸ್ಯೆಯಿಂದ ವಾಟ್ಸ್​ಆ್ಯಪ್​ ಗ್ರೂಪ್ ಕಾಲ್​ನಿಂದ ಹೊರ ಬಂದರೆ, ಮತ್ತೆ ನೀವು ಅದರಲ್ಲಿ ಸೇರಿಕೊಳ್ಳಬಹುದಾಗಿದೆ. ವಿಡಿಯೋ ಮತ್ತು ವಾಯ್ಸ್ ಕಾಲ್​ನಲ್ಲಿ ಗ್ರೂಪ್​ನ ಸದಸ್ಯರೊಂದಿಗೆ ಸಂವಾದವನ್ನು ಮುಂದುವರೆಸಬಹುದಾಗಿದೆ.

ಹೊಸ ಫೀಚರ್, ಗ್ರೂಪ್ ಕಾಲ್,  ವಾಟ್ಸಾಪ್ ಕಾಲ್ ಫೀಚರ್, ವಾಟ್ಸಾಪ್ ಕಾಲ್, ವಾಟ್ಸಾಪ್, WhatsApp, WhatsApp call, WhatsApp video call, Group video call, Voice call 
ವಾಟ್ಸ್​ಆ್ಯಪ್


ಕಾಲ್ ಕಟ್ಟಾದಾಗ ಮತ್ತೆ ವಾಟ್ಸ್​ಆ್ಯಪ್​ನಲ್ಲಿರುವ ಕಾಲ್ ಫೀಚರ್​ಗೆ ಹೋಗಿ ಮತ್ತೆ ನಡೆಯುತ್ತಿರುವ ಗ್ರೂಪ್ ವಿಡಿಯೋ ಅಥವಾ ಗ್ರೂಪ್ ವಾಯ್ಸ್ ಕಾಲ್​ನಲ್ಲಿ ಪಾಲ್ಗೊಳ್ಳಬಹುದಾಗಿದೆ. ಇದರೊಂದಿಗೆ ಹೊಸದಾಗಿ 'ನ್ಯೂ ಕಾಲ್ ಇನ್ಫೋ ಸ್ಕ್ರೀನ್' ಒಂದನ್ನು ಸೇರಿಸಲಾಗಿದ್ದು, ಅದರಲ್ಲಿ ನೀವು ಇನ್ನೂ ಗ್ರೂಪ್ ವಿಡಿಯೋ ಮತ್ತು ಗ್ರೂಪ್ ವಾಯ್ಸ್ ಕಾಲ್​ನಲ್ಲಿ ಯಾರಿದ್ದಾರೆ ಹಾಗೂ ಇನ್ನೂ ಯಾರು ಈ ಗ್ರೂಪ್ ಕಾಲ್​ನಲ್ಲಿ ಸೇರಿಕೊಂಡಿಲ್ಲ ಎಂದು ಸಹ ನೀವು ಈಗ ನೋಡಬಹುದಾಗಿದೆ.

ಇದನ್ನೂ ಓದಿ: Happy Birthday Sitara Ghattamaneni: 9ನೇ ವಸಂತಕ್ಕೆ ಕಾಲಿಟ್ಟ ಸಿತಾರಾ: ಸ್ಟಾರ್​ ಕಿಡ್​ ಹುಟ್ಟುಹಬ್ಬದ ಫೋಟೋಗಳು ಇಲ್ಲಿವೆ..!

ಈ ಫೀಚರ್​ನಿಂದಾಗಿ ನೀವು ನೆಟ್​ವರ್ಕ್ ಸಮಸ್ಯೆಯಿಂದ ಕಾಲ್ ಕಟ್ಟಾದರೆ ನೀವು ಮತ್ತೆ ಅದರಲ್ಲಿ ಸೇರಿಕೊಳ್ಳಬಹುದಾಗಿದೆ ಎಂದು ವಾಟ್ಸ್​ಆ್ಯಪ್​ ತಮ್ಮ ಬ್ಲಾಗ್​ನಲ್ಲಿ ಬರೆದುಕೊಂಡಿದೆ.  ಮುಂಚೆ ನೀವು ಕಾಲ್ ನ ಬಗ್ಗೆ ನೋಟಿಫಿಕೇಶನ್ ನಲ್ಲಿ ನೋಡಿ ಕಾಲ್​ನಲ್ಲಿರುವವರಿಗೆ ತಮ್ಮನ್ನು ಸೇರಿಸಿಕೊಳ್ಳಿ ಎಂದು ಕೇಳಿ ನಂತರ ಅವರು ಸೇರಿಸಿಕೊಂಡರೆ ಗ್ರೂಪ್ ಕಾಲ್ ಗೆ ಸೇರಬಹುದಿತ್ತು. ಆದರೆ, ಈ ಹೊಸ ಅಪಡೇಟ್ ನಿಂದಾಗಿ ನೀವು ನಿಮಷ್ಟಕ್ಕೆ ನೀವೇ ಗ್ರೂಪ್ ಕಾಲ್ ನಲ್ಲಿ ಸೇರಿಕೊಳ್ಳಬಹುದಾಗಿದೆ.

ಇದನ್ನೂ ಓದಿ: ಬೆತ್ತಲೆಯಾಗಿ ಆಡಿಷನ್​ ಕೊಡುವಂತೆ ಒತ್ತಾಯಿಸಿದ್ದ ರಾಜ್​ ಕುಂದ್ರಾ: ಸಾಗರಿಕಾ ಶೋನಾ ಆರೋಪ..!ಈ ಹೊಸ ಫೀಚರ್ ಎಲ್ಲ ಆಂಡ್ರಾಯ್ಡ್ ಮತ್ತು ಐಓಎಸ್ ಗಳಲ್ಲಿ ಅತೀ ಶೀಘ್ರದಲ್ಲಿಯೇ ಹೊಸ ಅಪಡೇಟ್​ನೊಂದಿಗೆ ಬರಲಿದೆ. ಈ ಹೊಸ ಫೀಚರ್ ದಿಂದಾಗಿ ನೀವು ಗ್ರೂಪ್ ಕಾಲ್ ನಿಂದ ಯಾವಾಗಾದರೂ ಹೊರಗಡೆ ಬರಬಹುದು ಮತ್ತು ಕೆಲ ಸಮಯದ ನಂತರ ಕಾಲ್ ಇನ್ನೂ ನಡೆಯುತ್ತಿದ್ದರೆ ಮತ್ತೆ ಸೇರಿಕೊಳ್ಳಬಹುದಾಗಿದೆ.

ಇದನ್ನೂ ಓದಿ: Bigg Boss Kannada 8: ಅರವಿಂದ್​-ವೈಷ್ಣವಿ ಬಿಟ್ಟು ಉಳಿದವರೆಲ್ಲ ಆದ್ರು ನಾಮಿನೇಟ್​ : ಹೊಸ ಟ್ವಿಸ್ಟ್​ಗಳೊಂದಿಗೆ ವಾರದ ಆರಂಭ..!

ನಿಮಗೆ ವಾಟ್ಸ್​ಆ್ಯಪ್ ಗ್ರೂಪ್ ಕಾಲ್ ಬಂದಾಗ ಎರಡು ಆಯ್ಕೆಗಳು ಬರುತ್ತವೆ. 'ಜಾಯಿನ್' ಮತ್ತು 'ಇಗ್ನೋರ್'. ಜಾಯಿನ್ ಒತ್ತಿದರೆ ನಿಮ್ಮನ್ನು ನೇರವಾಗಿ ಕಾಲ್​ಗೆ ಒಯ್ಯುತ್ತದೆ, ಇಗ್ನೋರ್ ಒತ್ತಿದರೆ ನಿಮಗೆ ಬಂದ ಕಾಲ್ ಹಾಗೆಯೇ ಕಾಲ್ ಟ್ಯಾಬ್​ನಲ್ಲಿರುತ್ತದೆ. ನಿಮಗೆ ಬೇಕಾದಾಗ ಅದರಲ್ಲಿ ಸೇರಿಕೊಳ್ಳಬಹುದಾಗಿದೆ. ಇದೇ ಈ ಹೊಸ ಫೀಚರ್​ನ ವಿಶೇಷತೆ.
Published by: Anitha E
First published: July 20, 2021, 5:43 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories