ಸಾಮಾಜಿಕ ಜಾಲತಾಣದ ದುರ್ಬಳಕೆ: ಒಂದು ಲಕ್ಷ ವಾಟ್ಸಪ್ ಮೇಲೆ​ ನಿಷೇಧ

zahir | news18
Updated:October 21, 2018, 3:18 PM IST
ಸಾಮಾಜಿಕ ಜಾಲತಾಣದ ದುರ್ಬಳಕೆ: ಒಂದು ಲಕ್ಷ ವಾಟ್ಸಪ್ ಮೇಲೆ​ ನಿಷೇಧ
ವಾಟ್ಸಪ್​​​ ಚಿತ್ರ
  • News18
  • Last Updated: October 21, 2018, 3:18 PM IST
  • Share this:
-ನ್ಯೂಸ್ 18 ಕನ್ನಡ

ಫೇಸ್​ಬುಕ್ ಮತ್ತು ವಾಟ್ಸಪ್​ಗಳಲ್ಲಿ ಹರಿದಾಡುವ ಸುಳ್ಳು ಸುದ್ದಿಗಳ ನಿಯಂತ್ರಣಕ್ಕೆ ಕಡಿವಾಣ ಹಾಕಲು ಫೇಸ್​ಬುಕ್ ಇಂಕ್ ಸಕಲ ಸಿದ್ಧತೆಯಲ್ಲಿದೆ. ಇದರ ಮೊದಲ ಹೆಜ್ಜೆ ಎಂಬಂತೆ ಇದೀಗ ಬ್ರೆಜಿಲ್ ದೇಶದ ಒಂದು ಲಕ್ಷ ವಾಟ್ಸಪ್​ಗಳನ್ನು ಸಂಸ್ಥೆ ನಿರ್ಬಂಧಿಸಿದೆ. ಬ್ಲೂಮ್​ಬರ್ಗ್​ ಮಾಡಿದ ವರದಿ ಪ್ರಕಾರ, ಇನ್ನೂ ಕೆಲವೇ ದಿನಗಳಲ್ಲಿ ಬ್ರೆಜಿಲ್​ನಲ್ಲಿ ಚುನಾವಣೆ ನಡೆಯಲಿದ್ದು, ಈ ಸಂದರ್ಭದಲ್ಲಿ ಸುಳ್ಳು ಮಾಹಿತಿಯನ್ನು ತಡೆಗಟ್ಟಲು ಕಂಪನಿಯು ಈ ಕ್ರಮ ಕೈಗೊಂಡಿದೆ.

21 ಕೋಟಿ ಜನಸಂಖ್ಯೆಯನ್ನು ಹೊಂದಿರುವ ಬ್ರೆಜಿಲ್​ನಲ್ಲಿ ಅರ್ಧಕ್ಕಿಂತ ಹೆಚ್ಚಿನ ಜನರು ವಾಟ್ಸಪ್ ಬಳಸುತ್ತಾರೆ. ಇಲ್ಲಿ 12 ಕೋಟಿಗಿಂತಲೂ ಹೆಚ್ಚಿನ ಬಳಕೆದಾರರಿದ್ದು, ಬ್ರೆಜಿಲ್ ಎಂಬುದು ವಾಟ್ಸಪ್​ನ ಜಾಗತಿಕ ಮಾರುಕಟ್ಟೆ ಕೂಡ ಆಗಿದೆ. ಆದರೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಒಂದಷ್ಟು ಬಳಕೆದಾರರು ಸುಳ್ಳು ವಂದತಿಗಳನ್ನು ಹಬ್ಬಿಸಲೆಂದು ವಾಟ್ಸಪ್ ಬಳಸುತ್ತಿದ್ದು, ಇಂತಹ ಪ್ರಚಾರದ ಮೇಲೆ ಸಂಸ್ಥೆಯು ಕಣ್ಣಿಟ್ಟಿದೆ. ಹೀಗಾಗಿ ಮತದಾರರ ಮೇಲೆ ಪ್ರಭಾವ ಬೀರಬಹುದಾದ ವದಂತಿಗಳನ್ನು ಹೆಚ್ಚಾಗಿ ಬಳಸುತ್ತಿರುವ ವಾಟ್ಸಪ್​ಗಳನ್ನು ನಿರ್ಬಂಧಿಸಲಾಗಿದೆ ಎಂದು ವರದಿಯಲ್ಲಿ ತಿಳಿಸಿದೆ.

ಅಕ್ಟೋಬರ್ 7 ರಂದು ಬ್ರೆಜಿಲ್​ನಲ್ಲಿ ಮೊದಲ ಹಂತದ ಮತದಾನ ನಡೆದಿದೆ. ಈ ವೇಳೆ ಉದ್ಯಮಿ ಹಾಗೂ ಬಲಪಂಥೀಯ ಅಭ್ಯರ್ಥಿ ಜಾರ್ ಬೌಲ್ಸನಾರೊ ಅವರು ಪ್ರಚಾರಕ್ಕಾಗಿ ಲಕ್ಷಾಂತರ ಡಾಲರ್​ಗಳನ್ನು ವಾಟ್ಸಪ್ ಬಳಕೆದಾರರ ಮೇಲೆ ವ್ಯಯಿಸಿದ್ದಾರೆ ಎಂದು ವರದಿಯಾಗಿದೆ. ಇಲ್ಲಿ ವಾಟ್ಸಪ್ ಬಳಕೆದಾರರ ತಂಡವೊಂದು ಬೌಲ್ಸನಾರೊ ಪರವಾಗಿ ಸುಳ್ಳು ಸುದ್ದಿಗಳನ್ನು ಹಬ್ಬಿಸಿ ಅದನ್ನು ಮತವಾಗಿಸುವ ಪ್ರಯತ್ನ ಮಾಡಿದೆ. ಇದನ್ನು ಗಮನದಲ್ಲಿರಿಸಿ ಅಕ್ಟೋಬರ್​ 28ರವರೆಗೆ ನಡೆಯುವ ಚುನಾವಣೆ ವೇಳೆ ಸೋಷಿಯಲ್ ಮೀಡಿಯಾ ದುರ್ಬಳಕೆಯನ್ನು ತಡೆಯುವ ನಿಟ್ಟಿನಲ್ಲಿ 1 ಲಕ್ಷ ವಾಟ್ಸಪ್​ನ್ನು ನಿಷೇಧಿಸಲಾಗಿದೆ ಎಂದು  ತಿಳಿಸಿದೆ.

ಗೂಗಲ್ ಆ್ಯಪ್: ಕ್ಯಾಮೆರಾ ಕ್ಲಿಕ್​ನಲ್ಲೇ ತಮಿಳನ್ನು ಕನ್ನಡದಲ್ಲಿ ಓದಿ

ವಿಶೇಷ ವಾರ್ ರೂಂ

2016 ರಲ್ಲಿ ಅಮೆರಿಕ ಅಧ್ಯಕ್ಷೀಯ ಚುನಾವಣೆ ವೇಳೆ ಫೇಸ್​ಬುಕ್ ಮೂಲಕ ಮತದಾರರ ಮೇಲೆ ಪ್ರಭಾವ ಬೀರಲಾಗಿದೆ ಎಂಬ ಆರೋಪ ಕೇಳಿ ಬಂದಿತ್ತು. ಅಲ್ಲದೆ ಕೆಂಬ್ರಿಜ್ ಅನಾಲಿಟಿಕಾ ಸಂಸ್ಥೆ ಫೇಸ್​ಬುಕ್ ಬಳಕೆದಾರರ ಡೇಟಾ ದುರುಪಯೋಗ ಪಡಿಸಿದ ಪ್ರಕರಣವು ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಇದು ಅಮೆರಿಕ, ಭಾರತವೂ ಸೇರಿದಂತೆ ವಿವಿಧ ಸಾರ್ವತ್ರಿಕ ಚುನಾವಣೆಗಳ ಮೇಲೆ ಪ್ರಭಾವ ಉಂಟು ಮಾಡಿದೆ ಎಂದು ಆರೋಪಿಸಲಾಗಿತ್ತು. ಈ ನಿಟ್ಟಿನಲ್ಲಿ  ಕುರಿತು ವಿವಾದ ಉಂಟಾದ ಬೆನ್ನಲ್ಲೇ ಇದಕ್ಕೆ ಕಡಿವಾಣ ಹಾಕಲು ನಿರ್ಧರಿಸಿರುವ ಫೇಸ್​ಬುಕ್, ತನ್ನ ಸಂಸ್ಥೆಯ ಸಾಮಾಜಿಕ ಜಾಲತಾಣದ ದುರ್ಬಳಕೆ ತಡೆಯಲು ವಿಶೇಷ ವಾರ್ ರೂಂ ಸಿದ್ಧಪಡಿಸಿದೆ.
First published:October 21, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading