'ನಿಮ್ಮ ಫೇಸ್​​ಬುಕ್​ ಅಕೌಂಟ್ ಡಿಲೀಟ್ ಮಾಡಿ' ಎಂದ ವಾಟ್ಸ್​​ಆ್ಯಪ್​ ಸಹ ಸಂಸ್ಥಾಪಕ

news18
Updated:March 21, 2018, 6:02 PM IST
'ನಿಮ್ಮ ಫೇಸ್​​ಬುಕ್​ ಅಕೌಂಟ್ ಡಿಲೀಟ್ ಮಾಡಿ' ಎಂದ ವಾಟ್ಸ್​​ಆ್ಯಪ್​ ಸಹ ಸಂಸ್ಥಾಪಕ
news18
Updated: March 21, 2018, 6:02 PM IST
- ನ್ಯೂಸ್ 18 ಕನ್ನಡ

ನವದೆಹಲಿ(ಮಾ. 21): ಸಾಮಾಜಿಕ ಜಾಲತಾಣ ವಾಟ್ಸ್​​ಆ್ಯಪ್​ನ ಸಹ ಸಂಸ್ಥಾಪಕ ಬ್ರಿಯಾನ್ ಆಕ್ಟನ್ ಅವರು 'ಫೇಸ್​ಬುಕ್​ ಡಿಲೀಟ್ ಮಾಡಲು ಇದು ಸೂಕ್ತ ಸಮಯ' ಎಂದು ಟ್ವೀಟ್ ಮಾಡಿದ್ದಾರೆ. ಆದರೆ ಯಾವ ಕಾರಣಕ್ಕೆ ಈ ಹೇಳಿಕೆ ನೀಡಿದ್ದಾರೆ ಎಂಬುದನ್ನು ತಿಳಿಸಿಲ್ಲ.

 


Loading...

2014ರಲ್ಲಿ 19 ಬಿಲಿಯನ್ ಡಾಲರ್​ ಕೊಟ್ಟು ಫೇಸ್​​ಬುಕ್​, ವಾಟ್ಸ್​ಆ್ಯಪ್​ನ್ನು ಖರೀದಿಸಿತ್ತು. ಅದಾದ ಕೆಲ ಕಾಲದ ಬಳಿಕ ಬ್ರಿಯಾನ್ ಆಕ್ಟನ್ ಅವರು ವಾಟ್ಸ್​ಆ್ಯಪ್​ನಿಂದ ಹೊರಬಂದರು. ಇದೀಗ ಸಿಗ್ನಲ್ ಫೌಂಡೇಶನ್ ಎಂಬ ಹೊಸ ಕಂಪನಿ ಸ್ಥಾಪಿಸಿದ್ದಾರೆ.

ಇತ್ತೀಚೆಗೆ ಫೇಸ್​ಬುಕ್​ ಬಳಕೆದಾರರ ಅನುಮತಿ ಪಡೆಯದೆ 'ಕೇಂಬ್ರಿಡ್ಜ್ ಅನಾಲಿಟಿಕಾ' ಎಂಬ ರಾಜಕೀಯ ದತ್ತಾಂಶ ವಿಶ್ಲೇಷಣಾ ಸಂಸ್ಥೆಯು 5 ಕೋಟಿ ಫೇಸ್​ಬುಕ್​ ಬಳಕೆದಾರರ ಡಾಟಾಗಳನ್ನು ಪಡೆದಿರುವುದಾಗಿ ತಿಳಿಸಿ ಸುದ್ದಿಯಾಗಿತ್ತು. ಈ ಸುದ್ದಿ ತಣ್ಣಗಾಗುವ ಮುನ್ನವೇ ಬ್ರಿಯಾನ್ ಆಕ್ಟನ್ ಅವರ ಈ ಹೇಳಿಕೆ ಸದ್ಯ ದೊಡ್ಡ ಸಂಚಲನಕ್ಕೆ ಕಾರಣವಾಗಿದೆ.
First published:March 21, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ