ಇದಕ್ಕೆ ಪ್ರತಿಕ್ರಿಯಿಸಿದ ವಕೀಲ ಸಾಳ್ವೆ, “ಸಂಸತ್ತಿನ ಕಾಯಿದೆ ಬರುವವರೆಗೆ ನಾವು ಏನನ್ನೂ ಮಾಡಲು ಮುಂದಾಗುವುದಿಲ್ಲ. ಇದು ನಮ್ಮ ವಚನವಾಗಿದೆ. ಸಂಸತ್ತು ಒಂದೊಮ್ಮೆ ಭಾರತಕ್ಕೆ ಪ್ರತ್ಯೇಕ ನೀತಿಯನ್ನು ಹೊಂದಲು ನಮಗೆ ಅನುವು ಮಾಡಿದರೆ ನಾವು ಹೊಂದುತ್ತೇನೆ. ಇಲ್ಲವಾದರೆ, ನಂತರ ಏನು ಮಾಡಬೇಕು ಎಂಬುದನ್ನು ನಿರ್ಧರಿಸುತ್ತೇವೆ,” ಎಂದರು.
ಇದನ್ನೂ ಓದಿ: ಪಂಜಾಬ್: ಅಕಾಲಿದಳದೊಂದಿಗೆ ಮೈತ್ರಿ ಮಾಡಿಕೊಂಡ ಬಿಎಸ್ಪಿ- ಐತಿಹಾಸಿಕ ಮೈತ್ರಿ ಎಂದ ಮಾಯಾವತಿ
ವಾಟ್ಸಪ್ನ ಈ ನೀತಿಯನ್ನು ಬಳಕೆದಾರರು ಒಪ್ಪಿಕೊಂಡರೆ ನಮ್ಮ ವೈಯಕ್ತಿಕ ಮಾಹಿತಿಗಳನ್ನು ಅವರು ಸುಲಭವಾಗಿ ಪಡೆಯಬಹುದು ಹಾಗೂ ಆ ಮಾಹಿತಿಯನ್ನು ಯಾವುದೇ ರೂಪದಲ್ಲಿ ಬಳಸಿಕೊಳ್ಳಬಹುದು ಎನ್ನುವ ಅಪಾಯಕಾರಿ ಅಂಶಗಳಿವೆ ಎಂದು ಮಾಹಿತಿ ತಂತ್ರಜ್ಞಾನ ಪರಿಣಿತರು ಆತಂಕ ವ್ಯಕ್ತಪಡಿಸಿದ್ದರಿಂದ ಇದರ ವಿರುದ್ದ ಸಾಕಷ್ಟು ಕೂಗು ಎದ್ದಿತ್ತು.
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಮನೆಯಿಂದ ಹೊರಗೆ ಹೋಗುವುದನ್ನು ಆದಷ್ಟು ಕಡಿಮೆ ಮಾಡಿ. ಅನಗತ್ಯವಾಗಿ ಗುಂಪು ಗೂಡುವುದನ್ನು ನಿಯಂತ್ರಿಸಿ.