ನಕಲಿ ಸುದ್ದಿ ಮೂಲದ ಮಾಹಿತಿ ನೀಡಲ್ಲ ಎಂದ ವಾಟ್ಸಾಪ್​; ಕೇಂದ್ರ ಸರ್ಕಾರ ಗರಂ

news18
Updated:August 27, 2018, 11:26 AM IST
ನಕಲಿ ಸುದ್ದಿ ಮೂಲದ ಮಾಹಿತಿ ನೀಡಲ್ಲ ಎಂದ ವಾಟ್ಸಾಪ್​; ಕೇಂದ್ರ ಸರ್ಕಾರ ಗರಂ
news18
Updated: August 27, 2018, 11:26 AM IST
ನ್ಯೂಸ್​ 18ಕನ್ನಡ

ನವದೆಹಲಿ (ಆ.27): ವಾಟ್ಸಾಪ್ ಸುಳ್ಳು ಸುದ್ದಿ ನಂಬಿ ಅಮಾಯಕರ ಮೇಲೆ ಹಲ್ಲೆಗಳು ಹೆಚ್ಚಾಗುತ್ತಲೆ ಇದೆ. ಹೀಗಾಗಿ ಪ್ರಚೋದನಕಾರಿ ಸಂದೇಶಗಳಿಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಮುಂದಾಗಿದೆ. ಇದಕ್ಕಾಗಿ ವಾಟ್ಸಾಪ್​ ಸಂಸ್ಥೆಯೊಂದಿಗೂ ಕೂಡ ಪತ್ರ ವ್ಯವಹಾರ ನಡೆಸಿದೆ. ಆದರೆ ಈ ಮಾತುಕತೆ ಜಟಾಪಟಿಗೆ ಕಾರಣವಾಗಿದೆ.

ಈಗಾಗಲೇ ಸುದ್ದಿ ಹರಡುವುದನ್ನು ತಪ್ಪಿಸಲು ವಾಟ್ಸಾಪ್​ ಏಕಕಾಲಕ್ಕೆ ಕೇವಲ 5ಜನಕ್ಕೆ ಮಾತ್ರ ಸಂದೇಶ ರವಾನೆಗೆ ಸೀಮಿತಗೊಳಿಸಿರುವ ವಾಟ್ಸಾಪ್​ ಭಾರತದ ಮನವಿ ಮೇರೆ ಮತ್ತೊಂದಿಷ್ಟು ಮಾರ್ಪಡು ಮಾಡಲು ಮುಂದಾಗಿದೆ. ಆದರೆ ಈ ಕ್ರಮಗಳು ನಮ್ಮ ನಿರೀಕ್ಷೆ ಮಟ್ಟದಲ್ಲಿ ಇಲ್ಲ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಸುಳ್ಳು ಸುದ್ದಿ ಕಳುಹಿಸುವ ಮೊದಲಿಗರ ಮೂಲ ಪತ್ತೆ ಹಚ್ಚಬೇಕು ಎಂಬುದು ಸರ್ಕಾರದ ಪ್ರಮುಳ ಬೇಡಿಕೆಯಾಗಿದೆ. ಆದರೆ ಇದು ಗ್ರಾಹಕರ ಖಾಸಗಿ ಮಾಹಿತಿ ರಕ್ಷಣೆಗೆ ಚ್ಯುತಿ ಬರಲಿದೆ. ನಮ್ಮ ಸಂಸ್ಥೆ ಮೂಲ ಉದ್ಧೇಶವೇ ಗ್ರಾಹಕರ ಖಾಸಗಿತನದ ರಕ್ಷಣೆಯಾಗಿದೆ ಎಂದು ವಾಟ್ಸಾಪ್​ ಪ್ರತಿಪಾದಿಸಿದೆ, ಇದರಿಂದಾಗಿ ಗ್ರಾಹಕರು ಹಾಗೂ ವಾಟ್ಸಾಪ್​ ನಡುವೆ ಪತ್ರ ಸಮಯ ಏರ್ಪಟ್ಟಿದೆ.

ವಾಟ್ಸಾಪ್​ ಬಳಕೆದಾರರು ಭಾರತದಲ್ಲಿ ಹೆಚ್ಚಿದ್ದು, ಇದರಿಂದ ಬರುವ ಸಂದೇಶದ ಸತ್ಯಾಸತ್ಯತೆಯನ್ನು ತಿಳಿಯುವ ಮೊದಲೇ ಜನರು ನಂಬಲು ಮುಂದಾಗುತ್ತಾರೆ. ಇದರಿಂದಾಗಿ ಜನಸಮೂಹ ಹತ್ಯೆಯಂತಹ ಹಿಂಸಾತ್ಮಕ ಘಟನೆಗಳು ಹೆಚ್ಚಿದ್ದು, ಹಲವರು ಅಮಾಯಕರು ಜೀವ ಕಳೆದುಕೊಂಡಿದ್ದಾರೆ. ಈ ಸಮಸ್ಯೆಗೆ ತಡೆಯಲಿ ಈ ರೀತಿ ಸುಳ್ಳು ಸುದ್ದಿ ಮೇಲೆ ನಿಗಾ ವಹಿಸಿ ಅದನ್ನು ರವಾನಿಸುವ ವಿರುದ್ಧ ಕ್ರಮಕ್ಕೆ ಮುಂದಾಗಲು ಸಹಕಾರ ನೀಡುವಂತೆ ಕೇಂದ್ರ ವಾಟ್ಸಾಪ್​ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕ್ರಿಸ್​ ಡೇನಿಯಲ್​ ಅವರಿಗೆ ಪತ್ರದ ಮೂಲಕ ಮನವಿ ಮಾಡಿತ್ತು.

ಇದರ ಪರಿಣಾಮವಾಗಿ ವಾಟ್ಸಾಪ್​ ಸಂದೇಶ ರವಾನೆಯನ್ನು ಐದು ಜನಕ್ಕೆ ಸೀಮಿತಗೊಳಿಸಿತ್ತು. ಆದರೆ ಇದು ಪರಿಹಾರವಾಗಲು ಸಾಧ್ಯವಿಲ್ಲ. ಈ ರೀತಿ ಸುಳ್ಳು ಸುದ್ದಿ ಹರಡುವ ಮೂಲದ ಬಗ್ಗೆ ತಮಗೆ ಮಾಹಿತಿ ಬೇಕು ಎಂದು ಕೇಂದ್ರ ತಿಳಿಸಿದೆ, ಆದರೆ ಗ್ರಾಹಕರ ಗೌಪತ್ಯೆಯನ್ನು ನಾವು ಬಿಟ್ಟುಕೊಡಲು ಅಸಾಧ್ಯ, ಸುಳ್ಳು ಸುದ್ದಿ ಹರಡುವುದನ್ನು ತಪ್ಪಿಸಲು ತಡೆಯಲು ತಂಡವನ್ನು ರಚಿಸಿ ಈ ಮೂಲಕ ಪರಿಹಾರ ಕಂಡುಕೊಳ್ಳಲಾಗಿವುದು ಎಂದು ತಿಳಿಸಿರುವುದು ವಾಟ್ಸಾಪ್ ಸಂಸ್ಥೆ  ಮತ್ತು ಕೇಂದ್ರ ನಡುವೆ ಸಮರಕ್ಕೆ ಕಾರಣವಾಗಿದೆ

 
First published:August 27, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...