Union Budget 2019: ಇಂದು ಮೋದಿ ಸರ್ಕಾರದ ಕೊನೆಯ ಬಜೆಟ್: ಏನೆಲ್ಲಾ ನಿರೀಕ್ಷಿಸಬಹುದು?

Union Budget 2019: ಮೂರು ರಾಜ್ಯಗಳಲ್ಲಿ ಚುನಾವಣೆ ಹಿನ್ನಡೆ ಸಾಧಿಸಿರುವ ಮೋದಿ ನಗರ ಹಾಗೂ ಗ್ರಾಮೀಣ ಪ್ರದೇಶದ ತೆರಿಗೆ ಹೆಚ್ಚಳ ಭಾರವಗದಂತೆ ಬಜೆಟ್​ ಮಂಡಿಸಲಿದ್ದಾರೆ

Seema.R | news18
Updated:February 1, 2019, 7:15 AM IST
Union Budget 2019: ಇಂದು ಮೋದಿ ಸರ್ಕಾರದ ಕೊನೆಯ ಬಜೆಟ್: ಏನೆಲ್ಲಾ ನಿರೀಕ್ಷಿಸಬಹುದು?
ಸಾಂದರ್ಭಿಕ ಚಿತ್ರ
Seema.R | news18
Updated: February 1, 2019, 7:15 AM IST
ನವದೆಹಲಿ (ಜ.31): ಮೋದಿ ಸರ್ಕಾರದ ಕೊನೆಯ ಬಜೆಟ್​ ಇಂದು ಮಂಡನೆಯಾಗಲಿದ್ದು, ವಿತ್ತ ಸಚಿವ ಅರುಣ್​ ಜೇಟ್ಲಿ ಅನುಪಸ್ಥಿತಿಯಲ್ಲಿ ಹಣಕಾಸು ಸಹಾಯಕ ಸಚಿವ ಪಿಯೂಷ್​ ಗೋಯೆಲ್​ ಮೊದಲ ಬಾರಿ ಮಧ್ಯಂತರ ಬಜೆಟ್​ ಮಂಡನೆಗೆ ಸಜ್ಜಾಗಿದ್ದಾರೆ.

ಲೋಕಸಭಾ ಚುನಾವಣಾಗೆ ಮುನ್ನ ಮಂಡನೆಯಾಗುತ್ತಿರುವ ಬಜೆಟ್​ ಬಗ್ಗೆ ಜನರು ಕೂಡ ಸಾಕಷ್ಟು ನಿರೀಕ್ಷೆಯನ್ನು ಇಟ್ಟುಕೊಂಡಿದ್ದು, ಪ್ರಧಾನಿ ಮೋದಿ ಇದನ್ನು ಸಾಕಾರ ಮಾಡುತ್ತಾರೆ ಎಂಬುದು ನಾಳೆ ಗೊತ್ತಗಲಿದೆ. ಈ ಬಾರಿ ಬಜೆಟ್​ನಲ್ಲಿ ಕೃಷಿ ಕ್ಷೇತ್ರದಲ್ಲಿ ಹೆಚ್ಚಿನ ಕೊಡುಗೆ ನಿರೀಕ್ಷೆ ಹೊಂದಲಾಗಿದೆ.

ಲೋಕಸಭಾ ಚುನಾವಣೆಗೂ ಮುನ್ನ ಮಂಡನೆಯಾಗುವ ಬಜೆಟ್​ಗಳು ಸಾಮಾನ್ಯವಾಗಿ ನಾಮಾಕಾವಸ್ಥೆ ಬಜೆಟ್​ ಎನ್ನುತ್ತಾರೆ. ಆದರೆ, ನಾವು ಪೂರ್ಣ ಪ್ರಮಾಣದ ಬಜೆಟ್​ ಮಂಡಿಸುತ್ತಿದ್ದೇವೆ. ಹೊಸ ತೆರಿಗೆ ಪ್ರಸ್ತಾಪ, ನೂತನ ಯೋಜನೆಗಳ ಘೋಷಿಸಲಾಗುತ್ತದೆ ಎಂದು ಈಗಾಗಲೇ ತಿಳಿಸಲಾಗಿದೆ.

ಮೂರು ರಾಜ್ಯಗಳಲ್ಲಿ ಚುನಾವಣೆ ಹಿನ್ನಡೆ ಸಾಧಿಸಿರುವ ಮೋದಿ ನಗರ ಹಾಗೂ ಗ್ರಾಮೀಣ ಪ್ರದೇಶದ ತೆರಿಗೆ ಹೆಚ್ಚಳವಾಗದಂತೆ ಬಜೆಟ್​ ಮಂಡಿಸಲಿದ್ದಾರೆ ಎನ್ನಲಾಗಿದೆ. ಇನ್ನು ಮುಂದಿನ ವರ್ಷದೊಳಗೆ ಶೇ 7.5ರಷ್ಟು ಆರ್ಥಿಕ ಬೆಳವಣಿಗೆ ಅಭಿವೃದ್ಧಿಗೆ ಸರ್ಕಾರ ನಿರೀಕ್ಷೆಯನ್ನು ಹೊಂದಿದೆ.

ಇದನ್ನು ಓದಿ: #NoMo Jobs: ನಮೋಗೆ ರಾಹುಲ್​ ಗಾಂಧಿ "ನೋ-ಮೋ" ಪೆಟ್ಟು​; ನಿರುದ್ಯೋಗ ಸಮಸ್ಯೆಗೆ ಹೊಸ ವ್ಯಾಖ್ಯಾನ

ಇನ್ನು ಯಾವ ಯಾವ ಕ್ಷೇತ್ರದಲ್ಲಿ ಯಾವೆಲ್ಲಾ ಹೊಸ ಪ್ರಸ್ತಾಪಗಳು ಬಜೆಟ್​ ಮಂಡನೆಯಲ್ಲಿರಬಹುದು ಎಂಬ ಬಗ್ಗೆ ಸಂಕ್ಷೀಪ್ತ ವಿವರ ಇಂತಿದೆ.

    Loading...

  • ರೈತರಿಗೆ 1 ಲಕ್ಷ ಕೋಟಿವರೆಗೆ ಪರಿಹಾರ ನಿಧಿ ಒದಗಿಸುವುದು

  • ಈ ಆರ್ಥಿಕ ವರ್ಷದಲ್ಲಿ 1.8 ಲಕ್ಷ ಕೋಟಿ ಆಹಾರ ಸಬ್ಸಿಡಿ

  • ತೆರಿಗೆ ಸೇರಿ ಹಲವು ಕ್ಷೇತ್ರಗಳಲ್ಲಿ ವಿನಾಯಿತಿ

  • ವಸತಿ ಕ್ಷೇತದಲ್ಲಿ ಹೂಡಿಕೆ, ಉತ್ತೇಜನ

  • ಗ್ರಾಮೀಣ ಪ್ರದೇಶದಲ್ಲಿ ಡಿಜಿಟಲ್​ ಮೂಲಭೂತ ಸೌಕರ್ಯ ಅಭಿವೃದ್ಧಿಗೆ ಉತ್ತೇಜನ

  • ಸ್ಟಾರ್ಟ್​ ಅಪ್​ಗಳ  ಉತ್ತೇಜಿಸಲು ತೆರಿಗೆ ವಿನಾಯತಿ

  • ಎಲೆಕ್ಟ್ರಿಕಲ್​ ​ ಹಾಗೂ ಬ್ಯಾಟರಿ ವಾಹನಗಳಿಗೆ ಸರಕು ಮತ್ತು ಸೇವಾ ವಿನಾಯತಿ ಕಡಿತಗೊಳಿಸುವುದು

  • ಮಧ್ಯಮ ವರ್ಗ ಹಾಗೂ ಸಣ್ಣ ಉದ್ದಿಮೆಗಳಿಗೆ ದುಬಾರಿ ತೆರಿಗೆಯಿಂದ ವಿನಾಯತಿ


First published:January 31, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ