Whatsapp ಚಾಟಿಂಗ್​ ಮತ್ತಷ್ಟು ಸುರಕ್ಷಿತ, ಮುಖ ತೋರಿಸಿದರಷ್ಟೇ ಆ್ಯಪ್​ ಬಳಸಲು ಸಾಧ್ಯ!

Precilla Olivia Dias | news18
Updated:October 23, 2018, 5:45 PM IST
Whatsapp ಚಾಟಿಂಗ್​ ಮತ್ತಷ್ಟು ಸುರಕ್ಷಿತ, ಮುಖ ತೋರಿಸಿದರಷ್ಟೇ ಆ್ಯಪ್​ ಬಳಸಲು ಸಾಧ್ಯ!
  • Advertorial
  • Last Updated: October 23, 2018, 5:45 PM IST
  • Share this:
ಮೆಸೇಜಿಂಗ್​ ಆ್ಯಪ್​ Whatsapp ನಿರಂತರವಾಗಿ ತನ್ನ ಸೇವೆಯನ್ನು ಉತ್ತಮಗೊಳಿಸುತ್ತಿದೆ. Whatsapp ಇತ್ತೀಚೆಗಷ್ಟೇ ನೂತನ ನಿಯಮಗಳೊಂದಿಗೆ Delete for Everyone ಫೀಚರ್​ ಬಳಕೆಗೆ ತಂದಿದೆ. ಈಗ ಇದು ಮತ್ತೊಂದು ನೂತನ ಫೀಚರ್​ ಪರಿಚಯಿಸಲು ಸಿದ್ಧವಾಗಿದೆ. ಈ ಫೀಚರ್​ ನಿಮ್ಮ Whatsapp ಚಾಟಿಂಗ್​ ಮತ್ತಷ್ಟು ಸುರಕ್ಷಿತಗೊಳಿಸಲಿದೆ. ಇನ್ಮುಂದೆ ನಿಮ್ಮ ಮುಖ ಚಹರೆ ತೋರಿಸದೆ ಈ ಆ್ಯಪ್​ ಬಳಸಲು ಸಾಧ್ಯವಿಲ್ಲ.

ಪ್ರೈವೆಸಿ ಸೆಟ್ಟಿಂಗ್ಸ್​ನಲ್ಲಿ ಇರಲಿದೆ Face ID ಹಾಗೂ Touch ID ಆಯ್ಕೆ:

Whatsapp ತನ್ನ ಆ್ಯಪ್​ನಲ್ಲಿ ಟಚ್​ ಐಡಿ ಹಾಗೂ ಫೇಸ್​ ಐಡಿ ಸೇರಿಸಲು ಸಿದ್ಧತೆ ನಡೆಸುತ್ತಿದೆ. ಈ ಮಾಹಿತಿಯನ್ನು WABetaInfo ತನ್ನ ವರದಿಯೊಂದರಲ್ಲಿ ಬಹಿರಂಗಪಡಿಸಿದೆ. ಫೇಸ್​ ಐಡಿ ಹಾಗೂ ಟಚ್​ ಐಡಿ ಆಯ್ಕೆಗಳು ಪ್ರೈವೆಸಿ ಸೆಟ್ಟಿಂಗ್ಸ್​ನಲ್ಲಿ ಕಂಪೆನಿಯು ಸೇರಿಸಲಿದೆ. ಆದರೆ ಸದ್ಯ ಈ ಆಯ್ಕೆಗಳು ಕೇವಲ  iPhone ಗಳಿಗಷ್ಟೇ ಸೀಮಿತವಾಗಿರಲಿದೆ ಶೀಘ್ರದಲ್ಲೇ ಇದನ್ನು Android ಆ್ಯಪ್​ಗಳಲ್ಲೂ ನೀಡುತ್ತಾರೆಂಬ ಮಾಹಿತಿ ಲಭ್ಯವಾಗಿದೆ.



ಇದನ್ನೂ ಓದಿ: Whatsapp ಅಪ್ಡೇಟ್​: ಇನ್ಮುಂದೆ ಡಿಲೀಟ್​ ಆಗುವುದಿಲ್ಲ ನೀವು ಕಳುಹಿಸಿದ ಮೆಸೇಜ್​!: ಬಹುದೊಡ್ಡ ಬದಲಾವಣೆ

WABetaInfo ವರದಿಯನ್ವಯ, WhatsApp ಫೇಸ್​ ಐಡಿ ಹಾಗೂ ಟಚ್​ ಐಡಿಇವೆರಡನ್ನೂ ತನ್ನ ಆ್ಯಪ್​ನಲ್ಲಿ ಸೇರಿಸಲು ಸಿದ್ಧತೆ ನಡೆಸುತ್ತಿದೆ. WhatsAppನ ಪ್ರೈವೆಸಿ ಸೆಟ್ಟಿಂಗ್ಸ್​ನಲ್ಲಿ Require TouchID  ಎಂಬ ನೂತನ ಆಯ್ಕೆ ಸಿಗಲಿದೆ. ಒಂದು ವೇಳೆ ನಿಮ್ಮ ಬಳಿ iPhone X ಅಥವಾ ಇದಕ್ಕಿಂತಲೂ ಲೇಟೆಸ್ಟ್​ ಫೋನ್​ ಇದ್ದರೆ ಅದರಲ್ಲಿ ನಿಮಗೆ ಫೇಸ್​ ಐಡಿ ಆಯ್ಕೆ ಸಿಗಲಿದೆ. ಇದು ಸದ್ಯ iPhoneX, iPhone XS, iPhone XS Max ಹಾಗೂ iPhone XRನಲ್ಲಿ ಸಿಗಲಿದೆ.

ಇದನ್ನೂ ಓದಿ: ಕಾದು ಸುಸ್ತಾದ ಬಳಕೆದಾರರಿಗೆ ಕೊನೆಗೂ ಸಿಹಿ ಸುದ್ದಿ: Whatsappನಲ್ಲಿ ಶೀಘ್ರದಲ್ಲೇ ಬರಲಿವೆ ಈ ಫೀಚರ್ಸ್​ಮುಖ ಅಥವಾ ಫಿಂಗರ್​ ಪ್ರಿಂಟ್​ ಗುರುತು ಸ್ವೀಕರಿಸದಿದ್ದಲ್ಲಿ ಪಾಸ್​ಕೋಡ್​ ಹಾಕಬೇಕಾಗುತ್ತದೆ

ಇನ್ನು ನಿಮ್ಮ ಬಳಿ ಹಳೆಯ iPhone ಇದ್ದರೆ ಅದರಲ್ಲಿ ನಿಮಗೆ ಟಚ್​ ಐಡಿ ಆಯ್ಕೆ ಸಿಗುತ್ತದೆ. ಈ ಫೀಚರ್​ iOS8 ಅದಕ್ಕಿಂತಲೂ ಇದಕ್ಕಿಂತಲೂ ನೂತನ ವರ್ಶನ್​ನಲ್ಲಿ ಇದು ಸಪೋರ್ಟ್​ ಮಾಡುತ್ತದೆ. ನೀವು ನಿಮ್ಮ ಫೋನ್​ನಲ್ಲಿ ಫೇಸ್​ ಐಡಿ ಅಥವಾ ಟಚ್​ ಐಡಿ ಸಕ್ರಿಯಗೊಳಿಸಿದರೆ ನೀವು WhatsApp ಓಪನ್​ ಮಾಡುವಾಗೆಲ್ಲಾ ನಿಮ್ಮ ಫಿಂಗರ್​ ಪ್ರಿಂಟ್​ ಅಥವಾ ಮುಖಚಹರೆ ತೋರಿಸುವಂತೆ ತಿಳಿಸುತ್ತದೆ. ಒಂದು ವೇಳೆ ನಿಮ್ಮ ಫೋನ್​ ಫಿಂಗರ್​ ಪ್ರಿಂಟ್​ ಅಥವಾ ಮುಖ ಗುರುತು ಹಿಡಿಯದಿದ್ದಲ್ಲಿ ನಿಮಗೆ 6 ಅಂಕೆಯ  iPhone Passcode ಹಾಕುವಂತೆ ಸೂಚಿಸಲಾಗುತ್ತದೆ. Whatsappನ ಈ ಫೀಚರ್​ ಇನ್ನೂ alpha ಹಂತದಲ್ಲೇ ಇದೆ.
First published:October 23, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ