ಕುತೂಹಲಕಾರಿ ಸಂಗತಿ: ಭೂಮಿಯು ಸುತ್ತುವುದನ್ನು ನಿಲ್ಲಿಸಿದರೆ ಏನಾಗುತ್ತೆ?

ಭೂಮಿ ತಿರುಗುವುದನ್ನು ತಡೆಯಲು ಯಾವುದೇ ನೈಸರ್ಗಿಕ ಶಕ್ತಿ ಇಲ್ಲ. ಇದು ರೂಪುಗೊಂಡಾಗಿನಿಂದಲೂ ಭೂಮಿಯ ತಿರುಗುವಿಕೆ ಅದರ ಭಾಗವಾಗಿದೆ ಎಂಬುದು ವಾಷಿಂಗ್ಟನ್‌ನ ಸ್ಮಿತ್ ‌ಸೋನಿಯನ್‌ನ ನ್ಯಾಷನಲ್ ಏರ್ ಅಂಡ್ ಸ್ಪೇಸ್ ಮ್ಯೂಸಿಯಂನಲ್ಲಿ ಕೆಲಸ ಮಾಡುವ ಹಿರಿಯ ಭೂವಿಜ್ಞಾನಿ ಜೇಮ್ಸ್ ಜಿಂಬೆಲ್ಮನ್ ಅವರ ಮಾತಾಗಿದೆ.

ಭೂಮಿ

ಭೂಮಿ

  • Share this:

ಭೂಮಿಯು ತನ್ನ ಅಕ್ಷದಲ್ಲಿ ತಿರುಗುವುದರಿಂದ ಹಗಲು, ರಾತ್ರಿ, ತಾಪಮಾನ, ಆಗಸದ ಬಣ್ಣದ ಬದಲಾವಣೆ ಹೀಗೆ 24 ಗಂಟೆಗಳ ದೀರ್ಘ ದಿನವನ್ನು ನಾವು ಅನುಭವಿಸುತ್ತೇವೆ. ಆದರೆ ನಮ್ಮ ನೀಲಿ ಗ್ರಹವು ಒಮ್ಮೆಲೇ ತಿರುಗುವಿಕೆಯನ್ನು ನಿಲ್ಲಿಸಿದರೆ ಏನಾಗಬಹುದು ಎಂಬುದು ನಿಮಗೆ ಗೊತ್ತೇ..? ವಿಜ್ಞಾನಿಗಳು ಹೇಳುವಂತೆ ಅನೇಕ ಶತಕೋಟಿ ವರ್ಷಗಳಲ್ಲಿ ಭೂಮಿಯ ಸುತ್ತುವಿಕೆಯು ನಿಲುಗಡೆಗೆ ಬರಲಿದೆ ಎಂದಾಗಿದೆ. ಹಾಗಿದ್ದರೂ ಭೂಮಿಯ ತಿರುಗುವಿಕೆ ನಿಂತಾಗ ಏನಾಗುತ್ತದೆ ಎಂಬುದನ್ನು ಅರಿತುಕೊಳ್ಳೋಣ.


ಭೂಮಿ ತಿರುಗುವುದನ್ನು ತಡೆಯಲು ಯಾವುದೇ ನೈಸರ್ಗಿಕ ಶಕ್ತಿ ಇಲ್ಲ. ಇದು ರೂಪುಗೊಂಡಾಗಿನಿಂದಲೂ ಭೂಮಿಯ ತಿರುಗುವಿಕೆ ಅದರ ಭಾಗವಾಗಿದೆ ಎಂಬುದು ವಾಷಿಂಗ್ಟನ್‌ನ ಸ್ಮಿತ್ ‌ಸೋನಿಯನ್‌ನ ನ್ಯಾಷನಲ್ ಏರ್ ಅಂಡ್ ಸ್ಪೇಸ್ ಮ್ಯೂಸಿಯಂನಲ್ಲಿ ಕೆಲಸ ಮಾಡುವ ಹಿರಿಯ ಭೂವಿಜ್ಞಾನಿ ಜೇಮ್ಸ್ ಜಿಂಬೆಲ್ಮನ್ ಅವರ ಮಾತಾಗಿದೆ. ಪೆನ್ಸಿಲ್ವೇನಿಯಾದ ಕಾರ್ನೆಗೀ ಮೆಲಾನ್ ವಿಶ್ವವಿದ್ಯಾಲಯದ ವಿಜ್ಞಾನ ಸಂವಹನಕಾರ ಸ್ಟೇಸಿ ಕಿಶ್ ಅವರೊಂದಿಗೆ ಸಂವಹನ ನಡೆಸುತ್ತಾ ಜೇಮ್ಸ್ ಈ ಮಾತನ್ನು ಹೇಳಿದರು.


ಕಿಶ್ ಜೇಮ್ಸ್​​ರೊಂದಿಗೆ ನಡೆಸಿದ ಸಂವಹನದ ಕುರಿತು ಕೆಲವೊಂದು ವಿಚಾರಗಳನ್ನು ಲೈವ್ ಸೈನ್ಸ್‌ನಲ್ಲಿ ಪ್ರಕಟವಾದ ಲೇಖನದಲ್ಲಿ ತಿಳಿಸಿದ್ದಾರೆ. ಭೂಮಿಯ ಕೋನೀಯ ಚಲನೆಯು ಗ್ರಹದ ಮೇಲ್ಮೈಯನ್ನು ಬೇರ್ಪಡಿಸುತ್ತದೆ. ನೇರ ರೇಖೆಯಲ್ಲಿ ಚಲಿಸುವ ವಸ್ತುವಿನ ರೇಖೀಯ ಆವೇಗವು ನಿರ್ದಿಷ್ಟ ಸಮಯದೊಳಗೆ ಸ್ಥಿರವಾಗಿ ನಿಲ್ಲುವಂತೆ ಮಾಡಲು ಅಗತ್ಯವಾಗಿರುವ ಶಕ್ತಿಯಾಗಿದೆ. ಹಾಗೆಯೇ ಕೋನೀಯ ಆವೇಗವು ವಸ್ತುವನ್ನು ತಿರುಗುವಿಕೆಯಿಂದ ತಡೆಯಲು ಅಗತ್ಯವಾದ ಶಕ್ತಿಯಾಗಿದೆ. ಇದನ್ನು ಬೇರೆ ರೀತಿಯಲ್ಲಿ ವಿವರಿಸುವುದಾದರೆ, ತಿರುಗುವಿಕೆಯನ್ನು ನೀವು ನಿಲ್ಲಿಸಿದರೆ ವಸ್ತುವು ನಿಮ್ಮ ವಿರುದ್ಧ ಬಳಸುವ ಶಕ್ತಿಯ ಪ್ರಮಾಣವನ್ನು ಕೋನೀಯ ಆವೇಗ ಎಂದು ಕರೆಯಲಾಗಿದೆ.


ಇದನ್ನೂ ಓದಿ:APJ Abdul Kalam: ಯಶವಂತಪುರ ರೈಲ್ವೆ ನಿಲ್ದಾಣದಲ್ಲಿ ಗುಜರಿ ವಸ್ತುಗಳಿಂದ ನಿರ್ಮಾಣವಾಗಿದೆ ಅಬ್ದುಲ್ ಕಲಾಂ ಪ್ರತಿಮೆ...!

ಭೂಮಿಯ ತಿರುಗುವಿಕೆಯನ್ನು ಪರಿಗಣಿಸಿ, ಧ್ರುವಗಳ ದೃಷ್ಟಿಕೋನದಿಂದ ಸಮಭಾಜಕಗಳು ಭೂಮಿಯ ಅಕ್ಷದ ಸುತ್ತ ಸೆಕೆಂಡಿಗೆ ಸುಮಾರು 492 ಮೀಟರ್ ವೇಗದಲ್ಲಿ ಚಲಿಸುತ್ತಿವೆ. ಭೂಮಿಯು ತಿರುಗುವುದನ್ನು ನಿಲ್ಲಿಸಿದರೆ, ನಿಮ್ಮ ಕೋನೀಯ ಆವೇಗವು ನಿಮ್ಮನ್ನು ಆಕಾಶಕ್ಕೆ ಎಸೆಯುತ್ತದೆ. ಉದಾಹರಣೆಗೆ ನೀವು ದೆಹಲಿಯಲ್ಲಿದ್ದರೆ ಸೆಕೆಂಡ್‌ಗೆ ಸುಮಾರು 400 ಮೀಟರ್ ವೇಗದಲ್ಲಿ ನಿಮ್ಮನ್ನು ಎಸೆಯಲಾಗುತ್ತದೆ. ಇದು ನಿಮ್ಮ ಮೇಲೆ ಮಾತ್ರ ನಡೆಯುವ ಕ್ರಿಯೆಯಲ್ಲ. ಭೂಮಿಯ ಮೇಲ್ಮೈ ತೆರೆದ, ಪರ್ವತಗಳು, ನೀರು ಮತ್ತು ಅಂತಹ ದೊಡ್ಡ ಆವೇಗದೊಂದಿಗೆ ಚಲಿಸಬಲ್ಲ ಎಲ್ಲವನ್ನೂ ಮುಕ್ತಗೊಳಿಸುತ್ತದೆ.


ಆಕಾಶಕ್ಕೆ ಎಸೆಯಲಾದ ಹೆಚ್ಚಿನ ವಸ್ತುಗಳು ಭೂಮಿಯ ಗುರುತ್ವಾಕರ್ಷಣೆಯಿಂದಾಗಿ ವಾತಾವರಣದೊಂದಿಗೆ ಸಂವಹನ ನಡೆಸಿದ ನಂತರ ಹಿಂತಿರುಗುತ್ತವೆ. ಈ ತುಣುಕುಗಳ ನಿರಂತರ ಸ್ಫೋಟವು ಹೊರಪದರವನ್ನು ಲಾವಾ ಸಾಗರಕ್ಕೆ ದ್ರವಗೊಳಿಸುತ್ತದೆ. ಇದು ಭೂಮಿಯ ಮೇಲಿನ ಹೆಚ್ಚಿನ ನೀರನ್ನು ತ್ವರಿತವಾಗಿ ಆವಿಯಾಗಿಸುತ್ತದೆ.


ಜಿಂಬೆಲ್ಮನ್ ಹೇಳುವ ಪ್ರಕಾರ ಕೆಲವೊಂದು ವಸ್ತುಗಳನ್ನು ಚಂದ್ರನು ಸೆಳೆಯುತ್ತಾನೆ ಮತ್ತುಉಪಗ್ರಹವನ್ನು ಸ್ಫೋಟಿಸಬಹುದು. ಭೂಮಿಯ ಮೇಲಿನ ಎಲ್ಲಾ ಜೀವ ಸಮೂಹಗಳ ಸಾವಿಗೆ ಕಾರಣವಾಗಬಹುದು. ಭೂಮಿಯು ತನ್ನ ತಿರುಗುವಿಕೆಯನ್ನು ನಿಲ್ಲಿಸಿದರೆ ಜನರು ಒಳಗೊಂಡಂತೆ ಅದರ ಮೇಲ್ಲೈಯಲ್ಲಿರುವ ಎಲ್ಲವೂ ತಕ್ಷಣವೇ ನಾಶವಾಗುತ್ತದೆ. ಭೂಮಿಯು ತಿರುಗುವುದನ್ನು ನಿಲ್ಲಿಸಿದರೆ ಭೂಮಿಯ ಕೋನೀಯ ಆ ವೇಗವು ಗ್ರಹದ ಮೇಲ್ಮೈಯನ್ನು ಬೇರ್ಪಡಿಸುತ್ತದೆ.


ಇದನ್ನೂ ಓದಿ:Bengaluru: ಬೆಂಗಳೂರಿನಲ್ಲಿ ಮಾತ್ರೆ, ಮಾಸ್ಕ್​, ಸ್ಯಾನಿಟೈಸರ್​ನಿಂದ ಅಲಂಕೃತಗೊಂಡ ಸಾಯಿಬಾಬಾ ದೇವಾಲಯ

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.
Published by:Latha CG
First published: