ವಾಟ್ಸಾಪ್​ ಚಾಟ್​ ತಂದ ಸಾವು; ವಿವಾಹಿತ ವ್ಯಕ್ತಿ ಮತ್ತು ಮಾಜಿ ಪ್ರೇಯಸಿ ಬಲಿ

news18
Updated:October 1, 2018, 12:10 PM IST
ವಾಟ್ಸಾಪ್​ ಚಾಟ್​ ತಂದ ಸಾವು; ವಿವಾಹಿತ ವ್ಯಕ್ತಿ ಮತ್ತು ಮಾಜಿ ಪ್ರೇಯಸಿ ಬಲಿ
  • Advertorial
  • Last Updated: October 1, 2018, 12:10 PM IST
  • Share this:
-ನ್ಯೂಸ್​ 18 ಕನ್ನಡ

ಹೈದರಾಬಾದ್​, (ಅ.01): ವಾಟ್ಸಾಪ್​ ಚಾಟ್​ನಿಂದಾಗಿ ಎರಡು ಜೀವಗಳು ಬಲಿಯಾಗಿರುವ ಘಟನೆ ಹೈದರಾಬಾದ್​ನ ಸಿಕಂದರಾಬಾದ್​ನಲ್ಲಿ ನಡೆದಿದೆ. ವಿವಾಹಿತ ವ್ಯಕ್ತಿ ಮತ್ತು ಮಾಜಿ ಪ್ರೇಯಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಶಿವಕುಮಾರ್​(27), ವೆನಿಲ್ಲಾ(19) ಸಾವಿಗೆ ಶರಣಾದವರು. ಶಿವಕುಮಾರ್​ ತನ್ನ ಹಳೆಯ ಪ್ರೇಯಸಿ ವೆನಿಲ್ಲಾ ಜೊತೆ ಹೆಚ್ಚಾಗಿ ವಾಟ್ಸಾಪ್​ನಲ್ಲಿ ಚಾಟ್​ ಮಾಡುತ್ತಿದ್ದ ಎನ್ನಲಾಗಿದೆ. ಇದರಿಂದ ಬೇಸತ್ತ ಆತನ ಹೆಂಡತಿ ಕುಟುಂಬದ ಹಿರಿಯರಿಗೆ ದೂರು ನೀಡುವುದಾಗಿ ಬೆದರಿಕೆ ಹಾಕಿದ್ದಾಳೆ.ಇದಾದ ಬಳಿಕ ಶಿವಕುಮಾರ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ವಿಷಯ ತಿಳಿಯುತ್ತಿದ್ದಂತೆ ಮಾಜಿ ಪ್ರೇಯಸಿ ವೆನಿಲ್ಲಾ ಆಸಿಡ್​ ಕುಡಿದಿದ್ದಾಳೆ. ತಕ್ಷಣ ಗಾಂಧಿ ಆಸ್ಪತ್ರೆಗೆ ದಾಖಲಿಸಿದರೂ ಆಕೆಯ ಪ್ರಾಣ ಪಕ್ಷಿ ಹಾರಿ ಹೋಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಮೃತ ಶಿವಕುಮಾರ್​ ವೃತ್ತಿಯಲ್ಲಿ ಎಲೆಕ್ಟ್ರಿಷಿಯನ್​ ಆಗಿದ್ದ ಎನ್ನಲಾಗಿದೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾನೆ. ಪಕ್ಕದ ಮನೆಯಲ್ಲಿ ವಾಸಿಸುತ್ತಿದ್ದ ಆತನ ಹಳೆಯ ಪ್ರೇಯಸಿ ವೆನಿಲ್ಲಾ ಜೊತೆಗೆ ನಿರಂತರವಾಗಿ ಫೋನ್​ ಸಂಪರ್ಕದಲ್ಲಿದ್ದ. ಹೀಗಾಗಿ ಆತನ ಹೆಂಡತಿ ಲಹರಿ ಆತನ ನಡವಳಿಕೆಯನ್ನು ಖಂಡಿಸಿದ್ದಾಳೆ ಎನ್ನಲಾಗಿದೆ.

ವೆನಿಲ್ಲಾ ಶಿವಕುಮಾರ್​ನ ಬಾಲ್ಯ ಸ್ನೇಹಿತೆ. ಲಹರಿ ಮತ್ತು ಶಿವಕುಮಾರ್​ ಕಳೆದ ತಿಂಗಳಷ್ಟೇ ವಿವಾಹವಾಗಿದ್ದರು. ಮದುವೆಯ ನಂತರವೂ ಕುಮಾರ್ ವೆನಿಲ್ಲಾ ಜೊತೆ ನಿರಂತರವಾಗಿ ಸಂಪರ್ಕದಲ್ಲಿದ್ದ. ಲಹರಿ ಎಷ್ಟೇ ಹೇಳಿದರೂ ಸಹ ಶಿವಕುಮಾರ್ ವೆನಿಲ್ಲಾ ಜೊತೆ ಫೋನಿನಲ್ಲಿ ಮಾತನಾಡುವುದನ್ನು ನಿಲ್ಲಿಸಿರಲಿಲ್ಲ.

ಶಿವಕುಮಾರ್​ ಆತ್ಮಹತ್ಯೆ ಮಾಡಿಕೊಂಡ ವಿಷಯ ತಿಳಿದ ನೆರೆ ಹೊರೆಯವರು ಆತನ ಸಾವಿಗೆ ವೆನಿಲ್ಲಾಳೆ ಕಾರಣ ಎಂದು ದೂಷಿಸಲು ಪ್ರಾರಂಭಿಸಿದ್ದಾರೆ. ಇದರಿಂದ ಖಿನ್ನತೆಗೆ ಒಳಗಾದ ವೆನಿಲ್ಲಾ ಆಸಿಡ್​ ಕುಡಿದು ತನ್ನ ಜೀವನವನ್ನು ಅಂತ್ಯಗೊಳಿಸಿಕೊಂಡಿದ್ದಾಳೆ.
First published:October 1, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ