Narendra Modi: ಪ್ರಧಾನಿ ಮೋದಿ ಜಾಗತಿಕ ನಾಯಕತ್ವಕ್ಕೂ ಗೋಧಿಗೂ ಏನು ಸಂಬಂಧ?

ಜಾಗತಿಕ ಮಟ್ಟದಲ್ಲಿ ಭಾರತಕ್ಕೆ ಸಂಬಂಧಿಸಿದಂತೆ ಭಾರತದ ಪ್ರಧಾನಿ ಒಂದು ರೀತಿಯ ಧರ್ಮ ಸಂಕಟಕ್ಕೆ ಸಿಲುಕಿದ್ದಾರೇನೋ ಅನ್ನುವ ರೀತಿಯಲ್ಲಿ ಸಂದರ್ಭ ಎದ್ದು ಕಾಣುವಂತಾಗಿದೆ. ಒಂದೆಡೆ ಅವರು ಉಕ್ರೇನ್ ಯುದ್ಧದಿಂದಾಗಿ ಗೋಧಿ ರಫ್ತು ನಿಂತು ಅದರ ಕೊರತೆಯಿಂದ ಕಂಗಾಲಾಗಿರುವ ಇತರೆ ದೇಶಗಳಿಗೆ ನೆರವಾಗುವಂತೆ ಗೋಧಿ ರಫ್ತನ್ನು ಮುಂದುವರೆಸಬೇಕೋ ಅಥವಾ ಮನೆಯಲ್ಲೇ ಬೆಲೆ ಹೆಚ್ಚಳವಾಗದಂತೆ ಗೋಧಿ ದಾಸ್ತಾನು ಮಾಡಿಡಬೇಕೋ ಎಂಬ ಸಂದಿಗ್ಧ ಪರಿಸ್ಥಿತಿ ನಿರ್ಮಾಣವಾಗಿದೆ.

ಪ್ರಧಾನಿ ಮೋದಿ

ಪ್ರಧಾನಿ ಮೋದಿ

  • Share this:
ಸದ್ಯಕ್ಕೆ ಜಾಗತಿಕ ಮಟ್ಟದಲ್ಲಿ ಭಾರತಕ್ಕೆ (India) ಸಂಬಂಧಿಸಿದಂತೆ ಭಾರತದ ಪ್ರಧಾನಿ ಒಂದು ರೀತಿಯ ಧರ್ಮ ಸಂಕಟಕ್ಕೆ ಸಿಲುಕಿದ್ದಾರೇನೋ ಅನ್ನುವ ರೀತಿಯಲ್ಲಿ ಸಂದರ್ಭ ಎದ್ದು ಕಾಣುವಂತಾಗಿದೆ. ಒಂದೆಡೆ ಅವರು ಉಕ್ರೇನ್ ಯುದ್ಧದಿಂದಾಗಿ ಗೋಧಿ ರಫ್ತು (Wheat Exports) ನಿಂತು ಅದರ ಕೊರತೆಯಿಂದ ಕಂಗಾಲಾಗಿರುವ ಇತರೆ ದೇಶಗಳಿಗೆ ನೆರವಾಗುವಂತೆ ಗೋಧಿ ರಫ್ತನ್ನು ಮುಂದುವರೆಸಬೇಕೋ ಅಥವಾ ಮನೆಯಲ್ಲೇ ಬೆಲೆ ಹೆಚ್ಚಳವಾಗದಂತೆ ಗೋಧಿ ದಾಸ್ತಾನು ಮಾಡಿಡಬೇಕೋ ಎಂಬ ಸಂದಿಗ್ಧ ಪರಿಸ್ಥಿತಿ ನಿರ್ಮಾಣವಾಗಿದೆ. ಈಗಾಗಲೇ ಬೇಸಿಗೆಯು ಸಾಕಷ್ಟು ಪ್ರಭಾವ ಬೀರಿದ್ದು ಕಾಣಬಹುದಾಗಿದೆ. ತೀವ್ರ ಶಾಖದ ಅಲೆಗಳು ದಕ್ಷಿಣ ಏಷ್ಯಾದ ರಾಷ್ಟ್ರದಾದ್ಯಂತ ಗೋಧಿ ಇಳುವರಿಯನ್ನು ಹಾನಿಗೊಳಿಸಿದ್ದು ಇದು ದೇಶದ ರಫ್ತು ನಿರ್ಬಂಧಗಳನ್ನು ಮತ್ತೊಮ್ಮೆ ಪರಿಶೀಲಿಸಲು ಸರ್ಕಾರವನ್ನು ಪ್ರೇರೇಪಿಸಿದೆ ಎಂದು ಬ್ಲೂಮ್‌ಬರ್ಗ್ ನ್ಯೂಸ್ ವರದಿ ಮಾಡಿದೆ.

ಜಾಗತಿಕ ನಾಯಕ ಎಂಬ ತಮ್ಮ ಖ್ಯಾತಿ
ಸದ್ಯಕ್ಕೆ ಗೋಧಿ ರಫ್ತು ಮಾಡುವುದಕ್ಕೆ ಸಂಬಂಧಿಸಿದಂತೆ ನಿಯಂತ್ರಣ ಹೊಂದುವಂತಹ ಇನ್ನೂ ಯಾವುದೇ ವಿದ್ಯಮಾನದ ಸೃಷ್ಟಿಯಾಗಿಲ್ಲ ಎಂದು ಆಹಾರ ಸಚಿವಾಲಯ ಹೇಳಿದ್ದರೂ ಸಹ ಇದು ಆವೇಗವನ್ನು ಪಡೆಯುವ ಪ್ರಶ್ನೆಯಾಗಿದ್ದು ಮತ್ತು ಪಿಎಂ ಮೋದಿ ಮತ್ತು ಅವರ ಆಡಳಿತಾರೂಢ ಭಾರತೀಯ ಜನತಾ ಪಕ್ಷಕ್ಕೆ ರಾಜಕೀಯ ಪರಿಣಾಮಗಳನ್ನು ಉಂಟುಮಾಡಬಹುದಾದ ಸಾಧ್ಯತೆಯನ್ನು ತಳ್ಳಿ ಹಾಕಲಾಗದು.

ಈಗಾಗಲೇ ಪಿಎಂ ಮೋದಿ ಅವರು ವಿಶ್ವಾಸಾರ್ಹ ಜಾಗತಿಕ ನಾಯಕ ಎಂಬ ತಮ್ಮ ಖ್ಯಾತಿಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳಗಿಸುವ ಪಥದಲ್ಲಿದ್ದರೆ, ಇನ್ನೊಂದೆಡೆ ಅವರು ತಮ್ಮ ತವರು ನೆಲದಲ್ಲಿ ಹಣದುಬ್ಬರಕ್ಕೆ ಸಂಬಂಧಿಸಿದಂತೆ ಹತಾಶೆಯನ್ನು ಎದುರಿಸುತ್ತಿದ್ದಾರೆ, ಇದೇ ಅಂಶ ಅವರ ಹಿಂದಿನ ಸರ್ಕಾರವನ್ನು ಕೆಳಗಿಳಿಸಿತ್ತು ಮತ್ತು ಅವರ ಅಧಿಕಾರದ ಆರೋಹಣಕ್ಕೆ ದಾರಿ ಮಾಡಿಕೊಟ್ಟಿತ್ತು.

ಜಗತ್ತುಎದುರಿಸುತ್ತಿರುವ ಗೋಧಿ ಕೊರತೆ
"ಜಗತ್ತು ಗೋಧಿಯ ಕೊರತೆಯನ್ನು ಎದುರಿಸುತ್ತಿರುವ ಸಮಯದಲ್ಲಿ, ಭಾರತದ ರೈತರು ಜಗತ್ತಿಗೆ ಆಹಾರ ನೀಡಲು ಮುಂದಾಗಿದ್ದಾರೆ" ಎಂದು ಈ ವಾರ ಜರ್ಮನಿಯಲ್ಲಿ ನಡೆದ ಭಾರತೀಯ ವಲಸೆಗಾರರ ಕೂಟದಲ್ಲಿ ಪ್ರಧಾನಿ ಮೋದಿ ಹೇಳಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಇದೇ ಸಂದರ್ಭದಲ್ಲಿ ಅವರು "ಮಾನವೀಯತೆಯು ಬಿಕ್ಕಟ್ಟನ್ನು ಎದುರಿಸಿದಾಗಲೆಲ್ಲಾ ಭಾರತವು ಪರಿಹಾರದೊಂದಿಗೆ ಬರುತ್ತದೆ." ಎಂದು ಹೇಳಿದ್ದರು.

ಇದನ್ನೂ ಓದಿ: Pakistan: ಪಾಕಿಸ್ತಾನಕ್ಕೂ ಎದುರಾಗಿದ್ಯಂತೆ ಮಹಾ ಸಂಕಷ್ಟ! 'ಮಾಡಿದ್ದುಣ್ಣೋ ಮಾರಾಯಾ' ಅನ್ನೋದು ಇದಕ್ಕೆ ಅನಿಸುತ್ತೆ!

ಸದ್ಯ ರಷ್ಯಾ-ಉಕ್ರೇನ್ ಯುದ್ಧವು ಕಪ್ಪು ಸಮುದ್ರದ ಪ್ರದೇಶದಲ್ಲಿ ಲಾಜಿಸ್ಟಿಕ್ಸ್‌ಗೆ ಅಡ್ಡಿಪಡಿಸಿದ್ದು ಅದರಿಂದಾಗಿ ಒಟ್ಟು ಗೋಧಿ ವ್ಯಾಪಾರದ ಕಾಲು ಭಾಗದಷ್ಟು ವ್ಯಾಪಾರಕ್ಕೆ ಹೊಡೆತ ಬಿದ್ದಿದ್ದು ಬಹು ಮಟ್ಟಿನ ರಾಷ್ಟ್ರಗಳು ಗೋಧಿಯ ಕೊರತೆ ಅನುಭವಿಸುವಂತಾಗಿ ಆ ಬರಿದಾದ ಸ್ಥಳವನ್ನು ಭಾರತವು ತಾನು ಗೋಧಿಯ ನಿರ್ವಾತ ಮಾಡುವ ಮೂಲಕ ತುಂಬಲು ಪ್ರಯತ್ನಿಸಿದೆ.

ಸಚಿವ ಪಿಯೂಷ್ ಗೋಯಲ್ ಹೇಳಿದ್ದೇನು?
ವಿಶ್ವದ ಅಗ್ರ ಗೋಧಿ ಖರೀದಿದಾರರಲ್ಲೊಂದಾದ ಈಜಿಪ್ಟ್ ದೇಶವು ಇತ್ತೀಚಿಗಷ್ಟೆ ತಾನು ಗೋಧಿ ಆಮದು ಮಾಡಿಕೊಳ್ಳುವ ಮೂಲಗಳಲ್ಲಿ ಭಾರತಕ್ಕೆ ಅನುಮೋದನೆ ನೀಡಿದೆ. ಕಳೆದ ತಿಂಗಳು, ಆಹಾರ ಮತ್ತು ವಾಣಿಜ್ಯ ಸಚಿವ ಪಿಯೂಷ್ ಗೋಯಲ್, ಭಾರತವು 2021-22ರಲ್ಲಿ ಸುಮಾರು 7.2 ಮಿಲಿಯನ್‌ಗೆ ಹೋಲಿಸಿದರೆ ಈ ವರ್ಷ 15 ಮಿಲಿಯನ್ ಟನ್‌ಗಳಷ್ಟು ಗೋಧಿಯನ್ನು ರಫ್ತು ಮಾಡುವ ಶಾಶ್ವತ ರಫ್ತುದಾರನಾಗಲು ಆಶಿಸುತ್ತಿದೆ ಎಂದು ಹೇಳಿದ್ದಾರೆ. ಭಾರತವು ತನ್ನ ರಾಜ್ಯಗಳ ದಾಸ್ತಾನುಗಳಿಂದ ಗೋಧಿ ರಫ್ತು ಮಾಡಲು ನಿಯಮಗಳನ್ನು ಸಡಿಲು ಮಾಡುವಂತೆ ಅಧಿಕಾರಿಗಳು ವಿಶ್ವ ವ್ಯಾಪಾರ ಸಂಸ್ಥೆಯನ್ನು ಒತ್ತಾಯಿಸುತ್ತಿದ್ದಾರೆ ಎಂದು ಗೋಯಲ್ ಹೇಳಿದ್ದಾರೆ.

ಇದನ್ನೂ ಓದಿ: Aaditya Thackeray: ಪ್ರಧಾನಿ ಮೋದಿರನ್ನು ಬರಮಾಡಿಕೊಳ್ಳಲು ಬಂದ ಸಿಎಂ ಪುತ್ರ ಆದಿತ್ಯ ಠಾಕ್ರೆಗೆ ತಡೆ, ಏಕೆ?

ಆದರೆ ಇತ್ತೀಚಿನ ವಾರಗಳಲ್ಲಿ ದೇಶದ ವೈಯಕ್ತಿ ನೆಲೆಯಲ್ಲಿನ ಸವಾಲುಗಳು ತೀಕ್ಷ್ಣವಾಗಿ ಮುನ್ನೆಲೆಗೆ ಬಂದಿವೆ ಎನ್ನಲಾಗುತ್ತಿದೆ. ಬ್ಲೂಮ್‌ಬರ್ಗ್ ಸಮೀಕ್ಷೆಯ ಪ್ರಕಾರ ಭಾರತ ತನ್ನ ಗೋಧಿ ಬೆಳೆಯಲ್ಲಿ ಹೆಚ್ಚು ನಷ್ಟ ಅನುಭವಿಸಿದೆ ಎನ್ನಲಾಗಿದ್ದು ಅಂದರೆ ಮಾರ್ಚ್‌ನಲ್ಲಿ ಸುಮಾರು ನೂರಾರು ಎಕರೆ ಗೋಧಿ ಬೆಳೆ ಹಾನಿಗೊಳಗಾಗಿದ್ದು ಇದರಿಂದಾಗಿ ದೇಶದ ಕೆಲವು ವಲಯಗಳಲ್ಲಿ ಇಳುವರಿಯು 50% ರಷ್ಟು ಕುಸಿಯಬಹುದು ಎನ್ನಲಾಗಿದೆ. ಒಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಗೋಧಿ ಬೆಳೆ ದೇಶಕ್ಕೆ ಯಾವ ರೀತಿ ನೆರವಾಗಬಹುದು ಎಂದು ಗೊತ್ತಾಗಲಿದ್ದು ಅಷ್ಟಕ್ಕೂ ಈ ವಿಷಯದಲ್ಲಿ ಮೋದಿ ಅವರ ಸ್ಥಾನಮಾನಕ್ಕೂ ಗೋಧಿಗೂ ಯಾವ ಸಂಬಂಧ ಎಂಬ ಪ್ರಶ್ನೆಯನ್ನು ಅವಲೋಕಿಸಬೇಕಾಗಿದೆ.
Published by:Ashwini Prabhu
First published: