ಮಧ್ಯದ ಬೆರಳು ತೋರುವ ಎಮೋಜಿ ತೆಗೆಯುವಂತೆ ವಾಟ್ಸಾಪ್`ಗೆ ಲೀಗಲ್ ನೋಟಿಸ್


Updated:December 27, 2017, 8:12 PM IST
ಮಧ್ಯದ ಬೆರಳು ತೋರುವ ಎಮೋಜಿ ತೆಗೆಯುವಂತೆ ವಾಟ್ಸಾಪ್`ಗೆ ಲೀಗಲ್ ನೋಟಿಸ್
ಮಧ್ಯದ ಬೆರಳು ತೋರುವ ಎಮೋಜಿ ತೆಗೆಯುವಂತೆ ವಾಟ್ಸಾಪ್`ಗೆ ಲೀಗಲ್ ನೋಟಿಸ್

Updated: December 27, 2017, 8:12 PM IST
ನವದೆಹಲಿ(ಡಿ.27): ವಾಟ್ಸಾಪ್`ನಲ್ಲಿರುವ `ಮಧ್ಯದ ಬೆರಳನ್ನ ತೋರಿಸುವ’ ಎಮೋಜಿ ತೆಗೆಯುವಂತೆ ಸೂಚಿಸಿ ನವದೆಹಲಿಯ ಅಡ್ವೋಕೇಟ್ ಗುರ್ಮೀತ್ ಸಿಂಗ್ ಎಂಬುವವರು ವಾಟ್ಸಾಪ್`ಗೆ ಲೀಗಲ್ ನೋಟಿಸ್ ಕಳುಹಿಸಿದ್ದಾರೆ. ಎಮೋಜಿ ತೆಗೆಯಲು ಅಡ್ವೋಕೇಟ್ 15 ದಿನಗಳ ಗಡುವು ನೀಡಿದ್ದಾರೆ.

ಮಧ್ಯದ ಬೆರಳನ್ನ ತೋರಿಸುವುದು ಕಾನೂನು ಬಾಹಿರ ಮಾತ್ರವಲ್ಲದೆ, ಅಶ್ಲೀಲ ಮತ್ತು ಆಕ್ರಮಣಕಾರಿಯಾದದ್ದು, ಮಹಿಳೆಯರಿಗೆ ಈ ರೀತಿಯ ಅಶ್ಲೀಲ, ಅಸಭ್ಯ ಸನ್ನೆ ಮಾಡುವುದು ಐಪಿಸಿ ಸೆಕ್ಷನ್ 354 ಮತ್ತು 509ರಡಿ ಅಪರಾಧ ಎಂದು ನೋಟಿಸ್`ನಲ್ಲಿ ಸೂಚಿಸಿದ್ದಾರೆ.

ವಾಟ್ಸಾಪ್`ನಲ್ಲಿ ಮಧ್ಯದ ಬೆರಳಿನ ಎಮೋಜಿ ಬಳಕೆಗೆ ನೀಡಿರುವುದು ಕಾನೂನು ಬಾಹಿರ, ಅಶ್ಲೀಲ, ಆಕ್ಷೇಪಾರ್ಹ ಸನ್ನೆ ಬಳಕೆಗೆ ನೇರವಾಗಿ ಉತ್ತೇಜಿಸಿದಂತಾಗುತ್ತದೆ. ಹೀಗಾಗಿ, ವಾಟ್ಸಾಪ್`ನಿಂದ ಕೂಡಲೇ ಆಕ್ಷೇಪಾರ್ಹ ಎಮೋಜಿಯನ್ನ ತೆಗೆಯಬೇಕು. ಇಲ್ಲವಾದಲ್ಲಿ ಕ್ರಿಮಿನಲ್ ಕೇಸ್ ದಾಖಲಿಸುವುದಾಗಿ ನೋಟಿಸ್`ನಲ್ಲಿ ಸೂಚಿಸಲಾಗಿದೆ.
First published:December 27, 2017
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...